Andolana originals

ಕುಕ್ಕರಹಳ್ಳಿ ಕೆರೆ: ಹೊರಬರಲು ಹೊಸ ಮಾರ್ಗ!

ವಾಯುವಿಹಾರಕೆ ನಿಗದಿತ ಸಮಯದ ಬಳಿಕ ಗೇಟ್‌ಗೆ ಬೀಗ; ಆಚೆ ಬರಲು ವಾಯುವಿಹಾರಿಗಳ ಸರ್ಕಸ್

ಹೆಚ್. ಎಸ್. ದಿನೇಶ್ ಕುಮಾರ್

ಮೈಸೂರು: ಕೂರಕ್ ಕುಕ್ಕ್ರಳ್ಳಿ ಕೆರೆ… ಎಂಬ ಸಿನಿಮಾ ಹಾಡನ್ನು ಕೆರೆ ಆವರಣದಲ್ಲಿ ವಾಯುವಿಹಾರಕ್ಕೆ ಬರುವ ಬಹುತೇಕರು ಹಾರೋಕ್ ಕುಕ್ಕ್ರಳ್ಳಿ ಕೆರೆ… ನುಸುಳೋಕ್ ಕುಕ್ಕ್ರಳ್ಳಿ ಕೆರೆ… ಎಂದು ಭಾವಿಸಿದಂತಿದೆ. ಹೀಗಾಗಿ ವಾಯುವಿಹಾರಕ್ಕೆ ನಿಗದಿಪಡಿಸಿದ ಸಮಯ ಮೀರಿದ ಬಳಿಕ ಕೆರೆ ಆವರಣದಿಂದ ಹೊರ ಬರಲು ನಡೆಸುವ ಸರ್ಕಸ್‌ಗಳು ನಿತ್ಯ ನಿರಂತರವಾಗಿವೆ.

ನಿವೃತ್ತರ ಸ್ವರ್ಗ ಎಂಬ ಅನ್ವರ್ಥನಾಮ ಹೊಂದಿರುವ ಮೈಸೂರಿನಲ್ಲಿ ವಾಯು ವಿಹಾರಕ್ಕೆ ಕುಕ್ಕರಹಳ್ಳಿ ಕೆರೆ ಆವರಣ ಮಾತ್ರ ಸೂಕ್ತವೇ? ಹೀಗೊಂದು ಪ್ರಶ್ನೆ ಕಾಡುತ್ತದೆ. ಏಕೆಂದರೆ ಮೈಸೂರು ವಿವಿ ನಿಗದಿಪಡಿಸಿರುವ ಸಮಯ ಮೀರಿದ ನಂತರವೂ ವಾಯು ವಿಹಾರಕ್ಕಾಗಿ ಬಂದ ಸಾರ್ವಜನಿಕರು ಅಲ್ಲಿಂದ ಹೊರ ಹೋಗಲು ಮಾತ್ರ ಹೊಸಮಾರ್ಗ ಹುಡುಕಿಕೊಂಡಿದ್ದಾರೆ.

ಇದಕ್ಕೆ ಯಾರನ್ನು ದೂಷಿಸಬೇಕು? ಮೈಸೂರು ವಿವಿ ನಿಗದಿಪಡಿಸಿರುವ ಸಮಯ ಮೀರಿದ ನಂತರವೂ ವಾಯು ವಿಹಾರ ನಡೆಸುವುದು ಸಾರ್ವಜನಿಕರ ತಪ್ಪೋ ಅಥವಾ ಕೆರೆ ಆವರಣದಲ್ಲಿ ಜನರು ಇದ್ದರೂ ಕೆರೆ ಆವರಣದ ಗೇಟ್‌ಗೆ ಬೀಗ ಜಡಿಯುವುದು ಕಾವಲುಗಾರರ ತಪ್ಪೋ? ಎಂಬುದನ್ನು ಜನರೇ ನಿರ್ಧರಿಸಬೇಕು. ನಗರದ ಜನರ ಆರೋ ಗ್ಯದ ದೃಷ್ಟಿ ಯಿಂದ ನಿತ್ಯ ಬೆಳಿಗ್ಗೆ ಹಾಗೂ ಸಂಜೆ ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಮೈಸೂರು ವಿವಿ ವಾಯುವಿಹಾರಕ್ಕೆ ಅವಕಾಶ ಮಾಡಿಕೊಟ್ಟಿದೆ. ಇದಕ್ಕೆ ಸಮಯವನ್ನೂ ನಿಗದಿಪಡಿಸಿದೆ.

ಬೆಳಿಗ್ಗೆ ೫ರಿಂದ ೧೦ ಗಂಟೆವರೆಗೆ ಹಾಗೂ ಸಂಜೆ ೪ರಿಂದ ೬ ಗಂಟೆವರೆಗೆ ಕೆರೆ ಏರಿ ಹಾಗೂ ಕುಕ್ಕರಹಳ್ಳಿ ಕೆರೆ ಸುತ್ತ ಯಾರು ಬೇಕಾದರೂ ವಾಯುವಿಹಾರ ಅಥವಾ ವ್ಯಾಯಾಮ ಮಾಡಬಹುದು.

ಸಮಯ ಮೀರಿದ ನಂತರ ಭದ್ರತೆಯ ದೃಷ್ಟಿಯಿಂದ ಅಲ್ಲಿನ ಗೇಟ್‌ಗಳಿಗೆ ಬೀಗ ಹಾಕಲಾಗುತ್ತದೆ. ನಂತರ ಅಲ್ಲಿ ನಡೆಯು ವುದೇ ನಿಜವಾದ ಸರ್ಕಸ್. ಹೊಸದಾಗಿ ವಾಯು ವಿಹಾರಕ್ಕೆ ಬರುವವರಿಗೆ ಸಮಯದ ಅವಧಿ ತಿಳಿಯದಿರಬಹದು.

ಆದರೆ, ಪ್ರತಿನಿತ್ಯ ವಾಯುವಿಹಾರ ನಡೆಸುವವರಿಗೆ ಸಮಯ ನಿಗದಿಪಡಿಸಿರುವುದು ತಿಳಿಯದ ವಿಷಯವೇನಲ್ಲ. ಸಂಜೆ ೬ ಗಂಟೆ ನಂತರವೂ ಅಲ್ಲಿನ ಕಾವಲುಗಾರರು ಸೀಟಿ ಊದುವ ಮೂಲಕ ಅಲ್ಲಿಂದ ತೆರಳುವಂತೆ ವಾಯುವಿಹಾರಿಗಳಿಗೆ ಸೂಚನೆ ನೀಡುತ್ತಾರೆ.

ಸುಮಾರು ಅರ್ಧ ಗಂಟೆ ಕಾಲ ಕೆರೆ ಆವರಣದಿಂದ ತೆರಳಲು ಎಚ್ಚರಿಕೆ ಸಹಿತ ಸಮಯವನ್ನು ನೀಡಲಾಗುತ್ತದೆ. ಆದರೂ ಕೆಲವರು ಅಲ್ಲಿನ ಕಾವಲುಗಾರರ ಎಚ್ಚರಿಕೆಯನ್ನು ನಿರ್ಲಕ್ಷಿಸುತ್ತಾರೆ.

ಗೇಟು ಮುಚ್ಚಿದ ಬಳಿಕ ಕೆರೆ ಆವರಣ ದಿಂದ ಹೊರ ಹೋಗಲು ಸರ್ಕಸ್ ಮಾಡಲಾರಂಭಿಸುತ್ತಾರೆ. ಇದರಲ್ಲಿ ಮಹಿಳೆಯರು, ಪುರುಷರು, ವಯೋವೃ ದ್ಧರೂ ಇರುತ್ತಾರೆ. ಕೆರೆ ಆವರಣಕ್ಕೆ ಅಳವಡಿಸಿರುವ ದೊಡ್ಡ ಗೇಟುಗಳನ್ನು ಸಾಹಸದಿಂದ ಹತ್ತಿ, ಇಳಿಯುತ್ತಾರೆ.ಕೆಲ ಮಹಿಳೆಯರಂತೂ ತಂತಿ ಬೇಲಿಯ ಅಡಿ ಯಲ್ಲಿ ನುಸುಳಿ ಅಲ್ಲಿಂದ ಹೊರಬರುತ್ತಾರೆ.

ಪ್ರೇಮಿಗಳ ಕಾಟ: ಸಂಜೆ ೬ ಗಂಟೆ ನಂತರ ಗೇಟ್ ಮುಚ್ಚಲು ಅಲ್ಲಿನ ಸೆಕ್ಯೂರಿಟಿ ಗಾಡ್ ಗಳಿಗೆ ಸ್ಪಷ್ಟ ಆದೇಶವಿದೆ. ಕಾರಣ ಅಲ್ಲಿರುವ ಕಲ್ಲು ಬೆಂಚ್‌ಗಳ ಮೇಲೆ ಕೂಡುವ ಪ್ರೇಮಿಗಳು ಸರಸ ಸಲ್ಲಾಪದಲ್ಲಿ ತೊಡಗುತ್ತಾರೆ. ಕೆಲವೊಮ್ಮೆ ಅನೈತಿಕ ಚಟುವಟಿಕೆ ಕೂಡ ನಡೆಯುತ್ತದೆ. ಈ ಕಾರಣಕ್ಕೆ ವಿವಿ ಸಮಯವನ್ನು ನಿಗದಿ ಪಡಿಸಿದೆ.

ಇದರ ಬಗ್ಗೆ ಗೊತ್ತಿದ್ದರೂ ವಾಯುವಿ ಹಾರಿಗಳು ಸಮಯ ಮೀರಿದ ನಂತರವೂ ಅಲ್ಲಿದ್ದು ಪೇಚಿಗೆ ಸಿಲುಕುತ್ತಾರೆ. ಗೇಟ್ ಹತ್ತುವ ವೇಳೆ ಅಥವಾ ತಂತಿ ಬೇಲಿ ಕೆಳಗೆ ನುಸುಳುವ ವೇಳೆ ಗಂಭೀರ ಗಾಯ ಗಳಾದಲ್ಲಿ ಅವರುಗಳೇ ತೊಂದರೆ ಅನುಭವಿಸಬೇಕು. ಹೀಗಾಗಿ ನಿಗದಿತ ಸಮಯ ದೊಳಗೆ ಅಲ್ಲಿಂದ ತೆರಳಬೇಕು ಎಂದು ಕೆಲ ವಾಯುವಿಹಾರಿಗಳೇ ಸಲಹೆ ನೀಡುತ್ತಾರೆ.

ಮೈಸೂರು ವಿವಿ ನಿಗದಿಪಡಿಸಿರುವ ಸಮಯವನ್ನು ಸದ್ಬಳಕೆ ಮಾಡಿಕೊಂಡು ವಾಯುವಿಹಾರ ಮಾಡಬೇಕು. ಸಮಯ ಮೀರಿದ ನಂತರ ಸೆಕ್ಯೂರಿಟಿ ಗಾರ್ಡ್‌ಗಳು ಗೇಟ್ ಬಂದ್ ಮಾಡುತ್ತಾರೆ. ಭದ್ರತೆ ಕಾರಣಕ್ಕಾಗಿ ಅವರ ಕೆಲಸವನ್ನು ಅವರು ಮಾಡುತ್ತಾರೆ. ಇದಕ್ಕಾಗಿ ಯಾರನ್ನೂ ದೂಷಿಸುವಂತಿಲ್ಲ. -ಸಂತೋಷ್, ವಾಯುವಿಹಾರಿ

ಗೊಂದಲ ಮೂಡಿಸಿದ ಫಲಕ

ಇದು ಅಧಿಕಾರಿಗಳ ನಿರ್ಲಕ್ಷ ಕ್ಕೆ ಹಿಡಿದ ಕನ್ನಡಿ. ಮೈಸೂರು ವಿವಿಯು ವಾಯುವಿಹಾರಿಗಳಿಗೆ ಸಮಯವನ್ನು ನಿಗದಿಪಡಿಸಿ ಎರಡೂ ಕಡೆಯ ಗೇಟ್‌ಗಳಲ್ಲಿ ಫಲಕಗಳನ್ನು ಅಳವಡಿಸಿದೆ. ಒಂದು ಹಳೆಯದು, ಮತ್ತೊಂದು ಹೊಸತು. ಹಳೆಯ ಫಲಕದಲ್ಲಿ ಬೆಳಿಗ್ಗೆ ೬ ಗಂಟೆಯಿಂದ ೧೦ ಗಂಟೆವರೆಗೆ, ಸಂಜೆ ೪ ಗಂಟೆಯಿಂದ ೭ ಗಂಟೆವರೆಗೆ ಎಂದು ಬರೆದಿದೆ. ಹೊಸ ಫಲಕದಲ್ಲಿ ಬೆಳಿಗ್ಗೆ ೬. ೩೦ರಿಂದ ೯. ೩೦ರವರೆಗೆ, ಸಂಜೆ ೩. ೩೦ರಿಂದ ೬. ೩೦ರವರೆಗೆ ಎಂದು ಬರೆದಿದೆ. ಹಳೆಯ ಫಲಕವನ್ನು ಗಮನಿಸಿ ವಾಯುವಿಹಾರ ಮಾಡುವವರೆ ಅಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ಅಧಿಕಾರಿಗಳು ಕೂಡಲೇ ಹಳೆಯ ಫಲಕವನ್ನು ತೆರವುಗೊಳಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.

ಕೋವಿಡ್ ಗೂ ಮುಂಚೆ ಸಂಜೆ ೭ ಗಂಟೆ ವರೆಗೂ ವಾಯುವಿಹಾರಕ್ಕೆ ಅನುಮತಿ ನೀಡಲಾಗಿತ್ತು. ಕೋವಿಡ್ ಬಳಿಕ ಸಮಯವನ್ನು ಕಡಿತ ಗೊಳಿಸಲಾಗಿದೆ. ಸಂಜೆ ೭ ಗಂಟೆಯಾದರೂ ಬೆಳಕಿರುತ್ತದೆ. ಹೀಗಾಗಿ ೭ ಗಂಟೆಯವರೆಗೂ ಅನುಮತಿ ನೀಡಿದಲ್ಲಿ ವಾಯುವಿಹಾರಿಗಳಿಗೆ ಅನುಕೂಲವಾಗುತ್ತದೆ. -ವಿಕ್ರಂ ಅಯ್ಯಂಗಾರ್, ಸಾಮಾಜಿಕ ಕಾರ್ಯಕರ್ತ

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಬೆಲೆಯಲ್ಲಿ ನಾವು ತಗ್ಗೋದೇ ಇಲ್ಲ

ಬೆಲೆಯಲ್ಲಿ ನಾವು ತಗ್ಗೋದೇ ಇಲ್ಲ ಅಂತ ಚಿನ್ನ ಬೆಳ್ಳಿ! ಬೆಲೆ ಎಷ್ಟಾದರೂ ನಾವು ಬಗ್ಗೋದೇ ಇಲ್ಲ ಅಂತ ಕೆಲ ಗ್ರಾಹಕರು…

49 mins ago

ಓದುಗರ ಪತ್ರ: ಡಿಕೆಶಿಯವರ ನಿಲುವು ಸ್ವಾಗತಾರ್ಹ

ವಿದೇಶಿ ನೆಲದಲ್ಲಿ ದೇಶವನ್ನು ಟೀಕಿಸುವುದಿಲ್ಲ ಎಂಬ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರ ನಿಲುವು ಸ್ವಾಗತಾರ್ಹವಾಗಿದೆ. ಗಣರಾಜ್ಯೋತ್ಸವದ ಸಂದರ್ಭದಲ್ಲೇ ಅವರು…

51 mins ago

ಓದುಗರ ಪತ್ರ: ಬಾಂಗ್ಲಾದಲ್ಲಿ ಹಿಂದೂಗಳ ಸರಣಿ ಹತ್ಯೆ ಖಂಡನೀಯ

ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಬಾಂಗ್ಲಾ ದೇಶಕ್ಕೆ ೧೯೭೨ ರಲ್ಲಿ ಪಾಕಿಸ್ತಾನದಿಂದ ಬೇರ್ಪಡಿಸಿ…

53 mins ago

ಓದುಗರ ಪತ್ರ: ನಂಜನಗೂಡಿನಲ್ಲಿ ಆಟೋಗಳಿಗೆ ಮೀಟರ್ ದರ ಜಾರಿಯಾಗಲಿ

ದಕ್ಷಿಣ ಕಾಶಿ ಎಂದೇ ಹೆಸರುವಾಸಿಯಾಗಿರುವ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತಾದಿಗಳು ಆಗಮಿಸುತ್ತಾರೆ. ಆದರೆ ಕೆಲವು ಆಟೋ ಚಾಲಕರು…

56 mins ago

ಪಂಜುಗಂಗೊಳ್ಳಿ ಅವರ ವಾರದ ಅಂಕಣ: ‘ನಿಯೋನೇಟಲ್ ಕೇರ್’ ಸೇವೆಯ ಮಾತೆ ಡಾ.ಅರ್ಮಿಡಾ ಫೆರ್ನಾಂಡೀಸ್

ಏಷ್ಯಾದ ಪ್ರಪ್ರಥಮ ಎದೆಹಾಲಿನ ಬ್ಯಾಂಕನ್ನು ಆರಂಭಿಸಿದ ಕೀರ್ತಿ ಕರ್ನಾಟಕದಲ್ಲಿ ಹುಟ್ಟಿದ, ಗೋವಾ ಮೂಲದ, ಈಗ ಮುಂಬೈಯಲ್ಲಿ ತನ್ನ ಸಾಮಾಜಿಕ ಕಾರ್ಯಗಳನ್ನು…

58 mins ago

ಮಲೆ ಮಹದೇಶ್ವರ ಬೆಟ್ಟ| ಕಾಲ್ನಡಿಗೆ ಪಾದಯಾತ್ರಿಗಳಿಗೆ ಸೌಲಭ್ಯ ಕಲ್ಪಿಸಿ: ಡಿಸಿಎಂ ಡಿಕೆಶಿ ಸೂಚನೆ

ಮಹಾದೇಶ್‌ ಎಂ ಗೌಡ, ಹನೂರು ತಾಲ್ಲೂಕು ವರದಿಗಾರರು ಹನೂರು: ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ಸಹ…

1 hour ago