Andolana originals

‘ನಾನು ಬೆಳೆಸಿದ ಕಾಡಿನಲ್ಲಿ ನನಗೆ ವಾಸಕ್ಕೆ ಜಾಗ ಇಲ್ವಾ?’

ಮಂಜು ಕೋಟೆ

೪೦ ವರ್ಷಗಳ ಕಾಲ ಆದಿವಾಸಿಗಳ ಪರ ಹೋರಾಟ ನಡೆಸಿದ ದಿಟ್ಟ ಮಹಿಳೆ ಸೋಮಮ್ಮ ಇನ್ನು ನೆನಪು ಮಾತ್ರ

ಎಚ್.ಡಿ.ಕೋಟೆ: ಕೆಲದಿನಗಳ ಹಿಂದೆ ಅಗಲಿದ, ಆದಿವಾಸಿ ಜನರ ಪರವಾಗಿ ೪೦ ವರ್ಷಗಳಿಂದಲೂ ಹೋರಾಟ ನಡೆಸುತ್ತಿದ್ದ ದಿಟ್ಟ ಆದಿವಾಸಿ ಮಹಿಳೆ ಆನೆಮಾಳ ಹಾಡಿಯ ಸೋಮಮ್ಮ ಅವರನ್ನು ತಾಲ್ಲೂಕಿನ ಗಿರಿ ಜನರು ಸದಾ ಸ್ಮರಿಸುತ್ತಾರೆ.

ತಾಲ್ಲೂಕಿನ  ದೊಡ್ಡಭೈರನ ಕುಪ್ಪೆ ಗ್ರಾಪಂ ವ್ಯಾಪ್ತಿಯ ಆನೆ ಮಾಳಹಾಡಿ ನಿವಾಸಿ ಸೋಮಮ್ಮ ಅವರದ್ದು ಹೋರಾಟದ ಮತ್ತು ಸ್ವಾಭಿಮಾನದ ಬದುಕು. ‘ಕಾಡು ನಿನ್ನಪ್ಪನದಾ, ಕಾಡು ಬೆಳೆಸಿದ್ದು ಯಾರು? ನಾನು ಬೆಳೆಸಿದ ಕಾಡಿನಲ್ಲಿ ನನಗೆ ವಾಸಕ್ಕೆ ಜಾಗ ಇಲ್ವಾ? ಕಾಡಿನ ಬಗ್ಗೆ, ಪ್ರಾಣಿಗಳ ಬಗ್ಗೆ ಫಾರೆಸ್ಟ್ ನವನಿಗೆ ಏನು ಗೊತ್ತು?

ನೂರಾರು ವರ್ಷಗಳಿಂದ ಕಾಡು ಬೆಳೆಸಿ, ಕಾಡು ಉಳಿಸಿ, ಪ್ರಾಣಿ-ಪಕ್ಷಿಗಳ ಜೊತೆಗೆ ಪ್ರತಿನಿತ್ಯ ಬದುಕುತ್ತಿರುವವರು ನಾವು. ನಮ್ಮನ್ನೇ ಕಾಡಿಂದ ಹೊರಹಾಕಲು ಬಂದಿ ದ್ದೀರಾ ಎಂದು ತುಂಬಿದ ಸಭೆ ಯಲ್ಲಿ ಅಧಿಕಾರಿಗಳನ್ನು, ಶಾಸಕ, ಸಚಿವರನ್ನು ತರಾಟೆಗೆ ತೆಗೆದುಕೊಳ್ಳುತ್ತಿ ದ್ದುದನ್ನು ಆದಿವಾಸಿಗಳು ಎಂದಿಗೂ ಮರೆಯುವುದಿಲ್ಲ.

ಅರಣ್ಯ, ಪೊಲೀಸ್ ಅಧಿಕಾರಿಗಳಿಗೆ ಎದೆಗುಂದದೆ ತನ್ನ ಬದುಕಿನುದ್ದಕ್ಕೂ ಆದಿವಾಸಿ ಸಮುದಾಯಕ್ಕಾಗಿ ಹೋರಾಟ ಮಾಡಿದ ಸೋಮಮ್ಮ ಅವರು ಒಮ್ಮೆ ಅರಣ್ಯದಿಂದ ಆದಿವಾಸಿಗಳನ್ನು ಹೊರ ಹಾಕುವ ಸಲುವಾಗಿ ಆದಿವಾಸಿಗಳು ಕಟ್ಟಿಕೊಂಡಿದ್ದ ಗುಡಿಸಲುಗಳನ್ನು ತೆರವು ಮಾಡಲು ಬಂದ ಅರಣ್ಯ ಇಲಾಖೆಯವರನ್ನು ಕಂಡು ಕಾಡಿನೊಳಗೆ ಓಡು ತ್ತಿದ್ದ ತನ್ನ ಹಾಡಿ ಜನರನ್ನು ನಿಲ್ಲಿಸಿ, ಅರಣ್ಯ ಇಲಾಖೆಯ ಜೀಪ್‌ಗೆ ಅಡ್ಡಲಾಗಿ ಮಲಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಾಗ ಅಧಿಕಾರಿಗಳು ಅಲ್ಲಿಂದ ಕಾಲ್ಕಿತ್ತಿದ್ದರು.

ಇವರ ಹೋರಾಟ, ಎದೆಗಾರಿಕೆಯನ್ನು ಮೆಚ್ಚಿ ಆದಿವಾಸಿ ಪರ ಸಂಘಟನೆಗಳು ಇವರನ್ನು ಸಾಕಷ್ಟು ಸಭೆ ಸಮಾರಂಭಗಳಿಗೆ ದಿಲ್ಲಿ, ಪಂಜಾಬ್, ಒಡಿಶಾ, ತಮಿಳು ನಾಡು, ಕೇರಳ, ಆಂಧ್ರಪ್ರದೇಶ ಮುಂತಾದ ರಾಜ್ಯಗಳಿಗೆ ಕರೆದುಕೊಂಡು ಹೋಗಿ ಇವರ ಹೋರಾಟದ ಬದುಕನ್ನು ಪರಿಚಯಿಸಿವೆ.

ಇವರ ಜೀವಮಾನದ ಹೋರಾಟದ ಸಾಧನೆಗಾಗಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಗೌರವ ಸನ್ಮಾನಗಳು ಲಭಿಸಿವೆ. ೧೯೮೪ರಿಂದಲೂ ಬುಡಕಟ್ಟು ಕೃಷಿಕ ಸಂಘದ ಜೊತೆಗೂಡಿ ಸಂಘದ ಸಲಹೆಗಾರರಾಗಿ ಆದಿವಾಸಿಗಳ ಎಲ್ಲಾ ರೀತಿಯ ಹೋರಾಟಗಳಲ್ಲಿ ಮುಂದಾಳತ್ವ ವಹಿಸುತ್ತಿದ್ದರು. ಬುಡಕಟ್ಟು ಪಾರಂಪರಿಕ ಅರಣ್ಯ ಹಕ್ಕು ಕಾಯ್ದೆ ೨೦೦೬ ಅನುಷ್ಠಾನಕ್ಕಾಗಿ ಒತ್ತಾಯಿಸುತ್ತಿದ್ದ ಸೋಮಮ್ಮ ಹೈಕೋರ್ಟ್ ತೀರ್ಪು, ಡಾ.ಮುಜಾಫರ್ ಅಸ್ಸಾದಿ ವರದಿ ಆಧರಿಸಿ ನಮಗೆ ಮೂಲಸೌಕರ್ಯಗಳನ್ನು ಕೊಡಿ ಎಂದು ಆಗ್ರಹಿಸಿ ಹಲವು ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು. ‘ಆಂದೋಲನ’ ದಿನಪತ್ರಿಕೆ ನಡೆಸಿದ ಕಾರ್ಯಕ್ರಮ ಹಾಗೂ ತಾಲ್ಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

” ಸೋಮಮ್ಮ ಅವರು ೪೦ ವರ್ಷಗಳಿಂದಲೂ ಬುಡಕಟ್ಟು ಕೃಷಿಕರ ಸಂಘದ ಮೂಲಕ ಆದಿವಾಸಿ ಜನರ ಸಮಸ್ಯೆಗಳ ಪರಿಹಾರಕ್ಕಾಗಿ ನಡೆಸಿದ ನಿರಂತರ ಹೋರಾಟದಿಂದ ರಾಜ್ಯ ಮತ್ತು ಕೇಂದ್ರ, ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಅರಿವು ಉಂಟಾಗಿ ಗಿರಿಜನರ ಅಲ್ಪಸ್ವಲ್ಪ ಕೆಲಸಗಳು ನಡೆದಿವೆ. ಸೋಮಮ್ಮ ಅಂಥವರ ಹೋರಾಟ ನಮಗೆಲ್ಲಾ ಸೂರ್ತಿ. ಅವರ ನಿಧನ ನಮ್ಮ ಸಮುದಾಯಕ್ಕೆ ತೀವ್ರ ನೋವು ಉಂಟುಮಾಡಿದೆ.”

-ವಿಜಯ್ ಕುಮಾರ್, ಗಿರಿಜನ ಮುಖಂಡ

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಫ್ಲೆಕ್ಸ್ ಹಾವಳಿಗೆ ಕಡಿವಾಣ ಹಾಕಿ

ಮೈಸೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಫ್ಲೆಕ್ಸ್ ಹಾವಳಿ ಮಿತಿ ಮೀರಿದ್ದು, ರಸ್ತೆ ಬದಿಯಲ್ಲಿ ಹಾಕಿರುವ ಬೃಹದಾಕಾರದ ಫ್ಲೆಕ್ಸ್‌ಗಳಿಂದಾಗಿ ಪ್ರತಿನಿತ್ಯ ರಸ್ತೆಯಲ್ಲಿ ಸಂಚರಿಸುವ…

3 hours ago

ಓದುಗರ ಪತ್ರ: ಪಾರದರ್ಶಕ ಆಡಳಿತಾತ್ಮಕ ವ್ಯವಸ್ಥೆ ಜಾರಿಯಾಗಲಿ

ಉತ್ತರ ಪ್ರದೇಶ ಸರ್ಕಾರವು ಆ ರಾಜ್ಯದ ಎಲ್ಲಾ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರಿಗೆ ‘ಮಾನವ ಸಂಪದ್ ಪೋರ್ಟಲ್’ ಎಂಬ ಅಧಿಕೃತ…

3 hours ago

ಓದುಗರ ಪತ್ರ: ಕಸ ತೆರವುಗೊಳಿಸಿ

ಹುಣಸೂರು ತಾಲ್ಲೂಕಿನ ಎಮ್ಮೆಕೊಪ್ಪಲು ಗ್ರಾಮದಲ್ಲಿ ಗ್ರಾಪಂನವರು ಸಕಾಲಕ್ಕೆ ಕಸ ವಿಲೇವಾರಿ ಮಾಡದೇ ಇರುವುದರಿಂದ ಕಸದ ರಾಶಿಯೇ ಬಿದ್ದಿದ್ದು, ಸೊಳ್ಳೆ, ನೊಣಗಳ…

3 hours ago

ಓದುಗರ ಪತ್ರ: ಆರ್‌ಸಿಬಿ ತಂಡದಲ್ಲಿ ಕನ್ನಡಿಗರಿಗೆ ಪ್ರಾತಿನಿಧ್ಯ ನೀಡಿ

ಐಪಿಎಲ್ ಆವೃತ್ತಿಯು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿಯನ್ನು ಹೊಂದಿದೆ, ಈ ಆವೃತ್ತಿಯಲ್ಲಿ ನಾನಾ ರಾಜ್ಯಗಳ ಹೆಸರಿನಲ್ಲಿ ಹಲವು ತಂಡಗಳು ಸೆಣಸಾಡಲಿವೆ. ನಮ್ಮ…

3 hours ago

ಓದುಗರ ಪತ್ರ: ಕೋರ್ಟ್ ತೀರ್ಪು ಎಚ್ಚರಿಕೆ ಘಂಟೆಯಾಗಲಿ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಹಂಪೆಯ ಸಾಣಾಪುರದ ಬಳಿ ೨೦೨೫ ಮಾರ್ಚಿನಲ್ಲಿ ಇಸ್ರೇಲ್ ಮಹಿಳೆಯ ಮೇಲೆ ಅತ್ಯಾಚಾರ ಮತ್ತು ವಿದೇಶಿಗನ…

3 hours ago

ಓದುಗರ ಪತ್ರ: ಕುಡಿಯುವ ನೀರು ಸರಬರಾಜು ಮಾಡಿ

ಮೈಸೂರು ತಾಲ್ಲೂಕು ಜಯಪುರ ಹೋಬಳಿಯ ಧನಗಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕರ್ನಾಟಕ ಗೃಹ ಮಂಡಳಿ (ಕೆಹೆಚ್‌ಬಿ) ಬಡಾವಣೆಗೆ ಕುಡಿಯುವ ನೀರು ಸರಬರಾಜು…

3 hours ago