• ರಂಗಸ್ವಾಮಿ ಸಂತೆಬಾಚಳ್ಳಿ
ಕೆ.ಆರ್.ಪೇಟೆ ತಾಲ್ಲೂಕು ಸಂತೆ ಬಾಚಳ್ಳಿಯ ಕುಮಾರಣ್ಣ ಓದಿದ್ದು ಎಂಟನೇ ತರಗತಿ. ಬಾಲ್ಯದಲ್ಲಿಯೇ ಎದುರಾದ ಕಣ್ಣಿನ ದೋಷ ಮತ್ತು ಕಡು ಬಡತನ. ತಂದೆಯ ಜೊತೆ ಹಲಸಿನ ಹಣ್ಣು ಕೊಯ್ದು ಮಾರುವುದು, ಸಂಜೆಯ ಸಮಯ ವಡೆ ಬೋಂಡಾ ಮಾಡಿ ಮಾರುವುದು ಇವರ ನಿತ್ಯದ ಬದುಕಾಯಿತು.
ಕಬಡ್ಡಿ ಎಂದರೆ ಚಿಕ್ಕಂದಿನಿಂದ ಪ್ರಿಯವಾಗಿದ್ದ ಕಾರಣ ಈಗಲೂ ಶಾಲಾ ಮೈದಾನಕ್ಕೆ ಹೋಗು ವುದು, ಮಕ್ಕಳ ಜೊತೆ ಕಬಡ್ಡಿ ಆಡುವುದು, ಸುತ್ತಮುತ್ತ ಜಾತ್ರೆಗಳಲ್ಲಿ ಕಬಡ್ಡಿಯ ಆಟ ಏರ್ಪಡಿಸಿದರೆ, ಅತ್ಯುತ್ತಮವಾಗಿ ರೈಡ್ ಮಾಡುತ್ತಾರೆ. ತಂದೆ ಮಾಡಿದ ಮಿಠಾಯಿ, ಹಲಸಿನ ತೊಳೆಗಳನ್ನು ತಟ್ಟೆಯಲ್ಲಿ ಇಟ್ಟುಕೊಂಡು ಹೊರಟರೆ, ಮಿಡ್ಸ್ ಸ್ಕೂಲ್, ಹೈಸ್ಕೂಲ್ ಮೈದಾನ ಗಳಲ್ಲಿ ಮಾರುತ್ತಾ, ಮಕ್ಕಳ ಜೊತೆ ದಿನನಿತ್ಯ ಆಟಗಳನ್ನು ಆಡುತ್ತಾ, ಅಲ್ಲಿ ರುವ ದೈಹಿಕ ಶಿಕ್ಷಕರನ್ನು ಮನವೊಲಿಸಿ ಕೊಂಡು ಮಕ್ಕಳಿಗೂ ಕಲಿಸುತ್ತಾ ಜೀವನ ಪ್ರಾರಂಭಿಸುತ್ತಾರೆ. ಮಕ್ಕಳ ಕ್ರೀಡಾಕೂಟ ತಾಲ್ಲೂಕು ಮಟ್ಟ, ಜಿಲ್ಲಾಮಟ್ಟ ರಾಜ್ಯಮಟ್ಟ ಎಲ್ಲೇ ನಡೆದರೂ, ಅಲ್ಲಿಗೆ ಮಕ್ಕಳನ್ನು ಶಿಕ್ಷಕರ ಜೊತೆ ಕರೆದುಕೊಂಡು ಹೋಗಿ, ಮಕ್ಕಳನ್ನು ಪ್ರೋತ್ಸಾಹಿಸುವ ಕ್ರೀಡಾ ಪ್ರೇಮಿ ಇವರು.
ಪ್ರತಿನಿತ್ಯ ವ್ಯಾಪಾರದಿಂದ ಉಳಿಯುವ ಚಿಲ್ಲರೆ ಕಾಸು ಗಂಜಿಯನ್ನಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಸುಮಾರು 45 ವರ್ಷಗಳಿಂದ ಇವರ ಜೀವನ ನಡೆದು ಬಂದಿರುವುದೇ ಹೀಗೆ.
ಶಾಲಾಮಕ್ಕಳಿಗೆ ಕೋಲಾಟ ಹಾಡುಗಳು, ನಾಟಕ ಗೀತೆಗಳನ್ನು ನೃತ್ಯ ಭಂಗಿಯ ಜೊತೆಗೆ ಕಲಿಸಿಕೊಡುತ್ತಾರೆ. ಬಿಡುವಾಯಿತೆಂದರೆ ಹಳ್ಳಿಗಳಲ್ಲಿ ನಡೆಯುವ ಶನಿ ಮಹಾತ್ರೆಯ ನಾಟಕದ ಅನೇಕ ಪಾತ್ರಗಳಿಗಾಗಿ ರಂಗವೇರಿದ್ದಾರೆ. ಇವರ ಕಣ್ಣು ಮಂಜಾಗಿದ್ದರೂ ಜೀವನ ಪರ್ಯಂತ ಕಲಾ ಸೇವೆ ಯನ್ನು ಮಾಡುವ ಕಾಯಕ ಮಾತ್ರ ನಿರಂತರ ಸಾಗುತ್ತಿದೆ. ಅಂತರರಾಷ್ಟ್ರೀಯ ಬ್ಯಾಸ್ಕೆಟ್ ಬಾಲ್ ಪಟು ಸವಿತಾ, ರಾಷ್ಟ್ರಮಟ್ಟದ ಕಿಕ್ ಬಾಕ್ಸಿಂಗ್ ಪಟು ರೋಹಿತ್ ಗೌಡ, ರಾಜ್ಯ ಮಟ್ಟದ ಆಟಗಾರರಾದ ಪ್ರೇಮ, ಪವಿತ್ರ, ನಂದನ್ ಕುಮಾರ್ ಸೇರಿದಂತೆ ಅನೇಕ ವಿದ್ಯಾರ್ಥಿಗಳ ಪ್ರತಿಭೆಗೆ ಸ್ಫೂರ್ತಿ ತುಂಬಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಸಂತೆಬಾಚಳ್ಳಿಯ ಬಸ್‌ಸ್ಟ್ಯಾಂಡ್ ಸರ್ಕಲ್‌ನಲ್ಲಿ ಪುಟ್ಟ ಚಿಲ್ಲರೆ ಅಂಗಡಿ ಇಟ್ಟುಕೊಂಡು ಬದುಕು ಸಾಗಿಸುತ್ತಿರುವ ಇವರಿಗೆ ಪುಟ್ಟ ಶೀಟಿನ ಮನೆ ಬಿಟ್ಟರೆ ಯಾವ ಆಸ್ತಿಯೂ ಇಲ್ಲ. ಒಂಟಿ ಜೀವನದ ಬದುಕಿನಲ್ಲಿ ಇವರ ಆಸ್ತಿಯೆಂದರೆ ಸಾವಿರಾರು ಮಕ್ಕಳ ಪ್ರೀತಿ ಮತ್ತು ಕೃತಜ್ಞತೆ.
msnehaswamy rangaswamy@gmail.com
ಮೈಸೂರು: ನಗರದ ಅಲ್ ಅನ್ಸಾರ್ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಂಡ್ಯ ನಗರದಲ್ಲಿನ ವಿದ್ಯುತ್ ದೀಪಾಲಂಕಾರಕ್ಕೆ ಕೃಷಿ ಸಚಿವರು ಹಾಗೂ…
ಕೇರಳ ಮೂಲದ ಮಾಸ್ಟರ್ ಮೈಂಡ್ ಸೇರಿದಂತೆ 12 ಆರೋಪಿಗಳ ಬಂಧನ; ಮತ್ತೊಂದು ಮೋಸದ ಜಾಲ ಬಯಲಿಗೆಳೆದ ಕೊಡಗು ಜಿಲ್ಲಾ ಪೊಲೀಸರು…
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜನವರಿ…