Andolana originals

ಜಲಾವೃತವಾಗುವ ಕುಳ್ಳಂಕನಹುಂಡಿ

ಮೈಸೂರು: ನಂಜನಗೂಡಿನಿಂದ ತಿ.ನರಸೀಪುರ ರಸ್ತೆಯಲ್ಲಿ ಹೊರಟು, ಸುಮಾರು 5 ಕಿ.ಮೀ. ಸಾಗಿದ ಬಳಿಕ ಸಿಗುವ ಮುಳ್ಳೂರು ಗ್ರಾಮದ ಗೇಟ್‌ನಲ್ಲಿ ಎಡಕ್ಕೆ ತಿರುವು ಪಡೆದು ನೇರವಾಗಿ ತೆರಳಿದರೆ, ಅಂದಾಜು 5 ಕಿ.ಮೀ. ದೂರದಲ್ಲಿ ಕುಳ್ಳಂಕನಹುಂಡಿ ಗ್ರಾಮ ಸಿಗುತ್ತದೆ. ಅದರ ಮಗ್ಗುಲಿನಲ್ಲೇ ಕಪಿಲಾ ನದಿಯ ಹರಿವು. ಕಣ್ಣನ ತಂಪು ಮಾಡುವ ನದಿಯ ಭವ್ಯ ನೋಟ; ಸ್ಥಳೀಯರನ್ನು ಜಡಗೊಳಿಸಿದೆ ಎನ್ನಬಹುದು.

ಕಾರಣವಿಷ್ಟೇ, ಹೊಸದಾಗಿ ಆ ಊರಿಗೆ ಭೇಟಿ ನೀಡುವ ಮಂದಿಯನ್ನು ನದಿಯು ಅತ್ಯಂತ ಆಕರ್ಷಕವಾಗಿ, ಸೂಜಿಗಲ್ಲಿನಂತೆ ಸೆಳೆಯಬಹದು. ಆದರೆ, ಗ್ರಾಮಸ್ಥರಿಗೆ ನದಿಯ ಅಬ್ಬರದ್ದೇ ಆತಂಕ. ಇತ್ತೀಚೆಗೆ ನದಿಯ ಒಡಲುಕ್ಕಿ ನೀರು ಹರಿದಾಗ, ಹಲವು ಮನೆಗಳಿಗೆ ನೀರು ನುಗ್ಗಿತ್ತು. ಅವರನ್ನು ಗ್ರಾಮದ ಎತ್ತರದ ಪ್ರದೇಶಕ್ಕೆ ಸ್ಥಳಾಂತರ ಗೊಳಿಸಲಾಗಿತ್ತು. 125 ಮನೆಗಳಿರುವ ಈ ಪುಟ್ಟ ಹಳ್ಳಿಯಲ್ಲಿ ಹತ್ತಾರು ಕುಟುಂಬದವರು ಸಾಮಾನ್ಯವಾಗಿ ನೆರೆಯ ಬರೆಗೆ ಒಳಗಾಗುತ್ತಾರೆ. ಉಳಿದವರು ಸುರಕ್ಷಿತವಾಗಿರುತ್ತಾರೆ. ಅವರಿಗೆ ಪ್ರವಾಹ, ನೆರೆಯ ಭಯವಿಲ್ಲ.

ಆದರೆ, ಕಪಿಲಾ ನದಿಯಲ್ಲಿ ಪ್ರವಾಹ ಉಂಟಾದರೆ, ಕುಳ್ಳಂಕನಹುಂಡಿ ಮತ್ತು ಮುಳ್ಳೂರು ಗ್ರಾಮದ ನಡುವಿನ ರಸ್ತೆಯ ಸಂಪರ್ಕ ಕಡಿದು ಹೋಗುತ್ತದೆ. ನದಿಯ ಇನ್ನೊಂದು ಭಾಗದಿಂದ ನೀರು ಊರೊಳಗೆ ನುಗ್ಗುತ್ತದೆ. ಅಂದರೆ ಬಹುತೇಕ ಗ್ರಾಮ ದ್ವೀಪದಂತಾಗುತ್ತದೆ. ಆದರೆ, ದಿನಸಿಗಳಿಗೆ ತಾಪತ್ರಯ ಆಗುವುದಿಲ್ಲ ಎನ್ನುತ್ತಾರೆ ಗ್ರಾಮದವರಾದ ಲೋಕೇಶ್, ರಂಗಸ್ವಾಮಿ, ಅಂಕ, ಜಯಕುಮಾರ್ ಮತ್ತು ರಾಜೇಶ್ ಅವರು.

ಆದರೆ, ಶಾಶ್ವತವಾಗಿ ಈ ಸಮಸ್ಯೆಯಿಂದ ರಕ್ಷಣೆ ಪಡೆಯಲು ಗ್ರಾಮವನ್ನೇ ಸ್ಥಳಾಂತರ ಮಾಡಬೇಕು ಎಂಬುದಕ್ಕೆ ಭಿನ್ನ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಕೆಲವರು ಆಮೇಲೆ ನೋಡೋಣ ಬಿಡಿ ಎಂದು ಜಾರಿಕೊಂಡರೆ, ಇನ್ನಷ್ಟು ಮಂದಿ ಪಲ್ಲಟವಾಗಲಿ ಎನ್ನುತ್ತಾರೆ.

ಸ್ಥಳಾಂತರಿಸಿದರೆ ಹೋಗುವುದಕ್ಕೆ ಸಿದ್ಧ
ಕುಳ್ಳಂಕನಹುಂಡಿ ಗ್ರಾಮವು ಪ್ರವಾಹ ಬಂದಾಗಲೆಲ್ಲ ಕಂಗಾಲಾಗುತ್ತಿದ್ದು, ಶಾಶ್ವತವಾಗಿ ಸ್ಥಳಾಂತರ ಮಾಡುವ ಉದ್ದೇಶದಿಂದ ಸುಮಾರು 30 ವರ್ಷಗಳ ಹಿಂದೆ ಶಾಸಕರಾಗಿದ್ದ ಡಿ.ಟಿ.ಜಯ ಕುಮಾರ್‌ ಅವರು ನಂಜನಗೂಡು- ತಿ.ನರಸೀಪುರ ರಸ್ತೆಯಲ್ಲಿ ಮುಳ್ಳೂರು ಗೇಟ್ ಬಳಿ ನಿವೇಶನ ಗುರುತಿಸಿದ್ದರು. ಆದರೆ, ನಮ್ಮ ಹಿರೀಕರು ಒಪ್ಪಲಿಲ್ಲ. ಈಗಲೂ ಸ್ಥಳಾಂತರ ಮಾಡಿದರೆ ಹೋಗುವುದಕ್ಕೆ ನಮ್ಮ ಕುಟುಂಬ ಸಿದ್ಧ.
-ಮಹದೇವನಾಯಕ, ಕುಳ್ಳಂಕನಹುಂಡಿ.

 

ಆಂದೋಲನ ಡೆಸ್ಕ್

Recent Posts

ಹನೂರು| ಶಿರಗೋಡು ಗ್ರಾಮದಲ್ಲಿ ಅದ್ಧೂರಿಯಾಗಿ ಜರುಗಿದ ಶ್ರೀ ಲಕ್ಷ್ಮೀ ವೆಂಕಟೇಶ್ವರ ರಥೋತ್ಸವ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲೂಕಿನ ಶಿರಗೋಡು ಗ್ರಾಮದ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಾಲಯದಲ್ಲಿ ರಥೋತ್ಸವ ಭಾನುವಾರ ಬೆಳಿಗ್ಗೆ…

1 hour ago

ಇರಾನ್ ಇಸ್ರೇಲ್ ಸಂಘರ್ಷ ತೈಲ ಬೆಲೆ ಚಿನ್ನದ ಬೆಲೆ ಏರಿಕೆ ..?

ಟೆಹರಾನ್‌: ಇರಾನ್ ಮೇಲೆ ಇಸ್ರೇಲ್ ಅಮೆರಿಕ ಜಂಟಿಯಾಗಿ ದಾಳಿ ನಡೆಸಿದ ಪರಿಣಾಮ ಇದೀಗ ಇರಾನ್ ಕೂಡ ಪ್ರತೀಕಾರವಾಗಿ ಇಸ್ರೇಲ್ ಅಮೆರಿಕಾ…

2 hours ago

ಕೊಡಗು| ಬೆಟ್ಟತ್ತೂರು ಬಳಿ ಆನೆ ದಾಳಿಗೆ ವಿದ್ಯಾರ್ಥಿನಿ ಬಲಿ

ಕೊಡಗು: ಆನೆ ದಾಳಿಗೆ ವಿದ್ಯಾರ್ಥಿನಿ ಬಲಿಯಾಗಿರುವ ಘಟನೆ ಕೊಡಗಿನಲ್ಲಿ ನಡೆದಿದೆ. ಮದೆ ಬೆಟ್ಟತ್ತೂರು ಗ್ರಾಮದ ಗಿರೀಶ್‌ ಎಂಬುವವರ ಪುತ್ರಿ ಪೂಜಾ…

2 hours ago

ಕಾಂಗ್ರೆಸ್‌ಗೆ ಹೆಚ್ಚಿನ ಸೀಟು ಇಲ್ಲ: ಡಿಎಂಕೆ ಸ್ಪಷ್ಟ ಸಂದೇಶ

ತಮಿಳುನಾಡು: ತಮಿಳುನಾಡು ವಿಧಾನಸಭಾ ಚುನಾವಣೆ 2026ರ ಸೀಟು ಹಂಚಿಕೆ ಮಾತುಕತೆ ಆರಂಭವಾಗಿದೆ. ಜಾತ್ಯಾತೀತ ಪ್ರಗತಿಪರ ಮೈತ್ರಿಕೂಟದ ಪಕ್ಷಗಳಿಗೆ ಸೀಟು ಹಂಚಿಕೆ…

3 hours ago

ಚನ್ನಪಟ್ಟಣದಲ್ಲಿ ಕಾಡಾನೆ ಸೆರೆಗೆ ಸಾಕಾನೆಗಳ ಮೂಲಕ ಕಾರ್ಯಾಚರಣೆ

ರಾಮನಗರ: ಚನ್ನಪಟ್ಟಣ-ರಾಮನಗರ ಭಾಗದಲ್ಲಿ ಕಾಡಾನೆ ಉಪಟಳ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಎರಡು ಕಾಡಾನೆಗಳ ಸೆರೆಗೆ ಸರ್ಕಾರ ಅನುಮತಿ ನೀಡಿದೆ. ಚನ್ನಪಟ್ಟಣದ ಬಿ.ವಿ.ಹಳ್ಳಿ…

3 hours ago

ಚಿಕ್ಕಬಳ್ಳಾಪುರಕ್ಕೂ ಅಲಿ ಖಮೇನಿಗೂ ಇದೆ ನಂಟು

ಚಿಕ್ಕಬಳ್ಳಾಪುರ: ಇಸ್ರೇಲ್‌ ಹಾಗೂ ಅಮೇರಿಕಾ ನಡೆಸಿದ ದಾಳಿಯಲ್ಲಿ ಇರಾನ್‌ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾಗಿದ್ದು, ಖನೇನಿಯ ಮಗಳು,…

3 hours ago