Andolana originals

ಕೆಟ್ಟುನಿಂತ ಕೆಎಸ್ಆರ್‌ಟಿಸಿ ಇಂಟಲಿಜೆಂಟ್ ಟ್ರಾನ್ಸ್‌ಪೋರ್ಟ್‌ ಸಿಸ್ಟಂ

ಪ್ರಶಾಂತ್ ಎಸ್.

೨೩ ಕೋಟಿ ರೂ. ವೆಚ್ಚದಲಿ ಜಾರಿಗೆ ತಂದಿದ್ದ ಯೋಜನೆ

ಯಾವ ಬಸ್ ಎಲ್ಲಿದೆ ಎಂಬ ಮಾಹಿತಿ ನೀಡುತ್ತಿದ್ದ ಸಿಸ್ಟಂ 

ಮೈಸೂರು: ನಗರಾದ್ಯಂತ ಅಪಘಾತಗಳಾಗದಂತೆ ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುವ ಗುರಿಯಿಟ್ಟುಕೊಂಡು ಪ್ರಥಮ ಬಾರಿಗೆ ಕೆಎಸ್‌ಆರ್‌ಟಿಸಿ ವತಿಯಿಂದ ಪರಿಚಯಿಸಿದ್ದ ಇಂಟಲಿಜೆಂಟ್ ಟ್ರಾನ್ಸ್‌ಪೋರ್ಟ್ ಸಿಸ್ಟಂ (ಐಟಿಎಸ್) ಹಲವು ತಿಂಗಳಿಂದ ಕೆಟ್ಟುನಿಂತಿವೆ.

೨೦೧೨ರಲ್ಲಿ ಅಂದಾಜು ೨೩ ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ಜಾರಿಗೆ ತರಲಾಗಿತ್ತು. ನಿತ್ಯ ಬೆಳಿಗ್ಗೆ ೫ ರಿಂದ ರಾತ್ರಿ ೧೧ರವರೆಗೆ ಬಂದು ಹೋಗುವ ಬಸ್ಗಳ ಚಲನವಲನವನ್ನು ಜಿಪಿಎಸ್ ಸಹಾಯದಿಂದ ಮಾನಿಟರಿಂಗ್ ಮಾಡುವ ಐಟಿಎಸ್ ವ್ಯವಸ್ಥೆಯನ್ನು ಮೈಸೂರಿನಲ್ಲಿ ಜಾರಿಗೊಳಿಸಲಾಗಿತ್ತು.

ಸೂಕ್ತ ನಿರ್ವಹಣೆಯಿಲ್ಲದೇ ಸ್ಥಗಿತ: ನಗರ ವ್ಯಾಪ್ತಿಯಲ್ಲಿ ಯಾವ ಬಸ್ ಎಲ್ಲಿ ಸಂಚರಿಸುತ್ತಿದೆ, ಎಷ್ಟು ವೇಗವಾಗಿ ಹೋಗುತ್ತಿದೆ? ಚಾಲಕ ಅಡ್ಡಾದಿಡ್ಡಿಯಾಗಿ ಚಾಲನೆ ಮಾಡುತ್ತಿದ್ದಾರೆಯೇ ಎಂಬುದನ್ನು ನಗರ ಕೇಂದ್ರ ಬಸ್ ನಿಲ್ದಾಣದ ನಿಯಂತ್ರಣ ಕೊಠಡಿಯಲ್ಲಿ ಗಮನಿಸಲಾಗುತ್ತಿತ್ತು. ಒಂದು ವೇಳೆ ಯಾರಾದರೂ ಚಾಲಕರು ಬಸ್‌ಗಳನ್ನು ಮನಬಂದಂತೆ ಚಾಲನೆ ಮಾಡುತ್ತಿದ್ದರೆ, ಕೂಡಲೇ ಅವರನ್ನು ಸಂಪರ್ಕಿಸಿ ನಿಧಾನವಾಗಿ ಚಾಲನೆ ಮಾಡುವಂತೆ ಸೂಚನೆ ನೀಡಲಾಗುತ್ತಿತ್ತು. ಇದರಿಂದಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳ ಅಪಘಾತ ಪ್ರಮಾಣವೂ ಕಡಿಮೆಯಾಗಿತ್ತು. ಆದರೆ, ಸದ್ಯ ಇಂತಹದೊಂದು ಉಪಯುಕ್ತ ಯೋಜನೆ ಸೂಕ್ತ ನಿರ್ವಹಣೆ ಕೊರತೆಯಿಂದ ಸ್ಥಗಿತಗೊಂಡಿದೆ.

ಜನದಟ್ಟಣೆಯೂ ತಗ್ಗಿತ್ತು: ಜಾಣ ಸಾರಿಗೆ ಯೋಜನೆಯಂತೆ ಪ್ರಯಾಣಿಕರು ಕೆಎಸ್‌ಆರ್‌ಟಿಸಿಗೆ ಸಂಬಂಧಿಸಿದ ಆಪ್‌ವೊಂದನ್ನು ಡೌನ್‌ಲೋಡ್ ಮಾಡಿಕೊಂಡಲ್ಲಿ ತಾವು ಹೋಗಬೇಕಾದ ಸ್ಥಳಕ್ಕೆ ಬಸ್ ಎಷ್ಟು ಹೊತ್ತಿಗೆ ಬರುತ್ತದೆ ಎಂಬ ಮಾಹಿತಿ ಎಸ್‌ಎಂಎಸ್ ಮೂಲಕ ಲಭ್ಯ ವಾಗುತ್ತಿತ್ತು. ಇದರಿಂದ ಪ್ರಯಾಣಿಕರು ಬಸ್‌ಗಾಗಿ ಗಂಟೆಗಟ್ಟಲೇ ಕಾಯುವ ಬದಲಿಗೆ, ಬಸ್ ಬರುವ ಸಮಯಕ್ಕೆ ಸರಿಯಾಗಿ ನಿಲ್ದಾಣಕ್ಕೆ ಬರಬಹುದಾಗಿತ್ತು. ಇದರಿಂದ ನಿಲ್ದಾಣಗಳಲ್ಲಿ ಜನದಟ್ಟಣೆ ಕ್ಷೀಣಿಸಿತ್ತು.

ಸ್ಥಗಿತಗೊಳ್ಳಲು ಕಾರಣ?: ಈ ಯೋಜನೆಯನ್ನು ಅನುಷ್ಠಾನಗೊಳಿಸಿದ ಸಂಸ್ಥೆಯು ಒಪ್ಪಂದದಂತೆ ಮೊದಲ ಮೂರು ವರ್ಷಗಳ ಕಾಲ ಅದನ್ನು ನಿರ್ವಹಣೆ ಮಾಡಿತು. ನಂತರ ಆ ಜವಾಬ್ದಾರಿಯನ್ನು ಇಲಾಖೆಗೆ ಹಸ್ತಾಂತರಿಸಿತು. ಅದಾದ ಒಂದೆರಡು ವರ್ಷ ವ್ಯವಸ್ಥಿತವಾಗಿ ಚಾಲನೆಯಾದರೂ ನಂತರದ ದಿನಗಳಲ್ಲಿ ಸೂಕ್ತ ನಿರ್ವಹಣೆ ಕೊರತೆಯಿಂದ ಕೋಟ್ಯಂತರ ರೂ ವ್ಯಯಿಸಿ ಅನುಷ್ಠಾನಗೊಳಿಸಲಾದ ವ್ಯವಸ್ಥೆಗೆ ತುಕ್ಕು ಹಿಡಿದಂತಾಗಿದೆ.

” ನಮ್ಮ ಅವಧಿಯಲ್ಲಿ ಇಂಟಲಿಜೆಂಟ್ ಟ್ರಾನ್ಸ್‌ಪೋರ್ಟ್ ಸಿಸ್ಟಂ ವ್ಯವಸ್ಥೆಯಿಂದ ಮೂರು ವರ್ಷಗಳ ಯಾವುದೇ ಅಪಘಾತಗಳು ಸಂಭವಿಸಿರಲಿಲ್ಲ. ಚಾಲಕ ಎಷ್ಟು ವೇಗವಾಗಿ ಹೋಗಿದ್ದಾನೆ, ಎಷ್ಟು ಬಾರಿ ಬ್ರೇಕ್ ಹಾಕಿದ್ದಾನೆ ಎಂಬ ಮಾಹಿತಿ ದೊರೆಯುತ್ತಿತ್ತು. ಅದನ್ನು ಕೇಳುತ್ತಾರೆ ಎಂಬ ಭಯದಿಂದಲೇ ನಿಧಾನವಾಗಿ ಚಾಲನೆ ಮಾಡುತ್ತಿದ್ದರು. ಮತ್ತೆ ಈ ವ್ಯವಸ್ಥೆ ಜಾರಿಗೆ ಬರಬೇಕು.”

-ವೀರೇಶ್, ನಗರ ವಿಭಾಗೀಯ ನಿಯಂತ್ರಣಾಧಿಕಾರಿ

ಸೇವ್ ಅವರ್ ಸೋಲ್ ಬಟನ್ ಅಳವಡಿಕೆ: 

ಈ ಯೋಜನೆಯಂತೆ ನಗರ ವ್ಯಾಪ್ತಿಯಲ್ಲಿ ಸಂಚರಿಸುವ ಎಲ್ಲ ಬಸ್‌ಗಳ ಚಾಲಕರು ಕೂರುವ ಜಾಗದ ಮೇಲ್ಭಾಗದಲ್ಲಿ ಎಸ್‌ಒಎಸ್ (ಸೇವ್ ಅವರ್ ಸೋಲ್) ಬಟನ್ ಅಳವಡಿಸಲಾಗಿತ್ತು. ಬಸ್ ಅಪಘಾತಕ್ಕೆ ಒಳಗಾದಲ್ಲಿ ಚಾಲಕ ಈ ಬಟನ್ ಒತ್ತಿದಲ್ಲಿ ನಗರ ಬಸ್ ನಿಲ್ದಾಣದಲ್ಲಿರುವ ನಿಯಂತ್ರಣ ಕೊಠಡಿಗೆ ಬಸ್ ಅಪಾಯದಲ್ಲಿದೆ, ಯಾರಾದರೂ ಸಹಾಯಕ್ಕೆ ಧಾವಿಸಿ ಎಂಬ ಸಂದೇಶ ರವಾನಿಸುತ್ತಿತ್ತು. ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಈ ವಿಧಾನ ಅತ್ಯಂತ ಉಪಯುಕ್ತವಾಗಿತ್ತು.

ಆಂದೋಲನ ಡೆಸ್ಕ್

Recent Posts

ರಾಜ್ಯದಲ್ಲಿ ವಸತಿ ರಹಿತರಿಗೆ 5 ಲಕ್ಷ ನಿವೇಶನ : ಸಿಎಂ ಘೋಷಣೆ

ಬೆಂಗಳೂರು : ರಾಜ್ಯದಲ್ಲಿ 5 ಲಕ್ಷ ನಿವೇಶನ ಹಂಚಿಕೆಗೆ ತೀರ್ಮಾನ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು. ಸಿಎಂ ಡಿ.ಕೆ.ಶಿವಕುಮಾರ್‌ ನೇತೃತ್ವದ…

9 hours ago

ನಟ ದರ್ಶನ್‌ಗೆ ಮತ್ತೊಂದು ಕಾನೂನು ಸಂಕಷ್ಟ

ಮೈಸೂರು: ಚಿತ್ರದುರ್ಗದ  ರೇಣುಕಾಸ್ವಾಮಿ ಕೊಲೆ  ಪ್ರಕರಣದಲ್ಲಿ ಜೈಲು ಸೇರಿರುವ ಬೆನ್ನಲ್ಲೇ ನಟ ದರ್ಶನ್‌ಗೆ ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದೆ. ಮೈಸೂರಿನ…

11 hours ago

ಅಂಜನಾದ್ರಿಗೆ ಭೇಟಿ ನೀಡಿದ ಸಂಸದ ಯದುವೀರ್‌ ಒಡೆಯರ್‌

ಕೊಪ್ಪಳ: ಐತಿಹಾಸಿಕ ಅಂಜನಾದ್ರಿಗೆ ಸಂಸದ ಯದುವೀರ್  ಒಡೆಯರ್‌ ಭೇಟಿ ನೀಡಿ ದೇವರ ದರ್ಶನ ಪಡೆದರು. ಹನುಮ ಹುಟ್ಟಿದ ನಾಡು ಎಂದು…

13 hours ago

7 ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್

ನವದೆಹಲಿ: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರು ಬರೋಬ್ಬರಿ 7 ವರ್ಷಗಳ ಬಳಿಕ ಭಾರತಕ್ಕೆ ಆಗಮಿಸಲಿದ್ದಾರೆ. ಸೆಪ್ಟೆಂಬರ್‌ 12ರಂದು ದೆಹಲಿಗೆ…

13 hours ago

ಓದುಗರ ಪತ್ರ: ಕುಕ್ಕರಹಳ್ಳಿಕೆರೆ ಅಂಗಳದಲ್ಲಿ ನಾಯಿಗಳ ಹಾವಳಿ ನಿಯಂತ್ರಿಸಿ

ಮೈಸೂರಿನ ಪ್ರಮುಖ ಜೀವವೈವಿಧ್ಯ ತಾಣ ಕುಕ್ಕರಹಳ್ಳಿ ಕೆರೆಗೆ ಪ್ರತಿದಿನ ನೂರಾರು ಸಂಖ್ಯೆಯಲ್ಲಿ ವಾಯುವಿಹಾರಿಗಳು, ಪ್ರವಾಸಿಗರು ಮತ್ತು ಸ್ಥಳೀಯರು ಭೇಟಿ ನೀಡುತ್ತಾರೆ.…

19 hours ago

ಓದುಗರ ಪತ್ರ: ಸಚಿವರುಗಳೇ ಮುಖ್ಯಮಂತ್ರಿಗಳ ಮಾತನ್ನು ಕಾರ್ಯರೂಪಕ್ಕೆ ತನ್ನಿ

ಬೆಂಗಳೂರಿನ ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಗಳ ಬಗ್ಗೆ ಪರಿಶೀಲಿಸುವ ವೇಳೆ ಅಪ್ರಾಪ್ತ ಮಕ್ಕಳಿಂದ ಕೆಲಸ…

19 hours ago