Andolana originals

ಓದುಗರ ಪತ್ರ: ನೆರೆಯ ಚೀನಾ ನಂಬಿಕೆಗೆ ಅರ್ಹವೇ?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ, ಚೀನಾ ಮೊದಲಾದ ಏಷ್ಯಾ ಖಂಡದ ರಾಷ್ಟ್ರಗಳ ಮೇಲೆ ಮನಸೋ ಇಚ್ಛೆ ಆಮದು ಸುಂಕ ವಿಧಿಸಿರುವ ಹಿನ್ನೆಲೆಯಲ್ಲಿ ಆ ದೇಶಕ್ಕೆ ಸಡ್ಡು ಹೊಡೆದು ಚೀನಾ- ಭಾರತ ಬಾಯಿ ಬಾಯಿ ಎಂದು ಚೀನಾದೊಂದಿಗೆ ಭಾರತ ಸ್ನೇಹವನ್ನು ಉತ್ತುಂಗಕ್ಕೇರಿಸಿಕೊಂಡಿದೆ.

ಸ್ನೇಹಿತರನ್ನು ಬದಲಿಸಿಕೊಳ್ಳಬಹುದು ಆದರೆ ನೆರೆಯವರನ್ನು ಬದಲಿಸಿಕೊಳ್ಳಲಾಗುವುದಿಲ್ಲವೆಂಬ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಮಾತನ್ನು ಸದಾ ತಲೆಯೊಳಗಿಟ್ಟುಕೊಂಡಿರುವ ಭಾರತದ ಪ್ರಯತ್ನವೇನೋ ಸರಿ. ಆದರೆ ಚೀನಾ ಭಾರತದ ಒಳ್ಳೆಯ ಉದ್ದೇಶವನ್ನು ಅದೆಷ್ಟು ಅರ್ಥ ಮಾಡಿಕೊಳ್ಳಬಹುದು ಎಂಬುದು ಯಕ್ಷ ಪ್ರಶ್ನೆಯಾಗಿದೆ. ಇತಿಹಾಸವನ್ನು ಗಮನಿಸಿದರೆ ಚೀನಾ ಸ್ನೇಹದ ವಿಷಯದಲ್ಲಿ ನಂಬಿಕೆಗೆ ಅರ್ಹವಾದ ದೇಶವಂತೂ ಅಲ್ಲವೇ ಅಲ್ಲ.

ಇದನ್ನು ಓದಿ:ಇಂಡಿಗೋ ವಿಮಾನಕ್ಕೆ ಪಕ್ಷಿ ಡಿಕ್ಕಿ: ತಪ್ಪಿದ ಭಾರೀ ಅನಾಹುತ

ಇದೇ ಚೀನಾದ ಅಧ್ಯಕ್ಷರಾದ ಕ್ಷಿ ಪಿಂಗ್ ಅವರನ್ನು ಈ ಹಿಂದೆ ಪ್ರಧಾನಿ ಮೋದಿಯವರು ಭಾರತಕ್ಕೆ ಕರೆಸಿಕೊಂಡು ಮಹಾಬಲಿಪುರಂ ಬಂಡೆಯನ್ನು ತೋರಿಸಿ ಸ್ನೇಹದ ಕನಸು ಕಾಣುತ್ತಾ ಕಳುಹಿಸಿಕೊಟ್ಟ ಸ್ವಲ್ಪ ಸಮಯದಲ್ಲೇ ಆಕ್ಸಾಯ್ ಚಿನ್ ಗಡಿಯಲ್ಲಿ ಭಾರತದ ಪ್ರದೇಶವನ್ನು ಅತಿಕ್ರಮಣ ಮಾಡಿ ನಮ್ಮವರೊಂದಿಗೆ ಗುದ್ದಾಟಕ್ಕಿಳಿದು ಸಂಬಂಧ ಹಳಸಿ ಹೋದ ಪ್ರಕರಣವನ್ನು ನೆನೆದರೆ ಚೀನಾ ಅಧ್ಯಕ್ಷ ಕ್ಷಿ ಅವರನ್ನು ಎಷ್ಟರ ಮಟ್ಟಿಗೆ ನಂಬಬಹುದು ಎನ್ನುವ ಪ್ರಶ್ನೆ ಎದುರಾಗುತ್ತದೆ.

ಸದ್ಯ ಚೀನಾಕ್ಕೂ ಅಮೆರಿಕ ಬದ್ಧ ವೈರಿಯಾಗಿರುವುದರಿಂದ ಮತ್ತು ರಷ್ಯಾ ದೇಶವು ನಮ್ಮೊಂದಿಗೆ ವಿಶ್ವಾಸದಿಂದ ಇರುವುದರಿಂದ ಚೀನಾ ವಿಧಿ ಇಲ್ಲದೆ ಭಾರತದೊಂದಿಗೆ ನಗುವಿನ ಮುಖವಾಡ ಹಾಕಿ ನಿಂತಿದೆ. ಚೀನಾದೊಂದಿಗೆ ನಾವು ಸ್ನೇಹ ಕುದುರಿಸಿದಲ್ಲಿ ಸದಾ ಚೀನಾದ ಮಿತ್ರರು ನಮ್ಮ ಮಿತ್ರರಾಗಿ ಚೀನಾದ ಶತ್ರುಗಳು ನಮ್ಮ ಶತ್ರುಗಳಾಗ ಬೇಕಾದ ಸಂದಿಗ್ಧ ಪರಿಸ್ಥಿತಿ ಬರಬಹುದು. ಚೀನಾ ಅಮೆರಿಕದೊಂದಿಗೆ ದ್ವೇಷದ ಕಾರಣಕ್ಕಾಗಿ ನಮ್ಮನ್ನು ಪರಮ ಮಿತ್ರ ಸ್ಥಾನದಲ್ಲಿ ಕೂರಿಸಿ ನಮ್ಮನ್ನು ಸಹಿಸಿಕೊಳ್ಳುತ್ತದೆಯೇ? ಇವುಗಳನ್ನೆಲ್ಲಾ ಗಮನಿಸಿದರೆ ಕ್ಷಿ ಮೋದಿ ಅವರನ್ನು ಅಪ್ಪಿಕೊಂಡುದುದು ಪ್ರಸಕ್ತ ಪರಿಸ್ಥಿತಿಗೆ ಮಾತ್ರವೇ ಹೊರತು ಇದು ಅವರ ಮನಃ ಪರಿವರ್ತನೆಯಲ್ಲ ಮತ್ತು ಶಾಶ್ವತವೂ ಅಲ್ಲ.

-ದೊಡ್ಡಕಮರವಳ್ಳಿ ಸಿದ್ದಲಿಂಗಪ್ಪ, ಜೆ.ಪಿ.ನಗರ, ಮೈಸೂರು

 

ಆಂದೋಲನ ಡೆಸ್ಕ್

Recent Posts

ಭಾರತ-ರಷ್ಯಾ ನಡುವೆ ಹಲವು ಒಪ್ಪಂದಗಳಿಗೆ ಸಹಿ

ನವದೆಹಲಿ: ಭಾರತ-ರಷ್ಯಾ ಉಭಯ ದೇಶಗಳ ನಡುವೆ ನಡೆದ ದ್ವಿಪಕ್ಷೀಯ ಮಾತುಕತೆ ವೇಳೆ ಹಲವಾರು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ನವದೆಹಲಿಯ…

23 mins ago

ವಾಚ್‌ ವಿಚಾರವಾಗಿ ಸುಳ್ಳು ಹೇಳಿದ್ದರೆ ಇಂದೇ ರಾಜೀನಾಮೆ: ಡಿಸಿಎಂ ಡಿ.ಕೆ.ಶಿವಕುಮಾರ್‌

ಬೆಂಗಳೂರು: ನಾನು ನನ್ನ ವಾಚ್ ವಿಚಾರವಾಗಿ ಲೋಕಾಯುಕ್ತ ಸೇರಿದಂತೆ ಎಲ್ಲೆಲ್ಲಿ ಮಾಹಿತಿ ನೀಡಬೇಕೋ, ಎಲ್ಲಾ ನೀಡಿದ್ದೇನೆ. ನಾನು ಈ ವಿಚಾರದಲ್ಲಿ…

28 mins ago

ನನಗೂ ಸಿಎಂ ಆಗಬೇಕು ಎನ್ನುವ ಆಸೆ ಇದೆ: ಸಚಿವ ದಿನೇಶ್‌ ಗುಂಡೂರಾವ್‌

ಮೈಸೂರು: ಪಕ್ಷದಲ್ಲಿ ಎಲ್ಲರಿಗೂ ಸಿಎಂ ಆಗಬೇಕು ಎನ್ನುವ ಆಸೆ ಇದೆ ಎಂದು ಆರೋಗ್ಯ ಇಲಾಖೆ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.…

1 hour ago

ಮಾಸ್ಕ್‌ ಮ್ಯಾನ್‌ ಚಿನ್ನಯ್ಯನಿಗೆ ಜಾಮೀನು ಸಿಕ್ಕರೂ ಬಿಡುಗಡೆ ಭಾಗ್ಯವಿಲ್ಲ

ಮಂಗಳೂರು: ಧರ್ಮಸ್ಥಳದಲ್ಲಿ ಶವಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರನಾಗಿ ಬಂದ ಬಳಿಕ ಆರೋಪಿಯಾಗಿ ಜೈಲಿನಲ್ಲಿರುವ ಮಾಸ್ಕ್‌ ಮ್ಯಾನ್‌ ಚಿನ್ನಯ್ಯನಿಗೆ ಜಾಮೀನು ಸಿಕ್ಕಿ…

1 hour ago

ಜಗದ್ಗುರು ಶ್ರೀ ಶಿವರಾತ್ರಿ ಡಾ.ರಾಜೇಂದ್ರ ಶ್ರೀಗಳ 110ನೇ ಜಯಂತೋತ್ಸವ, ಶ್ರೀ ನಂಜುಂಡಸ್ವಾಮಿಗಳ 16ನೇ ಸಂಸ್ಮರಣೋತ್ಸವ

ಟಿ.ನರಸೀಪುರ: ಜಗದ್ಗುರು ಶ್ರೀ ಶಿವರಾತ್ರಿ ಡಾ.ರಾಜೇಂದ್ರ ಶ್ರೀಗಳ 110ನೇ ಜಯಂತೋತ್ಸವ ಹಾಗೂ ಶ್ರೀ ನಂಜುಂಡಸ್ವಾಮಗಳ 16ನೇ ಸಂಸ್ಮರಣೋತ್ಸವ ಕಾರ್ಯಕ್ರಮ ಹೊಸಮಠದ…

2 hours ago

ರೆಪೋ ದರ ಕಡಿತಗೊಳಿಸಿದ ಭಾರತೀಯ ರಿಸರ್ವ್ ಬ್ಯಾಂಕ್

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ರೆಪೊ ದರವನ್ನು ಶೇ. 5.5% ರಿಂದ 5.25ಕ್ಕೆ ಅಂದರೆ 25 ಬೇಸಿಸ್ ಪಾಯಿಂಟ್‍ಗಳಷ್ಟು…

2 hours ago