Andolana originals

‘ಈಗ ನನ್ಹ ತ್ರ ಇರೋದು ಒಂದು ಜೋಳಿಗೆ ಅಷ್ಟೇ ಎಲ್ಲಿಗ್ ಬೇಕಾದ್ರ ಹೋಗೇನೆ’

ಹೋರಾಟದ ಕವಿ ಮುನಿ ಕೋಟಿಗಾನಹಳ್ಳಿ ರಾಮಯ್ಯ ಜೊತೆ ರಂಗಕರ್ಮಿ ಕೆ.ಪಿ.ಲಕ ಣ ನಡೆಸಿದ ಮಾತುಕತೆ

• ಈಗ ಬೆಟ್ಟ ಇಳೀತೀರ ಸರ್.

ರಾಮಯ್ಯ: ಈಗ ನನ್ನತ್ರ ಇರೋದು ಒಂದು ಜೋಳಿಗೆ ಅಷ್ಟೇ ಎಲ್ಲಿಗ್ ಬೇಕಾದ್ರ ಹೋಗೇನೆ. ಫಸ್ಟ್ ಟೈಮ್ ಒಂದು ಬೆಟ್ಟದ ಕತೆ ಬರಿಯೋಕೆ ಶುರು ಮಾಡಿದೀನಿ. ಸಮಸ್ಯೆ ಬಿಟ್ಟು ಯೋ ಮಾಡೋಕು ಅಂತ. ಎಲ್ಲೆಲ್ಲೋ ಬರ್ದಿದೀನಿ ಅದ್ದ. ಬರೀತಾ ಇದೀನಿ. ನೋಡಿ ಶಿವಯ್ಯನ ಗುಡಿಸ್ಲಿಂದ ಶುರು ಮಾಡ್ತಿದೀನಿ. ನಾನು ಜಿಂಕೆ ರಾಮಯ್ಯ ಜೀವತಾಣಕ ನಾನ್ ಯಾಕ್ ಬಂದೆ ಅನ್ನೋದನ್ನ, ನೀವು ಊಹೆ ಮಾಡಿಕೊಳ್ಳೋಕು ಸಾಧ್ಯ ಇಲ್ಲ. ಆ ಜಿಂಕೆ ರಾಮಯ್ಯ, ಕೋಟಿಗಾನಹಳ್ಳಿಗೆ ಬಂದು, ನಾನ್ ಒಂದ್ ಎರಡ್ ವರ್ಷದ ಮಗು ಇರ್ಬೇಕು. ಶ್ರುಶೂಷೆ ಮಾಡಿ ಔಷ್ಠಿ ಕೊಟ್ಟು, ಆಮೇಲಿಂದ ನಮ್ಮಮ್ಮನ್ ಹತ್ರ ಬಂದು, ನಂಗೊತ್ತಿಲ್ಲ, ನಮ್ಮಮ್ಮ ಮೊನ್ನೆ ಹೇಳ್ತವೆ. ಬಂದ್ ಮಾತಾಡಿಸ್ಕೊಂಡ್ ಹೋದ ಅಂತೆ. ನಂಗ್ ಆತ ಸಿಕ್ಕಿದಿಲ್ಲಿ ಅಂತಂದ್ರೆ, ನಾನ್ ಎಂಟೆ ಕ್ಲಾಸೆ ಬಂಧೇಲೆ.
—-

ಇತ್ತೀಚೆಗೆ ನೀವೇ ಮಾತನಾಡುತ್ತಿರುವ ಮೈಕ್ರೋಫ್ಯಾಸಿಸಂ ಎಂಬುದನ್ನು ಮಕ್ಕಳ ಜೊತೆಗೆ ಕೆಲಸ ಮಾಡುತ್ತಾ ತೊಡೆಯಬಹುದು ಎಂಬುದನ್ನು ಪ್ರತಿಪಾದಿಸುತ್ತಿದ್ದೀರಿ. ಅದು ಹೇಗೆ ಸಾಧ್ಯ?

ಕೆ.ರಾಮಯ್ಯ: ಮೈಕ್ರೋಫ್ಯಾಸಿಸಂ ಎಂಬುದು ನಾನು ಹೇಳುವ ಮಾತಲ್ಲ. ಬಾಬಾಸಾಹೇಬರು ಹೇಳಿದ್ದು. ಅತ್ಯಂತ ಮೈಕ್ಯೂಟ್ ಆಗಿ, ರಕ್ತನಾಳಗಳಲ್ಲಿ ರಕ್ತ ಹೇಗೆ ಬರುತ್ತದೆಯೋ ಹಾಗೆ ಮಕ್ಕಳ ಮೆದುಳಲ್ಲಿ ಭೇದ ಹೇಗೆ ಬರುತ್ತದೆ ಅದನ್ನು ಅರ್ಥ ಮಾಡಿಕೊಳ್ಳಬೇಕು. ಅದು ಸಮಾಜ, ತಂದೆ ತಾಯಿಗಳಿಂದ ಬರುತ್ತದೆ. ಮಕ್ಕಳಲ್ಲಿ ಯಾವ ಭೇದಗಳೂ ಇರುವುದಿಲ್ಲ. ಅವರೆಲ್ಲ ತಾರತಮ್ಯಗಳಿರದ ಮನಸ್ಸುಗಳು. ಮಹದೇವ ಹೇಳಿರುವಂತೆ ತಾಯಿಯ ಗರ್ಭದಲ್ಲೇ ಮಗುವಿಗೆ ತಾರತಮ್ಯದ ಅನುಭವವಾಗುತ್ತದೆ. ಕುವೆಂಪು ಅವರ ಮ್ಯಾನಿಫೆಸ್ಟ್ ಹಾಗೂ ವಿಶ್ವಮಾನವ ಸಂದೇಶವು ಕೂಡ ಬಹಳ ಮುಖ್ಯವಾದದ್ದು. ಹುಟ್ಟುತ್ತಾ ವಿಶ್ವಮಾನವನಾದ ಮಗು ಬೆಳೆಯುತ್ತಾ ಅಲ್ಪಮಾನವನಾಗುತ್ತದೆ ಎಂಬುದು ಕುವೆಂಪು ಹೇಳಿದ ಮಾತು, ಈಗಂತೂ ಬಹಳ ಮಂದಿ ಗುಡಿ ಗುಡಿಯನ್ನುತ್ತಾ ಅಯೋಧ್ಯೆಯೆಡೆಗೆ ಪಯಣ ಬೆಳೆಸುತ್ತಿದ್ದಾರೆ. ನನ್ನ ತಂಗಿಯೂ ಕೂಡ ಇದಕ್ಕೆ ಹೊರತಲ್ಲ. ಇತ್ತೀಚಿನ ನನ್ನ ಮೇಲಾದ ಗಲಾಟೆ ಘಟನೆಯು ಕೂಡ ಇದಕ್ಕೇ ಸಂಬಂಧಿಸಿದ್ದು. ‘ಮುನಿ’ಯಾದವನಿಗೆ ಗುಡಿಯೆನ್ನುವುದು ಕಟ್ಟುವ ಹಾಗಿಲ್ಲ ನಾವೇ ಜೇಡಿ ಮಣ್ಣುಗಳನ್ನು ತಂದು, ರೂಪ ಅಲಂಕಾರ ನೀಡಿ, ನಮ್ಮೊಳಗಿನಿಂದಲೇ ಕಟ್ಟಿ ಪೂಜಿಸಿಕೊಳ್ಳಬೇಕು. ದುಡ್ಡು ಬಂದ ತಕ್ಷಣವೇ ಸಿಮೆಂಟ್ ಹಾಕಿ, ಗುಡಿ ಕಟ್ಟೋಣ ಎಂದು ವಿಕೃತೀಕರಣಕ್ಕೆ ಒಳಗಾಗಿ ಚಂಚಲರಾಗುತ್ತಿದ್ದೇವೆ. ಈ ಸತ್ಯಗಳನ್ನು ಮಕ್ಕಳಿಗೆ ಹೇಳಬೇಕೋ ಬೇಡವೋ? ಮುನಿ ಎಂಬುದು ಈ ನೆಲದ ಗುರುತು. ಈ ಸತ್ಯ, ವಿವೇಕಪ್ರಜ್ಞೆಯನ್ನು ಮಗುವಿನಲ್ಲಿ ಬೆಳೆಸಬೇಕೊ ಬೇಡವೊ? ಯಾರೋ ಗೂಡು ಕಟ್ಟಿದ್ದಾರೆಂದು, ಬೆಳಿಗ್ಗೆ ಎದ್ದು, ಸ್ವಚ್ಛಗೊಳಿಸಿ, ಪೂಜೆ ಮಾಡುವ ಕರ್ಮ ಆ ಮಗುವಿಗೇತಕ್ಕೆ..? ಶಿಕ್ಷಣ ಎಂದರೆ ಇದೇ. ನಾವು ಕಲಿಯುವ ವಾತಾವರಣವನ್ನು ಈಸ್ತಟೈಸ್, ಸೌಂದರ್ಯೀಕರಣ ಮಾಡುವುದು, ಒಳಗಿನ ಕುರೂಪ ಮತ್ತು ವಿಕೃತಿಯನ್ನು ಸುಂದರಗೊಳಿಸುವುದು. ಹೀಗಾದಾಗ ಫ್ಯಾಸಿಸಂ ಅನ್ನು ಪೀಳಿಗೆಯಿಂದ ಪೀಳಿಗೆಗೆ ತೊಡೆದುಹಾಕಲು ಸಾಧ್ಯ.
——

• ನೀವು ಸಾಂಸ್ಕೃತಿಕ ವಿಶ್ವವಿದ್ಯಾಲಯ ಮಾಡಿದ್ರೆ ಅದರ ಶಿಕ್ಷಣಶಾಸ್ತ್ರ(ಪೆಡಾಗಜಿ) ಏನಾಗಿರುತ್ತೇ?

ರಾಮಯ್ಯ: ಲೆಬರೇಷನ್, ಸೇಮ್ ಲೈಕ್ ವಿಶ್ವಾತ್ಮಕ ಆಸ್ಟೇಕು ಅಂತ ಬಾಬಾಸಾಹೇಬರು ಪ್ರಬುದ್ಧ ಭಾರತ ಆಕ್ಷೇಕು ಅಂತ ಏನ್ ಬಯಸ್ತಾರೆ, ಆ ಪ್ರಬುದ್ಧ ಭಾರತಕ್ಕೆ ಅಗತ್ಯವಾದ ಬೌದ್ಧಿಕ ವಿಸ್ತಾರ ಬೇಕು ನಮ್ಮೆ. ಅದಿಲ್ಲೆ ಏನ್ ಮಾಡ್ತೀರಾ? ಅದು ಏನೂ ಈಗ ಆರ್ಟಿಫಿಷಿಯಲ್ ಇಂಟಲಿಜೆನ್ಸಿ ನೋಡ್ತಾ ಇದ್ರೆ ಎಷ್ಟೇ ಮಾನಸಿಕ ವಿಕಾರವಾಗಿದೆ ಅಂದ್ರೆ… ಅದನ್ನು ರೆಸಿಸ್ಟ್ ಮಾಡೇಬೇಕಾಗುತ್ತೆ ಈ ಕಾಲದಲ್ಲಿ, ವಿತ್ ಅವರ್ ಓನ್ ಟೆಕ್ಸ್ ಸೋ ಹಂಗೆ ಏನ್ ಹೇಳಕ್ ಹೊರ್ಟೆ ಅಂದ್ರೆ ನಾನು, ಪ್ರಬುದ್ಧ ಭಾರತ, ಬೌದ್ಧಿಕತೆ ಬೆಳೆಸಿಕೊಳ್ಳೋಕು ಅನ್ನೋ ಬಗ್ಗೆ. ಬ್ರಾಹ್ಮಣರ ಮೊದಲ ಮಗುವಿಗೆ ಕಿವಿಯಲ್ಲಿ ಏನೋ ಒಂದ್ ಮಂತ್ರ ಹೇಳ್ತಾರೆ. ಆ ವಯಸ್ಸಿನಲ್ಲಿ ಆ ಮಗೂಗೆ ಏನ್ ಗೊತ್ತಾಗ್ತಿದೆ ಅಂತ? ಅವು ಹೇಳುವಂತಹ ಫಿಲಾಸಫಿ, ಅವು ಹೇಳುವಂತಹ ಹೆರಿಟೇಜ್, ಅವು ಎಲ್ಲಿಂದ ಎಲ್ಲಿಗೆ ಗಂಗಾ ನದಿಯಿಂದ, ಸರಸ್ವತಿ ಯಮುನಾ ಅಂತಾ… ಮಗೂಗ್ ಏನ್ ಗೊತ್ತಾಗುತ್ತೆ? ಸಣ್ ಮಗು ಅದು ಅದಿಕ್ ಏನು ಗೊತ್ತಾಗೋಲ್ಲ. ಬಟ್ ಡೈಲಿ ಪ್ರಾಕ್ಟಿಸ್ ಮಾಡ್ತಾ ಒಂಬೋಲನ ಮಾಡ್ತಾ ಆ ಹುಡುಗ, ಮೆಚೂರಿಟಿ ಬರಕ್ ಶುರು ಆದ ತಕ್ಷಣಾನೇ ಅವ್ರ ಅದಿಕ್ಕೇ ಕನೆಕ್ಟ್ ಮಾಡ್ತಾರೆ. ವಿಶೇಷ ಅವ್ ಎಂಟೈರ್ ಲೈಫ್ ಅದನ್ನು ಬಿಟ್ರೆ ಬೇರೆ ಏನೂ ಸಂದರ್ಶನ ಬರೋಲ್ಲ. 99% ಬ್ರಾಡ್ಮಿನ್ಸ್. ಹಂಗೇನೆ ಇಸ್ಲಾಮಲ್ಲೂ ಒಂದ್ ಟೈನಿಂಗ್ ಇದೆ. ಕ್ರೈಸ್ತರಲ್ಲೂ ಒಂದ್ ಟೈನಿಂಗ್ ಇದೆ. ರಿಡ್ಯೂಯಲ್ಸ್ ಇದೆ, ಇನ್ನೊಂದಿದೆ… ಇದು ಬೇಕು ಅಂತಾರೆ ಅಂಬೇಡ್ಕರ್.
——

• ಅಷ್ಟು ಒಳ್ಳೇ ಕ್ಯಾಷಿಯರ್ ಕೆಲ್ಸ ಯಾಕ್ ಬಿಟ್ರಿ ಸರ್?

ರಾಮಯ್ಯ: ಹೇ ಬಹಳ ಲಲ್ಲಿ ಜಾಬ್ ಅದು. ಬಹಳ ಖುಷಿಯಾಗದು ಆ ಕೆಲ್ಸ. ಏನ್ ಏನ್ ಎಕ್ಸ್‌ರಿಮೆಂಟ್ ಮಾಡ್ತಿದ್ದೆ ಅಲ್ಲಿ ಗೊತ್ತ ನಾನು. ಹೇ ಎಕ್ಸಲೆಂಟ್. ಬಹಳ ಕಲ್ಲೆ ನಾನು. ನನ್ನೆ ನಾಗರಿಕತೆ, ಸಿವಿಲೈಜೇಷನ್… ಕಲಿಸ್ತು. ಒಳ್ಳೆ ಕೆಲಸದಲ್ಲಿರೋರಿಗೆ ಸಂಬ ಕೊಡುವಾಗ ನೂರ್ ರೂಪಾಯ್ ಬೇಕಂತೇ ಜಾಸ್ತಿ ಕೊಡೋದು. ಹಿಂದಿಕ್ ಕೊಡ್ತಿರ್ಲಿಲ್ಲ. ಈ ಚಾಕರಿ ಮಾಡ್ತಾರಲ್ಲ, ಸಾರಾಯಿ ಅಂಗಡೀಲಿ, ಪಾಪ ಅವೆಲ್ಲ ಜೋಡಿಸ್ಕೊಂಡ್ ಬರೋರು. ಅವಿಗೆ ಬರೀಯೋಕ್ ಬರೋಲ್ಲ ಏನಿಲ್ಲ, ಇವೆಲ್ಲ ಗದ್ರಿಸೋರು. ನಾನ್ ಅವನ್ನೆಲ್ಲ ಕರ್ಕೋಳೋದು. ಅವು ಎಂಥೆಂಥ ನೋವಲ್ಲಿದ್ರೂನು ಏನ್ ಖುಷಿಯಾಗುತ್ತೆ ಅಷ್ಟೆಲ್ಲ ಅಚ್ಚಟ್ಟಾಗಿ ಕಟ್ಟಿಸ್ಕೊಂಡೋಕೆ. ಅವಿಗೂ ಕೂಡ ಪೇಮೆಂಟ್ ಮಾಡುವಾಗ ನೂರ್ ರೂಪಾಯಿ ಜಾಸ್ತಿ ಕೊಡೋದು. ಪಾಪ ಅವ್ರ ಹೋಗಿ ಎಣ್ಣಿ ವಾಪಸ್ ಬಂದು, ಸಾರ್ ನೂರ್ ರೂಪಾಯಿ ಜಾಸ್ತಿ ಕೊಟ್ಟಿಟ್ಟಿದ್ದೀರ ಸರ್ ಅನ್ನೋದು. ಏನ್ ಹೇಳುತ್ತೆ ಅದು? ಹೆಂಗ್ ಜಡ್ಜ್ ಮಾಡ್ತೀರಾ ಅದ್ದ? ರಿಸ್ಲಿ ಜಾಬ್ ಅದು. ಮ್ಯಾನೇಜರ್ ಪೋಸ್ಟ್ ನಿಂದ ನನ್ನ ಸಸ್ಪೆಂಡ್ ಮಾಡೋಕು ಅಂತೆಲ್ಲ ಬಂತು ಮೈನ್ ರೀಸನ್ನೇ ಇದು.
——-

• ಈ ಬುಕ್ಕು, ಪೆನ್ನು ಯಾವಾಗೂ ನಿಮ್ ಕೈಯಲ್ಲಿ ನೋಡಿದ್ದೀನಿ. ಯಾವಾಗೂ ಬರೀತೀರಾ ಸರ್?

ರಾಮಯ್ಯ: ಆತ್ಮಕತೆ ಬರೀಬೇಕು ಅಂತ ಒಂದ್ ಅರವತ್ತು ಪುಟ ಬರೆದಿದ್ದೀನಿ. ಆತ್ಮಕತೆಗಳ ಬರವಣಿಗೆ ನನ್ ಒಪ್ಪೋದಿಲ್ಲ ಆದ್ರೂನು ಬರ್ದಿದೀನಿ. ಒಂದ್ ಪ್ರಸಂಗ ಬರುತ್ತೆ. ಆ ಪ್ರಸಂಗ ಇವತ್ತೂ ನನ್ನ ಕಾಡ್ತಾ ಇದೆ. ಒಂದೇ ಒಂದು, ಆವಾಗ ಪೆನ್ನು ಹಿಂಗಿರೋದು.. ಬಣ್ಣದಲ್ ಬರೋದು, ಬ್ಲಾಕ್ ಪೆನ್. ಆ ಒಂದ್ ಪೆನ್ ಕೊಂಡ್ಕೊಳ್ಳೋದಕ್ಕ ನಮ್ಮಪ್ಪನನ್ನ ತಪ್ಪಿತಸ್ಥ ಮಾಡಿದೀನಿ. ಸಿಗಾಕಿದೀನಿ, ನಾನೇ ಕದ್ದುಟ್ಟು… ಬಲೇ ಇಷ್ಟ ನನ್ಗೆ.
——-

• ಏನೇನ್ ಕದ್ದಿದ್ರಿ ಸರ್? ಹೆಂಗ್ ಕದ್ದಿದ್ರಿ?

ರಾಮಯ್ಯ: ಅದು, ನಮ್ಮಪ್ಪ ಜೀತಗಾರ ಆಗಿದ್ದ. ಬ್ರಾಹ್ಮಣ ಮನೇಲಿ, ಎರಡನೇ ಮದ್ದೆ ಆಗಿಟ್ಟು. ಎಲ್ಲನೆ ಅಂತ ಗೊತ್ತಿರ್ಲಿಲ್ಲ. ನಾನೇ ಹುಡ್ಕೊಂಡ್ ಹೋದೆ. ಹಿಡ್ಡೆ ಅವನ್ನ. ಒಂದ್ ಹತ್ತಿ ದಿನ ಅಲ್ಲಿದ್ದೆ. ಅಲ್ಲಿಂದ ಹೋಗುವಾಗ ಒಂದ್ ಅಂಗ್ಲೀಷ್ ಕರ್ಕೊಂಡ್ ಹೋದ್ದ ಟೀ ಕುಡೀಯೋಕೆ. ಪಕ್ಕದಲ್ಲಿ ಒಂದ್ ಸ್ಟೇಷನರಿ ಅಂಗ್ಲಿ ಇತ್ತು. ಆ ಅಂಗ್ಲೀಲಿ ಪೆನ್ ಇತ್ತು. ನಮ್ಮಪ್ಪ ಬೆಳಿಗ್ಗೆಯೇ ಹೋಗಿಟ್ಟು ಹುಲ್ ಕುಯ್ದು ಆ ಹೋಟೆಲ್ ಅವಿಗೆ ಹಾಕ್ತಿದ್ದ. ಅಲ್ಲಿ ತಿಂಡಿ, ಕಾಫಿ ತಕೋಳದ್‌ ಮಾಡೋದು… ನಾನ್ ಏನ್ ಮಾಡ್ಡೆ, ಪೆನ್ ಕೊಡು ಅಂದೆ, ನನ್ ಅವತ್ತೇ ಬೇಕಿತ್ತು, ಆಗ್ಲೆ ಬೇಕಿತ್ತು. ಕೊಡಿದ್ದೇ ಇಲ್ಲ. ಅಡ್ಡ ಮರೀಯೋಕೆ ಆಗ್ಲಿಲ್ಲ. ಬಂದ್ವಿ, ಈ ಕರೆಂಟಲ್ಲಿ ಒಂದ್ ತಂತಿ ಎಳಿಯೋರು, ಪೋಲ್ ಎಷ್ಟೇಕಲ್ಲ ಅದ್ರೆ ಅವಲ್ಲ ಬಟ್ಟೆ ಎಲ್ಲ ಬಿಚ್ಚಾಕ್ಸಿಟ್ಟು ಅಲ್ ಹಾಕ್ಸಿಟ್ ಹೋಗಿದ್ರು. ಎಲ್ಲ ಗಮನ ಆ ಕಡೇಗಿತ್ತು. ನಾನ್ ಏನ್ ಮಾಡ್ಲೆ ಒಬ್ಬತ್ರ ಹತ್ ರುಪಾಮ್ ದುಡ್ ಹೊಡ್ಲಿಟ್ಟೆ. ಆಮೇಲ್ ಚೆಕ್ ಮಾಡ್ತಾರಲ್ಲ, ಸಿಕ್ಕಾಕೊಂಡೆ? ಅಲ್ಲೋಂದ್ ಸೀಗೆ ಪೊದೆಯಲ್ ಹೋಗಿಟ್ಟು ಮಣ್ಣನ್ನ ತೆಗ್ಗು ಅಲ್ಲಿಟ್ಟು ಮಣ್ಣ ಮುಚ್ಚಿ ಒಂದ್ ಗುರ್ತಿಟ್ಟು ಬಂದೆ. ಆಮೇಲ್ ನಾನ್ ಹೋದ ದುಡ್ ತಕೊಂಡೆ ಆ ಪೆನ್ ತಕೊಂಡೆ, ಒಂದ್ ನೋಟ್ ಬುಕ್ ತಕೊಂಡೆ ಅಷ್ಟೇ ನನ್ ಬೇಕಿದ್ದಿದ್ದು. ಯಾಕಂದ್ರೆ ನನ್ದ ಬರೀಯೋಕೆ… ಎಲ್ಲಿ ಒಂದ್ ಸಣ್ಣ ಪೇಪರ್ ಸಿಕ್ಕಿದ್ರು ನಾನ್ ಅದ್ದ ಬಳಸ್ತೀನಿ. ಆವಾಗ ಆಗ್ಲಿಲ್ವಲ್ಲ ,ಇವತ್ ಸಿಗ್ತದೆ. ಯಾರೋ ಕೊಡ್ತಾರೆ.
——-

• ನೀವ್ ಬರ್ದಿರೋದ್ರಲ್ಲೇ ನಿಮ್ಮ ಇಷ್ಟವಾದ ಹಾಡ್ ಯಾವು? ಎಷ್ಟೊಂದು ಪದ್ಯಗಳಿವೆ…

ರಾಮಯ್ಯ: ನಿಜಾ, ನನ್ನೆ ಹಂಗ್ ಹೇಳೋಕ್ ಬರೋಲ್ಲ. ಆಯಾ ಸಂದರ್ಭ ಏನ್ ಕೇಳುತ್ತೋ ಅದ್ದ ಬರೀತಾ ಬಂದಿದೀನಿ. ಆ ಗಳಿಗೆ ಏನ್ ಕೇಳುತ್ತೆ ಅದಷ್ಟೇ ನಾನ್ ಮಾಡೋದು. ಹೆಂಗೆ ಯಾವುದನ್ನ ಚೆನ್ನಾಗಿ ಅಂತ ಹೇಳೋದು. ಇದ್ದದಲ್ಲಿ ನನ್ ಪದ್ಯಗಳಲ್ಲಿ `ನನ್ನಜ್ಜ’ ಪದ್ಯ. ಅದು ನನ್ನ ಬೇರೆಯ ಐಡೆಂಟಿನಾ ಡಿಫೈನ್ ಮಾಡ್ಕೊಂಡಿದ್ದು. ನನ್ನ ಐಡೆಂಟಿಟಿ ಜರ್ನಿ ಅಲ್ಲಿಗೆ ಕಂಪ್ಲೇಟ್ ಆಯ್ತು.

ಆಂದೋಲನ ಡೆಸ್ಕ್

Recent Posts

ವಿಶೇಷ ಚೇತನ ಮಕ್ಕಳು ಸಮಾಜಕ್ಕೆ ಶಾಪವಲ್ಲ, ವರ; ದೀಪಕ್‌ ಅಭಿಮತ

' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…

27 mins ago

ಸಕ್ಕರೆ ನಗರಿ ಅಂದ ಹೆಚ್ಚಿಸಿದ ದೀಪಾಲಂಕಾರ

ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್‌ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…

39 mins ago

ಮಂಡ್ಯ ಸಮ್ಮೇಳನ | ನಗರ ದೀಪಾಲಂಕಾರಕ್ಕೆ ಸಚಿವ ಚಲುವರಾಯಸ್ವಾಮಿ ಚಾಲನೆ

ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಂಡ್ಯ ನಗರದಲ್ಲಿನ ವಿದ್ಯುತ್ ದೀಪಾಲಂಕಾರಕ್ಕೆ ಕೃಷಿ ಸಚಿವರು ಹಾಗೂ…

50 mins ago

ನಕಲಿ ಚಿನ್ನಾಭರಣ ಅಡವಿಟ್ಟು ಬರೋಬ್ಬರಿ 34 ಲಕ್ಷ ರೂ. ವಂಚನೆ..!

ಕೇರಳ ಮೂಲದ ಮಾಸ್ಟರ್ ಮೈಂಡ್ ಸೇರಿದಂತೆ 12 ಆರೋಪಿಗಳ ಬಂಧನ; ಮತ್ತೊಂದು ಮೋಸದ ಜಾಲ ಬಯಲಿಗೆಳೆದ ಕೊಡಗು ಜಿಲ್ಲಾ ಪೊಲೀಸರು…

1 hour ago

ಮುಡಾ ಪ್ರಕರಣ | ಸಿಬಿಐ ತನಿಖೆ ಕೋರಿ ಸಲ್ಲಿಸಿದ್ದ ಅರ್ಜಿ ಜ.15ಕ್ಕೆ ಮುಂದೂಡಿಕೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ಜನವರಿ…

2 hours ago

ಸಮ್ಮೇಳನಕ್ಕೆ ಕ್ಷಣಗಣನೆ | ಸಮ್ಮೇಳನ ಸರ್ವಾಧ್ಯಕ್ಷ ಗೊ.ರು ಚನ್ನಬಸಪ್ಪಗೆ ಆತ್ಮೀಯ ಸ್ವಾಗತ

ಮಂಡ್ಯ: ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆ ಗುರುವಾರ ಸಂಜೆ ನಗರಕ್ಕೆ…

2 hours ago