ಮೈಸೂರು: ದಸರಾ ಜಂಬೂಸವಾರಿ ಮೆರವಣಿಗೆ ವೀಕ್ಷಿಸಿದ ನಂತರ ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಬರುವ ಸಾವಿರಾರು ಜನರಿಗೆ ಟ್ರಾಫಿಕ್ ಜಾಮ್ ಕಾರಣಕ್ಕೆ ತಕ್ಷಣಕ್ಕೆ ಬಸ್ ಸೇವೆ ಒದಗಿಸಲು ಗಂಟೆಗಟ್ಟಲೇ ವಿಳಂಬವಾಗುತ್ತಿದ್ದು, ಪ್ರಯಾಣಿಕರ ಒತ್ತಡ ಮತ್ತು ಅನನುಕೂಲ ತಪ್ಪಿಸಲು ಕೆಎಸ್‌ಆರ್‌ಟಿಸಿ ಇದೇ ಮೊದಲ ಬಾರಿಗೆ ವಿಶೇಷ ಕಾರ್ಯಾಚರಣೆ ಆರಂಭಿಸಲು ನಿರ್ಧರಿಸಿದೆ.
ಕೆಎಸ್‌ಆರ್‌ಟಿಸಿ ವತಿಯಿಂದ ಪ್ರತೀ ವರ್ಷ ಜಂಬೂಸವಾರಿ ಮುಗಿದ ನಂತರ ಬಸ್ ನಿಲ್ದಾಣಕ್ಕೆ ಬರುವವರಿಗೆ ವಿವಿಧ ಮಾರ್ಗಗಳ ಸಂಚಾರಕ್ಕೆ ೧೦೦ ಬಸ್ ಗಳನ್ನು ಬಸ್ ನಿಲ್ದಾಣದಲ್ಲಿಯೇ ನಿಲುಗಡೆ ಮಾಡಲಾಗುತ್ತಿತ್ತು. ಬನ್ನಿಮಂಟಪ ಡಿಪೋ ಮುಂಭಾಗವೇ ಜಂಬೂಸವಾರಿ ಮೆರವಣಿಗೆ ಸಾಗುವ ಕಾರಣಕ್ಕೆ ಅಲ್ಲಿಂದ ಬಸ್‌ಗಳನ್ನು ಆಪರೇಟ್ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಹೆಚ್ಚುವರಿ ಬಸ್‌ಗಳನ್ನು ರಿಂಗ್ ರಸ್ತೆಯಲ್ಲಿ ನಿಲುಗಡೆ ಮಾಡಿ ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆಯಾದ ನಂತರ ಅಲ್ಲಿಂದ ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಬಂದು ಬಸ್ ಸೇವೆ ಆರಂಭಿಸಲಾಗುತ್ತದೆ.
ಹೀಗಾಗಿ ಜಂಬೂ ಸವಾರಿ ವೀಕ್ಷಿಸಿ ಬಂದ ಸಾವಿರಾರು ಮಂದಿ ಸುಮಾರು ಎರಡು ಗಂಟೆಗಳಿಗೂ ಹೆಚ್ಚು ಕಾಲ ಗ್ರಾಮಾಂತರ ಬಸ್ ನಿಲ್ದಾಣದಲ್ಲಿಯೇ ಕಾದು ಕೂರಬೇಕಿತ್ತು. ಸಾರ್ವ ಜನಿಕರಿಗೆ ಉಂಟಾಗುತ್ತಿರುವ ಈ ಅನನುಕೂಲವನ್ನು ತಪ್ಪಿಸಲು ವಿಶೇಷ ಕಾರ್ಯಾಚರಣೆ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಕೆಎಸ್‌ಆರ್‌ಟಿಸಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ತಿಳಿಸಿದರು.
ನಗರದಲ್ಲಿ ಜಂಬೂಸವಾರಿ ದಿನ ಬೆಳಿಗ್ಗೆ ೧೦ರಿಂದ ೧೧ರವರೆಗೆ ಎಂದಿನಂತೆ ಬಸ್‌ಗಳ ಸಂಚಾರಕ್ಕೆ ಅವಕಾಶ ನೀಡಲಾಗಿರುತ್ತದೆ. ಆದರೆ ಮಧ್ಯಾಹ್ನ ೧೨ ಗಂಟೆಯ ನಂತರ ನಗರದೆಲ್ಲೆಡೆ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಈ ಸಂದರ್ಭದಲ್ಲಿ ಪ್ರತೀ ವರ್ಷ ವಾಹನ ಸಂಚಾರಕ್ಕೆ ತೊಡಕಾಗುತ್ತದೆ.
ಇದನ್ನು ತಪ್ಪಿಸಲು ಗ್ರಾಮಾಂತರ ಬಸ್ ನಿಲ್ದಾಣಕ್ಕೆ ನಗರದ ಹೊರಭಾಗದಿಂದ ಬಂದು ಹೋಗಲು ಒಂದು ಮಾರ್ಗ ವ್ಯವಸ್ಥೆ ಮಾಡಿಕೊಡಬೇಕು. ಅದರಲ್ಲಿಯೂ -ರಂ ಮಾಲ್ ಪಕ್ಕದ ಜೋಡಿ ರಸ್ತೆಯ ಮೂಲಕ ಮಹದೇವಪುರ ಮಾರ್ಗವಾಗಿ ಸಾಗಿ ರಿಂಗ್ ರಸ್ತೆ ತಲುಪಲು ಅವಕಾಶ ಮಾಡಿಕೊಡುವಂತೆ ಪೊಲೀಸ್ ಇಲಾಖೆಗೆ ಮನವಿ ಮಾಡಲಾಗಿದೆ. ಒಂದು ವೇಳೆ ಇದಕ್ಕೆ ಅವಕಾಶ ಸಿಗದಿದ್ದರೆ ಕೆಲವು ಕಡೆ ಬಸ್ ನಿಲುಗಡೆ ಮಾಡಿಕೊಂಡು ಅಲ್ಲಿಂದ ಅವುಗಳನ್ನು ತರಿಸಿಕೊಂಡು ಸೇವೆ ನೀಡಲು ತೀರ್ಮಾನಿಸಲಾಗಿದೆ.
೩ ಕಡೆ ನಿಲುಗಡೆಗೆ ಸಿದ್ಧತೆ: ಇದೇ ಮೊದಲ ಬಾರಿಗೆ ಜಂಬೂಸವಾರಿ ವೇಳೆ ತಕ್ಷಣಕ್ಕೆ ಬಸ್ ಸೌಲಭ್ಯ ನೀಡುವ ಉದ್ದೇಶದಿಂದ ಮೈಸೂರಿನ ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಸಮೀಪದ ಮೂರು ಕಡೆಗಳಲ್ಲಿ ಅಂದಾಜು ೩೦೦ಕ್ಕೂ ಹೆಚ್ಚು ಬಸ್‌ಗಳನ್ನು ನಿಲುಗಡೆ ಮಾಡಿಕೊಂಡು ಕ್ರಮೇಣ ಅವುಗಳನ್ನು ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಕರೆಸಿಕೊಂಡು ಸೇವೆ ನೀಡುವ ಬಗ್ಗೆಯೂ ಅಽಕಾರಿಗಳು ಸಿದ್ಧತೆ ನಡೆಸಿದ್ದಾರೆ.
ಜಂಬೂ ಸವಾರಿ ವೀಕ್ಷಣೆಗೆ ರಾಜ್ಯದ ನಾನಾ ಭಾಗಗಳಿಂದ ಜನರು ಆಗಮಿಸುತ್ತಾರೆ. ವೀಕ್ಷಣೆಯ ಬಳಿಕ ಅವರಿಗೆ ಬಸ್ ಸೇವೆ ನೀಡುವಲ್ಲಿ ವಿಳಂಬವಾಗುತ್ತಿರುವುದನ್ನು ತಪ್ಪಿಸಲು ಈ ಬಾರಿ ವಿಶೇಷ ಕಾರ್ಯಾಚರಣೆ ನಡೆಸಲು ತೀರ್ಮಾನಿಸಲಾಗಿದೆ.
-ವೀರೇಶ್, ಕೆಎಸ್‌ಆರ್‌ಟಿಸಿ ನಗರ ವಿಭಾಗೀಯ ನಿಯಂತ್ರಣಾಽಕಾರಿ.
ಎಲ್ಲೆಲ್ಲಿ ನಿಲುಗಡೆ?
ಗ್ರಾಮಾಂತರ ನಿಲ್ದಾಣಕ್ಕೆ ಸಮೀಪದಲ್ಲಿರುವ ಪೊಲೀಸ್ ಅಕಾಡೆಮಿಯಲ್ಲಿ ಬಸ್ ನಿಲ್ದಾಣಕ್ಕೆ ಅನುಮತಿ ನೀಡುವಂತೆ ಮನವಿ ಮಾಡಲಾಗುತ್ತಿದೆ. ಅವಕಾಶ ದೊರೆತರೆ ಇಲ್ಲಿ ಅಂದಾಜು ೨೦೦ಕ್ಕೂ ಹೆಚ್ಚು ಬಸ್ ಗಳನ್ನು ನಿಲುಗಡೆ ಮಾಡಬಹುದು. ಅದೇ ರೀತಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆವರಣದಲ್ಲಿ ೩೦ ಬಸ್‌ಗಳು, ಸಂತ ಫಿಲೋಮಿನಾ ಕಾಲೇಜು ಬಳಿ ೬೦ರಿಂದ ೭೦ ವಾಹನಗಳನ್ನು ನಿಲ್ಲಿಸಲು ಅವಕಾಶ ಕೇಳಲಾಗಿದೆ. ಸಂಬಂಽಸಿದ ಸಂಸ್ಥೆಗಳು ಅವಕಾಶ ನೀಡಿದರೆ ಗ್ರಾಮಾಂತರ ನಿಲ್ದಾಣದಲ್ಲಿ ಬಸ್‌ಗಳು ಖಾಲಿಯಾದಂತೆ ಈ ಮೂರು ಕಡೆಗಳಿಂದ ಬಸ್‌ಗಳನ್ನು ತರಿಸಿಕೊಂಡು ಸೇವೆ ನೀಡಲು ತೀರ್ಮಾನಿಸಲಾಗಿದೆ.
ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರ ಮೈಸೂರು : ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ತಂಬಾಕು ಬೆಳೆಗಾರರ ಸಮಸ್ಯೆಗಳು ಹಾಗೂ ಮಾರಾಟ…
ಮೈಸೂರು : ಮೈಸೂರು ಅರಮನೆ ಮಂಡಳಿ ವತಿಯಿಂದ ಕ್ರಿಸ್‌ಮಸ್ ಹಾಗೂ ಹೊಸವರ್ಷದ ಪ್ರಯುಕ್ತ 10 ದಿನಗಳ ‘ಅರಮನೆ ಫಲಪುಷ್ಪ ಪ್ರದರ್ಶನ’…
ಹಲಗೂರು : ಎತ್ತಿನ ಗಾಡಿ ತೆರಳುತ್ತಿದ್ದ ವೇಳೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಎತ್ತು ಸ್ಥಳದಲ್ಲೇ ಮೃತಪಟ್ಟ ಘಟನೆ…
ಹಲಗೂರು : ಇಲ್ಲಿಗೆ ಸಮೀಪದ ಮುತ್ತತ್ತಿ ಕಾವೇರಿ ನದಿಯಲ್ಲಿ ಈಜಾಡುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಯುವಕ ಮೃತಪಟ್ಟಿರುವ ಘಟನೆ…
ಭಾರತೀನಗರ : ಇಲ್ಲಿಗೆ ಸಮೀಪದ ಕೆ.ಶೆಟ್ಟಹಳ್ಳಿ ಗ್ರಾಮದಲ್ಲಿ ಪೊಲೀಸರ ಭದ್ರತೆಯೊಂದಿಗೆ ಗ್ರಾಮದ ಪರಿಶಿಷ್ಟ ಜಾನಾಂಗದ ಮಹಿಳೆಯರು, ಪುರುಷರು ದೇವಾಲಯಗಳಿಗೆ ಪ್ರವೇಶಿಸಿದರು.…
ಮೈಸೂರು : ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿರುವ ಸಂಬಂಧ ಯಶಸ್ವಿ ಕಾರ್ಯಾಚರಣೆ ನಡೆಸಿದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಚಾವಿಸನಿನಿ)…