ಮನೆಮನೆಯಲ್ಲೂ ಘಮ ಘಮಿಸಲಿವೆ ಕಕ್ಕಡದ ವಿಶೇಷ ಖಾದ್ಯಗಳು
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಇಂದು ಕಕ್ಕಡ ೧೮ರ ಸಂಭ್ರಮ ಮನೆ ಮಾಡಿದ್ದು, ಮನೆಮನೆಯಲ್ಲೂ ಕಕ್ಕಡದ ವಿಶೇಷ ಖಾದ್ಯಗಳು ಘಮಘಮಿಸಲಿವೆ.
ಆಟಿ ಅಥವಾ ಕಕ್ಕಡ ಆಚರಣೆಯ ೧೮ನೇ ದಿನ ಅಂದರೆ ಆ.೩ರಂದು ೧೮ ಔಷಧಿಯ ಗುಣಗಳನ್ನು ಹೊಂದಿರುವ ಮದ್ದು ಸೊಪ್ಪಿನ ಪಾಯಸ ಅಥವಾ ರುಚಿ ರುಚಿಯಾದ ವಿವಿಧ ಖಾದ್ಯಗಳನ್ನು ತಯಾರಿಸಿ ಸೇವಿಸುವುದು ಈ ಆಚರಣೆಯ ವಿಶೇಷ.ಕೊಡಗು ಜಿಲ್ಲೆಯಲ್ಲಿ ಕಕ್ಕಡ ೧೮ ಒಂದು ಸಾಂಪ್ರದಾಯಿಕ ಮತ್ತು ಪ್ರಕೃತಿಗೆ ಹತ್ತಿರವಾಗಿರುವ ವಿಶಿಷ್ಟ ಆಚರಣೆಯಾಗಿದೆ.
ಹಸಿರು ಕಾನನದ ಗೂಡಾದ ಕೊಡಗಿನಲ್ಲಿ ಔಷಽಯ ಗುಣಗಳನ್ನು ಹೊಂದಿರುವ ಹಸಿರ ಗಿಡಗಳಿಗೇನೂ ಕೊರತೆ ಇಲ್ಲ. ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಯಥೇ ಚ್ಛವಾಗಿ ಸಿಗುವ ಮರ ಕೆಸ, ಕಣಿಲೆ, ಅಣಬೆ, ಮದ್ದು ಸೊಪ್ಪಿನಂತಹ ಔಷಧಿಯ ಗುಣಗಳುಳ್ಳ, ನಿಸರ್ಗದತ್ತ ವಾದ ಅಧಿಕ ನಾರಿನಂಶವುಳ್ಳ ತರಕಾರಿ ಬೆಳೆಗಳಿಂದ ತಯಾರಿಸಲ್ಪಟ್ಟ ರುಚಿರುಚಿಯಾದ ಖಾದ್ಯಗಳು ಮಳೆ,ಚಳಿ, ಗಾಳಿಯಿಂದ ಮಾನವನ ದೇಹವನ್ನು ರಕ್ಷಿಸಿ ಬೆಚ್ಚಗಿಡಲು ಸಹಕಾರಿಯಾಗಿವೆ. ಇದು ಇಲ್ಲಿನ ಹಿರಿಯರು ನಡೆಸಿಕೊಂಡು ಬಂದಿರುವ ಆಚರಣೆ. ನಾಟಿ ಕೋಳಿ, ಏಡಿ, ಹೊಳೆ ಮೀನು ಕೂಡ ಕಕ್ಕಡ ತಿಂಗಳಿನಲ್ಲಿ ಮಾಂಸಾ ಹಾರಿಗಳ ಹೊಟ್ಟೆಯನ್ನು ಸೇರಿ ದೇಹವನ್ನು ಬೆಚ್ಚಗಿಡಲು ಹಾಗೂ ಆರೋಗ್ಯವರ್ಧಕವಾಗಿ ಕೆಲಸ ಮಾಡಲು ಸಹಕಾರಿಯಾಗಿವೆ. ಕೃಷಿ ಚಟುವಟಿಕೆಯಲ್ಲಿ ತೊಡಗುವ ಕೊಡಗಿನ ಕೃಷಿಕರು ಮಳೆ, ಚಳಿಗೆ ಮೈಯೊಡ್ಡಿ ದುಡಿಯುತ್ತಾರೆ. ಇದೇ ಕಾರಣಕ್ಕೆ ದೇಹವನ್ನು ಬೆಚ್ಚಗಿಡುವ, ಆರೋಗ್ಯಕರ ಖಾದ್ಯಗಳಿಗೆ ವಿಶೇಷ ಆದ್ಯತೆ ನೀಡುತ್ತಾರೆ.
ಈ ದಿನ ಮಾತ್ರ ಮದ್ದ್ ತೊಪ್ಪು ವಿಶೇಷವಾದ ಗಿಡವನ್ನು ಕಾಡಿನಿಂದ ಆರಿಸಿ ತರುತ್ತಾರೆ. ಕಕ್ಕಡ ೧೮ರಂದು ಇದರಿಂದ ೧೮ ವಿಧದ ಔಷಧ ಗುಣಗಳಿರುತ್ತವೆ ಎನ್ನುವುದು ಪ್ರತೀತಿ. ಇದು ಆರೋಗ್ಯಕ್ಕೆ ಪೂರಕವಾದುದು ಹಾಗೂ ಹಲವು ರೋಗ ಗಳನ್ನು ಗುಣಪಡಿಸುವ ಶಕ್ತಿ ಹೊಂದಿದೆ ಎನ್ನಲಾ ಗುತ್ತದೆ. ಪಶ್ಚಿಮಘಟ್ಟದ ಕಾಡುಗಳಲ್ಲಿ ಬೆಳೆ ಯುವ ಚಿಕ್ಕ ಬಳ್ಳಿಯಂತಹ ಒಂದು ವರ್ಗದ ಸಸ್ಯವನ್ನು ಕೊಡಗಿನ ಜನ ಮದ್ದು ಸೊಪ್ಪು ಎಂದು ಸೇವಿಸುತ್ತಾರೆ. ಸುಮಾರು ೮-೧೦ ಅಡಿ ಎತ್ತರಕ್ಕೆ ಈ ಗಿಡ ಬೆಳೆಯುತ್ತದೆ. ಹಿಂದೆ ಕಾಡಿನಲ್ಲಿ ಯಥೇಚ್ಛವಾಗಿ ಕಾಣಸಿ ಗುತ್ತಿದ್ದ ಈ ಗಿಡ ಇಂದು ಕಡಿಮೆಯಾಗಿದೆ. ಸಾಕಷ್ಟು ಜನರು ತಮ್ಮ ಮನೆಯ ಸುತ್ತಮುತ್ತಲೇ ಇಂದಿಗೂ ಈ ಗಿಡಗಳನ್ನು ಬೆಳೆಸಿಕೊಂಡು ಬರುತ್ತಿದ್ದಾರೆ. ಕಕ್ಕಡ ೧೮ ಆಚರಣೆ ಹತ್ತಿರ ಬರುತ್ತಿದ್ದಂತೆ ಒಂದು ರೀತಿಯ ವಿಶೇಷವಾದ ಸುವಾಸನೆ ಈ ಗಿಡದಿಂದ ಬರಲು ಆರಂಭವಾಗುತ್ತದೆ. ಇದರಿಂದ ಇದನ್ನು ಸುಲಭವಾಗಿ ಹುಡುಕಿ ತರಬಹುದು. ೧೮ರ ನಂತರ ಇದರ ಸುವಾಸನೆ ಹಾಗೂ ಔಷಧ ಗುಣಗಳು ಕಡಿಮೆಯಾಗುತ್ತಾ ಹೋಗುತ್ತದೆ ಎನ್ನುವ ನಂಬಿಕೆ ಇದೆ.
ಕಾಡಿನಿಂದ ತಂದ ಸೊಪ್ಪನ್ನು ಒಂದು ದಿನ ಮುನ್ನ ಜಜ್ಜಿ ನೀರಿನಲ್ಲಿ ನೆನೆ ಹಾಕುತ್ತಾರೆ. ಇಲ್ಲವೇ ಆ ಸೊಪ್ಪನ್ನು ಬೇಯಿಸಿ ಅದರ ರಸವನ್ನು ತೆಗೆಯುತ್ತಾರೆ. ಈ ನೀರಿನಲ್ಲಿ ಅಕ್ಕಿ ಪಾಯಸ, ವಿವಿಧ ಬಗೆಯ ತಿಂಡಿಗಳನ್ನು ಮಾಡಿ ಸೇವಿಸುತ್ತಾರೆ. ಇದರಿಂದ ನಮ್ಮ ದೇಹದಲ್ಲಿರುವ ಕಲ್ಮಶಗಳು ಹೊರ ಹೋಗುತ್ತವೆಯಲ್ಲದೆ ಹಲವು ಬಗೆಯ ರೋಗಗಳಿಗೆ ಔಷಧವಾಗಿದೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಕೊಡಗಿನಲ್ಲಿ ಬಹುತೇಕ ಮಂದಿ ಕಕ್ಕಡ ೧೮ರಂದು ಇದನ್ನು ಸೇವಿಸುತ್ತಾರೆ.
” ಮಾತೃಭೂಮಿ, ಜಲದೇವಿ, ವನದೇವಿ, ಕೃಷಿ ಪದ್ಧತಿ, ಯೋಧ ಪರಂಪರೆಯೊಂದಿಗೆ ಬೆಸೆದುಕೊಂಡಿರುವ ಕೊಡವರ ಜಾನಪದೀಯ ಧಾರ್ಮಿಕ ಮತ್ತು ಪ್ರಾಕೃತಿಕ ಆಚರಣೆಗಳಲ್ಲಿ ಕಕ್ಕಡ-೧೮ ಕೂಡ ಒಂದಾಗಿದೆ. ನಾಟಿ ಮತ್ತಿತರ ಕೃಷಿ ಕಾರ್ಯದ ಮೂಲಕ ಭೂದೇವಿಗೆ ನಮಿಸುವ ಕೊಡವ ರೈತರು ಪ್ರಕೃತಿದತ್ತವಾಗಿ ದೊರೆಯುವ ೧೮ ವಿವಿಧ ಔಷಧಿಯ ಗುಣ ಹೊಂದಿರುವ ಮದ್ದು ಸೊಪ್ಪಿನಿಂದ ತಯಾರಿಸಿದ ಪಾಯಸ, ಮದ್ದುಪುಟ್ ಸೇರಿದಂತೆ ವಿವಿಧ ಖಾದ್ಯಗಳನ್ನು ಸವಿಯುತ್ತಾರೆ. ಇದು ದೇಹದ ಆರೋಗ್ಯವನ್ನು ಕಾಪಾಡುತ್ತದೆ, ಅಲ್ಲದೆ ಪ್ರಕೃತಿಗೆ ಪೂರಕವಾಗಿ ಹೊಂದಿಕೊಳ್ಳಲು ಸಹಾಯ ಮಾಡುತ್ತದೆ.”
-ಎನ್.ಯು.ನಾಚಪ್ಪ, ಸಿಎನ್‌ಸಿ ಅಧ್ಯಕ್ಷ
ಹೊಸದಿಲ್ಲಿ : ಮಹತ್ವದ ಬೆಳವಣಿಗೆಯಲ್ಲಿ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಹೊಸ ನಿಯಮಗಳಿಗೆ ಸರ್ವೋಚ್ಚ ನ್ಯಾಯಾಲಯ ತಡೆ ನೀಡಿದೆ. ವಿಶ್ವವಿದ್ಯಾಲಯ…
ಬೆಂಗಳೂರು : ಹಬ್ಬ-ಹರಿದಿನಗಳನ್ನೂ ಲೆಕ್ಕಿಸದೆ ಜನರಿಗಾಗಿ ದುಡಿಯುವ ಪೊಲೀಸರಿಗೆ ಕರ್ನಾಟಕ ಪೊಲೀಸ್ ಇಲಾಖೆ ಸಿಹಿಸುದ್ದಿ ನೀಡಿದ್ದು, ಜನ್ಮದಿನ ಮತ್ತು ವಿವಾಹ…
ಹೊಸದಿಲ್ಲಿ : ನಿರ್ಣಾಯಕ ಅಪರೂಪದ ಖನಿಜಗಳು, ಇವಿ ಚಲನಶೀಲತೆ, ಉತ್ಪಾದನೆ ಮತ್ತು ಸುಸ್ಥಿರ ಕೈಗಾರಿಕಾ ಅಭಿವೃದ್ಧಿ ಕ್ಷೇತ್ರಗಳಲ್ಲಿನ ಸಹಕಾರವನ್ನು ಬಲಪಡಿಸಲು…
ಮೈಸೂರು : ಮುಡಾ ಹಗರಣದಲ್ಲಿ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ, ಪತ್ನಿ ಪಾರ್ವತಿ ಮತ್ತು ಇತರರ ಮೇಲೆ ಬಿ ರಿಪೋರ್ಟ್…
ಬೆಂಗಳೂರು: ಇಂಧನ ಇಲಾಖೆಯಲ್ಲಿ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಹಸ್ತಕ್ಷೇಪಕ್ಕೆ ಬೇಸತ್ತು ಇಂಧನ ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆ ನೀಡಿದ್ದರು ಎಂಬ…
ಬೆಂಗಳೂರು: ವಿಕಲಚೇತನರಿಗಾಗಿಯೇ ಮುಂದಿನ ಮೂರು ತಿಂಗಳಲ್ಲಿ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗುವುದು ಎಂದು ಸಚಿವ ಡಾ.ಶರಣಪ್ರಕಾಶ್…