ಆರ್.ಟಿ.ವಿಠಲಮೂರ್ತಿ
ರಾಜ್ಯಪಾಲರಿಂದ ನಿರ್ಣಾಯಕ ಹೆಜ್ಜೆ; ರಾಜಭವನದ ಉರುಳಿಗೆ ಕೊರಳೊಡ್ಡುವ ಪರಿಸ್ಥಿತಿ ನಿರ್ಮಾಣ ಮುಡಾ ಪ್ರಕರಣದ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವಿಚಾರಣೆಗೆ ರಾಜ್ಯಪಾಲರು ಅನುಮತಿ ನೀಡುವುದರೊಂದಿಗೆ ರಾಜ್ಯ ಸರ್ಕಾರ ಕಾನೂನು ಸಂಘರ್ಷಕ್ಕೆ ಅಣಿಯಾಗುವುದು ಅನಿವಾರ್ಯವಾಗಿದೆ.
ಸಾಮಾಜಿಕ ಕಾರ್ಯಕರ್ತ, ವಕೀಲ ಟಿ.ಜೆ.ಅಬ್ರಹಾಂ ಅವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಜುಲೈ 27 ರಂದು ಮುಖ್ಯಮಂತ್ರಿಗಳಿಗೆ ಷೋಕಾಸ್ ನೋಟಿಸ್ ನೀಡಿದ್ದ ರಾಜ್ಯಪಾಲರು ಈ ನೋಟಿಸ್‌ಗೆ ಪ್ರತಿಯಾಗಿ ಸರ್ಕಾರ ಸಲ್ಲಿಸಿದ ಉತ್ತರ ಮತ್ತು ನೀಡಿದ ಸಲಹೆಯನ್ನು ಒಪ್ಪದೆ ನಿರ್ಣಾಯಕ ಹೆಜ್ಜೆ ಇಟ್ಟಿದ್ದಾರೆ.
ಇದರ ಪರಿಣಾಮವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ರಾಜಭವನದ ಉರುಳಿಗೆ ಕೊರಳೊಡ್ಡುವ ಪರಿಸ್ಥಿತಿ ನಿರ್ಮಾಣವಾಗಿದ್ದರೂ, ಈ ಬೆಳವಣಿಗೆಯ ಮೂಲಕ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟೇ ಬಿಡುತ್ತಾರೆ ಎಂದು ಪ್ರತಿಪಕ್ಷಗಳಾಗಲೀ, ರಾಜೀನಾಮೆ ಕೊಟ್ಟರೆ ಮುಂದೇನು? ಎಂದು ಕಾಂಗ್ರೆಸ್ ಪಕ್ಷವಾಗಲೀ ಆತಂಕಪಡುವ ಕಾರಣವಿಲ್ಲ.
ಯಾಕೆಂದರೆ ರಾಜ್ಯಪಾಲರು ವಿಚಾರಣೆಗೆ ಅನುಮತಿ ನೀಡಿ ದರೂ ಇದರ ಮುಂದಿನ ಪ್ರಕ್ರಿಯೆಗಳಿಂದ ಸಿದ್ದರಾಮಯ್ಯ ಪಾರಾಗಲು ತುಂಬ ಅವಕಾಶಗಳಿವೆ ಮತ್ತು ಇದನ್ನು ಎದುರಿ ಸಲು ಬೇಕಾದಷ್ಟು ಕಾಲಾವಕಾಶವೂ ಅವರಿಗೆ ದೊರಕಲಿದೆ.
ಯಾಕೆಂದರೆ ರಾಜ್ಯಪಾಲರು ವಿಚಾರಣೆಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ದೂರುದಾರ ಅಬ್ರಹಾಂ ಅವರು ಸೆಷನ್ಸ್ ನ್ಯಾಯಾಲಯದ ಮುಂದೆ ಹೋಗಿ ದೂರು ದಾಖಲಿಸಿಕೊಳ್ಳಲು ಕೋರಬೇಕಾಗುತ್ತದೆ.
ಅವರ ಈ ವಾದವನ್ನು ಸೆಷನ್ಸ್ ನ್ಯಾಯಾಲಯ ಪುರಸ್ಕರಿಸಿ ವಿಚಾರಣೆ ನಡೆಸಲು ಪೊಲೀಸರಿಗೆ ಇಲ್ಲವೇ ಲೋಕಾಯುಕ್ತಕ್ಕೆ ಸೂಚನೆ ಕೊಡಬಹುದು. ಆದರೆ ಅದಕ್ಕೂ ಮುನ್ನ ರಾಜ್ಯಪಾಲರ ಕ್ರಮವನ್ನು ರದ್ದುಪಡಿಸುವಂತೆ ಇಲ್ಲವೇ ತಡೆಯಾಜ್ಞೆ ನೀಡುವಂತೆ ಮುಖ್ಯಮಂತ್ರಿಗಳು ಹೈಕೋರ್ಟ್ ಮೊರೆ ಹೋಗಬಹುದು.
ಅಂದ ಹಾಗೆ ಮುಖ್ಯಮಂತ್ರಿಗಳು ಹೈಕೋರ್ಟ್, ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಲು ಸಾಧ್ಯವಿರುವುದರಿಂದ ಸೆಷನ್ಸ್ ಕೋರ್ಟ್‌ಗೆ ಮನವಿ ಸಲ್ಲಿಸಲು ಸಾಧ್ಯವಿರುವುದರಿಂದ ಸೆಷನ್ ನ್ಯಾಯಾಲಯದ ತೀರ್ಪಿನ ಅನುಸಾರ ಪೊಲೀಸರು ಇಲ್ಲವೇ ಲೋಕಾಯುಕ್ತರು ಪ್ರಕರಣ ದಾಖಲಿಸಲು ಸಮಯವಾಗುತ್ತದೆ.
ಒಂದು ವೇಳೆ ಇದಕ್ಕೆ ತಡೆಯಾಜ್ಞೆ ನೀಡಲು ಹೈಕೋರ್ಟ್, ಸುಪ್ರೀಂ ಕೋರ್ಟ್ ನಿರಾಕರಿಸಿದರೆ ಪೊಲೀಸರು ಇಲ್ಲವೇ ಲೋಕಾಯುಕ್ತರ ತನಿಖೆ ನಡೆಸುವುದು ಸಾಧ್ಯ. ಹೀಗೆ ಪೊಲೀಸರು ಇಲ್ಲವೇ ಲೋಕಾಯುಕ್ತರು ತನಿಖೆ ಆರಂಭಿಸಿದರೂ ಈ ಕುರಿತು ವರದಿ ನೀಡಲು ಇನ್ನಷ್ಟು ಈ ತಿಂಗಳುಗಳ ಕಾಲಾವಕಾಶ ಬೇಕಾಗುತ್ತದೆ. ಈ ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದಾಗ ಸಿರಾಜುದ್ದೀನ್ ಬಾಷಾ ಮತ್ತು ಬಾಲರಾಜ್ ಎಂಬವರು ನೀಡಿದ ದೂರಿನ ಹಿನ್ನೆಲೆಯಲ್ಲಿ ರಾಜ್ಯಪಾಲರು ವಿಚಾರಣೆಗೆ ಅನುಮತಿ ನೀಡಿದ್ದರು.
ಆದರೆ ಈ ಸಂಬಂಧ ಸೆಷನ್ಸ್ ನ್ಯಾಯಾಲಯದ ಆದೇಶದಂತೆ ಲೋಕಾಯುಕ್ತರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದರೂ ಆರೋಪ ಪಟ್ಟಿ ಸಲ್ಲಿಸಲು ಸುಮಾರು ಹತ್ತು ತಿಂಗಳ ಕಾಲಾವಕಾಶ ತೆಗೆದುಕೊಂಡರು.
ಈ ಮಧ್ಯೆ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಅಕ್ರಮ ಗಣಿಗಾರಿಕೆಯ ಸಂಬಂಧ 2011 ರ ಜುಲೈ ತಿಂಗಳಲ್ಲಿ ನೀಡಿದ ವರದಿಯಲ್ಲಿ ಯಡಿಯೂರಪ್ಪ ಅವರ ಹೆಸರು ಇದ್ದು ದರಿಂದ ಆಗಸ್ಟ್ ತಿಂಗಳಲ್ಲಿ ಬಿಜೆಪಿ ವರಿಷ್ಠರ ಒತ್ತಡದ ಹಿನ್ನೆಲೆ ಯಲ್ಲಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದರು.
ಅವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದ ಎರಡು ತಿಂಗಳುಗಳ ನಂತರ ಸಿರಾಜುದ್ದೀನ್ ಬಾಷಾ ಮತ್ತು ಬಾಲರಾಜ್ ಅವರ ದೂರಿನ ಹಿನ್ನೆಲೆಯಲ್ಲಿ ನಡೆಯುತ್ತಿದ್ದ ತನಿಖೆ ಪೂರ್ಣಗೊಂಡು ಅಕ್ಟೋಬರ್ 14 ರಂದು ಆರೋಪ ಪಟ್ಟಿ ಸಲ್ಲಿಕೆಯಾಯಿತು. ಆದರೆ ಈ ಪ್ರಕರಣದಲ್ಲಿ ಯಡಿಯೂರಪ್ಪ ಅವರಿಗೆ ಜಾಮೀನು ದೊರೆಯದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಿ ಜೈಲಿಗೆ ಕಳಿಸಲಾಗಿತ್ತು.
ಗಮನಿಸಬೇಕಾದ ಸಂಗತಿ ಎಂದರೆ ರಾಚೇನಹಳ್ಳಿ ಡಿನೋಟಿಫಿಕೇಷನ್ ಪ್ರಕರಣದ ಹಿನ್ನೆಲೆಯಲ್ಲಿ ಅಂದಿನ ರಾಜ್ಯಪಾಲರು ಯಡಿಯೂರಪ್ಪ ಅವರ ವಿರುದ್ಧ ವಿಚಾರಣೆಗೆ ಅನುಮತಿ ನೀಡಲು ಬಳಸಿದ ವಿವೇಚನಾಧಿಕಾರಕ್ಕೂ, ಈಗಿನ ರಾಜ್ಯಪಾಲರು ಮುಡಾ ಪ್ರಕರಣದ ಹಿನ್ನೆಲೆಯಲ್ಲಿ ವಿಚಾರಣೆಗೆ ಅನುಮತಿ ನೀಡಲು ಬಳಸಿದ ವಿವೇಚನಾಧಿಕಾರಕ್ಕೂ ವ್ಯತ್ಯಾಸವಿದೆ.
ಯಾಕೆಂದರೆ ಅವತ್ತು ಯಡಿಯೂರಪ್ಪ ಅವರ ವಿರುದ್ಧ ವಿಚಾರಣೆಗೆ ಅನುಮತಿ ನೀಡುವ ಮುನ್ನ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಯಡಿಯೂರಪ್ಪ ಸರ್ಕಾರದ ವಿರುದ್ಧ ಹಲವು ದೂರುಗಳನ್ನು ಸ್ವೀಕರಿಸಿದ್ದರು. ಮತ್ತು ಇವನ್ನೂ ಪರಿಗಣಿಸಿ ಸಿರಾಜುದ್ದೀನ್ ಬಾಷಾ ಮತ್ತು ಬಾಲರಾಜ್ ಅವರ ದೂರನ್ನು ವಿಶೇಷವಾಗಿ ಪರಿಗಣಿಸಿ ವಿಚಾರಣೆಗೆ ಅನುಮತಿ ನೀಡಿದ್ದರು.
ಆದರೆ ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಪಾಲ್ಗೊಳ್ಳುವಿಕೆಗೆ ದಾಖಲೆಯೇ ಇಲ್ಲದಿರುವಾಗ ಅದನ್ನು ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಸೇರಿಸಿ ರಾಜ್ಯಪಾಲರು ತಮ್ಮ ವಿವೇಚನಾಧಿಕಾರದ ಮೂಲಕ ವಿಚಾರಣೆಗೆ ಅನುಮತಿ ನೀಡಿರುವುದು ಸರಿಯಲ್ಲ ಎಂಬುದು ಸಿದ್ದರಾಮಯ್ಯ ಪರವಾದ ವಾದ.
ಹೀಗಾಗಿ ಹೈಕೋರ್ಟ್‌ನಲ್ಲಿ ಇಲ್ಲವೇ ಸುಪ್ರೀಂಕೋರ್ಟಿನಲ್ಲಿ ಸಿದ್ದರಾಮಯ್ಯ ವಿರುದ್ಧದ ವಿಚಾರಣೆಗೆ ತಡೆಯಾಜ್ಞೆ ಸಿಗು ವುದು ಖಚಿತ ಎಂಬುದು ಕಾಂಗ್ರೆಸ್ ಪರ ವಕೀಲರ ವಾದ.
• ಸವಾಲು ಎದುರಿಸಲು ಸಿದ್ದರಾಮಯ್ಯಗೆ ಬೇಕಾದಷ್ಟು ಅವಕಾಶಗಳಿವೆ
• ದೂರುದಾರ ಅಬ್ರಹಾಂ ದೂರು ದಾಖಲಿಸಿಕೊಳ್ಳಲು ಸೆಷನ್ಸ್ ನ್ಯಾಯಾಲಯವನ್ನು ಕೋರಬೇಕು
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…