Andolana originals

8 ತಿಂಗಳ ನಂತರ ಎಚ್.ಡಿ ಕೋಟೆಗೆ ಕಬಿನಿ ನೀರು ಪೂರೈಕೆ

ಸೆಪ್ಟೆಂಬರ್‌ನಲ್ಲಿ ‘ಆಂದೋಲನ’ ದಿನಪತ್ರಿಕೆಯಲ್ಲಿ ಪ್ರಕಟವಾಗಿದ್ದ ವರದಿ; ೨೫ ಲಕ್ಷ ರೂ. ವೆಚ ದಲ್ಲಿ ಹೊಸ ಪೈಪ್‌ಲೈನ್ ಕಾಮಗಾರಿ ಪೂರ್ಣ

 

ಎಚ್. ಡಿ. ಕೋಟೆ: ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಮುಸುಕಿನ ಗುದ್ದಾಟದಿಂದ ೮ ತಿಂಗಳುಗಳಿಂದ ಸ್ಥಗಿತ ಗೊಂಡಿದ್ದ ಕಬಿನಿ ಕುಡಿಯುವ ನೀರನ್ನು ಪುರಸಭೆ ವ್ಯಾಪ್ತಿಯ ಜನಸಾಮಾನ್ಯರಿಗೆ ಈಗ ಒದಗಿಸಲು ಅಧಿಕಾರಿಗಳು ಮುಂದಾಗಿದ್ದಾರೆ.

ಪಟ್ಟಣದ ನಿವಾಸಿಗಳಿಗೆ ಹಲವು ತಿಂಗಳುಗಳಿಂದ ಕಬಿನಿ ನೀರು ಲಭ್ಯವಿಲ್ಲದೆ ಜನತೆ ಉಪ್ಪು ಮತ್ತು ಅನೇಕ ಲವಣಗಳ ಮಿಶ್ರಿತ, ಆರೋಗ್ಯಕ್ಕೆ ಹಾನಿಕರ ವಾಗುವ ಬೋರ್‌ವೆಲ್ ನೀರನ್ನು ಉಪಯೋಗಿಸುವ ಅನಿವಾರ್ಯತೆ ಎದುರಾಗಿತ್ತು.

ಪಟ್ಟಣದ ಜನತೆಗೆ ಶುದ್ಧ ಕುಡಿಯುವ ನೀರು ಒದಗಿಸುವ ಸಲುವಾಗಿ ಎಂ. ಶಿವಣ್ಣ ಸಚಿವರಾಗಿದ್ದ ಸಂದರ್ಭದಲ್ಲಿ ೬ ಕೋಟಿ ರೂ. ವೆಚ್ಚದಲ್ಲಿ ಕಬಿನಿ ಕುಡಿಯುವ ನೀರು ಯೋಜನೆ ರೂಪಿಸಲಾಗಿತ್ತು. ೮ ತಿಂಗಳ ಹಿಂದೆ ಬೊಪ್ಪನಹಳ್ಳಿ ಕೆರೆ ಬಳಿ ಪೈಪ್‌ಲೈನ್ ಹಾಳಾಗಿ ಪಟ್ಟಣದ ಪುರಸಭೆ ವ್ಯಾಪ್ತಿಯ ವಾರ್ಡಿನ ನಿವಾಸಿಗಳಿಗೆ ಕಬಿನಿ ಕುಡಿಯುವ ಶುದ್ಧ ನೀರು ಇಲ್ಲದೆ ಸಮಸ್ಯೆ ಎದುರಾಗಿತ್ತು.

ಕಳೆದ ಸೆಪ್ಟೆಂಬರ್ ೨೪ರಂದು ‘ಆಂದೋಲನ’ ದಿನಪತ್ರಿಕೆ ಮುಖಪುಟದಲ್ಲಿ ‘ಕಬಿನಿ ದಡದಲ್ಲಿದ್ದರೂ ೨ ತಿಂಗಳಿಂದ ಕುಡಿಯುವ ನೀರಿಲ್ಲ’ ಎಂಬ ಶೀರ್ಷಿಕೆಯಡಿ ಕಬಿನಿ ಕುಡಿಯುವ ನೀರಿನ ಸಮಸ್ಯೆ ಮತ್ತು ದುರಸ್ತಿ ಕಾಮಗಾರಿ ವಿಚಾರವಾಗಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಜಟಾಪಟಿ ಬಗ್ಗೆ ವರದಿ ಪ್ರಕಟಿಸಿದ್ದು, ಇದನ್ನು ಗಮನಿಸಿದ್ದ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಅವರು, ಪಿ. ಡಿ. ಶುಭ, ಎಸಿ ವಿಜಯ ಕುಮಾರ್, ಪುರಸಭೆ ಸಿಒ ಸುರೇಶ್ ಅವರೊಡನೆ ಸಭೆ ನಡೆಸಿ, ಪುರಸಭೆಯ ಕೆಲ ಸದಸ್ಯರ ಆಕ್ಷೇಪವನ್ನು ತಿರಸ್ಕರಿಸಿ ಪುರಸಭೆಯಲ್ಲಿರುವ ಅನುದಾನದಲ್ಲಿ ೨೫ ಲಕ್ಷ ರೂ. ವೆಚ್ಚದಲ್ಲಿ ಹೊಸ ಪೈಪ್‌ಲೈನ್ ಕಾಮಗಾರಿ ನಡೆಸಿ ಶುದ್ಧ ನೀರು ಸರಬರಾಜು ಮಾಡುವಂತೆ ಸೂಚಿಸಿದರು.

೩೫೦ ಮೀಟರ್ ಉದ್ದ ಹೊಸ ಕಬ್ಬಿಣದ ಪೈಪ್‌ಲೈನ್ ಕಾಮಗಾರಿಯನ್ನು ಗುತ್ತಿಗೆ ಪಡೆದ ಗುತ್ತಿಗೆದಾರರು ನಿರ್ವಹಿಸಿದ್ದಾರೆ. ಪುರಸಭೆ ಮುಖ್ಯಾಧಿಕಾರಿ ಸುರೇಶ್ ಮತ್ತು ರಮೇಶ್, ರಾಮಸ್ವಾಮಿ, ಮತ್ತಿತರ ಸಿಬ್ಬಂದಿ ಪರಿಶೀಲಿಸಿ ಹ್ಯಾಂಡ್ ಪೋಸ್ಟಿನಲ್ಲಿರುವ ಕಬಿನಿ ಶುದ್ಧ ನೀರಿನ ಘಟಕಕ್ಕೆ ನೀರು ಸರಬರಾಜು ಮಾಡಿಸಿ, ಘಟಕವನ್ನು ಸ್ವಚ್ಛ ಗೊಳಿಸಿ ಪರಿಶೀಲಿಸಿ ಪಟ್ಟಣದ ಜನತೆಗೆ ಶುಕ್ರವಾರ ದಿಂದ ಕಬಿನಿ ಕುಡಿಯುವ ಶುದ್ಧ ನೀರನ್ನು ಒದಗಿಸು ತ್ತಿದ್ದಾರೆ.

ಕಬಿನಿ ಶುದ್ಧ ಕುಡಿಯುವ ನೀರನ್ನು ಪುರಸಭೆ ವ್ಯಾಪ್ತಿಯಲ್ಲಿ ಈಗ ಪೂರೈಸಲಾಗುತ್ತಿದೆ. ೮ ತಿಂಗಳುಗಳ ಹಿಂದೆ ಕಬಿನಿ ನದಿಯಿಂದ ನೀರು ಸರಬರಾಜಾಗುವ ಕಬ್ಬಿಣದ ಪೈಪ್ ಲೈನ್ ಒಡೆದು ಹೋಗಿತ್ತು. ಪುರಸಭೆಯ ಅನುದಾನದಲ್ಲಿ ಇದರ ದುರಸ್ತಿ ಕಾರ್ಯ ನಡೆಸಲು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ದುರಸ್ತಿ ಕೆಲಸ ನಡೆದಿರಲಿಲ್ಲ. ಸೆಪ್ಟೆಂಬರ್ ತಿಂಗಳಿನಲ್ಲಿ ‘ಆಂದೋಲನ’ ದಿನಪತ್ರಿಕೆಯಲ್ಲಿ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ಮೇಲಽಕಾರಿಗಳು ಪುರಸಭೆ ಅನುದಾನದಲ್ಲಿ ಕಾಮಗಾರಿ ನಡೆಸಲು ಕ್ರಮ ಕೈಗೊಂಡು ಐದಾರು ತಿಂಗಳ ನಂತರ ಕೆಲಸ ಪೂರ್ಣಗೊಳಿಸಿದ್ದಾರೆ. ಕಬಿನಿ ನೀರು ಸರಬರಾಜಿಲ್ಲದೆ ಪಟ್ಟಣದಲ್ಲಿ ಅನೇಕ ಸಮಸ್ಯೆಗಳು ಎದುರಾಗಿದ್ದವು. ಹೀಗಾಗಿ ಪುರಸಭೆ ವ್ಯಾಪ್ತಿಯಲ್ಲಿರುವ ೫೮ ಬೋರ್‌ವೆಲ್‌ಗಳ ಮೂಲಕ ಸಮರ್ಪಕವಾಗಿ ನೀರು ಒದಗಿಸಲಾಗಿತ್ತು. ಇನ್ನೂ ಕೆಲವೆಡೆ ಸಮಸ್ಯೆ ಎದುರಾದ ತಕ್ಷಣ ಟ್ಯಾಂಕರ್ ಮೂಲಕ ಸಾರ್ವಜನಿಕರಿಗೆ ನೀರು ಪೂರೈಸಲಾಗಿದೆ. ಈಗ ಕಬಿನಿ ನೀರನ್ನು ಪುರಸಭೆ ವ್ಯಾಪ್ತಿಯಲ್ಲಿ ಪೂರೈಕೆ ಮಾಡುತ್ತಿರುವುದು ಸಂತಸ ತಂದಿದೆ. -ಸುರೇಶ್, ಮುಖ್ಯಾಧಿಕಾರಿ, ಪುರಸಭೆ

ಕಳೆದ ಏಳೆಂಟು ತಿಂಗಳುಗಳಿಂದ ಮನೆಗಳಿಗೆ ಕಬಿನಿ ನೀರು ಪೂರೈಕೆಯಾಗದೆ ಇಲ್ಲಿನ ನಿವಾಸಿಗಳು ಪುರಸಭೆ ಕಚೇರಿ ಬಳಿ ಪ್ರತಿಭಟನೆ ಮಾಡಿದ್ದರು. ಈಗ ಪೈಪ್‌ಲೈನ್ ದುರಸ್ತಿಯಾಗಿ ಮನೆಗಳಿಗೆ ನೀರು ಪೂರೈಕೆಯಾಗುತ್ತಿರುವುದು ಸಂತಸ ತಂದಿದೆ. -ಲಾರಿ ಪ್ರಕಾಶ್, ಪಟ್ಟಣದ ನಿವಾಸಿ

ಆಂದೋಲನ ಡೆಸ್ಕ್

Recent Posts

ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಲು ಯತ್ನಿಸಿದ್ದರು: ಸಿಎಂ ಡಿಕೆಶಿ ಬಾಂಬ್

ಬೆಂಗಳೂರು: ತಮ್ಮ ವಿರುದ್ಧವೂ ಸ್ಟಿಂಗ್ ಆಪರೇಷನ್ ನಡೆಸಲು ಸಂಚು ರೂಪಿಸಲಾಗಿತ್ತು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.…

6 hours ago

ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಶಾಕ್!

ನವದೆಹಲಿ: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೊಂದು ಹಿನ್ನಡೆಯಾಗಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ…

7 hours ago

ಎಸ್‌ಐಆರ್‌ ವಿರುದ್ಧ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

ಬೆಂಗಳೂರು: ದೇಶಾದ್ಯಂತ ತೀವ್ರ ವಿವಾದ ಸೃಷ್ಟಿಸಿರುವ ಮತದಾರರ ಪಟ್ಟಿ ಪರಿಷ್ಕರಣೆ(ಎಸ್‍ಐಆರ್) ಸಂಬಂಧ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‍ಕುಮಾರ್ ವಜಾ ಮತ್ತು…

8 hours ago

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌ಗೆ ಮತ್ತೆ ಶಾಕ್‌

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ಗೆ ಕಾನೂನು ಸಂಕಷ್ಟಗಳು ಮತ್ತಷ್ಟು ಬಿಗಿಯಾಗುತ್ತಿವೆ.…

8 hours ago

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ: 75ನೇ ವಯಸ್ಸಿನಲ್ಲಿ ನಿಧನ

ಮುಂಬೈ: ಬಾಲಿವುಡ್ ಚಿತ್ರರಂಗಕ್ಕೆ ಆಘಾತಕಾರಿ ಸುದ್ದಿ. ಹಿರಿಯ ನಟ ನಾನಾ ಪಾಟೇಕರ್ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಗೋವಾದ…

11 hours ago

ಓದುಗರ ಪತ್ರ: ಪಿಎಚ್‌ಸಿಗಳಲ್ಲಿ ಬಿಪಿ, ಶುಗರ್ ಮಾತ್ರೆಗಳು ಸಿಗುವಂತೆ ಕ್ರಮ ಕೈಗೊಳ್ಳಿ

ಮೈಸೂರು ಜಿ ಎಚ್.ಡಿ.ಕೋಟೆ ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಶುಗರ್ ಮತ್ತು ಬಿಪಿಗೆ ಹಾಗೂ ಇತರೆ ಕಾಯಿಲೆಗಳಿಗೆ ಸಂಬಂಧಪಟ್ಟ…

12 hours ago