ಪ್ರದೀಪ್ ಮುಮ್ಮಡಿ ಸಂಶೋಧನಾ ವಿದ್ಯಾರ್ಥಿ, ಮೈಸೂರು ವಿಶ್ವವಿದ್ಯಾನಿಲಯ
ನಾಗಮಂಗಲದ ದೊಡ್ಡಜಟಕಾ ಗ್ರಾಮದಲ್ಲಿರುವ ಚನ್ನಕೇಶವ ದೇವಾಲಯ
ನಾಗಮಂಗಲದ ಮಾಚಲಗಟ್ಟದಲ್ಲಿನ ಮಲ್ಲೇಶ್ವರಸ್ವಾಮಿ ದೇವಾಲಯ
ಚನ್ನಪಟ್ಟಣದ ನಂದಿ ದೇವಾಲಯ
ಇತಿಹಾಸದ ಮೇಷ್ಟರಿಂದ ಸೌಹಾರ್ದತೆಯ ಪಾಠ
ವೀರಗಲ್ಲು,ಮಾಸ್ತಿಗಲ್ಲುಗಳ ಸಂಶೋಧಕ
ಹಲವು ದೇವಾಲಯಗಳ ಜೀರ್ಣೋದ್ಧಾರದಲ್ಲಿ ಪ್ರಮುಖ ಪಾತ್ರಧಾರಿ
ಮಾನವೀತಯೆಗೆ ಬೆಲೆ; ಕಲೀಂ ಜೀವನ ಲೀಲೆ
ಕಲೀಂ ಉಲ್ಲಾ ಸಂಶೋಧನೆ ಮಾಡಿರುವ ವೀರಗಲ್ಲು – ಮಾಸ್ತಿಗಲ್ಲು ವಿವರ:
ಮಂಡ್ಯದ ವೀರಗಲ್ಲು ಬೀದಿ – ವೀರಗಲ್ಲು
ನಾಗಮಂಗಲ ತಾಲ್ಲೂಕು -ಬಲಿದಾನ ಶಿಲ್ಪ
ಬಿಂಡಿಗನವಿಲೆ – ಮಾಸ್ತಿಗಲ್ಲು
ನಾಗಮಂಗಲದ ಕರಡಗಳ್ಳಿ -ವೀರಗಲ್ಲು
ಬಸರಾಳುವಿನ ಸಿಡಿದಲೆ -ವೀರಗಲ್ಲು
ಮಳವಳ್ಳಿ ತಾಲ್ಲೂಕಿನಲ್ಲಿ ಹಲವಾರು ಶಾಸನರಹಿತ ವೀರಗಲ್ಲು, ಮಾಸ್ತಿಗಲ್ಲುಗಳು
ಸಾಮರಸ್ಯ, ಸಮಾನತೆ, ಸಂವೇದನಾಶೀಲ ಗುಣ ಮಾನವರ ನೆಮ್ಮದಿ ಜೀವನದ ಆಧಾರ ಸ್ತಂಭಗಳು ಎನ್ನ ಬಹುದು ಆದರೆ, ಇವುಗಳನ್ನು ಬುಡ ಮೇಲು ಮಾಡುವುದಕ್ಕೆಕೋಮುವಾದ, ಜಾತಿವಾದ ಎಂಬ ಅಸಗಳು ಆಗಾಗ ಪ್ರಯೋಗಿಸಲ್ಪಡುತ್ತವೆ. ಅದಕ್ಕೆ ದೇಶ ಅಥವಾ ರಾಜ್ಯದಲ್ಲಿ ಯಾವುದೋ ಧರ್ಮದ ಹಬ್ಬ, ಸಾಂಪ್ರದಾಯಿಕ ಆಚರಣೆಗಳ ಸಂದರ್ಭದಲ್ಲಿ ಸಂಭವಿ ಸುವ ಗಲಭೆ, ಸಂಘರ್ಷಗಳು ನಿದರ್ಶನವಾಗಿವೆ.
ಇಂತಹ ಕೋಮುದಳ್ಳುರಿಯನ್ನು ತಣ್ಣಗೆ ಮಾಡಿ, ಮನುಷ್ಯರ ನಡುವೆ ಅಲ್ಲಲ್ಲಿ ಸೌಹಾರ್ದತೆಯ ಸೇತುವೆಯನ್ನು ನಿರ್ಮಿಸಿ, ಜಾತಿ, ಮತ, ಧರ್ಮಗಳನ್ನು ಮೀರಿದ ಬಾಂಧವ್ಯದ ಬೆಸುಗೆ ಬೆಸೆಯುವಂತಹ ವ್ಯಕ್ತಿಗಳು ಇದ್ದಾರೆ ಎಂಬುದು ಗಮನಾರ್ಹ. ಅಂತಹ ಮಾನವೀಯ ವ್ಯಕ್ತಿತ್ವವನ್ನುಳ್ಳ ವ್ಯಕ್ತಿಯೊಬ್ಬರ ಕುರಿತ ಲೇಖನ ಇಲ್ಲಿದೆ.
ಮಹಮ್ಮದ್ ಕಲೀಂ ಉಲ್ಲಾ ಮಂಡ್ಯ ಜಿಲ್ಲೆ ನಾಗಮಂಗಲದವರು. ಪ್ರೌಢ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ೨೦೧೩ರಲ್ಲಿ ನಿವೃತ್ತರಾಗಿದ್ದಾರೆ. ಇತಿಹಾಸಕಾರರಾಗಿ, ಐತಿಹಾಸಿಕ ಸ್ಮಾರಕಗಳ ರಕ್ಷಕರಾಗಿ ಕನ್ನಡ ನಾಡಿನ ಸಾಂಸ್ಕ ತಿಕ ಹೆಜ್ಜೆ ಗುರುತುಗಳನ್ನು ಉಳಿಸಿ ಜನರಿಗೆ ಅದರ ಪ್ರಾಮುಖ್ಯತೆಯನ್ನು ತಿಳಿಸುವ ಮಹತ್ವದ ಕೆಲಸದಲ್ಲಿ ನಿರತರಾಗಿದ್ದಾರೆ.
ಸಾಹಿತ್ಯ ಪ್ರೀತಿಯನ್ನು ಹೊಂದಿರುವ ಕಲೀಂ ಮೇಷ್ಟ್ರು, ಇತಿಹಾಸ ಸಂಶೋಧಕರಾಗಿ ಎಂಟು ಪುಸ್ತಕಗಳನ್ನು ರಚಿಸಿದ್ದಾರೆ ಹಾಗೂ ಇತಿಹಾಸ ಅಕಾಡೆಮಿಯ ಇತಿಹಾಸ ದರ್ಶನ ಮಾಲೆಯಲ್ಲಿ ಇವರ ನೂರಾರು ಸಂಶೋಧನಾ ಲೇಖನಗಳು ಪ್ರಕಟವಾಗಿವೆ. ಅವರು ಕನ್ನಡ ನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಜನರಿಗೆ ತಿಳಿಸುವುದು ಬಹಳ ಮುಖ್ಯ ಎಂದು ನಂಬಿದ್ದಾರೆ. ನಿರ್ಲಕ್ಷ್ಯಕ್ಕೊಳಗಾಗಿರುವ ವೀರಗಲ್ಲು, ಮಾಸ್ತಿ ಗಲ್ಲು, ಶಾಸನ ಮೊದಲಾದವುಗಳ ಮಹತ್ವವನ್ನು ಸ್ಥಳೀಯರಿಗೆ ತಿಳಿಸಿ ತಮ್ಮ ಊರಿನ ಬಗೆಗೆ ಅಭಿಮಾನ ಮೂಡಿಸುತ್ತಾರೆ. ‘ನಮ್ಮನಾಡು ಸಮೃದ್ಧವಾಗಿದೆ, ನಮ್ಮ ರಾಷ್ಟ್ರೀಯತೆ ಊರು ಕೇರಿಗಳಿಂದಲೇ ಆರಂಭವಾಗಬೇಕು’ ಎನ್ನುತ್ತಾರೆ.
ಐತಿಹಾಸಿಕ ಹಿಂದೂ ದೇವಾಲಯಗಳ ಜೀರ್ಣೋದ್ಧಾರ: ನಾಗಮಂಗಲ ಗ್ರಾಮದಲ್ಲಿರುವ ದೊಡ್ಡ ಜಟಕಾ ಗ್ರಾಮದಲ್ಲಿರುವ ಚನ್ನಕೇಶವ ದೇವಾಲಯವನ್ನು ವಿಜಯನಗರದ ಅರಸು ಶ್ರೀಕೃಷ್ಣದೇವರಾಯ ತನ್ನ ಪತ್ನಿ ಚಿನ್ನಾ ದೇವಿಯ ನೆನಪಿಗೆ ನಿರ್ಮಿಸಿ, ಊರಿಗೆ ‘ಚಿನ್ನಾದೇವಿಪುರ’ ಎಂದು ನಾಮಕರಣ ಮಾಡಿದ್ದನು. ಆದರೆ ಕಾಲಕ್ರಮೇಣ ಆ ದೇವಾಲಯ ನಿರ್ವಹಣೆ ಇಲ್ಲದೆ ಶಿಥಲಾವಸ್ಥೆಗೆ ತಲುಪಿತ್ತು. ಹಲವು ವರ್ಷಗಳ ಹಿಂದೆ ಈ ದೇವಾಲಯ ಸಂಪೂರ್ಣ ಕುಸಿಯುವ ಸ್ಥಿತಿಯಲ್ಲಿತ್ತು. ಇದನ್ನು ಗಮನಿಸಿದ್ದ ಕಲೀಂ ಅವರು ದೇವಾಲಯವನ್ನು ಜೀರ್ಣೋದ್ಧಾರ ಮಾಡುವ ಸಂಕಲ್ಪ ಮಾಡಿದರು. ೨೦೧೦ರಲ್ಲಿ ಧರ್ಮಸ್ಥಳದ ಧರ್ಮೋತ್ಥಾನ ಟ್ರಸ್ಟಿನ ಜೊತೆ ಸೇರಿ, ಸರ್ಕಾರ ಹಾಗೂ ಸ್ಥಳೀಯರ ಮನವೊಲಿಸಿ ಎಲ್ಲರ ನೆರವಿನೊಂದಿಗೆ ಚನ್ನಕೇಶವ ದೇವಾಲಯದ ಜೀರ್ಣೋದ್ಧಾರ ಮಾಡಿದರು.
ನಾಗಮಂಗಲದ ಮಾಚಲಗಟ್ಟದಲ್ಲಿನ ಮಲ್ಲೇಶ್ವರಸ್ವಾಮಿ ದೇವಾಲಯ ಹೊಯ್ಸಳರ ಕಾಲದಲ್ಲಿ ನಿರ್ಮಾಣವಾಗಿತ್ತು. ಪಿರಮಿಡ್ ಆಕಾರದ ವಿಶಿಷ್ಟ ಶೈಲಿಯ ಗೋಪುರವುಳ್ಳ ಈ ದೇವಾಲಯ ಬಾವಲಿಗಳ ತಾಣವಾಗಿ ಮಾರ್ಪಟ್ಟಿತ್ತು. ಹೊರಗೋಡೆಗಳು ಶಿಥಿಲಾವಸ್ಥೆಯಲ್ಲಿದ್ದವು. ಅಲ್ಲಿನ ಜನರ ಸಹಾಯ ಪಡೆದು ಆ ದೇವಾಲ ಯವನ್ನು ೨೦೧೨ರಲ್ಲಿ ಪುನಶ್ಚೇತನಗೊಳಿಸಿದ್ದಾರೆ. ಹಾಗೆಯೇ ನಾಗಮಂಗಲ ಪಟ್ಟಣದಲ್ಲಿರುವ ಚನ್ನಕೇಶವ ದೇವಾಲಯ, ಚನ್ನಪಟ್ಟಣದ ನಂದಿ ದೇವಾಲಯ, ಇನ್ನೂ ಅನೇಕ ದೇವಾಲಯಗಳ ಜೀರ್ಣೋದ್ಧಾರ ಕಾರ್ಯ ಮಾಡಿಸಿದ್ದಾರೆ. ನಿರ್ಮಾಣ ಹಂತದಲ್ಲಿ ನಿಂತುಹೋಗಿದ್ದ ಹಲ ವಾರು ದೇವಾಲಯಗಳು ಧರ್ಮೋತ್ಥಾನ ಟ್ರಸ್ಟಿನಿಂದ ನೇರ ಧನಸಹಾಯ ಪಡೆಯಲು ನೆರವಾಗಿದ್ದಾರೆ. ಆ ಕಾಲದ ಸಂಪತ್ತಾಗಿದ್ದ ಗೋವುಗಳ ರಕ್ಷಣೆಗೆ, ಮಹಿಳೆಯರ ಮಾನ ರಕ್ಷಣೆಗಾಗಿ ಪ್ರಾಣತೆತ್ತ ವೀರರ ಚರಿತ್ರೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಿದ್ದಾರೆ.
ಮೇಷ್ಟ್ರು, ದೇವಾಲಯವೆಂದರೆ ನಮ್ಮ ದೇಶದ ವಾಸ್ತುಶಿಲ್ಪ, ಸಂಸ್ಕ ತಿ, ಅದರ ಬಗ್ಗೆ ಜನರಿಗೆ ಅಭಿಮಾನ ಮೂಡಬೇಕು ಎನ್ನುತ್ತಾರೆ. ಶಾಲಾ ಮಕ್ಕಳಿಗೆ ದೇವಾಲಯಗಳ ವಾಸ್ತುಶಿಲ್ಪದ ಪರಿಚಯ ಮಾಡಿಸುತ್ತಾರೆ. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ದೇವಾಲಯಗಳ ಭಂಜನೆ, ದ್ವೇಷ, ಲೂಟಿ ಇಂತಹ ಇತಿ ಹಾಸವನ್ನೇ ಹೇಳಲಾಗಿದೆ. ಇದಲ್ಲದೇ ಪ್ರಾದೇಶಿಕವಾಗಿ ಸಾಮರಸ್ಯದಿಂದ ಬದುಕಿದ ಇತಿಹಾಸ ನಮ್ಮ ಬಳಿ ಇದೆ. ಇದನ್ನು ಮಕ್ಕಳಿಗೆ ತಿಳಿಸಿ ಓದಿಸುವುದು ಇಂದಿನ ಧರ್ಮ ದ್ವೇಷದ ದುರಿತ ಸ್ಥಿತಿಗೆಪರಿಹಾರವಾಗಬಹುದು.
ಕಲೀಂ ಉಲ್ಲಾರ ತಾತ ನಾಗಮಂಗಲದ ಖಾಜಿಸಾಬ್ ಆಗಿದ್ದರು. ಗಣೇಶನ ಹಬ್ಬಕ್ಕೆ ಖಾಜಿಸಾಬರೇ ಮುಖ್ಯ ಅತಿಥಿಯಾ ಗುತ್ತಿದ್ದರು. ಶೃಂಗೇರಿಯ ಶ್ರೀಗಳು ಅವರನ್ನು ಸನ್ಮಾನಿಸುವುದು ರೂಢಿಗತವಾಗಿತ್ತು. ಬಾಬಯ್ಯನ ಹಬ್ಬವೂ ಅಷ್ಟೆ. ಹಿಂದೂಗಳು ಜಾನಪದ ವೇಷ ಧರಿಸಿ ಸಂಭ್ರಮಿಸುತ್ತಿದ್ದರು. ಈಗ ಯಾವ ಹಬ್ಬವಾದರೂ ಆತಂಕದ ಹಬ್ಬಗಳಾಗಿವೆ. ಗಲಭೆಗಳಿಲ್ಲದೆ ಹಬ್ಬಗಳು ಮುಗಿದರೆ ಸಾಕು ಎಂಬಂತಾಗಿದೆ. ರಾಜಕೀಯ ನೇತಾರರೇ ಕೋಮುಗಲಭೆಗಳಿಂದ ನಡೆಯ ಬಹುದಾದ ಲಾಭಗಳ ಬಗ್ಗೆ ಯೋಚಿಸಿ ಕೂಗುಮಾರಿಗಳಂತೆ ಬರುವಾಗ ಪರಿಹಾರ ಸಂಕೀರ್ಣವಾಗಿದೆ. ‘ಹರ ಕೊಲ್ವಡೆ ನರಕಾಯ್ವನೇ?’ ಎಂಬುದು ಸಾಮಾಜಿಕ ಸಾಮರಸ್ಯ ಬಯಸುವವರ ಸ್ಥಿತಿಯಾಗಿದೆ. ಎಲ್ಲ ಕೋಮುವಾದಿಗಳಿಗೂ ರಾಜಕೀಯ ಪ್ರೇರಣೆ ಇದ್ದೇ ಇರುತ್ತದೆ. ಮುಸಲ್ಮಾನರಲ್ಲೂ ಸರಿಯಾದ ಶಿಕ್ಷಣ ಹಾಗೂ ನಾಯಕತ್ವ ಇಲ್ಲದಿರುವುದು ಇದಕ್ಕೆ ಕಾರಣವಾಗಿದೆ ಎಂಬುದು ಕಲೀಂ ಉಲ್ಲಾರ ಅಸಮಾಧಾನ. ಪ್ರೀತಿ ಸೌಹಾರ್ದತೆಯನ್ನೇ ಉಸಿರಾಡಿ, ಕನ್ನಡ ನಾಡನ್ನು ಪರ ಮಾಪ್ತವಾಗಿ ಪ್ರೀತಿಸುವ ಕಲೀಂ ಉಲ್ಲಾ ಮೇಷ್ಟ್ರು ಬುದ್ಧ ಹೇಳಿದ ‘ವಿವೇಚನಾ ಪ್ರಜ್ಞೆ’ ಎಲ್ಲರಲ್ಲೂ ಮೂಡಿದರೆ ಸಾಕು ಎಂದು ಮೌನದ ಮೊರೆ ಹೋಗುತ್ತಾರೆ.
ಎಚ್.ಎಸ್.ದಿನೇಶ್‌ಕುಮಾರ್ ಮೈಸೂರು: ಸರ್ಕಾರಿ ಕಚೇರಿಯಲ್ಲಿ ಕೆಲಸ ನಿರ್ವಹಿಸುವವರು ಎಚ್ಚರಿಕೆ ವಹಿಸಿದಲ್ಲಿ ನಡೆಯ ಬಹುದಾದ ವಂಚನೆಗಳನ್ನು ಹೇಗೆ ತಪ್ಪಿಸಬಹುದು ಎಂಬುದಕ್ಕೆ ವಿಧಾನಪರಿಷತ್…
ಮೈಸೂರು : ಪ್ರವಾಸಿಗರ ದಂಡೇ ನೆರೆಯುತ್ತಿದ್ದ ಸ್ಥಳದಲ್ಲೇ ಹೀಲಿಯಂ ಬಲೂನ್‌ಗಾಗಿ ಬಳಸುತ್ತಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ,…
ಕೆ.ಆರ್.ಪೇಟೆ : ರಸ್ತೆಯಲ್ಲಿ ರಾಗಿ ಒಕ್ಕಣೆ ಮಾಡುತ್ತಿದ್ದ ಸಂದರ್ಭದಲ್ಲಿ ರಾಗಿಯ ಮೇಲೆ ಕಾರು ಚಲಿಸಿದಾಗ ಕಾರು ಮಗುಚಿ ಬಿದ್ದ ಪರಿಣಾಮ…
ಮೈಸೂರು : ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ವಿಜಯನಗರದ ಕೊಡವ…
ಮೈಸೂರು : ಮೈಸೂರು ಜಿಲ್ಲೆಯಾದ್ಯಂತ ಕ್ರೈಸ್ತ ಭಾಂದವರು ಕ್ರಿಸ್‌ಮಸ್ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿದರು. ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ನಗರದ ಐತಿಹಾಸಿಕ…
ಕೆ.ಆರ್.ಪೇಟೆ : ತಾಲ್ಲೂಕಿನ ತೆಂಡೇಕೆರೆ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಿ.ಎಸ್.ರಾಜು ಅವರು ತಮ್ಮ ಒಂದು ತಿಂಗಳ ವೇತನದಲ್ಲಿ…