Andolana originals

ಗ್ರಾಮೀಣರನ್ನು ರಂಜಿಸಿದ ಜೀಪ್ಆಫ್ ರೋಡ್ ರ್ಯಾಲಿ

ಸೋಮವಾರಪೇಟೆ: ಟೀಮ್ ೧೨ ಆಫ್ ರೋಡರ್ಸ್ ವತಿಯಿಂದ ತಾಲ್ಲೂಕಿನ ಕೊತ್ನಳ್ಳಿ, ಕುಡಿಗಾಣ, ಬೆಂಕಳ್ಳಿ ಗ್ರಾಮಗಳ ಖಾಸಗಿ ಜಮೀನಿನಲ್ಲಿ ನಡೆದ ಜೀಪ್ ಆಫ್ ರೋಡ್ ರ‍್ಯಾಲಿ ಗ್ರಾಮೀಣ ಜನರನ್ನು ರಂಜಿಸಿತು.

ಕೊತ್ನಳ್ಳಿ ಗ್ರಾಮಸ್ಥರು ರ‍್ಯಾಲಿಗೆ ಚಾಲನೆ ನೀಡಿದರು. ಟ್ರ್ಯಾಕ್‌ನಲ್ಲಿ ಜೀಪ್ ತೆರಳುತ್ತಿದ್ದಂತೆ ಧಾರಾಕಾರ ಮಳೆ ಸುರಿಯಲು ಪ್ರಾರಂಭಿಸಿತು. ಕಡಿದಾದ ರಸ್ತೆಯಲ್ಲಿ ಅನೇಕ ವಾಹನಗಳು ಸಿಲುಕಿಕೊಂಡವು. ನಂತರ ಟ್ರಾಕ್ಟರ್ ಮತ್ತು ಕ್ರೇನ್ ಬಳಸಿ ವಾಹನಗಳನ್ನು ಟ್ರಾಕ್‌ಗಳಿಗೆ ತರಲಾಯಿತು. ಅತಿ ಹೆಚ್ಚು ಮಳೆ ಬೀಳುವ ಕುಡಿಗಾಣ, ಕೊತ್ತನಳ್ಳಿ ಗ್ರಾಮದ ಖಾಸಗಿ ಜಾಗದ ಕಾಫಿ, ಏಲಕ್ಕಿ ತೋಟಗಳ ಕಚ್ಚಾ ರಸ್ತೆಯಲ್ಲಿ ತೆರಳುವುದು ಚಾಲಕರಿಗೆ ಸವಾಲಾಗಿ ಪರಿಣಮಿಸಿತು.

ರಾಜ್ಯದ ವಿವಿಧ ಭಾಗಗಳಿಂದ ೧೨೫ ವಾಹನಗಳಲ್ಲಿ ೨೫೦ ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ಖಾಸಗಿ ಜಮೀನಿನಲ್ಲೇ ಜೀಪ್ ಆಫ್‌ರೋಡ್ ರ‍್ಯಾಲಿಯನ್ನು ಆಯೋಜಿಸಲಾಗಿತ್ತು. ಅರಣ್ಯ ಪ್ರದೇಶದಲ್ಲಿ ಯಾವುದೇ ಟ್ರ್ಯಾಕ್ ಇರುವುದಿಲ್ಲ. ಕಾಫಿ, ಏಲಕ್ಕಿ ತೋಟದ ರಸ್ತೆಯಲ್ಲಿ ನಡೆಯಿತು. ಇದು ಆಫ್‌ರೋಡ್ ಸ್ಪೋಟ್ಸ್ ಇವೆಂಟ್ ಆಗಿರುವುದರಿಂದ ಸರ್ಕಾರದ ಎಲ್ಲಾ ನಿಯಮಗಳನ್ನು ಪಾಲಿಸಲಾಗಿದೆ.

ರ‍್ಯಾಲಿ ಅಯೋಜನೆಗೆ ಮೊದಲು ಆಯೋಜಕರು ತಮ್ಮ ಸ್ವಂತ ಖರ್ಚಿನಲ್ಲಿ ತೋಟದೊಳಗೆ ಅನೇಕ ರಸ್ತೆಗಳನ್ನು ಮಾಡಿಕೊಟ್ಟಿದ್ದಾರೆ.ಗ್ರಾಮಸ್ಥರು ಜೀಪ್ ಆಫ್‌ರೋಡ್ ರ‍್ಯಾಲಿ ನಡೆಸಲು ಪ್ರತಿವರ್ಷ ಸಹಕಾರ ನೀಡುತ್ತಾ ಬಂದಿದ್ದಾರೆ. ಪ್ರಕೃತಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳ ಲಾಗಿದೆ ಎಂದು ಟೀಮ್ ೧೨ ಆಯೋಜಕರಾದ ಪಿ.ಕೆ.ರವಿ ಹೇಳಿದರು

ಸಿ ಆಂಡ್ ಡಿ ಜಾಗದಲ್ಲಿ ರ‍್ಯಾಲಿಗೆ ತಡೆ..!:  ಪುಷ್ಪಗಿರಿ ಅರಣ್ಯ ಪ್ರದೇಶದಲ್ಲಿ ಜೀಪ್ ಆಫ್‌ರೋಡ್ ರ‍್ಯಾಲಿ ನಡೆಸದಂತೆ ಕೊತ್ನಳ್ಳಿ ಗ್ರಾಮದ ಕೆ.ಪಿ.ಅಜಿತ್ ಎಂಬವರು ಹೈಕೋರ್ಟ್‌ನಲ್ಲಿ ರಿಟ್‌ಪಿಟಿಷನ್ ಹಾಕಿರುವುದರಿಂದ, ಅರಣ್ಯ ಇಲಾಖೆ ಮತ್ತು ತಾಲ್ಲೂಕು ಆಡಳಿತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿತ್ತು. ಶಾಂತಳ್ಳಿ ಜಂಕ್ಷನ್‌ನಿಂದ ಜೀಪ್ ಆಫ್‌ರೋಡ್ ರ‍್ಯಾಲಿಯಲ್ಲಿ ವಾಹನಗಳು ತೆರಳದಂತೆ ಅರಣ್ಯ ಇಲಾಖೆ, ಪೊಲೀಸ್ ಹಾಗೂ ತಾಲ್ಲೂಕು ಆಡಳಿತ ತಡೆ ನೀಡಿತು. ಅರಣ್ಯ ಹಾಗೂ ಸಿ ಆಂಡ್ ಡಿ ಜಾಗದೊಳಗೆ ಆಫ್ ರೋಡ್ ವಾಹನಗಳು ತೆರಳಲು ಅವಕಾಶವಿಲ್ಲ ಎಂದು ಎಸಿಎಫ್ ಗೋಪಾಲ್, ತಹಸಿಲ್ದಾರ್ ಕೃಷ್ಣಮೂರ್ತಿ, ಇನ್ಸ್‌ಪೆಕ್ಟರ್ ಮುದ್ದು ಮಹಾದೇವ ಹೇಳಿದರು. ಖಾಸಗಿ ಜಾಗದಲ್ಲಿ ವಾಹನಗಳು ತೆರಳಲು ಡಿಎಫ್‌ಒ ಅವರಿಂದ ಅನುಮತಿ ಪತ್ರ ಸಿಕ್ಕ ನಂತರ ಅಧಿಕಾರಿಗಳು ವಾಹನಗಳನ್ನು ಬಿಟ್ಟುಕೊಟ್ಟರು.

ಆಂದೋಲನ ಡೆಸ್ಕ್

Recent Posts

ವಿಷ ಕುಡಿದು ವ್ಯಕ್ತಿ ಆತ್ಮಹತ್ಯೆ: ಗರಿಕೆ ಖಂಡಿ ಅರಣ್ಯದಲ್ಲಿ ಶವ ಪತ್ತೆ

ಹನೂರು: ವಿಷ ಕುಡಿದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗರಿಕೆಕಂಡಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.…

10 hours ago

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭೇಟಿಯಾದ ಮಾಜಿ ಸಿಎಂ ಸಿದ್ದರಾಮಯ್ಯ

ನವದೆಹಲಿ: ದೆಹಲಿ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ನಿನ್ನೆ…

11 hours ago

ಶ್ರಾವಣ ಮಾಸದ ಕೊನೆಯ ದಿನದ 108 ಕುಂಭಾಭಿಷೇಕ: ಮಲೆ ಮಹದೇಶ್ವರ ಕ್ಷೇತ್ರದಲ್ಲಿ ಭಕ್ತಿ ವೈಭವ

ಹನೂರು: ಸುಕ್ಷೇತ್ರ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಶ್ರಾವಣ ಮಾಸದ ಸಮಾರೋಪದ ಅಂಗವಾಗಿ 108 ಕುಂಭಾಭಿಷೇಕ ಮಹೋತ್ಸವ ಹಾಗೂ…

12 hours ago

ಹನೂರು| ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ: ಮೂವರು ಯುವಕರು ದುರ್ಮರಣ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕೊಪ್ಪ ಗ್ರಾಮದಿಂದ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ…

12 hours ago

ಓದುಗರ ಪತ್ರ: ದಸರಾ ಚಿತ್ರೋತ್ಸವ ಮುಂದುವರಿಯಲಿ

ಮೈಸೂರು ದಸರಾ ನಮ್ಮ ನಾಡಿನ ಹೆಮ್ಮೆ. ಈ ನಾಡಹಬ್ಬದಲ್ಲಿ ದಸರಾ ಚಿತ್ರೋತ್ಸವವನ್ನು ರದ್ದುಪಡಿಸಿರುವ ನಿರ್ಧಾರ ಖಂಡನೀಯ. ಈ ನಿರ್ಧಾರವನ್ನು ಮರುಪರಿಶೀಲಿಸಿ…

18 hours ago

ಓದುಗರ ಪತ್ರ: ಫಿಲಂ ಸಿಟಿ ಯೋಜನೆ ಆದಷ್ಟು ಬೇಗ ಕಾರ್ಯರೂಪಕ್ಕೆ ಬರಲಿ

ಮೈಸೂರು ಜಿಲ್ಲೆಯ ಇಮ್ಮಾವು ಬಳಿ ಅಂತರಾಷ್ಟ್ರೀಯ ದರ್ಜೆಯ ಫಿಲಂ ಸಿಟಿ ನಿರ್ಮಿಸುವ ಬಗ್ಗೆ ಮೈಸೂರು ಜಿ ಉಸ್ತುವಾರಿ ಸಚಿವರಾದ ಯತೀಂದ್ರ…

18 hours ago