Andolana originals

ಕ್ಯಾತಮಾರನಹಳ್ಳಿ: ಒಳಚರಂಡಿ ಕೊಳಚೆಯಿಂದ ದುರ್ನಾತ

ಕೆ.ಎಂ.ಅನುಚೇತನ್

ರಸ್ತೆ ಒಳಚರಂಡಿ ಸಮಸ್ಯೆ, ಮನೆ ಮುಂದೆ ನಿಂತ ಕೊಳಚೆ 

ಸ್ಥಳೀಯರ ಪರದಾಟ

ಮಳೆ ಬಂದರೆ ರಸ್ತೆ ಮೇಲೆ ಹರಿಯುವ ಕೊಳಚೆ ನೀರು

ನಗರಪಾಲಿಕೆ ನಿರ್ಲಕ್ಷ್ಯಕ್ಕೆ ಸ್ಥಳೀಯರ ಆಕ್ರೋಶ

ಮೈಸೂರು: ಆ ರಸ್ತೆಯಲ್ಲಿ ಒಳಚರಂಡಿಯ ದುರ್ನಾತ ಜನರನ್ನು ಕಂಗೆಡಿಸಿದೆ… ಅಲ್ಲಿ ಓಡಾಡುವವರು ಮೂಗುಮುಚ್ಚಿಕೊಳ್ಳಲೇಬೇಕು… ಅಲ್ಲದೆ, ಮಕ್ಕಳು ಆಯತಪ್ಪಿ ಚರಂಡಿಗೆ ಬಿದ್ದರೆ ಊಹಿಸಲಾಗದ ಅನಾಹುತ ನಡೆಯುವ ಆತಂಕವೂ ಎದುರಾಗಿದೆ. ಇಷ್ಟೆಲ್ಲ ಅವ್ಯವಸ್ಥೆಗೆ ಕಾರಣವೇನೆಂದರೆ ಆ ಒಳಚರಂಡಿಯಲ್ಲಿ ಮುಂದೆ ಹರಿದು ಹೋಗುವುದಕ್ಕೆ ದಾರಿ ಇಲ್ಲದೆ, ಸ್ಥಗಿತಗೊಂಡಿರುವ ಕೊಳಚೆ ನೀರು.

ನಗರ ಪಾಲಿಕೆಯ ವಾರ್ಡ್ ನಂ.೩೫ರ ವ್ಯಾಪ್ತಿಯ ಕ್ಯಾತಮಾರನ ಹಳ್ಳಿ ೪ನೇ ಹಂತದ ಕೆ.ಎಸ್.ಅಶ್ವಥ್ ರಸ್ತೆಯ೨ನೇ ಅಡ್ಡರಸ್ತೆ ಬದಿಯಲ್ಲಿ ಒಳಚರಂಡಿಯ ಕೊಳಚೆ ನೀರು ಮುಂದೆ ಹರಿಯಲಾಗದೆ ಸ್ಥಗಿತಗೊಂಡಿದೆ. ಸುಮಾರು ೩೦ ವರ್ಷಗಳಿಗೂ ಹಿಂದೆ ಕಲ್ಲಿನ ಚಪ್ಪಡಿಗಳನ್ನು ಅಳವಡಿಸಿ ಈ ಒಳಚರಂಡಿ ನಿರ್ಮಿಸಲಾ ಗಿತ್ತು. ಅಲ್ಲಿಂದ ಇಲ್ಲಿಯವರೆಗೂ ಯಾವುದೇ ಸಮರ್ಪಕವಾದ ಒಳಚರಂಡಿ ಕಾಮಗಾರಿಗಳು ನಡೆದಿಲ್ಲ ಎನ್ನುತ್ತಾರೆ ಸ್ಥಳೀಯರು.

ಈ ಒಳಚರಂಡಿಯ ಕೊಳಚೆ ನೀರು ಸರಾಗವಾಗಿ ಹರಿದುಹೋಗಲು ರಸ್ತೆಯ ಇನ್ನೊಂದು ಬದಿಯಲ್ಲಿರುವ ಉದ್ಯಾನದಲ್ಲಿರುವ ಒಳಚರಂಡಿಗೆ ಪೈಪ್‌ಲೈನ್ ಸಂಪರ್ಕ ಕಲ್ಪಿಸಲಾಗಿತ್ತು. ಆದರೆ, ಕೆಲ ತಿಂಗಳುಗಳಿಂದ ಉದ್ಯಾನದ ಒಳಚರಂಡಿಗೆ ಕೊಳಚೆ ನೀರು ಸರಾಗವಾಗಿ ಹರಿದುಹೋಗುತ್ತಿಲ್ಲ. ಹಾಗಾಗಿ ಹಳೆ ಚರಂಡಿಯಲ್ಲೇ ನಿಲ್ಲುತ್ತಿದ್ದು, ದುರ್ನಾತ ಬೀರುತ್ತಿದೆ. ಈ ಒಳಚರಂಡಿ ಮಗ್ಗುಲಿನಲ್ಲೇ ಚಂದ್ರಶೇಖರ್ ಎಂಬವರ ಮನೆ ಇದೆ. ಕೊಳಚೆ ನೀರು ಹಾಗೂ ತ್ಯಾಜ್ಯ ಒಂದೆಡೆ ಶೇಖರಣೆಯಾಗಿರುವ ಕಾರಣದಿಂದ ಅವರು ನಿತ್ಯ ಸಮಸ್ಯೆ ಎದುರಿಸುವಂತಾಗಿದೆ. ಒಳಚರಂಡಿ ನೀರು ಸ್ಥಗಿತಗೊಂಡಿರುವ ಸ್ಥಳದಲ್ಲಿ ಪ್ಲಾಸ್ಟಿಕ್ ಕವರ್‌ಗಳು, ನೀರಿನ ಖಾಲಿ ಬಾಟಲ್‌ಗಳು ಸಂಗ್ರಹಗೊಂಡಿದ್ದು, ದುರ್ನಾತ ಮತ್ತಷ್ಟು ಹೆಚ್ಚಾಗಿದೆ.

ಕಳೆದ ವರ್ಷ ನಗರಪಾಲಿಕೆಯಿಂದ ೨ನೇ ಅಡ್ಡರಸ್ತೆಯಲ್ಲಿಮ್ಯಾನ್ ಹೋಲ್ ಸಂಪರ್ಕ ಕಾಮಗಾರಿ ಹಾಗೂ ರಸ್ತೆ ಡಾಂಬರೀಕರಣ ಕಾಮಗಾರಿ ನಡೆಸಲಾಗಿತ್ತು. ಆ ಸಂದರ್ಭದಲ್ಲಿ ಉದ್ಯಾನದ ಒಳಚರಂಡಿಗೆ ಕಲ್ಪಿಸಿದ್ದ ಸಂಪರ್ಕವನ್ನು ಕಡಿತ ಮಾಡಿದ್ದಾರೆ. ಕಳೆದ ೬ ತಿಂಗಳಿಂದ ಈ ಸಮಸ್ಯೆ ಎದುರಾಗಿದೆ. ಕೊಳಚೆ ನೀರಿನ ಸಮಸ್ಯೆಯಿಂದ ರಸ್ತೆಯಲ್ಲಿ ಓಡಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ವಿಷ ಜಂತುಗಳ ಕಾಟ: ಕಳೆದ ೬ ತಿಂಗಳುಗಳಿಂದ ಮನೆಯ ಮುಂದೆ ನೀರು ನಿಲುಗಡೆಯಾಗುತ್ತಿದ್ದು, ಕಸದ ರಾಶಿ ಮನೆಯ ಮುಂದೆ ಗುಡ್ಡೆಯಾಗುತ್ತದೆ. ಇದಲ್ಲದೇ ಕೊಳಚೆ ನೀರಿನಲ್ಲಿ ಹಾವುಗಳು ಹರಿದು ಬಂದು ಮನೆಯೊಳಗಡೆ ಹೊಕ್ಕಿರುವುದೂ ಇದೆ.

ಪಾಲಿಕೆಯ ನಿರ್ಲಕ್ಷ್ಯ ಆರೋಪ: ಈ ಸಮಸ್ಯೆ ಕುರಿತು ನಗರಪಾಲಿಕೆಗೆ ನಿರಂತರವಾಗಿ ದೂರು ನೀಡುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಪಾಲಿಕೆ ಅಧಿಕಾರಿಗಳು ದೂರವಾಣಿ ಕರೆಗೂ ಲಭ್ಯವಾಗುತ್ತಿಲ್ಲ. ಖುದ್ದಾಗಿ ಹೋಗಿ ಪಾಲಿಕೆಯಲ್ಲಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಾರೆ ಎಂದು ಸ್ಥಳೀಯರು ದೂರಿದ್ದಾರೆ.

” ನಗರಪಾಲಿಕೆ ಅಧಿಕಾರಿಗಳು ಒಳಚರಂಡಿ ಸಂಪರ್ಕ ಸರಿಪಡಿಸದೆನಿರ್ಲಕ್ಷ್ಯ ವಹಿಸುತ್ತಿದ್ದಾರೆ. ದೂರವಾಣಿ ಸಂಪರ್ಕಕ್ಕೂ ಸಿಗುತ್ತಿಲ್ಲ ಯಾವುದೇ ರೀತಿಯ ಅನಾಹುತ ಸಂಭವಿಸಿದರೆ ಪಾಲಿಕೆಯೇ ಹೊಣೆಯಾಗಬೇಕಾಗುತ್ತದೆ.”

-ಚಂದ್ರಶೇಖರ್, ಸ್ಥಳೀಯರು

” ಈಗಷ್ಟೇ ಈ ಸಮಸ್ಯೆ ನನ್ನ ಗಮನಕ್ಕೆ ಬಂದಿದೆ. ಕೂಡಲೇ ಸಮಸ್ಯೆ ಬಗೆಹರಿಸಲು ಅಽಕಾರಿಗಳಿಗೆ ಸೂಚಿಸಲಾಗುವುದು. ಒಳಚರಂಡಿ ಕಾಮಗಾರಿ ನಡೆಸಿ ಸಮರ್ಪಕವಾಗಿ ಕೊಳಚೆ ಹರಿದು ಹೋಗುವಂತೆ ವ್ಯವಸ್ಥೆ ಮಾಡಲಾಗುವುದು.”

-ಶೇಖ್ ತನ್ವೀರ್ ಆಸಿ-, ಆಯುಕ್ತ, ನಗರಪಾಲಿಕೆ.

ಆಂದೋಲನ ಡೆಸ್ಕ್

Recent Posts

INS vs NZ | ಮಿಚೆಲ್‌ ಅಬ್ಬರಕ್ಕೆ ರಾಹುಲ್‌ ಶತಕ ವ್ಯರ್ಥ : ಭಾರತಕ್ಕೆ ಸೋಲು

ರಾಜ್‌ಕೋಟ್ : ಡೆರಿಲ್ ಮಿಚೆಲ್ ಅಮೋಘ ಶತಕ (131) ಹಾಗೂ ವಿಲ್ ಯಂಗ್ (87) ಅರ್ಧಶತಕದ ನೆರವಿನಿಂದ ಆತಿಥೇಯ ಭಾರತ…

2 hours ago

ವಾಹನ ಸವಾರರು ಹೆಲ್ಮೆಟ್‌ ಬಳಸುತ್ತಿದ್ದಾರೆಯೇ? : ಜಾಗೃತಿ ಮೂಡಿಸಲು ಬಂದ ಯಮಧರ್ಮ

ಮೈಸೂರು : ನಗರದ ಹೃದಯ ಭಾಗವಾದ ಕೆ.ಆರ್.ವೃತ್ತದಲ್ಲಿ ಗಂಧದಗುಡಿ ಫೌಂಡೇಶನ್ ಮತ್ತು ನಗರ ಸಂಚಾರ ಪೊಲೀಸ್ ಸಂಯುಕ್ತಾಶ್ರಯದಲ್ಲಿ ಸಂಕ್ರಾಂತಿ ಹಬ್ಬದ…

3 hours ago

ಬಳ್ಳಾರಿ ಗಲಭೆ | ಪಾದಯಾತ್ರೆಗೆ ಬಿಜೆಪಿಯಲ್ಲಿ ಭಿನ್ನಮತ

ಬೆಂಗಳೂರು : ಬ್ಯಾನರ್ ಅಳವಡಿಕೆ ಸಂಬಂಧಪಟ್ಟ ಬಳ್ಳಾರಿಯಲ್ಲಿ ನಡೆದ ಗಲಭೆ ಖಂಡಿಸಿ ಪಾದಯಾತ್ರೆ ನಡೆಸುವ ವಿಷಯದಲ್ಲಿ ಬಿಜೆಪಿಯೊಳಗೆ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ.…

4 hours ago

ವರ್ಕ್ ಫ್ರಮ್ ಹೋಮ್ ಕೆಲಸ | ಮಹಿಳೆಗೆ 9.7 ಲಕ್ಷ ರೂ. ವಂಚನೆ

ಮೈಸೂರು: ವರ್ಕ್ ಫ್ರಂ ಹೋಂ ಕೆಲಸಕ್ಕೆ ಸೇರಿದ ಮಹಿಳೆ ನಂತರ ನಕಲಿ ಕಂಪೆನಿಯವರ ಮಾತನ್ನು ಕೇಳಿ ಷೇರು ಮಾರುಕಟ್ಟೆಯಲ್ಲಿ ಹಣ…

4 hours ago

ಎರಡು ಪ್ರತ್ಯೇಕ ಅಪಘಾತ : ಇಬ್ಬರು ಸಾವು

ಮೈಸೂರು : ಎರಡು ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಬೆಳವಾಡಿ ಹಾಗೂ ಕಡಕೊಳ ಬಳಿ ನಡೆದಿದೆ. ಮೊದಲನೇ…

4 hours ago

ಸಂಕ್ರಾಂತಿಗೆ ಸಾಂಸ್ಕೃತಿಕ ನಗರಿ ಸಜ್ಜು : ಎಲ್ಲೆಲ್ಲೂ ಶಾಪಿಂಗ್ ಸಡಗರ

ಮೈಸೂರು : ವರ್ಷದ ಮೊದಲ ಹಬ್ಬ ಸುಗ್ಗಿ ಸಂಕ್ರಾತಿ ಹಿನ್ನೆಲೆ ನಗರದಲ್ಲಿ ಸಂಭ್ರಮ ಮನೆ ಮಾಡಿದ್ದು, ಮಾರುಕಟ್ಟೆಯಲ್ಲಿ ಹಬ್ಬಕ್ಕೆ ಬೇಕಾದ…

5 hours ago