ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಲಲಿತಕಲೆ ಉಪ ಸಮಿತಿಯು ‘ ಬಣ್ಣ ಬಣ್ಣ’ದ ರಂಗು ಹಾಗೂ ‘ಕಲಾಕೃತಿಗಳ ಸ್ಪರ್ಶ’ ವನ್ನು ನೀಡಲಿದೆ.
ದಸರಾ ಮಹೋತ್ಸವದ ಅಂಗವಾಗಿ ನಗರದ ಚಾಮರಾಜೇಂದ್ರ ಸರ್ಕಾರಿ ದೃಶ್ಯ ಕಲಾ ಕಾಲೇಜು (ಕಾವಾ) ಆವ ರಣದಲ್ಲಿ ‘ಕಲ್ಲಿನ ಕಲಾಕೃತಿ ಗಳು’ ಅರಳಲಿವೆ. ಅಷ್ಟೇ ಅಲ್ಲ, ಏಕೀ ಕರಣ ಚಳವಳಿಯ ನಾಯಕರು, ನಾಡಿನ ಕಲೆ, ಸಂಸ್ಕೃತಿ, ಪರಂಪರೆ ಬಿಂಬಿಸುವ ಚಿತ್ರಪಟಗಳು ಈ ಬಾರಿ ಪ್ರವಾಸಿಗರನ್ನು ಕೈ ಬೀಸಿ ಕರೆಯುವರೀತಿಯಲ್ಲಿ ರಾರಾಜಿಸಲಿವೆ.
ಲಲಿತಕಲೆ ಉಪ ಸಮಿತಿಯು ಈ ಬಾರಿಯ ದಸರಾ ಮಹೋತ್ಸವದ ಕಾರ್ಯಕ್ರಮಗಳನ್ನು ವಿಭಿನ್ನವಾಗಿ ಆಯೋಜಿಸಲು ಮುಂದಾಗಿದೆ. ಮುಖ್ಯ ವಾಗಿ ರಾಜ್ಯ ಮಟ್ಟದ ಶಿಲ್ಪ ಕಲೆ ಶಿಬಿರ, ಚಿತ್ರಕಲೆ ಶಿಬಿರ ಹಾಗೂ ಶಾಲಾ ಮಕ್ಕಳಿಗೆ ಚಿತ್ರಕಲೆ ಸ್ಪರ್ಧೆ ಆಯೋಜಿಸಲು ತೀರ್ಮಾನಿ ಸಿದೆ. ‘ಭಾರತದ ಸ್ವಾತಂತ್ರ್ಯ ಚಳವಳಿ’, ‘ಸಂವಿ ಧಾನದ ಮಹತ್ವ’, ‘ಸ್ವಾತಂತ್ರ್ಯ ಚಳವಳಿಯ ನಾಯಕರು’, ‘ಕರ್ನಾಟಕ ಏಕೀಕರಣ ಚಳ ವಳಿ’, ‘ಸುವರ್ಣ ಕರ್ನಾಟಕ’ ವಿಷಯಗಳ ಮೇಲೆ ಈ ಬಾರಿಯ ಕಾರ್ಯಕ್ರಮ ನಡೆಯಲಿವೆ.
ರಾಜ್ಯ ಮಟ್ಟದ ಕಲ್ಲಿನ ಕಲಾಕೃತಿ ಕೆತ್ತನೆ ಶಿಬಿರ ದಸರೆಗೆ ಮೆರುಗು ನೀಡಲಿದೆ. ಈ ಸಂಬಂಧ ಶಿಬಿರಕ್ಕೆ ಕಲಾವಿದರನ್ನು ಆಯ್ಕೆ ಮಾಡುವಂತೆ ಶಿಲ್ಪಕಲಾ ಅಕಾಡೆಮಿಗೆ ಸಮಿತಿ ಕೋರಿದೆ. ಶಿಲ್ಪಕಲಾ ಅಕಾಡೆಮಿ ಕಲಾವಿದರಿಂದ ಅರ್ಜಿ ಆಹ್ವಾನಿಸಲಿದೆ. ಒಟ್ಟಾರೆ ಸಲ್ಲಿಕೆಯಾಗುವ ಅರ್ಜಿಗಳ ಪೈಕಿ 10 ಕಲಾವಿದರನ್ನು ಮಾತ್ರ ಶಿಬಿರಕ್ಕೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆ ಕಲಾವಿದರು ದಸರಾ ಮಹೋತ್ಸವ ಉದ್ಘಾಟ ನೆಗೂ ಮುನ್ನ ‘ಕರ್ನಾಟಕ ಏಕೀಕರಣ ಚಳವಳಿ, ‘ಸುವರ್ಣ ಕರ್ನಾಟಕ, ‘ಏಕೀಕರಣ ಚಳವಳಿಯ ರೂವಾರಿಗಳು’ ವಿಷಯಕ್ಕೆ ಸಂಬಂಧಿಸಿ ದಂತೆ ಕಲಾಕೃತಿಗಳನ್ನು ಶಿಲೆಯಲ್ಲಿ ರಚಿಸಲಿದ್ದಾರೆ.
ಶಿಲ್ಪ ಕೆತ್ತನೆ ಶಿಬಿರವು 12 ದಿನಗಳ ಕಾಲ ಕಾವಾ ಕಾಲೇಜು ಆವರಣದಲ್ಲಿ ನಡೆಯಲಿದೆ. ಶಿಬಿರಕ್ಕೆ ಅಗತ್ಯ ತಯಾರಿ ನಡೆಯುತ್ತಿದೆ. ಕೆತ್ತನೆಗೆ ಬೇಕಾದ ಕಲ್ಲುಗಳ ಆಯ್ಕೆ ಹಾಗೂ ಕಲ್ಲುಗಳನ್ನು ತರಿಸುವ ನಿಟ್ಟಿನಲ್ಲಿ ಲಲಿತಕಲೆ ಉಪ ಸಮಿತಿ ಕಾರ್ಯನಿರತವಾಗಿದೆ. ಶಿಬಿರದ ಬಳಿಕ ಎಲ್ಲ ಕಲಾಕೃತಿಗಳನ್ನೂ ಕಾವಾ ಕಾಲೇಜು ಆವರಣದಲ್ಲೇ ಪ್ರದರ್ಶನಕ್ಕಿಡಲು ನಿರ್ಧರಿಸಲಾಗಿದೆ ಚಿತ್ರಕಲಾ ಶಿಬಿರ: ಲಲಿತಕಲೆ ಉಪ ಸಮಿತಿಯು ಕಲ್ಲಿನ ಕಲಾಕೃತಿ ಕೆತ್ತನೆ ಶಿಬಿರದ ಜತೆಗೆ ಚಿತ್ರಕಲಾ ಶಿಬಿರವನ್ನೂ ಆಯೋಜಿ ಸುತ್ತಿದೆ. ಶಿಬಿರದಲ್ಲಿ 10 ಕಲಾವಿದರು ಭಾಗವಹಿಸಲು ಮಾತ್ರ ಅವಕಾಶ ನೀಡಲಾಗುತ್ತಿದೆ. ಶಿಬಿರಕ್ಕೆ ಕಲಾವಿದರನ್ನು ಆಯ್ಕೆ ಮಾಡುವಂತೆ ಲಲಿತಕಲಾ ಅಕಾಡೆಮಿಗೆ ಸಮಿತಿ ಕೋರಿದೆ. ಕಲಾವಿದರಿಂದ ಅರ್ಜಿ ಆಹ್ವಾನಿಸಿ, 10 ಕಲಾ ವಿದರನ್ನು ಮಾತ್ರ ಶಿಬಿರಕ್ಕೆ ಆಯ್ಕೆ ಮಾಡಿ ಕೊಳ್ಳಲಾಗುತ್ತದೆ. ಆ ಕಲಾವಿದರು 5 ದಿನಗಳ ಕಾಲ ಕಾವಾ ಕಾಲೇಜು ಆವರಣದಲ್ಲಿ ‘ಏಕೀ ಕರಣ ಚಳವಳಿಯ ನಾಯಕರು’, ‘ನಾಡಿನ ಕಲೆ, ಸಂಸ್ಕೃತಿ, ಪರಂಪರೆ ಬಿಂಬಿಸುವ ಚಿತ್ರ ಗಳನ್ನು ರಚಿಸಲಿದ್ದಾರೆ. ಬಳಿಕ ಎಲ್ಲ ಚಿತ್ರಗಳನ್ನೂ ದಸರಾ ಮುಗಿಯುವವರೆಗೂ ಕಾವಾ ಆವರಣ ದಲ್ಲಿ ಪ್ರದರ್ಶನಕ್ಕಿಡಲು ನಿರ್ಧರಿಸಲಾಗಿದೆ.
ಶಿಲ್ಪಕಲೆ ಹಾಗೂ ಚಿತ್ರಕಲೆಗೆ ಉಡುಪಿ, ರಾಯಚೂರು, ಕಲಬುರಗಿ, ಚಿಕ್ಕಮಗಳೂರು, ಮೈಸೂರು, ಮಂಡ್ಯ, ಬೆಂಗಳೂರು, ತುಮ ಕೂರು, ಹಾಸನ, ಚಾಮರಾಜನಗರ, ಮಡಿ ಕೇರಿ ಮುಂತಾದ ಕಡೆಗಳಿಂದ ಕಲಾವಿದರು ಆಗಮಿಸುವ ನಿರೀಕ್ಷೆ ಇದೆ.
ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ
ಈ ಬಾರಿ ಮಕ್ಕಳಿಗೆ ಅ.6ರಂದು ಒಂದು ದಿನದ ರಾಜ್ಯ ಮಟ್ಟದ ಚಿತ್ರಕಲೆ ಸ್ಪರ್ಧೆ ಆಯೋಜಿ ಸಲು ಲಲಿತ ಕಲೆ ಉಪ ಸಮಿತಿ ಮುಂದಾಗಿದೆ. 5 ರಿಂದ 8 ಹಾಗೂ 9 ರಿಂದ 12ನೇ ತರಗತಿ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಉತ್ತಮ ಚಿತ್ರ ರಚಿಸಿದ ಮಕ್ಕಳಿಗೆ ಬಹುಮಾನ ನೀಡಲು ನಿರ್ಧರಿಸಿದೆ. ಅಂದೇ 1ರಿಂದ 4ನೇ ತರಗತಿ ಮಕ್ಕಳಿಗೆ ಜೇಡಿಮಣ್ಣಿನಿಂದ ಮಣ್ಣಿನ ಕಲಾಕೃತಿ ಮಾಡುವ ಸ್ಪರ್ಧೆಯೂ ನಡೆಯಲಿದೆ. ಜತೆಗೆ ಚಿತ್ರಕಲೆ, ಶಿಲ್ಪಕಲೆ, ಗ್ರಾಫಿಕ್ಸ್ ಕಲೆ, ಅನ್ವಯ ಕಲೆ, ಕರಕುಶಲ, ಇಲ್ಲೆ ಸೇರಿದಂತೆ ರಾಜ್ಯ ಮಟ್ಟದ 8 ಬಗೆಯ ಲಲಿತಕಲಾ ಸ್ಪರ್ಧೆ ಹಾಗೂ ನಾನಾ ಕಲೆಗಳಿಗೆ ಸಂಬಂಧಿಸಿದ ಪ್ರದರ್ಶನ ಆಯೋಜಿಸುವ ಸಂಬಂದ ಚರ್ಚೆಯೂ ನಡೆಯುತ್ತಿದೆ. ನಾನಾ ಕಲೆಗಳ ಪ್ರಾತ್ಯಕ್ಷಿಕೆ ಆಯೋಜಿಸಿ ಸಾರ್ವಜನಿಕರಿಗೆ ತಿಳಿಸುವ ಸಂಬಂಧವೂ ಚರ್ಚೆ ನಡೆಯುತ್ತಿದ್ದು ಅಂತಿಮವಾಗಬೇಕಿದೆ.
ಮೈಸೂರಿನ ಕಾವಾ ಕಾಲೇಜು ಆವ ರಣದಲ್ಲಿ ಅ.4 ರಿಂದ 7ರವರೆಗೆ ದಸರಾ ಲಲಿತಕಲೆ ಉಪ ಸಮಿತಿ ವತಿಯಿಂದ ಈ ಬಾರಿ ವಿಭಿನ್ನ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸಲು ಚಿಂತಿಸಲಾಗಿದೆ. ರಾಜ್ಯ ಮಟ್ಟದ ಶಿಲ್ಪಕಲೆ ಶಿಬಿರ, ಚಿತ್ರಕಲೆ ಶಿಬಿರ ಹಾಗೂ ಶಾಲಾ ಮಕ್ಕಳಿಗೆ ಚಿತ್ರಕಲೆ ಸ್ಪರ್ಧೆ ಆಯೋಜಿಸಲು ತೀರ್ಮಾನಿಸಲಾಗಿದೆ. ರಾಜ್ಯ ಮಟ್ಟದ ನಾನಾ ಬಗೆಯ ಲಲಿತಕಲೆ ಸ್ಪರ್ಧೆ ಆಯೋಜಿಸಲಾಗುತ್ತದೆ. -ಎ.ದೇವರಾಜು, ಉಪ ವಿಶೇಷಾಧಿಕಾರಿ, ದಸರಾ ಲಲಿತಕಲೆ ಉಪ ಸಮಿತಿ,
• ಗಮನ ಸೆಳೆಯಲಿವೆ
. ಕಲ್ಲಿನ ಕಲಾಕೃತಿ, ಚಿತ್ರಪಟಗಳು
ರಾಜ್ಯ ಮಟ್ಟದ ಶಿಲ್ಪ ಕಲೆ ಶಿಬಿರ, ಸ್ಪರ್ಧೆ
• ನಾಲ್ಕು ವಿಷಯಗಳನ್ನು ಆಧರಿಸಿ ಚಿತ್ರಕಲಾ ಶಿಬಿರ ಆಯೋಜನೆ
ಶಿಬಿರಕ್ಕೆ 10 ಮಂದಿ ಕಲಾವಿದರ ಆಯ್ಕೆ
ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…
ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…
ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…
ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…
ಮೈಸೂರು: ನಟ ದರ್ಶನ್ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್ಹೌಸ್ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…