Andolana originals

ಕುಕ್ಕರಹಳ್ಳಿ ಕೆರೆ ವಿವಾದ : ʻಶ್ವಾನ ಶಾಲಾʼ ಗಳನ್ನು ನಿರ್ಮಿಸಿ

ವಸಂತಕುಮಾರ್ ಮೈಸೂರು ಮಠ,

ಸಾಮಾಜಿಕ ಹೋರಾಟಗಾರ ಮತ್ತು ಪರಿಸರವಾದಿ.

ಮೈ ಸೂರಿನ ಕುಕ್ಕರಹಳ್ಳಿ ಕೆರೆಯಲ್ಲಿ ಬೀದಿ ನಾಯಿಗಳಿಗೆ ಶ್ವಾನ ಪ್ರಿಯರು ಆಹಾರ ನೀಡುವುದರ ಬಗ್ಗೆ ಸಾಕಷ್ಟು ವಾದ ವಿವಾದಗಳು ಹರಿದಾಡುತ್ತಿವೆ. ಮೈಸೂರು ವಿಶ್ವವಿದ್ಯಾನಿಲಯಕ್ಕೆ ಇದೊಂದು ನುಂಗಲಾರದ ಬಿಸಿ ತುಪ್ಪವಾಗಿದೆ. ಬೀದಿ ನಾಯಿಗಳಿಂದ ಕಚ್ಚಿಸಿಕೊಂಡಿರುವ ಹಲವರು, ಅದರಲ್ಲೂ ಮಕ್ಕಳು, ಹೆಂಗಸರು ಪಡಬಾರದ ಪಾಡುಪಟ್ಟಿರುವುದನ್ನು ನಾವು ಕಂಡಿದ್ದೇವೆ. ಒಂದು ಕಡೆ ಇದು ಸತ್ಯವಾದರೆ, ನಾಯಿಗಳಿಗೆ ಆಹಾರ ನೀಡುವುದು ಜನರ ಹಕ್ಕು ಎಂದು ಹಲವರು ಶ್ವಾನ ಪ್ರಿಯರು ಪ್ರತಿಪಾದಿಸುತ್ತಿದ್ದಾರೆ. ಮೈಸೂರು ನಗರಪಾಲಿಕೆಯ ನಾಯಿ ಸ್ಕ್ವಾಡ್ ಆಗಾಗ ಬೀದಿ ನಾಯಿಗಳನ್ನು ಹಿಡಿದೊಯ್ದು ಅದಕ್ಕೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿ, ಮತ್ತೆ ಬೀದಿಗೆ ಬಿಡುತ್ತಿರುವುದು ಗೊತ್ತಿರುವ ವಿಷಯ. ಅಷ್ಟರೊಳಗೆ ಆ ನಾಯಿಗಳು ಸಾಕಷ್ಟು ಸಂತಾನ ಉತ್ಪಾದನೆ ಮಾಡಿರುತ್ತವೆ; ಒಂದು ಹೆಣ್ಣು ನಾಯಿ ಸರಿಸುಮಾರು ೪-೬ ಮರಿಗಳಿಗೆ ಜನ್ಮ ಕೊಡುತ್ತದೆ.

ಈ ಸಮಸ್ಯೆಯನ್ನು ಬಗೆಹರಿಸಲು ಇದೊಂದು ಸಲಹೆ. ಭಾರತದಲ್ಲಿ ಗೋವುಗಳನ್ನು ಕಂಡರೆ ಪೂಜ್ಯತಾ ಭಾವನೆ ಇದೆ. ಆದರೆ ಬಿಡಾಡಿ ಹೋರಿಗಳನ್ನು ಸಾಕಲಾರದೆ, ಅವುಗಳನ್ನು ನಡುಬೀದಿಗಳಲ್ಲಿ ಬಿಟ್ಟಿರುವುದನ್ನು ಮತ್ತು ಅವುಗಳಿಂದ ವಾಹನ ಸವಾರರಿಗೆ ಎಷ್ಟು ಅನನುಕೂಲವಾಗುತ್ತದೆ ಎನ್ನುವುದನ್ನು ಇಂದಿಗೂ ನಾವು ಕಾಣುತ್ತಿದ್ದೇವೆ. ಒಂದು ಕಾಲದಲ್ಲಿ ದನದ ಮಾಂಸ ತಿನ್ನುವವರು ಅವುಗಳನ್ನು ಸಾಗಿಸುತ್ತಿದ್ದುದು ಒಂದು ನೋವಿನ ಸಂಗತಿಯಾಗಿತ್ತು. ಈ ದಾರುಣ ಪರಿಸ್ಥಿತಿಯನ್ನು ನೀಗಿಸಲು ಸರ್ಕಾರ ಮತ್ತು ಗೋವು ಪ್ರಿಯರು ಹಲವಾರು ಗೋವು ಶಾಲೆಗಳನ್ನು ನಿರ್ಮಿಸಿ, ಅವುಗಳಿಗೆ ಆಹಾರ, ನೀರು ಮತ್ತು ಅವು ಸ್ವಾಭಾವಿಕ ಮರಣ ಹೊಂದುವವರೆಗೆ ಅವುಗಳ ಆರೋಗ್ಯ ಮತ್ತು ಔಷಧಗಳನ್ನು ನೀಡುವ ವ್ಯವಸ್ಥೆ ಮಾಡಿದ್ದಾರೆ.

ಅಂತೆಯೇ ‘ಶ್ವಾನ ಶಾಲಾ’ಗಳನ್ನು ಏಕೆ ನಿರ್ಮಿಸಬಾರದು? ಶ್ವಾನಪ್ರಿಯರಾಗಲೀ, ಸರ್ಕಾರವಾಗಲಿ ಅಥವಾ ಸ್ವಯಂ ಸೇವಾ ಸಂಸ್ಥೆಗಳಾಗಲಿ ಮುಂದೆ ಬಂದು ಶ್ವಾನಗಳ ಮೇಲಿರುವ ತಮ್ಮ ಪ್ರೀತಿ, ಪ್ರೇಮವನ್ನು ‘ಶ್ವಾನ ಶಾಲಾ’ಗಳನ್ನು ನಿರ್ಮಿಸಿ ಗೋವು ಶಾಲಾಗಳಲ್ಲಿ ನೀಡುತ್ತಿರುವ ಸಕಲ ಸೌಕರ್ಯಗಳನ್ನು ಬೀದಿನಾಯಿಗಳಿಗೆ ಸಿಗುವಂತೆ ಮಾಡಿದರೆ ಎಲ್ಲರೂ ನಿರಾಳವಾಗಿರಬಹುದು ಅನಿಸುತ್ತಿದೆ. ಜೊತೆಗೆ ಶ್ವಾನ ಪ್ರಿಯರಿಗೆ ಒಂದು ಅವಕಾಶ ಕೊಡೋಣ, ‘ಶ್ವಾನ ಶಾಲಾ’ಗಳಲ್ಲಿ ಹಿಡಿದಿಟ್ಟುರುವ ಬೀದಿ ನಾಯಿಗಳ ಮೇಲೆ ಪ್ರೀತಿ ಇದ್ದರೆ, ಅವುಗಳನ್ನು ಕೊಂಡೊಯ್ದು ಮನೆಗಳಲ್ಲಿ ಇಟ್ಟುಕೊಂಡು ಸಾಕಲಿ, ಆದರೆ, ಅವುಗಳನ್ನು ಎಂದಿಗೂ ಬೀದಿಯಲ್ಲಿ ಬಿಡಕೂಡದು; ಬಿಟ್ಟರೆ ದಂಡ! ಬೀದಿನಾಯಿಗಳನ್ನು ಹಿಡಿದ ನಂತರ ಅವುಗಳನ್ನು ‘ಶ್ವಾನ ಶಾಲಾ’ದಲ್ಲಿ ನೋಂದಣಿ ಮಾಡಿ ಪ್ರತಿಯೊಂದು ನಾಯಿಗೂ ಕ್ರಮ ಸಂಖ್ಯೆ ನೀಡಿ, ಕಿವಿಗೆ ಆ ಸಂಖ್ಯೆಯಿರುವ ಬಿಲ್ಲೆಯನ್ನು ಸಿಕ್ಕಿಸಿದರೆ ಒಳಿತು. ಜೊತೆಗೆ ಆ ನಾಯಿಯನ್ನು ಕೊಂಡೊಯ್ಯುವ ಶ್ವಾನ ಪ್ರಿಯರ ಮಾಹಿತಿಯೂ ನೋಂದಣಿಯಾಗುವಂತೆ ಮಾಡುವ ವ್ಯವಸ್ಥೆ ಮಾಡಿದರೆ ಉತ್ತಮ ಅನಿಸಿದೆ.

 

ಆಂದೋಲನ ಡೆಸ್ಕ್

Recent Posts

ಭಾನುವಾರವಾದರೂ ತಪ್ಪಿಸುವಂತಿಲ್ಲ: ನವೆಂಬರ್‌.1ರಂದು ಶಾಲೆಗಳಲ್ಲಿ ರಾಜ್ಯೋತ್ಸವ ಕಡ್ಡಾಯ

ಬೆಂಗಳೂರು: ನವೆಂಬರ್‌ 1ರಂದು ಭಾನುವಾರ ಬಂದರೂ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಕಡ್ಡಾಯ ಎಂದು ರಾಜ್ಯ ಸರ್ಕಾರ…

16 hours ago

ಗುಂಡ್ಲುಪೇಟೆ: ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ

ಗುಂಡ್ಲುಪೇಟೆ: ತಾಲ್ಲೂಕಿನ ವಡಯ್ಯನಪುರ ಹಾಗೂ ಬೊಮ್ಮಲಾಪುರ ಗ್ರಾಮಗಳಲ್ಲಿ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಕೊನೆಗೂ ಬೋನಿಗೆ ಬಿದ್ದಿದೆ. ಬೊಮ್ಮಲಾಪುರ…

17 hours ago

ದನ ಮೇಯಿಸಲು ಹೋದ ವ್ಯಕ್ತಿ ಮೇಲೆ ಚಿರತೆ ದಾಳಿ

ಹನೂರು: ತಾಲ್ಲೂಕಿನ ಗುಂಡಾಪುರ ಗ್ರಾಮದ ಸಮೀಪದ ಅರಣ್ಯ ಪ್ರದೇಶದಲ್ಲಿ ದನ-ಕುರಿ ಮೇಯಿಸಲು ಹೋಗಿದ್ದ ವ್ಯಕ್ತಿ ಮೇಲೆ ಚಿರತೆ ದಾಳಿ ನಡೆಸಿರುವ…

18 hours ago

ಮೈಸೂರು: ಬಾಲಕಿ ಮೇಲಿನ ಅತ್ಯಾಚಾರ–ಕೊಲೆ ಪ್ರಕರಣ: ಕಾಮುಕನಿಗೆ ಗಲ್ಲು ಶಿಕ್ಷೆ

ಮೈಸೂರು: ಮೈಸೂರಿನಲ್ಲಿ ಕಳೆದ ವರ್ಷದ ದಸರಾ ವೇಳೆ ನಡೆದಿದ್ದ ಬಾಲಕಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ನ್ಯಾಯಾಲಯ ತೀರ್ಪು…

18 hours ago

ಸಯ್ಯಾಜಿರಾವ್ ರಸ್ತೆಯಲ್ಲಿ ಕುಸಿದು ಬಿದ್ದ ಬೃಹತ್ ವಿದ್ಯುತ್ ದೀಪಾಲಂಕಾರದ ಕಂಬ ; ಕಾರು, ಆಟೋ ಜಖಂ

ಮೈಸೂರು: ದಸರಾ ದೀಪಾಲಂಕಾರದ ನಡುವೆ ಅವಘಡವೊಂದು ಸಂಭವಿಸಿದೆ. ನಗರದ ಸಯ್ಯಾಜಿರಾವ್ ರಸ್ತೆಯಲ್ಲಿ ಬೃಹತ್ ವಿದ್ಯುತ್ ದೀಪಾಲಂಕಾರದ ಕಂಬ ಕುಸಿದು ಬಿದ್ದಿದ್ದು,…

18 hours ago

ಓದುಗರ ಪತ್ರ: ನಿಷ್ಪಕ್ಷಪಾತ ತನಿಖೆ ನಡೆಯಲಿ

ಇತ್ತೀಚಿನ ದಿನಗಳಲ್ಲಿ ಹೆಚ್ಚು ಸದ್ದುಮಾಡುತ್ತಿರುವ ಸ್ಟ್ರಿಂಗ್ ಆಪರೇಷನ್ ಸುದ್ದಿ, ಅದರ ಸುತ್ತ ನಡೆಯುವ ಆರೋಪ-ಪ್ರತ್ಯಾರೋಪಗಳು ಹಾಗೂ ಸಿಡಿ/ಪೆನ್ ಡ್ರೈವ್‌ಗಳ ವಿಚಾರ…

22 hours ago