ಸೆಪ್ಟೆಂಬರ್‌ನಲ್ಲಿ ‘ಆಂದೋಲನ’ ದಿನಪತ್ರಿಕೆಯಲ್ಲಿ ಪ್ರಕಟವಾಗಿದ್ದ ವರದಿ; ೨೫ ಲಕ್ಷ ರೂ. ವೆಚ ದಲ್ಲಿ ಹೊಸ ಪೈಪ್‌ಲೈನ್ ಕಾಮಗಾರಿ ಪೂರ್ಣ
ಎಚ್. ಡಿ. ಕೋಟೆ: ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಮುಸುಕಿನ ಗುದ್ದಾಟದಿಂದ ೮ ತಿಂಗಳುಗಳಿಂದ ಸ್ಥಗಿತ ಗೊಂಡಿದ್ದ ಕಬಿನಿ ಕುಡಿಯುವ ನೀರನ್ನು ಪುರಸಭೆ ವ್ಯಾಪ್ತಿಯ ಜನಸಾಮಾನ್ಯರಿಗೆ ಈಗ ಒದಗಿಸಲು ಅಧಿಕಾರಿಗಳು ಮುಂದಾಗಿದ್ದಾರೆ.
ಪಟ್ಟಣದ ನಿವಾಸಿಗಳಿಗೆ ಹಲವು ತಿಂಗಳುಗಳಿಂದ ಕಬಿನಿ ನೀರು ಲಭ್ಯವಿಲ್ಲದೆ ಜನತೆ ಉಪ್ಪು ಮತ್ತು ಅನೇಕ ಲವಣಗಳ ಮಿಶ್ರಿತ, ಆರೋಗ್ಯಕ್ಕೆ ಹಾನಿಕರ ವಾಗುವ ಬೋರ್‌ವೆಲ್ ನೀರನ್ನು ಉಪಯೋಗಿಸುವ ಅನಿವಾರ್ಯತೆ ಎದುರಾಗಿತ್ತು.
ಪಟ್ಟಣದ ಜನತೆಗೆ ಶುದ್ಧ ಕುಡಿಯುವ ನೀರು ಒದಗಿಸುವ ಸಲುವಾಗಿ ಎಂ. ಶಿವಣ್ಣ ಸಚಿವರಾಗಿದ್ದ ಸಂದರ್ಭದಲ್ಲಿ ೬ ಕೋಟಿ ರೂ. ವೆಚ್ಚದಲ್ಲಿ ಕಬಿನಿ ಕುಡಿಯುವ ನೀರು ಯೋಜನೆ ರೂಪಿಸಲಾಗಿತ್ತು. ೮ ತಿಂಗಳ ಹಿಂದೆ ಬೊಪ್ಪನಹಳ್ಳಿ ಕೆರೆ ಬಳಿ ಪೈಪ್‌ಲೈನ್ ಹಾಳಾಗಿ ಪಟ್ಟಣದ ಪುರಸಭೆ ವ್ಯಾಪ್ತಿಯ ವಾರ್ಡಿನ ನಿವಾಸಿಗಳಿಗೆ ಕಬಿನಿ ಕುಡಿಯುವ ಶುದ್ಧ ನೀರು ಇಲ್ಲದೆ ಸಮಸ್ಯೆ ಎದುರಾಗಿತ್ತು.
ಕಳೆದ ಸೆಪ್ಟೆಂಬರ್ ೨೪ರಂದು ‘ಆಂದೋಲನ’ ದಿನಪತ್ರಿಕೆ ಮುಖಪುಟದಲ್ಲಿ ‘ಕಬಿನಿ ದಡದಲ್ಲಿದ್ದರೂ ೨ ತಿಂಗಳಿಂದ ಕುಡಿಯುವ ನೀರಿಲ್ಲ’ ಎಂಬ ಶೀರ್ಷಿಕೆಯಡಿ ಕಬಿನಿ ಕುಡಿಯುವ ನೀರಿನ ಸಮಸ್ಯೆ ಮತ್ತು ದುರಸ್ತಿ ಕಾಮಗಾರಿ ವಿಚಾರವಾಗಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಜಟಾಪಟಿ ಬಗ್ಗೆ ವರದಿ ಪ್ರಕಟಿಸಿದ್ದು, ಇದನ್ನು ಗಮನಿಸಿದ್ದ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಅವರು, ಪಿ. ಡಿ. ಶುಭ, ಎಸಿ ವಿಜಯ ಕುಮಾರ್, ಪುರಸಭೆ ಸಿಒ ಸುರೇಶ್ ಅವರೊಡನೆ ಸಭೆ ನಡೆಸಿ, ಪುರಸಭೆಯ ಕೆಲ ಸದಸ್ಯರ ಆಕ್ಷೇಪವನ್ನು ತಿರಸ್ಕರಿಸಿ ಪುರಸಭೆಯಲ್ಲಿರುವ ಅನುದಾನದಲ್ಲಿ ೨೫ ಲಕ್ಷ ರೂ. ವೆಚ್ಚದಲ್ಲಿ ಹೊಸ ಪೈಪ್‌ಲೈನ್ ಕಾಮಗಾರಿ ನಡೆಸಿ ಶುದ್ಧ ನೀರು ಸರಬರಾಜು ಮಾಡುವಂತೆ ಸೂಚಿಸಿದರು.
೩೫೦ ಮೀಟರ್ ಉದ್ದ ಹೊಸ ಕಬ್ಬಿಣದ ಪೈಪ್‌ಲೈನ್ ಕಾಮಗಾರಿಯನ್ನು ಗುತ್ತಿಗೆ ಪಡೆದ ಗುತ್ತಿಗೆದಾರರು ನಿರ್ವಹಿಸಿದ್ದಾರೆ. ಪುರಸಭೆ ಮುಖ್ಯಾಧಿಕಾರಿ ಸುರೇಶ್ ಮತ್ತು ರಮೇಶ್, ರಾಮಸ್ವಾಮಿ, ಮತ್ತಿತರ ಸಿಬ್ಬಂದಿ ಪರಿಶೀಲಿಸಿ ಹ್ಯಾಂಡ್ ಪೋಸ್ಟಿನಲ್ಲಿರುವ ಕಬಿನಿ ಶುದ್ಧ ನೀರಿನ ಘಟಕಕ್ಕೆ ನೀರು ಸರಬರಾಜು ಮಾಡಿಸಿ, ಘಟಕವನ್ನು ಸ್ವಚ್ಛ ಗೊಳಿಸಿ ಪರಿಶೀಲಿಸಿ ಪಟ್ಟಣದ ಜನತೆಗೆ ಶುಕ್ರವಾರ ದಿಂದ ಕಬಿನಿ ಕುಡಿಯುವ ಶುದ್ಧ ನೀರನ್ನು ಒದಗಿಸು ತ್ತಿದ್ದಾರೆ.
ಕಬಿನಿ ಶುದ್ಧ ಕುಡಿಯುವ ನೀರನ್ನು ಪುರಸಭೆ ವ್ಯಾಪ್ತಿಯಲ್ಲಿ ಈಗ ಪೂರೈಸಲಾಗುತ್ತಿದೆ. ೮ ತಿಂಗಳುಗಳ ಹಿಂದೆ ಕಬಿನಿ ನದಿಯಿಂದ ನೀರು ಸರಬರಾಜಾಗುವ ಕಬ್ಬಿಣದ ಪೈಪ್ ಲೈನ್ ಒಡೆದು ಹೋಗಿತ್ತು. ಪುರಸಭೆಯ ಅನುದಾನದಲ್ಲಿ ಇದರ ದುರಸ್ತಿ ಕಾರ್ಯ ನಡೆಸಲು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ದುರಸ್ತಿ ಕೆಲಸ ನಡೆದಿರಲಿಲ್ಲ. ಸೆಪ್ಟೆಂಬರ್ ತಿಂಗಳಿನಲ್ಲಿ ‘ಆಂದೋಲನ’ ದಿನಪತ್ರಿಕೆಯಲ್ಲಿ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ಮೇಲಽಕಾರಿಗಳು ಪುರಸಭೆ ಅನುದಾನದಲ್ಲಿ ಕಾಮಗಾರಿ ನಡೆಸಲು ಕ್ರಮ ಕೈಗೊಂಡು ಐದಾರು ತಿಂಗಳ ನಂತರ ಕೆಲಸ ಪೂರ್ಣಗೊಳಿಸಿದ್ದಾರೆ. ಕಬಿನಿ ನೀರು ಸರಬರಾಜಿಲ್ಲದೆ ಪಟ್ಟಣದಲ್ಲಿ ಅನೇಕ ಸಮಸ್ಯೆಗಳು ಎದುರಾಗಿದ್ದವು. ಹೀಗಾಗಿ ಪುರಸಭೆ ವ್ಯಾಪ್ತಿಯಲ್ಲಿರುವ ೫೮ ಬೋರ್‌ವೆಲ್‌ಗಳ ಮೂಲಕ ಸಮರ್ಪಕವಾಗಿ ನೀರು ಒದಗಿಸಲಾಗಿತ್ತು. ಇನ್ನೂ ಕೆಲವೆಡೆ ಸಮಸ್ಯೆ ಎದುರಾದ ತಕ್ಷಣ ಟ್ಯಾಂಕರ್ ಮೂಲಕ ಸಾರ್ವಜನಿಕರಿಗೆ ನೀರು ಪೂರೈಸಲಾಗಿದೆ. ಈಗ ಕಬಿನಿ ನೀರನ್ನು ಪುರಸಭೆ ವ್ಯಾಪ್ತಿಯಲ್ಲಿ ಪೂರೈಕೆ ಮಾಡುತ್ತಿರುವುದು ಸಂತಸ ತಂದಿದೆ. -ಸುರೇಶ್, ಮುಖ್ಯಾಧಿಕಾರಿ, ಪುರಸಭೆ
ಕಳೆದ ಏಳೆಂಟು ತಿಂಗಳುಗಳಿಂದ ಮನೆಗಳಿಗೆ ಕಬಿನಿ ನೀರು ಪೂರೈಕೆಯಾಗದೆ ಇಲ್ಲಿನ ನಿವಾಸಿಗಳು ಪುರಸಭೆ ಕಚೇರಿ ಬಳಿ ಪ್ರತಿಭಟನೆ ಮಾಡಿದ್ದರು. ಈಗ ಪೈಪ್‌ಲೈನ್ ದುರಸ್ತಿಯಾಗಿ ಮನೆಗಳಿಗೆ ನೀರು ಪೂರೈಕೆಯಾಗುತ್ತಿರುವುದು ಸಂತಸ ತಂದಿದೆ. -ಲಾರಿ ಪ್ರಕಾಶ್, ಪಟ್ಟಣದ ನಿವಾಸಿ
ಯಾವುದೋ ಒಂದು ಹಕ್ಕು ಹೆಚ್ಚಿನ ಆದ್ಯತೆ ಹೊಂದಲು ಸಾಧ್ಯವೇ? ಕೆಲವು ಹಕ್ಕುಗಳು ಹೆಚ್ಚು ಮುಖ್ಯವಾಗುವವೇ? ಒಂದು ರೀತಿಯ ಹಕ್ಕಿನಿಂದ ಇನ್ನೊಂದು…
ಮನೆ ಮುಂಭಾಗ ತ್ಯಾಜ್ಯ ನೀರು ನಿಂತು ಗಬ್ಬುನಾರುತ್ತಿರುವ ಚರಂಡಿ ; ಸಾಂಕ್ರಾಮಿಕ ರೋಗ ಹರಡುವ ಭೀತಿ, ಚುನಾವಣೆ ಬಹಿಷ್ಕಾರಕ್ಕೆ ಸ್ಥಳೀಯರ…
ಚಾಮರಾಜನಗರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ತಾಲ್ಲೂಕಿನ ಅಂಗನವಾಡಿ ಕೇಂದ್ರಗಳಿಗೆ ಕೋಳಿಮೊಟ್ಟೆ ವಿತರಣೆಗಾಗಿ ನೀಡಲಾಗುವ ಅನುದಾನ ಕಳೆದ ೬ತಿಂಗಳಿಂದ…
ಗುತ್ತಲು ಕೆರೆ, ಕಾಳೇನಹಳ್ಳಿ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ ಭೇಟಿ ಮಂಡ್ಯ: ನಗರದ ಗುತ್ತಲು ಕೆರೆಗೆ ತ್ಯಾಜ್ಯ…
ಪ್ರಶಾಂತ್ ಎಸ್. ಆರು ತಿಂಗಳಿನಿಂದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತ ನೀರಿನ ಘಟಕ ನಿರ್ವಹಣೆ ಮಾಡುವಲ್ಲಿ ಕೆಎಸ್‌ಆರ್‌ಟಿಸಿ ವಿಫಲ…
ಗಿರೀಶ್ ಹುಣಸೂರು ಹೊಸ ವರ್ಷಾಚರಣೆ, ಕ್ರಿಸ್‌ಮಸ್ ರಜೆ ನಿರೀಕ್ಷೆಯಲ್ಲಿ ವ್ಯಾಪಾರಸ್ಥರು, ಉದ್ಯಮಿಗಳು ಮೈಸೂರು: ೨೦೨೫ನೇ ವರ್ಷಕ್ಕೆ ವಿದಾಯ ಹೇಳಿ, ೨೦೨೬ರ…