Andolana originals

ಏಪ್ರಿಲ್‌.7ರಿಂದ ಗೋಣಿಕೊಪ್ಪದಲ್ಲಿ ಕೊಡವ ಫುಟ್ಬಾಲ್‌ ಉತ್ಸವ

ನವೀನ್ ಡಿಸೋಜ

ಬೇತ್ರಿಯ ಮುಕ್ಕಾಟಿರ ಕುಟುಂಬದಿಂದ ಆಯೋಜನೆ

ಕೊಡವ ಕುಟುಂಬಗಳನ್ನು ಒಗ್ಗೂಡಿಸುವ ವೇದಿಕೆ

ಮಡಿಕೇರಿ: ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯಂತೆಯೇ ಕೊಡವ ಕುಟುಂಬಗಳ ನಡುವಿನ ಫುಟ್ಬಾಲ್ ಪಂದ್ಯಾವಳಿಯೂ ಕೂಡ ಕಳೆದ ಕೆಲ ವರ್ಷಗಳಿಂದ ಆಯೋಜನೆಗೊಳ್ಳುತ್ತಿದ್ದು, ಈ ಬಾರಿ ಏ.೭ರಿಂದ ೧೨ರವರೆಗೆ ಕೊಡವ ಫುಟ್ಬಾಲ್ ಉತ್ಸವ ನಡೆಯಲಿದೆ.

ಕೊಡಗು ಜಿಲ್ಲೆಯಲ್ಲಿ ವರ್ಷಕ್ಕೊಮ್ಮೆ ನಡೆಯುವ ಕೊಡವ ಕುಟುಂಬಗಳ ನಡುವಿನ ಹಾಕಿ ಪಂದ್ಯಾವಳಿ ಜನಮನ್ನಣೆಗಳಿಸುವುದರೊಂದಿಗೆ ವಿಶ್ವ ಮಟ್ಟದಲ್ಲಿ ಗಮನ ಸೆಳೆದಿದೆ. ಪ್ರತಿವರ್ಷ ಕುಟುಂಬವೊಂದು ಆಯೋಜಿಸುವ ಹಾಕಿ ಪಂದ್ಯಾವಳಿಯಲ್ಲಿ ೩೦೦ಕ್ಕೂ ಅಧಿಕ ಕುಟುಂಬಗಳ ತಂಡಗಳು ಭಾಗವಹಿಸುತ್ತವೆ. ಕೊಡವರು ಒಂದೆಡೆ ಬೆರೆಯುವುದರೊಂದಿಗೆ ಸಂಸ್ಕೃತಿ, ಆಚಾರ-ವಿಚಾರಗಳ ಅನಾವರಣಕ್ಕೂ ಹಾಕಿ ಪಂದ್ಯಾವಳಿ ವೇದಿಕೆಯಾಗುತ್ತಿದೆ.

ಇದೀಗ ಕೊಡವ ಕುಟುಂಬಗಳ ನಡುವೆ ಕ್ರಿಕೆಟ್ ಸೇರಿದಂತೆ ಇತರ ಕ್ರೀಡೆಗಳನ್ನು ಕೂಡ ಆಯೋಜಿಸಲಾಗುತ್ತಿದ್ದು, ಅದರಂತೆ ಏ.೭ರಿಂದ ಕೊಡವ ಕೌಟುಂಬಿಕ ಫುಟ್ಬಾಲ್ ಪಂದ್ಯಾವಳಿ ಆಯೋಜಿಸಲ್ಪಟ್ಟಿದೆ.

ಮುಕ್ಕಾಟಿರ(ದೇವಣಗೇರಿ) ಕುಟುಂಬದ ವತಿಯಿಂದ ಈ ಬಾರಿ ಪಂದ್ಯಾವಳಿ ನಡೆಯಲಿದ್ದು, ೫+೨ ಮಾದರಿಯಲ್ಲಿ ಕೊಡವ ಫುಟ್ಬಾಲ್ ಉತ್ಸವ ನಡೆಯಲಿದೆ. ಗೋಣಿಕೊಪ್ಪದ ಆಥ್ಲಾನ್ ಮೈದಾನದಲ್ಲಿ ಪಂದ್ಯಾವಳಿ ನಡೆಯಲಿದೆ. ದೀರ್ಘಕಾಲದ ಕೊಡವ ಹಾಕಿ ಉತ್ಸವದ ಅಪ್ರತಿಮ ಯಶಸ್ಸಿನಿಂದ ಸ್ಛೂರ್ತಿ ಪಡೆದು ಕೊಡವ ಫುಟ್ಬಾಲ್ ಉತ್ಸವವನ್ನು ಆಯೋಜಿಸಲಾಗುತ್ತಿದೆ. ಅಲ್ಲದೇ, ಕೊಡವ ಕುಟುಂಬಗಳನ್ನು ಒಗ್ಗೂಡಿಸಲು, ಕ್ರೀಡಾಕ್ಷೇತ್ರಕ್ಕೆ ಯುವ ಸಮೂಹವನ್ನು ಉತ್ತೇಜಿಸಲು ಮತ್ತು ಕೊಡಗಿನ ಖ್ಯಾತ ಕ್ರೀಡ ಪರಂಪರೆಯನ್ನು ಕಾಪಾಡಿಕೊಳ್ಳಲು ಇಂತಹ ಕ್ರೀಡಾ ಕೂಟಗಳಿಂದ ಸಾಧ್ಯವಾಗುತ್ತದೆ. ಆದ್ದರಿಂದ ಮುಕ್ಕಾ ಟಿರ(ದೇವಣಗೇರಿ) ಕುಟುಂಬ ವತಿಯಿಂದ ೫ನೇ ವರ್ಷದ ಕೊಡವ ಫುಟ್ಬಾಲ್ ಉತ್ಸವವನ್ನು ಸುಮಾರು ೨೫-೨೭ ಲಕ್ಷ ರೂ.ಗಳ ವೆಚ್ಚದಲ್ಲಿ ಆಯೋಜಿಸಲಾಗುತ್ತಿದೆ ಎಂದು ಕುಟುಂಬದ ಅಧ್ಯಕ್ಷ ಮುಕ್ಕಾಟಿರ ಸಿ.ಕರುಂಬಯ್ಯ ತಿಳಿಸಿದ್ದಾರೆ.

ಕಳೆದ ವರ್ಷ ನಡೆದ ಫುಟ್ಬಾಲ್ ಉತ್ಸವದಲ್ಲಿ ೭೪ ತಂಡಗಳು ಭಾಗವಹಿಸಿದ್ದವು. ಪ್ರಸಕ್ತ ಸಾಲಿನ ಕ್ರೀಡಾಕೂಟದಲ್ಲಿ ೧೦೦ ಕೊಡವ ಕುಟುಂಬ ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ. ನಾಕೌಟ್ ಮಾದರಿಯಲ್ಲಿ ಪಂದ್ಯಗಳು ನಡೆಯಲಿದ್ದು, ವಿಜೇತ ತಂಡಕ್ಕೆ ಆಕರ್ಷಕ ಟ್ರೋಫಿ ಮತ್ತು ನಗದು ಬಹುಮಾನ ಹಾಗೂ ವೈಯಕ್ತಿಕ ಬಹುಮಾನ ನೀಡಿ ಗೌರವಿಸಲಾಗುತ್ತದೆ. ಫುಟ್ಬಾಲ್ ಉತ್ಸವದ ಜೊತೆಯಲ್ಲಿ ಸಾಂಸ್ಕೃತಿಕ ಕಾರ್ಯ ಕ್ರಮಗಳು, ವಿವಿಧ ಬಗೆಯ ಖಾದ್ಯಗಳು ಮತ್ತು ಕೊಡವ ಸಮುದಾಯದ ಬಾಂಧವ್ಯ ಗಮನ ಸೆಳೆಯಲಿವೆ.

೨೦೨೦ರಿಂದಲೂ ಫುಟ್ಬಾಲ್ ಉತ್ಸವ: 

೨೦೨೦ರಿಂದಲೂ ಫುಟ್ಬಾಲ್ ಉತ್ಸವ ನಡೆಯುತ್ತಿದೆ. ಆಕ್ಸ್ ಸ್ಪೋಟ್ಸ್ – ಎಂಟರ್‌ಟೈನ್‌ಮೆಂಟ್ ಸಂಸ್ಥೆಯ ಹೆಸರಿನಲ್ಲಿ ಯುವಕರ ತಂಡವೊಂದು ಪೊನ್ನಂಪೇಟೆ ಕೊಡವ ಸಮಾಜದ ಸಹಯೋಗದಲ್ಲಿ ೨೦೨೦ರಲ್ಲಿ ಫುಟ್ಬಾಲ್ ಪಂದ್ಯಾವಳಿ ಆರಂಭಿಸಿತು. ೨೦೨೧-೨೨ರಲ್ಲಿ ಚೌರೀರ ಕುಟುಂಬ ಪಂದ್ಯಾವಳಿಯ ನೇತೃತ್ವ ವಹಿಸಿತ್ತು. ೨೦೨೩ರಲ್ಲಿ ಮತ್ತೆ ಆಕ್ಸ್ ಸ್ಪೋರ್ಟ್ಸ್ – ಎಂಟರ್‌ಟೈನ್‌ಮೆಂಟ್ ಸಂಸ್ಥೆ ಅಜ್ಜಿಕುಟ್ಟೀರ ಸುಬ್ಬಯ್ಯ ಹಾಗೂ ಪೊನ್ನಮ್ಮ ಚಾರಿಟಬಲ್ ಟ್ರಸ್ಟ್‌ನ ಸಹಯೋಗದಲ್ಲಿ ಪಂದ್ಯಾವಳಿ ಆಯೋಜಿಸಿತ್ತು. ೨೦೨೪ರಲ್ಲಿ ಕಾರಣಾಂತರಗಳಿಂದ ಪಂದ್ಯಾವಳಿ ನಡೆಯಲಿಲ್ಲ. ೨೦೨೫ರಲ್ಲಿ ಬೇತ್ರಿಯ ಮುಕ್ಕಾಟೀರ ಕುಟುಂಬ ಪಂದ್ಯಾವಳಿ ಆಯೋಜಿಸಿದ್ದು, ೨೦೨೬ರಲ್ಲಿ ದೇವಣಗೇರಿಯ ಮುಕ್ಕಾಟೀರ ಕುಟುಂಬ ಪಂದ್ಯಾವಳಿಯ ನೇತೃತ್ವವಹಿಸಲಿದೆ.

” ಕೊಡವ ಹಾಕಿ ಉತ್ಸವದ ಯಶಸ್ಸಿನಿಂದ ಸ್ಛೂರ್ತಿ ಪಡೆದು ಕೊಡವ ಫುಟ್ಬಾಲ್ ಉತ್ಸವವನ್ನು ಆಯೋಜಿಸಲಾಗುತ್ತಿದೆ. ಈ ಬಾರಿ ಏ.೭ರಿಂದ ೧೨ರವರೆಗೆ ಗೋಣಿಕೊಪ್ಪದಲ್ಲಿ ಪಂದ್ಯಾವಳಿ ನಡೆಯಲಿದ್ದು, ಮೊದಲು ನೋಂದಣಿಯಾಗುವ ೧೦೦ ತಂಡಗಳಿಗೆ ಆಡಲು ಅವಕಾಶ ಕಲ್ಪಿಸಲಾಗುವುದು. ಅತಿಥಿ ಆಟಗಾರರೂ ಆಡಲು ಅವಕಾಶವಿದ್ದು, ಹೆಚ್ಚಿನ ಮಾಹಿತಿಗಾಗಿ ಮೊ.ಸಂ.೯೩೪೧೯೫೭೮೯೫, ೯೮೪೫೩೪೩೯೭೦ ನ್ನು ಸಂಪರ್ಕಿಸಬಹುದು.”

-ಮುಕ್ಕಾಟಿರ ಸಿ. ಕರುಂಬಯ್ಯ, ಮುಕ್ಕಾಟಿರ ಕುಟುಂಬದ ಅಧ್ಯಕ್ಷರು

ಆಂದೋಲನ ಡೆಸ್ಕ್

Recent Posts

ಸೆಲ್ಫಿ ವಿಡಿಯೋ ಮಾಡಿ ಆಟೋ ಚಾಲಕ ಆತ್ನಹತ್ಯೆಗೆ ಯತ್ನ

ನಂಜನಗೂಡು: 5 ಸಾವಿರ ರೂ ಸಾಲ ಪಾವತಿಗಾಗಿ ಮಾನಸಿಕವಾಗಿ ಕಿರುಕುಳ ನೀಡಿದ ವ್ಯಕ್ತಿ ಮನೆ ಮುಂದೆ ಸೆಲ್ಫಿ ವಿಡಿಯೋ ಮಾಡಿ…

14 mins ago

ಮಂಡ್ಯದಲ್ಲಿ ಭೀಕರ ಅಪಘಾತ: ಮೂವರು ಸ್ಥಳದಲ್ಲೇ ಸಾವು

ಮಂಡ್ಯ: ಡಿವೈಡರ್‌ಗೆ ಡಿಕ್ಕಿ ಹೊಡೆದ ಕಾರು ಪಲ್ಟಿಯಾಗಿ ಬಿದ್ದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಧಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ.…

2 hours ago

ರಾಜ್ಯದಲ್ಲಿ ಮೂರು ದಿನ ದಟ್ಟ ಮಂಜು ಕವಿದ ವಾತಾವರಣ: ತೀವ್ರ ಚಳಿ ಮುನ್ಸೂಚನೆ

ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಬೆಳಗಿನ ಜಾವ ದಟ್ಟವಾದ ಮಂಜು ಕವಿದ ವಾತಾವರಣ ಇರಲಿದೆ.…

2 hours ago

ಯೂರಿಯಾ ಗೊಬ್ಬರ ತಿಂದು 11 ಮೇಕೆಗಳು ಸಾವು

ಕೊಳ್ಳೇಗಾಲ: ಮೇಯಲು ಬಿಟ್ಟಿದ್ದ ಮೇಕೆಗಳು ಯೂರಿಯಾ ಗೊಬ್ಬರ ತಿಂದು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಜಾಗೇರಿ ಹಳೆ…

3 hours ago

ಚಾಮರಾಜನಗರ| ಹುಚ್ಚುನಾಯಿ ದಾಳಿಯಿಂದ 7 ಮಂದಿಗೆ ಗಾಯ

ಚಾಮರಾಜನಗರ: ಪಾದಾಚಾರಿಗಳ ಮೇಲೆ ಏಕಾಏಕಿ ಹುಚ್ಚುನಾಯಿ ದಾಳಿ ನಡೆಸಿದ ಪರಿಣಾಮ 7 ಮಂದಿ ಗಾಯಗೊಂಡಿರುವ ಘಟನೆ ಯಳಂದೂರು ಪಟ್ಟಣದಲ್ಲಿ ನಡೆದಿದೆ.…

3 hours ago

ದುಬಾರಿ ಗಿಫ್ಟ್‌ ತೆಗೆದುಕೊಳ್ಳುವುದು ತಪ್ಪಾಗುತ್ತದೆ: ಸಂಸದ ಯದುವೀರ್‌ ಒಡೆಯರ್‌

ಮಡಿಕೇರಿ: ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ತಮ್ಮ ವಸ್ತುಗಳು ಏನೇ ಇದ್ದರೂ ಅಫಿಡವಿಟ್‌ನಲ್ಲಿ ತೋರಿಸಿದ್ದರೆ ಯಾವುದೇ ಸಮಸ್ಯೆ ಆಗಲ್ಲ. ಈ ಹಿಂದೆ…

4 hours ago