ಸೋಮವಾರಪೇಟೆ: ಟೀಮ್ ೧೨ ಆಫ್ ರೋಡರ್ಸ್ ವತಿಯಿಂದ ತಾಲ್ಲೂಕಿನ ಕೊತ್ನಳ್ಳಿ, ಕುಡಿಗಾಣ, ಬೆಂಕಳ್ಳಿ ಗ್ರಾಮಗಳ ಖಾಸಗಿ ಜಮೀನಿನಲ್ಲಿ ನಡೆದ ಜೀಪ್ ಆಫ್ ರೋಡ್ ರ‍್ಯಾಲಿ ಗ್ರಾಮೀಣ ಜನರನ್ನು ರಂಜಿಸಿತು.
ಕೊತ್ನಳ್ಳಿ ಗ್ರಾಮಸ್ಥರು ರ‍್ಯಾಲಿಗೆ ಚಾಲನೆ ನೀಡಿದರು. ಟ್ರ್ಯಾಕ್‌ನಲ್ಲಿ ಜೀಪ್ ತೆರಳುತ್ತಿದ್ದಂತೆ ಧಾರಾಕಾರ ಮಳೆ ಸುರಿಯಲು ಪ್ರಾರಂಭಿಸಿತು. ಕಡಿದಾದ ರಸ್ತೆಯಲ್ಲಿ ಅನೇಕ ವಾಹನಗಳು ಸಿಲುಕಿಕೊಂಡವು. ನಂತರ ಟ್ರಾಕ್ಟರ್ ಮತ್ತು ಕ್ರೇನ್ ಬಳಸಿ ವಾಹನಗಳನ್ನು ಟ್ರಾಕ್‌ಗಳಿಗೆ ತರಲಾಯಿತು. ಅತಿ ಹೆಚ್ಚು ಮಳೆ ಬೀಳುವ ಕುಡಿಗಾಣ, ಕೊತ್ತನಳ್ಳಿ ಗ್ರಾಮದ ಖಾಸಗಿ ಜಾಗದ ಕಾಫಿ, ಏಲಕ್ಕಿ ತೋಟಗಳ ಕಚ್ಚಾ ರಸ್ತೆಯಲ್ಲಿ ತೆರಳುವುದು ಚಾಲಕರಿಗೆ ಸವಾಲಾಗಿ ಪರಿಣಮಿಸಿತು.
ರಾಜ್ಯದ ವಿವಿಧ ಭಾಗಗಳಿಂದ ೧೨೫ ವಾಹನಗಳಲ್ಲಿ ೨೫೦ ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ಖಾಸಗಿ ಜಮೀನಿನಲ್ಲೇ ಜೀಪ್ ಆಫ್‌ರೋಡ್ ರ‍್ಯಾಲಿಯನ್ನು ಆಯೋಜಿಸಲಾಗಿತ್ತು. ಅರಣ್ಯ ಪ್ರದೇಶದಲ್ಲಿ ಯಾವುದೇ ಟ್ರ್ಯಾಕ್ ಇರುವುದಿಲ್ಲ. ಕಾಫಿ, ಏಲಕ್ಕಿ ತೋಟದ ರಸ್ತೆಯಲ್ಲಿ ನಡೆಯಿತು. ಇದು ಆಫ್‌ರೋಡ್ ಸ್ಪೋಟ್ಸ್ ಇವೆಂಟ್ ಆಗಿರುವುದರಿಂದ ಸರ್ಕಾರದ ಎಲ್ಲಾ ನಿಯಮಗಳನ್ನು ಪಾಲಿಸಲಾಗಿದೆ.
ರ‍್ಯಾಲಿ ಅಯೋಜನೆಗೆ ಮೊದಲು ಆಯೋಜಕರು ತಮ್ಮ ಸ್ವಂತ ಖರ್ಚಿನಲ್ಲಿ ತೋಟದೊಳಗೆ ಅನೇಕ ರಸ್ತೆಗಳನ್ನು ಮಾಡಿಕೊಟ್ಟಿದ್ದಾರೆ.ಗ್ರಾಮಸ್ಥರು ಜೀಪ್ ಆಫ್‌ರೋಡ್ ರ‍್ಯಾಲಿ ನಡೆಸಲು ಪ್ರತಿವರ್ಷ ಸಹಕಾರ ನೀಡುತ್ತಾ ಬಂದಿದ್ದಾರೆ. ಪ್ರಕೃತಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳ ಲಾಗಿದೆ ಎಂದು ಟೀಮ್ ೧೨ ಆಯೋಜಕರಾದ ಪಿ.ಕೆ.ರವಿ ಹೇಳಿದರು
ಸಿ ಆಂಡ್ ಡಿ ಜಾಗದಲ್ಲಿ ರ‍್ಯಾಲಿಗೆ ತಡೆ..!: ಪುಷ್ಪಗಿರಿ ಅರಣ್ಯ ಪ್ರದೇಶದಲ್ಲಿ ಜೀಪ್ ಆಫ್‌ರೋಡ್ ರ‍್ಯಾಲಿ ನಡೆಸದಂತೆ ಕೊತ್ನಳ್ಳಿ ಗ್ರಾಮದ ಕೆ.ಪಿ.ಅಜಿತ್ ಎಂಬವರು ಹೈಕೋರ್ಟ್‌ನಲ್ಲಿ ರಿಟ್‌ಪಿಟಿಷನ್ ಹಾಕಿರುವುದರಿಂದ, ಅರಣ್ಯ ಇಲಾಖೆ ಮತ್ತು ತಾಲ್ಲೂಕು ಆಡಳಿತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿತ್ತು. ಶಾಂತಳ್ಳಿ ಜಂಕ್ಷನ್‌ನಿಂದ ಜೀಪ್ ಆಫ್‌ರೋಡ್ ರ‍್ಯಾಲಿಯಲ್ಲಿ ವಾಹನಗಳು ತೆರಳದಂತೆ ಅರಣ್ಯ ಇಲಾಖೆ, ಪೊಲೀಸ್ ಹಾಗೂ ತಾಲ್ಲೂಕು ಆಡಳಿತ ತಡೆ ನೀಡಿತು. ಅರಣ್ಯ ಹಾಗೂ ಸಿ ಆಂಡ್ ಡಿ ಜಾಗದೊಳಗೆ ಆಫ್ ರೋಡ್ ವಾಹನಗಳು ತೆರಳಲು ಅವಕಾಶವಿಲ್ಲ ಎಂದು ಎಸಿಎಫ್ ಗೋಪಾಲ್, ತಹಸಿಲ್ದಾರ್ ಕೃಷ್ಣಮೂರ್ತಿ, ಇನ್ಸ್‌ಪೆಕ್ಟರ್ ಮುದ್ದು ಮಹಾದೇವ ಹೇಳಿದರು. ಖಾಸಗಿ ಜಾಗದಲ್ಲಿ ವಾಹನಗಳು ತೆರಳಲು ಡಿಎಫ್‌ಒ ಅವರಿಂದ ಅನುಮತಿ ಪತ್ರ ಸಿಕ್ಕ ನಂತರ ಅಧಿಕಾರಿಗಳು ವಾಹನಗಳನ್ನು ಬಿಟ್ಟುಕೊಟ್ಟರು.
ಚಾಮರಾಜನಗರ: ಚಾ.ನಗರ-ನಂಜನಗೂಡು ಹೆದ್ದಾರಿಯಲ್ಲಿರುವ ಪಣ್ಯದಹುಂಡಿ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಸ್ವಾಧಿನಪಡಿಸಿಕೊಂಡಿರುವ ಭೂಮಿಯ ದರ ನಿಗದಿ ಕಗ್ಗಂಟಿನ ವಿಚಾರ ಅಂತಿಮ…
ಮೈಸೂರು: ಪ್ರಸಿದ್ಧ ಯಾತ್ರಾ ಸ್ಥಳ ಚಾಮುಂಡಿ ಬೆಟ್ಟದ ಸಮಗ್ರ ಅಭಿವೃದ್ಧಿ ಕಾಮಗಾರಿಯು ಕೇಂದ್ರ ಸರ್ಕಾರದ ಪ್ರಸಾದ ಯೋಜನೆಯಡಿ ಜನವರಿ ಮೊದಲ…
ಗಿರೀಶ್ ಹುಣಸೂರು ಬಿಡಿ ಮೊಟ್ಟೆಗೆ ೭.೫೦ ರೂ.; ರಫ್ತು ಹೆಚ್ಚಳದಿಂದ ಭಾರೀ ಹೊಡೆತ ಮೈಸೂರು: ಮಾಗಿ ಚಳಿಗಾಲ ಆರಂಭ, ಚಂಡಮಾರುತದಿಂದ ಹವಾಮಾನ…
ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…
ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…