Andolana originals

ಮೈಸೂರಿನಲ್ಲಿ ಜಪಾನ್ ಮಿಯಾವಾಕಿ ಫಾರೆಸ್ಟ್ ಮಾದರಿ ‌

  • ಟಯೋಟೊ ಕಿರ್ಲೋಸ್ಕರ್‌ ಆಟೋ ಪಾರ್ಟ್ಸ್‌ ಪ್ರೈ.ಪಿ. ಸಿಎಸ್‌ಆರ್‌ ನಿಧಿಯಿಂದ ಅಭಿವೃದ್ಧಿ
  • ಒಂದು ಎಕರೆ ಪ್ರದೇಶದಲ್ಲಿ ೨೮ ಪ್ರಭೇದಗಳ ೧೨,೦೦೦ ಸಸಿಗಳನ್ನು ನೆಡಲಾಗಿದೆ

ಸಾಲೋಮನ್
ಮೈಸೂರು: ಸ್ಥಳೀಯ ಸಸ್ಯವರ್ಗಗಳನ್ನು ಬಳಸಿ ವೇಗವಾಗಿ ಬೆಳೆಯುವ ತೋಪುಗಳಿಗೆ ಮಿಯಾವಾಕಿ ಕಾಡುಗಳು ಎಂದು ಹೆಸರಿಸಲಾಗಿದೆ. ಪ್ರಪಂಚದಾದ್ಯಂತ ಉತ್ಸಾಹಿ ವನರಕ್ಷಕರು ಈ ವಿಧಾನವನ್ನು ಅನುಸರಿಸಿ ಚಿಕ್ಕ ಪ್ರದೇಶದಲ್ಲಿ ಹೆಚ್ಚು ಮರಗಳನ್ನು ಬೆಳೆಸಿ ವಾಯು ಮಾಲಿನ್ಯ ತಪ್ಪಿಸಲು ಕಂಡುಹಿಡಿದಿರುವ ಮಾರ್ಗ ಇದು.

ಜಪಾನಿನ ಅರಣ್ಯ ಪರಿಸರ ಶಾಸಜ್ಞ ದಿ. ಅಕಿರಾ ಮಿಯಾವಾಕಿ ೧೯೭೦ರ ದಶಕದ ಆರಂಭದಲ್ಲಿ ಅಭಿವೃದ್ಧಿಪಡಿಸಿದ ಈ ವಿಧಾನವು, ಈಗ ವಿಶ್ವದ ಪರಿಸರ ಪ್ರೇಮಿಗಳ ಮನಗೆದ್ದಿದೆ. ನಿರ್ದಿಷ್ಟ ಪ್ರದೇಶದಲ್ಲಿ ಸ್ಥಳೀಯ ಸಸ್ಯ ಪ್ರಭೇದಗಳನ್ನು ನೆಟ್ಟು ಬೆಳೆಸುವುದು. ಸ್ಥಳೀಯ ಮರಗಳು ಮತ್ತು ಗಿಡ-ಸಸ್ಯಗಳನ್ನು ದಟ್ಟ ವಾಗಿ ಬೆಳೆಸಲಾಗುತ್ತಿದೆ.

ಮೈಸೂರಿನ ಮೊದಲ ಮಿಯಾವಾಕಿ ಫಾರೆಸ್ಟ್: ನಗರದಲ್ಲಿ ವಾಯುಮಾಲಿನ್ಯ ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸುವ ಉದ್ದೇಶದಿಂದ ಮಿಯಾ ವಾಕಿ -ರೆ ಹೆಚ್ಚು ಪರಿಣಾಮಕಾರಿ ಎಂದು ಮನಗಂಡ ಮೈಸೂರು ಮಹಾ ನಗರ ಪಾಲಿಕೆಯು ಟೊಯೋಟೊ ಕಿರ್ಲೋಸ್ಕರ್ ಆಟೋ ಪಾರ್ಟ್ಸ್ ಪ್ರೈ. ಲಿ. ಅನ್ನು ಸಂಪರ್ಕಿಸಿ ತಮ್ಮ ಯೋಜನೆಯನ್ನು ತಿಳಿಸಿದೆ. ಪರಿಸರ ಮಾಲಿನ್ಯ ತಡೆಗಟ್ಟಲು ನೈಸರ್ಗಿಕ ಕ್ರಮವನ್ನೇ ಅನುಸರಿಸುವ ವಿಧಾನದ ಬಗ್ಗೆ ವಿವರಿಸಿದ್ದಾರೆ. ಇದಕ್ಕೆ ಸ್ಪಂದಿಸಿದ ಪಾಲಿಕೆಯು ಅಗತ್ಯವಿರುವ ಸ್ಥಳಾವಕಾಶ ಸೇರಿದಂತೆ ಇತರ ಸವಲತ್ತುಗಳನ್ನು ಒದಗಿಸಿದೆ.

ನಗರದ ವಿಜಯನಗರ ಬಡಾವಣೆಯ ೩ನೇ ಹಂತದಲ್ಲಿರುವ ೫ ಎಕರೆ ವಿಸ್ತೀರ್ಣದ ಉದ್ಯಾನದಲ್ಲಿ, ಒಂದು ಎಕರೆ ಪ್ರದೇಶದಲ್ಲಿ ಮಿಯಾವಾಕಿ ಮಾದರಿ ಯಲ್ಲಿ ಕಾಡು ಬೆಳೆಸಲು ಅನುಮತಿ ನೀಡಲಾಯಿತು. ಮೈಸೂರಿನ ಟೊಯೋಟೊ ಕಿರ್ಲೋಸ್ಕರ್ ಆಟೋ ಪಾರ್ಟ್ಸ್ ಪ್ರೈ. ಲಿ. ತನ್ನ ಸಿಎಸ್‌ಆರ್ ನಿಽ ಬಳಸಿ ಈ ಕಾಡನ್ನು ಬೆಳೆಸುತ್ತಿದೆ. ನಗರಪಾಲಿಕೆ ವತಿಯಿಂದ ಸ್ಥಳ, ಗಿಡಗಳಿಗೆ ನೀರು ಹಾಯಿಸಲು ಪೈಪ್‌ಲೈನ್ ವ್ಯವಸ್ಥೆ ಹಾಗೂ -ನ್ಸಿಂಗ್ ಮಾಡಿಕೊಡಲಾಗಿದೆ.

ಒಂದು ಎಕರೆಯಲ್ಲಿ ೧೨ ಸಾವಿರ ಗಿಡಗಳು: ಈ ಗಿಡಗಳು ಮುಖ್ಯವಾಗಿ ವಾಯು ಮಾಲಿನ್ಯವನ್ನು ನಿಯಂತ್ರಿಸುತ್ತವೆ ಎಂಬ ಕಾರಣಕ್ಕೆ ಮಿಯಾವಾಕಿ ಫಾರೆಸ್ಟ್ ಹೆಚ್ಚು ಜನಪ್ರಿಯವಾಗಿದೆ. ಸಣ್ಣ-ಪ್ರಮಾಣದ ಕೃಷಿ ಮತ್ತು ಅರಣ್ಯಕ್ಕಾಗಿ ಬಳಸಲಾಗುವ ಮರಗಳು, ಸ್ಥಳೀಯ ಪ್ರದೇಶದ ವಾಯು ಮತ್ತು ನೀರಿನ ಮಾಲಿನ್ಯವನ್ನು ತಡೆಗಟ್ಟುವುದರಲ್ಲಿ ತುಂಬಾ ಪರಿಣಾಮ ಕಾರಿಯಾಗಿವೆ ಎಂಬುದಾಗಿ ಮಿಯಾವಾಕಿ ತಮ್ಮ ವೃತ್ತಿ ಜೀವನದ ಹೆಚ್ಚಿನ ಸಮಯವನ್ನು ಕಳೆದ ಯೊಕೊಹಾಮಾ ರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿ ಪರಿಸರ ವಿeನದ ಪ್ರಾಧ್ಯಾಪಕ -ಮಿಟೊ ಕೊಯ್ಕೆ ಹೇಳಿದ್ದಾರೆ.

ವಿಜಯನಗರದ ಒಂದು ಎಕರೆ ಪ್ರದೇಶದಲ್ಲಿ ೨೮ ವಿವಿಧ ಜಾತಿಯ ೧೨,೦೦೦ ಗಿಡಗಳನ್ನು ನೆಟ್ಟು ಬೆಳೆಸಲಾಗುತ್ತಿದೆ. ಪ್ರತಿ ಚ. ಮೀ. ಗೆ ಗಿಡ ನೆಡುವುದು, ನಂತರ ಮೂರು ವರ್ಷಗಳವರೆಗೆ ಕಿರ್ಲೋಸ್ಕರ್ ನಿರ್ವಹಿಸುತ್ತದೆ. ಮಿಯಾವಾಕಿ ಕಾಡು ಬೆಳೆಸಲು ನಗರದ ದಟ್ಟಗಳ್ಳಿ ಬಡಾವಣೆಯಲ್ಲಿ ಇನ್ನೂ ಮೂರು ಸ್ಥಳಗಳನ್ನು ಗುರುತಿಸಲಾಗಿದೆ. ಸಿಎಸ್‌ಆರ್ ನಿಽ ನೀಡುವ ಬೇರೆ ಬೇರೆ ಸಂಸ್ಥೆಗಳೊಂದಿಗೂ ಮಾತನಾಡಿ ಮಿಯಾವಾಕಿ ಕಾಡುಗಳನ್ನು ಬೆಳೆಸಲು ಮೈಸೂರು ಮಹಾನಗರ ಪಾಲಿಕೆ ತೋಟಗಾರಿಕೆ ವಿಭಾಗದ ಸಹಾಯಕ ಕಾರ್ಯಪಾಲ ಅಭಿಯಂತರರಿಗೆ ಜವಾಬ್ದಾರಿ ನೀಡಲಾಗಿದೆ. ಇದಕ್ಕೆ ಟೊಯೋಟೊ ಕಿರ್ಲೋಸ್ಕರ್ ಆಟೋ ಪಾರ್ಟ್ಸ್ ಸಂಸ್ಥೆ ತಾಂತ್ರಿಕ ಬೆಂಬಲ ನೀಡುತ್ತದೆ.

ಮಿಯಾವಾಕಿ ಸಾಧನೆ
೧೯೨೮ರಲ್ಲಿ ಒಕಾಯಾಮಾ ಪ್ರಾಂತ್ಯದಲ್ಲಿ ಕಾಣಿಸಿಕೊಂಡ ಮಿಯಾವಾಕಿಯ ಕಳೆಗಳು ಜರ್ಮನ್ ಸಸ್ಯಶಾಸಜ್ಞ ರೆನ್ಹೋಲ್ಡ ಟಕ್ಸೆನ್ ಅವರ ಗಮನ ಸೆಳೆದವು. ಅವರನ್ನು ೧೯೫೮ರಲ್ಲಿ ಜರ್ಮನಿಯಲ್ಲಿ ಅಧ್ಯಯನ ಮಾಡಲು ಮಿಯಾವಾಕಿಯನ್ನು ಆಹ್ವಾನಿಸಲಾಯಿತು. ಮಿಯಾವಾಕಿ ಈ ಕಾಡನ್ನು ಬೆಳೆಸುವ ವಿಧಾನವನ್ನು ಜಪಾನ್‌ನಲ್ಲಿ ಪ್ರಾಯೋಗಿಕವಾಗಿ ಮಾಡಿದರು.

ಶತಮಾನಗಳಿಂದ ಮಾನವ ಪರಿಸರ ಹಾಳು ಮಾಡಿದ್ದ ಕಾರಣದಿಂದಾಗಿ, ‘ನಿರೀಕ್ಷಿತ ನೈಸರ್ಗಿಕ ಸಸ್ಯವರ್ಗ’ ವನ್ನು ಕಂಡುಹಿಡಿಯುವುದು ಕಷ್ಟವಾಗಿತ್ತು. ಮಿಯಾವಾಕಿ ೧೯೬೦ರಲ್ಲಿ ತಮ್ಮ ದೇಶದ ಸ್ಥಳೀಯ ಸಸ್ಯಗಳನ್ನು ಪಟ್ಟಿ ಮಾಡಲು ತೊಡಗಿಸಿಕೊಂಡರು, ಮೊದಲು ಶಿಂಟೋ ದೇವಾಲಯಗಳ ಸುತ್ತಲೂ ಸಂರಕ್ಷಿತ ಅರಣ್ಯವನ್ನು ಬೆಳೆಸಿದರು. ೨೦೦೬ರಲ್ಲಿ ಅಸಾಹಿ ಗ್ಲಾಸ್ -ಂಡೇಶನ್ ನೀಡುವ ‘ಬ್ಲೂ ಪ್ಲಾನೆಟ್’ ಪ್ರಶಸ್ತಿಯನ್ನು ಪಡೆದರು. ನಂತರ ಮಿಯಾವಾಕಿ ನೀಡಿದ ಉಪನ್ಯಾಸದ ಪ್ರಕಾರ, ನಿರ್ದಿಷ್ಟ ಸೈಟ್‌ಗಳನ್ನು ಸಮೀಕ್ಷೆ ಮಾಡಲು ಕಂಪೆನಿಗಳು ಅವರ ತಂಡವನ್ನು ಕೇಳಿಕೊಂಡಿದ್ದವು. ಈ ಸಮೀಕ್ಷೆಗಳು ಮಿಯಾವಾಕಿಯನ್ನು ಜಪಾನಿನ ವ್ಯಾಪಾರ ಜಗತ್ತಿಗೆ ಪರಿಚಯಿಸಿದವು. ಸ್ಥಳೀಯ ಮರಗಳನ್ನು ಒಟ್ಟಿಗೆ ನೆಡುವುದರಿಂದ ಜೀವ ವೈವಿಧ್ಯತೆಯ ಅಭಿವೃದ್ಧಿಯೂ ಆಗುತ್ತದೆ. ಬೆಳವಣಿಗೆ ಯ ಸಾಂದ್ರತೆಯು ಪರಾಗಸ್ಪರ್ಶಕ್ಕೆ ಹೆಚ್ಚಿನ ಪ್ರಮಾಣದ ಮೇವು ಮತ್ತು ಪಕ್ಷಿಗಳಿಗೆ ಆಶ್ರಯವನ್ನು ಒದಗಿಸುತ್ತದೆ. ಅಲ್ಲದೆ, ಕೀಟಗಳಿಗೆ ತಂಪಾದ ವಾತಾವರಣವನ್ನು ಸೃಷ್ಟಿಸುತ್ತದೆ. ಜೊತೆಗೆ ಹೆಚ್ಚಿದ ಎಲೆಗಳ ಕಸವು ಭೂಮಿಯಲ್ಲಿ ಬೆರೆಯುವುದರಿಂದ ಮಣ್ಣಿನ -ಲವತ್ತತೆಯನ್ನು ಹೆಚ್ಚಿಸುತ್ತದೆ. ವಿವಿಧ ಜಾತಿಯ ಮರಗಳ ನ್ನು ಹೊಂದಿದ್ದರೆ ಉತ್ತಮ ಆಮ್ಲಜನಕ ದೊರೆಯುತ್ತದೆ. ಈ -ರೆಸ್ಟ್ ಮರಗಳು ೧೦ನೇ ವರ್ಷಗಳಿಂದ ಉತ್ತಮ ಆಮ್ಲಜನಕವನ್ನು ನೀಡುತ್ತವೆ. ಅದು ಮುಂದಿನ ನೂರು ವರ್ಷಗಳಿಗೂ ಸಹಕಾರಿಯಾಗಿರುತ್ತದೆ ಎಂಬುದು ಗಮನಾರ್ಹ.

ಆಂದೋಲನ ಡೆಸ್ಕ್

Recent Posts

ಸಿಲಿಂಡರ್ ಸ್ಪೋಟ ಪ್ರಕರಣ : ಸಾವಿನ ಸಂಖ್ಯೆ 3ಕ್ಕೆ ಏರಿಕೆ

ಮೈಸೂರು : ಮೈಸೂರು ಅರಮನೆ ಮುಂಭಾಗ ನಿನ್ನೆ ಸಂಜೆ ನಡೆದಿದ್ದ ಹೀಲಿಯಂ ಸ್ಫೋಟ ಪ್ರಕರಣದಲ್ಲಿ ಸಾವಿನ ಸಂಖ್ಯೆ ಇದೀಗ ಮೂರಕ್ಕೆ…

2 hours ago

ಮರ್ಯಾದೆಗೇಡು ಹತ್ಯೆ ವಿರೋಧಿಸಿ ಸಹಿ ಸಂಗ್ರಹ

ಮೈಸೂರು : ಹುಬ್ಬಳ್ಳಿಯಲ್ಲಿ ನಡೆದ ಮರ್ಯಾದಗೇಡು ಹತ್ಯೆ ವಿರೋಧಿಸಿ ಮತ್ತು ಮರ್ಯಾದೆಗೇಡು ಹತ್ಯೆ ತಡೆಗೆ ಕಠಿಣ ಕಾಯಿದೆ ರೂಪಿಸಬೇಕು ಎಂದು…

7 hours ago

ಕೆ.ಆರ್.ಆಸ್ಪತ್ರೆ ಶೆಡ್ ನಲ್ಲಿ ಬೆಂಕಿ : ಹಾಸಿಗೆಗಳು ಬೆಂಕಿಗಾಹುತಿ

ಮೈಸೂರು : ಇಲ್ಲಿನ ಕೆ.ಆರ್. ಆಸ್ಪತ್ರೆಯ ಶೆಡ್ ನಲ್ಲಿ ಬೆಂಕಿ ಕಾಣಿಸಿಕೊಂಡು ಆಸ್ಪತ್ರೆಯ ಹಾಸಿಗೆಗಳು ಬೆಂಕಿಗಾಹುತಿಯಾಗಿವೆ. ಆಸ್ಪತ್ರೆಯ ಚೆಲುವಾಂಬ ವಾರ್ಡ್…

7 hours ago

ಹೊಸ ವರ್ಷಾಚರಣೆಗೆ ಮುನ್ನೆಚ್ಚರಿಕೆ : ಸೂಕ್ಷ ಪ್ರದೇಶಗಳ ಬಗ್ಗೆ ಸಮೀಕ್ಷೆ ವರದಿಗೆ ಸೂಚನೆ

ಬೆಂಗಳೂರು : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುರಿತಂತೆ ಪ್ರಶ್ನೆಗಳು ಉದ್ಭವಿಸಿರುವ ಸಂದರ್ಭದಲ್ಲಿ, ಹೊಸ ವರ್ಷಾಚರಣೆಯ ವೇಳೆ ಯಾವುದೇ ಅವಘಡ ನಡೆಯದಂತೆ…

8 hours ago

ಸಿಲಿಂಡರ್‌ ಸ್ಪೋಟ ಪ್ರಕರಣ : ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಮಂಜುಳ ಸಾವು

ಮೈಸೂರು : ಮೈಸೂರಿನ ವಿಶ್ವ ವಿಖ್ಯಾತ ಅರಮನೆ ಸಮೀಪ ಸಂಭವಿಸಿದ್ದ ಹೀಲಿಯಂ ಗ್ಯಾಸ್ ಸಿಲೆಂಡರ್ ಸ್ಫೋಟ ದುರಂತದಲ್ಲಿ ಸಾವಿನ ಸಂಖ್ಯೆ…

9 hours ago

ಇತಿಹಾಸ ಸೃಷ್ಟಿಸಿದ ಬಿಜೆಪಿ : ತಿರುವನಂತಪುರಂನ ಮೇಯರ್ ಆಗಿ ವಿ.ವಿ.ರಾಜೇಶ್ ಆಯ್ಕೆ

ತಿರುವನಂತಪುರಂ : ಬಿಜೆಪಿಯಿಂದ ಮೊದಲ ಬಾರಿಗೆ ತಿರುವನಂತಪುರಂ ನಗರ ಮೇಯರ್ ಆಗಿ ಆಯ್ಕೆಯಾಗುವ ಮೂಲಕ ವಿ.ವಿ.ರಾಜೇಶ್ ಇತಿಹಾಸ ನಿರ್ಮಿಸಿದ್ದಾರೆ. 49…

9 hours ago