ಮೈಸೂರು: ನಮ್ಮ ಮಾತೃಭಾಷೆ ಕನ್ನಡವನ್ನು ಎಂದಿಗೂ ಬಿಟ್ಟುಕೊಡ ಬೇಡಿ. ಅದುವೇ ಕನ್ನಡಿಗರೆಲ್ಲರ ಮೂಲ ಎಂದು ಇನೋಸಿಸ್ ಪ್ರತಿಷ್ಠಾನದ ಸಂಸ್ಥಾಪಕರೂ ಆದ ರಾಜ್ಯಸಭಾ ಸದಸ್ಯೆ ಡಾ. ಸುಧಾ ಮೂರ್ತಿ ಹೇಳಿದರು. ಮೈಸೂರು ವಿಶ್ವವಿದ್ಯಾನಿಲಯದ ವತಿಯಿಂದ ಕಾರ್ಯಸೌಧದಲ್ಲಿ ಶನಿವಾರ ಆಯೋಜಿಸಿದ್ದ ಕನ್ನಡ ವಿಶ್ವಕೋಶ-೧೦ ಮತ್ತು ೧೩ನೇ ಸಂಪುಟಗಳ ಬಿಡುಗಡೆ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.
ಇಂಗ್ಲಿಷ್ ಇದೀಗ ಅನಿ ವಾರ್ಯ. ಉದ್ಯೋಗಾವಕಾಶ ಕ್ಕಾಗಿ ಮತ್ತು ಹೊರ ರಾಜ್ಯ, ವಿದೇಶಗಳಿಗೆ ತೆರಳಲು ಅದು ಅಗತ್ಯ ನಿಜ. ಹಾಗೆಂದ ಮಾತ್ರಕ್ಕೆ ಇಂಗ್ಲಿಷ್‌ಗಾಗಿ ಕನ್ನಡವನ್ನು ಬಿಡ ಬೇಕೆಂದು ಎಲ್ಲಿಯೂ ಹೇಳಿಲ್ಲ. ಇಂಗ್ಲಿಷ್ ಕಲಿಯಿರಿ, ಕನ್ನಡ ಬಿಡಬೇಡಿ ಎಂದು ಹೇಳಿದರು. ನಮ್ಮ ಮೂಲ ಹುಡುಕಾಟಕ್ಕೆ ಕನ್ನಡ ಭಾಷೆ ಬೇಕು. ಹೀಗಾಗಿ, ಇದನ್ನು ಬಿಡಬಾರದು. ಕನ್ನಡ ಪುಸ್ತಕ, ವಿಶ್ವಕೋಶಗಳನ್ನು ತೆಗೆದುಕೊಂಡು ಓದಬೇಕು. ಮಕ್ಕಳಿಗೂ ಓದುವ ಅಭ್ಯಾಸ ಮಾಡಿಸಿ. ತಾಯಂದಿರೂ ಓದಬೇಕು. ಇದು ನಿಮ್ಮ ಕರ್ತವ್ಯ ಎಂದರು.
ಈಗ ಶುದ್ಧ ಕನ್ನಡದ ಬಳಕೆಯೇ ಇಲ್ಲದಂತಾಗಿದೆ. ಅದರಲ್ಲೂ ಬೆಂಗಳೂರು ಸಮೀಪಿಸುತ್ತಿದ್ದಂತೆಯೇ ಕನ್ನಡದ ಸ್ಥಿತಿ ನೆನೆದರೆ ನೋವಾಗುತ್ತದೆ. ಜಗತ್ತಿನ ಎಲ್ಲಿಗೇ ಹೋದರೂ ನಾನು ಕನ್ನಡಿಗಳೇ. ಹಲವು ಭಾಷೆಗಳು ಗೊತ್ತಿದ್ದರೂ ಕನ್ನಡವೇ ನನ್ನ ತಾಯಿ. ತಲೆತಲಾಂತರದಿಂದ ಬಂದಿರುವ ಈ ಕನ್ನಡ ಪರಂಪರೆಯನ್ನು ಮರೆಯ ಬಾರದು. ಇದುವೇ ನಿಜವಾದ ಆಸ್ತಿ. ಬಂಗಾರ, ಹಣ, ನಿವೇಶನವಲ್ಲ ಎಂದರು.
ಉತ್ತಮ ಆಡಳಿತಗಾರನಿಗೆ ಪಾರದರ್ಶಕತೆ ಇರಬೇಕು. ಉತ್ತರದಾಯಿತ್ವವೂ ಮುಖ್ಯ. ಮಾತುಗಳು ಕೃತಿಯಾಗಬೇಕು. ತಪ್ಪು ಮಾಡಿದ್ದರೆ ಕ್ಷಮೆ ಕೇಳ ಬೇಕು. ಆಗ ಬೇರೆಯವರು ತಪ್ಪು ಮಾಡಿದಾಗ ಅದನ್ನು ಪ್ರಶ್ನಿಸಲು ಧೈರ್ಯ ಬರುತ್ತದೆ. -ಸುಧಾ ಮೂರ್ತಿ, ರಾಜ್ಯಸಭಾ ಸದಸ್ಯೆ
ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಾಣಿಗಳಿಗೆ ಕುಡಿಯುವ ನೀರಿನ ಸಮಸ್ಯೆಗೆ ಈಗ ಬ್ರೇಕ್ ಹಾಕಲಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಅರಣ್ಯಾಧಿಕಾರಿಗಳು…
ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಜೀವ ರಕ್ಷಕ ಔಷಧಿಗಳ ಕೊರತೆಯಿರುವುದು ನಿಜ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.…
ಬೆಂಗಳೂರು: ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ನಟಿ ರನ್ಯಾರಾವ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದು, ಡಿಐಆರ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದೇಗೆ ಎಂಬ…
ಹಾಸನ: ಕೌಟುಂಬಿಕ ಕಲಹದಿಂದ ಬೇಸತ್ತು ತಾಯಿ-ಮಗ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಕಬ್ಬಳ್ಳಿ…
ಬೆಂಗಳೂರು: ಗ್ರೇಟರ್ ಬೆಂಗಳೂರು ವಿಧೇಯಕಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸಂಪೂರ್ಣ ವಿರೋಧ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಈ…
ಸಮತೋಲನದ ಬಜೆಟ್!... ಮೂಡಿ ಬಂದಿದೆ ಸರ್ವರ ಹಿತ ಏಳ್ಗೆಯ ಕರ್ನಾಟಕದ ಮಾದರಿ ಜನಪರ ಬಜೆಟ್! ಮುಖ್ಯಮಂತ್ರಿಗಳ ಅನುಭವದ ಮೂಸೆಯಲಿ ಸುಸ್ಥಿರ…