ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ನವರಾತ್ರಿ ವೇಳೆ ಅರಮನೆಯಲ್ಲಿ ರಾಜವಂಶಸ್ಥರಿಂದ ನಡೆಯುವ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳಲು ಪಟ್ಟದ ಆನೆಯಾಗಿ ಕಂಜನ್ ಹಾಗೂ ಪಟ್ಟದ ನಿಶಾನೆಯಾಗಿ ಭೀಮ ಆನೆ ಆಯ್ಕೆಯಾಗಿವೆ. ಅ. ೩ರಿಂದ ಅ. ೧೨ರವರೆಗೆ ನವರಾತ್ರಿ ಮಹೋತ್ಸವ ನಡೆಯಲಿದ್ದು, ರಾಜವಂಶಸ್ಥರು ನಡೆಸುವ ಧಾರ್ಮಿಕ ಕಾರ್ಯದಲ್ಲಿ ಪಟ್ಟದ ಆನೆ, ಪಟ್ಟದ ಹಸು, ಒಂಟೆ, ಕಳಸ ಹೊತ್ತ ಮಹಿಳೆಯರೊಂದಿಗೆ ಕೋಡಿ ಸೋಮೇಶ್ವರ ದೇವಾಲಯದ ಮುಂಭಾಗದಿಂದ ಅರಮನೆಯ ಕನ್ನಡಿ ತೊಟ್ಟಿಯವರೆಗೂ ದೇವತಾ ಮೂರ್ತಿಯನ್ನು ತೆಗೆದುಕೊಂಡು ಹೋಗುವ ಪದ್ಧತಿಯಿದೆ.
ಈ ಹಿನ್ನೆಲೆಯಲ್ಲಿ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಭಾನುವಾರ ಪಟ್ಟದ ಆನೆ ಆಯ್ಕೆ ಮಾಡುವ ಪ್ರಕ್ರಿಯೆ ನಡೆಸಿದರು. ರಾಜವಂಶಸ್ಥರ ಕೋರಿಕೆ ಮೇರೆಗೆ ದಸರಾ ಗಜಪಡೆಯ ಗಂಡಾನೆಗಳಾದ ಭೀಮ, ಕಂಜನ್, ಸುಗ್ರೀವ, ಗೋಪಿ, ಏಕಲವ್ಯ ಹಾಗೂ ಹೆಣ್ಣಾನೆಗಳಾದ ಲಕ್ಷಿ ಮತ್ತು ಹಿರಣ್ಯ ಆನೆಗಳನ್ನು ಅರಮನೆಯ ಕನ್ನಡಿ ತೊಟ್ಟಿ ಬಳಿ ಕರೆದೊಯ್ಯಲಾಗಿತ್ತು. ೫ ಗಂಡಾನೆಗಳನ್ನು ಪರಿಶೀಲಿಸಿದ ಪ್ರಮೋದಾ ದೇವಿ ಒಡೆಯರ್ ಅವರು ಕಂಜನ್ ಆನೆಯನ್ನು ಪಟ್ಟದ ಆನೆಯಾಗಿಯೂ, ಭೀಮಾ ಆನೆಯನ್ನು ಪಟ್ಟದ ನಿಶಾನೆಯಾಗಿಯೂ ಆಯ್ಕೆ ಮಾಡಿದರು.
ಪಟ್ಟದ ಆನೆ, ಪಟ್ಟದ ನಿಶಾನೆ ಆನೆ ಆಯ್ಕೆ ನಡೆದಿದೆ. ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಅವರು ೫ ಗಂಡಾನೆ, ೨ ಹೆಣ್ಣಾನೆಗಳನ್ನು ಇಂದು ಪರಿಶೀಲಿಸಿದರು. ಅದರಲ್ಲಿ ಪಟ್ಟದ ಆನೆಯಾಗಿ ಕಂಜನ್ ಆನೆಯನ್ನು ಹಾಗೂ ಪಟ್ಟದ ನಿಶಾನೆಯಾಗಿ ಭೀಮ ಆನೆಯನ್ನು ಆಯ್ಕೆ ಮಾಡಿದ್ದಾರೆ. -ಡಾ. ಐ. ಬಿ. ಪ್ರಭುಗೌಡ, ಡಿಸಿಎಫ್, ವನ್ಯಜೀವಿ ವಿಭಾಗ.
ಕೋಲ್ಕತ್ತ : ನಾಯಕ ಶಾಯ್ ಹೋಪ್ ಅವರ ಸತತ ಎರಡನೇ ಅರ್ಧ ಶತಕ ಮತ್ತು ಬೌಲರ್‌ಗಳ ಶಿಸ್ತುಬದ್ಧ ದಾಳಿಯ ಪ್ರದರ್ಶನದಿಂದ…
ಕೊಲಂಬೊ : ಐಸಿಸಿ ಟಿ20 ವಿಶ್ವಕಪ್ 2026ರಲ್ಲಿ ಜಿಂಬಾಬ್ವೆ ತಂಡ ಮತ್ತೊಮ್ಮೆ ದೊಡ್ಡ ಅಚ್ಚರಿ ಮೂಡಿಸಿದೆ. ಆತಿಥೇಯ ಶ್ರೀಲಂಕಾವನ್ನು ಆರ್.…
ಮೈಸೂರು : ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಜಿಲ್ಲೆಯಲ್ಲಿ ಕಳೆದ ವರ್ಷದ ಸ್ಥಾನವನ್ನು ಉಳಿಸಿಕೊಳ್ಳುವ ಜತೆಗೆ 10ನೇ ಸ್ಥಾನದೊಳಗೆ ಬರಲು ಶ್ರಮಿಸಬೇಕು.…
ಹೊಸದಿಲ್ಲಿ : ಮಾನವರು ಕೇವಲ ಡೇಟಾ ಪಾಯಿಂಟ್ ಅಥವಾ ಕಚ್ಚಾ ವಸ್ತುವಾಗದಂತೆ ನೋಡಿಕೊಳ್ಳಲು, ಎಐಯನ್ನು ಜನತಂತ್ರೀಕರಿಸಬೇಕು. ಇದು ವಿಶೇಷವಾಗಿ ಗ್ಲೋಬಲ್…
ಗುಂಡ್ಲುಪೇಟೆ : ಭಾರತದ ಪ್ರಮುಖ ಹುಲಿ ರಕ್ಷಿತಾರಣ್ಯಗಳಲ್ಲಿ ಒಂದಾದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ವನ್ಯಜೀವಿ ಸಫಾರಿ ಪುನಾರಂಭಗೊಳಿಸುವ ಆದೇಶದ ವಿರುದ್ಧ…
ಮಂಡ್ಯ : ಬೂದನೂರು ಉತ್ಸವದ ಪ್ರಯುಕ್ತ ಚಿಕ್ಕಮಂಡ್ಯದಲ್ಲಿ ಫೆ.20ರ ಶುಕ್ರವಾರದಿಂದ ಮೂರು ದಿನಗಳ ಕಾಲ ಹೆಲಿ ಟೂರಿಸಂ (ಹೆಲಿಕಾಪ್ಟರ್ ಜಾಯ್…