drinking water
ಹಳೇ ಮೈಸೂರು ಭಾಗದ ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆ
ಕೆ. ಬಿ. ರಮೇಶನಾಯಕ
ಮೈಸೂರು: ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ರೈತರ ಮೊಗದಲ್ಲಿ ಮಂದಹಾಸ ಮಿನುಗಿದ್ದರೆ, ಅತ್ತ ಹಳೆಯ ಮೈಸೂರು ಭಾಗದ ನಾಲ್ಕು ಜಲಾಶಯಗಳ ನೀರಿನ ಮಟ್ಟದಲ್ಲಿ ಗಣನೀಯವಾಗಿ ಏರಿಕೆ ಕಾಣುತ್ತಿದೆ. ಅದರಿಂದ ಮುಂದಿನ ದಿನಗಳಲ್ಲಿ ಎದುರಾಗಬಹುದಾಗಿದ್ದ ಕುಡಿಯುವ ನೀರಿನ ಆತಂಕ ದೂರವಾಗಿದೆ.
ಪೂರ್ವ ಮುಂಗಾರು ಮಳೆ ಚೆನ್ನಾಗಿ ಬೀಳುತ್ತಿರುವುದ ರಿಂದ ಕೃಷಿ ಚಟುವಟಿಕೆ ಸೇರಿದಂತೆ ರಾಜ್ಯದ ರಾಜಧಾನಿ ಬೆಂಗಳೂರು, ಸಾಂಸ್ಕೃತಿಕ ನಗರಿ ಮೈಸೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಎದುರಾಗಬಹುದಾಗಿದ್ದ ಕುಡಿ ಯುವ ನೀರಿನ ಸಮಸ್ಯೆ ದೂರವಾಗಿದೆ.
ಪ್ರತಿ ವರ್ಷ ಬೇಸಿಗೆಯಲ್ಲಿ ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಬಹಳ ಬಿಸಿಲು ಮತ್ತು ಉಷ್ಣಾಂಶ ಹಾಗೂ ಮಳೆ ಇಲ್ಲದ ಕಾರಣ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವಿನ ಬರ ಕಾಣಿಸಿಕೊಳ್ಳುತ್ತಿತ್ತು.
ಕೊಳವೆ ಬಾವಿಗಳಲ್ಲಿ ನೀರಿಲ್ಲದೆ, ಬಾವಿಗಳಿಂದ ನೀರೆತ್ತಲು ವಿದ್ಯುತ್ ಇಲ್ಲದೆ ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗುತ್ತಿತ್ತು. ಕೆರೆ ಕಟ್ಟೆಗಳಲ್ಲಿ ನೀರು ಇಂಗಿ ಹೋಗಿ ಜಾನುವಾರುಗಳಿಗೂ ಕುಡಿಯುವ ನೀರಿಗೆ ತತ್ವಾರ ಎದುರಾಗುತ್ತಿತ್ತು. ಮುಖ್ಯವಾಗಿ ಮೇವಿನ ಕೊರತೆ ಕಾಣಿಸಿಕೊಂಡು ಜಾನುವಾರುಗಳು ಬಡಕಲಾಗುತ್ತಿದ್ದವು. ಆದರೆ, ಉತ್ತಮ ಮಳೆಯಾಗುತ್ತಿರುವ ಪರಿಣಾಮವಾಗಿ ಅಲ್ಲಲ್ಲಿ ಕೆರೆಕಟ್ಟೆಗಳಿಗೆ ಸ್ವಲ್ಪ ನೀರು ಬಂದಿದೆ. ಅಷ್ಟೇ ಅಲ್ಲ, ಬಯಲಲ್ಲಿ ಮೇವು ಚಿಗುರಿ ಕುರಿ, ಮೇಕೆ, ಹಸು, ಎಮ್ಮೆ ಸೇರಿದಂತೆ ಎಲ್ಲ ಜಾನುವಾರುಗಳಿಗೂ ಹಸಿರು ದೊರೆಯುವಂತಾಗಿದೆ. ಬೇಸಿಗೆಯಲ್ಲಿ ಜಾನುವಾರುಗಳಿಗೆ ಹಸಿ ಮೇವು ಸಿಗುವುದೇ ಅಪರೂಪ. ಜೂನ್ ಆರಂಭದಲ್ಲಿ ಮಳೆಯಾಗಿ ಆನಂತರದಲ್ಲಿ ಹಸಿರು ಚಿಗುರಬೇಕಿತ್ತು. ಈ ಬಾರಿ ಮೇ ತಿಂಗಳಲ್ಲೇ ಜಾನುವಾರುಗಳಿಗೆ ಹಸಿ ಮೇವು ಲಭ್ಯವಾಗಿದ್ದು, ರೈತರನ್ನು ಸಂಕಷ್ಟದಿಂದ ಪಾರು ಮಾಡಿರು ವುದನ್ನು ಕಾಣಬಹುದು. ಇದರ ನಡುವೆ ಕಾವೇರಿ ಜಲಾನಯನ ಪ್ರದೇಶದ ವ್ಯಾಪ್ತಿಯ ನಾಲ್ಕು ಜಲಾ ಶಯಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಭರ್ತಿ ಯಾಗುವುದಕ್ಕೆ ದಿನಗಳನ್ನು ಎಣಿಸುವಂತಾಗಿದೆ.
ಮೇ ೨ನೇ ವಾರಕ್ಕೆ ೯೦ ಅಡಿ! : ಮುಂಗಾರು ಮಳೆಯು ಜೂನ್ ೧ರಿಂದ ಪ್ರವೇಶ ಮಾಡಬೇಕಿತ್ತಾದರೂ ಮೇ ೨೮ರಿಂದಲೇ ಕಾಣಿಸಿಕೊಂಡು ನಾಲ್ಕು ದಿನ ಮುಂಚಿತ ವಾಗಿ ಮಳೆ ಶುರುವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಆದರೆ, ಪೂರ್ವ ಮುಂಗಾರು ಮಳೆಯು ಚೆನ್ನಾಗಿ ಸುರಿದಿರುವ ಕಾರಣ ರೈತರ ಜೀವನಾಡಿಯಾದ ಕೃಷ್ಣರಾಜ ಸಾಗರ ಜಲಾಶಯದ ಗರಿಷ್ಟ ಮಟ್ಟ ೧೨೪. ೮ ಅಡಿಯಲ್ಲಿ ಈಗ ೯೦. ೬೮ ಅಡಿ ನೀರು ಇದ್ದು, ಕಳೆದ ವರ್ಷ ಇದೇ ಸಮಯದಲ್ಲಿ ೮೦ ಅಡಿ ನೀರು ಇತ್ತು. ಕಬಿನಿ ಜಲಾಶಯದ ಗರಿಷ್ಟ ಮಟ್ಟ ೬೫ ಅಡಿ ಇದ್ದು, ಹಾಲಿ ೪೨. ೯೪ ಅಡಿ ನೀರಿದೆ. ಕಳೆದ ವರ್ಷ ೩೮. ೧೯ ಅಡಿ ನೀರು ಇತ್ತು.
ಹಾರಂಗಿ ಜಲಾಶಯದ ಗರಿಷ್ಟ ಮಟ್ಟ ೧೨೯ ಅಡಿ ಇದ್ದು, ಈಗ ೧೦೧. ೬೫ ಅಡಿ ನೀರು ಇದ್ದರೆ, ಕಳೆದ ವರ್ಷ ೯೨. ೯೨ ಅಡಿ ಭರ್ತಿಯಾಗಿತ್ತು. ಹೇಮಾವತಿ ಜಲಾಶಯದ ನೀರಿನ ಮಟ್ಟ ೧೧೭ ಅಡಿ ಇದ್ದು, ಇಂದಿನ ಮಟ್ಟ ೯೪. ೦೮ ಅಡಿ ಇದ್ದರೆ, ಕಳೆದ ವರ್ಷ ಇದೇ ಸಮಯದಲ್ಲಿ ೭೩. ೫೫ ಅಡಿ ನೀರು ಸಂಗ್ರಹವಾಗಿತ್ತು. ಈ ನಾಲ್ಕು ಜಲಾಶಯಗಳಲ್ಲಿ ಹಿಂಗಾರು ಮಳೆಯಲ್ಲೇ ೧೦ರಿಂದ ೧೨ ಅಡಿಗಳಷ್ಟು ನೀರು ಹೆಚ್ಚಳವಾಗಿರುವುದರಿಂದ ನೀರಾ ವರಿ ಇಲಾಖೆ ಅಧಿಕಾರಿಗಳಲ್ಲಿ ಆತಂಕ ಕಡಿಮೆಯಾಗಿದೆ.
ತಮಿಳುನಾಡಿನ ಕ್ಯಾತೆಗಿಲ್ಲ ಅವಕಾಶ
ಜೂನ್ ಹೊತ್ತಲ್ಲೇ ತಮಿಳುನಾಡಿಗೆ ನೀರು ಹರಿಸುವಂತೆ ಬೇಡಿಕೆ ಇಡುವುದಕ್ಕೂ ಅವಕಾಶ ಇಲ್ಲದಂತೆ ಮೆಟ್ಟೂರು ಜಲಾಶಯದಲ್ಲಿ ನೀರು ಸಂಗ್ರಹವಾಗಿದೆ. ಮೆಟ್ಟೂರು ಅಣೆಕಟ್ಟೆಯ ಗರಿಷ್ಟ ೧೨೦ ಅಡಿಯಲ್ಲಿ, ಈಗ ೧೦೮. ೫೨ ಅಡಿ ನೀರು ಇದ್ದು, ಕಳೆದ ವರ್ಷ ೪೯. ೭೯ ಅಡಿ ಮಾತ್ರ ನೀರಿತ್ತು. ತಮಿಳುನಾಡು ಸರ್ಕಾರ ಕಾವೇರಿ ನೀರು ನಿರ್ವಹಣಾ ಪ್ರಾಽಕಾರದ ಎದುರು ಅರ್ಜಿ ಸಲ್ಲಿಸಿದ್ದರಿಂದಾಗಿ ಕಬಿನಿ, ಕೆಆರ್‌ಎಸ್ ಜಲಾಶಯಗಳಿಂದ ನೀರು ಹರಿಸಲಾಗಿತ್ತು. ನಂತರ, ಕರ್ನಾಟಕದಲ್ಲಿ ವ್ಯಾಪಕ ಮಳೆಯಾದ ಪರಿಣಾಮವಾಗಿ ನಿರೀಕ್ಷೆಗೂ ಮೀರಿ ನೀರು ಹರಿದಿದ್ದರಿಂದ ಮೆಟ್ಟೂರು ಜಲಾಶಯ ನೀರಿನ ಮಟ್ಟವನ್ನು ಕಾಯ್ದುಕೊಳ್ಳಲು ಕಾರಣವಾಗಿದೆ.
ಪ್ರಶಾಂತ್ ಎನ್ ಮಲ್ಲಿಕ್ ಮೈಸೂರು: ಸುತ್ತೂರು ಜಾತ್ರೆ ವೇಳೆ ರಾತ್ರಿ ಗದ್ದೆಯಲ್ಲಿ ಮಲಗಿದ್ದ ವ್ಯಕ್ತಿಗಳ ಮೇಲೆ ಕಾರು ಹರಿದ ಪರಿಣಾಮ…
ಸಿದ್ದಾಪುರ: ವಿರಾಜಪೇಟೆ ರಸ್ತೆಯಲ್ಲಿರುವ ಎಸ್‌ವೈಎಸ್ ಕಾಫಿ ಅಂಗಡಿಯಲ್ಲಿ ನಡೆದ ನಗದು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದಾಪುರ ಪೊಲೀಸರು ಕೇರಳ ಮೂಲದ…
ಮಹಾದೇಶ್ ಎಂ ಗೌಡ ಹನೂರು: ತಾಲ್ಲೂಕಿನ ಕೆವಿಎನ್ ದೊಡ್ಡಿ ಗ್ರಾಮದ ಜಮೀನೊಂದರಲ್ಲಿ ಕಾಡಾನೆ ಲಗ್ಗೆ ಇಟ್ಟು ಅಪಾರ ಪ್ರಮಾಣದ ಬೆಳೆ…
ಬೆಂಗಳೂರು: ಕಾಲ್ತುಳಿತ ಪ್ರಕರಣದಿಂದಾಗಿ ಈ ಬಾರಿಯ ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಪಂದ್ಯಗಳು ನಡುವುದೇ ಡೋಲಾಯಮಾನ ಸ್ಥಿತಿಯಲ್ಲಿರುವಾಗಲೇ ಉದ್ಘಾಟನಾ…
ಬೆಂಗಳೂರು: ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾ ಅವರಿಗೆ ಜೀವ ಬೆದರಿಕೆ ಹಾಕಿದ್ದ ಪ್ರಕರಣ ಸಂಬಂಧ ಕಾಂಗ್ರೆಸ್ ಮುಖಂಡ ರಾಜೀವ್‌ಗೌಡಗೆ ಹೈಕೋರ್ಟ್ ತೀವ್ರ…
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ಪ್ರಮುಖ ಆರೋಪಿ ಪವಿತ್ರಾ ಗೌಡಗೆ ವಾರಕ್ಕೊಮ್ಮೆ ಮನೆ ಊಟ…