ಕೆ.ಬಿ.ರಮೇಶನಾಯಕ
‘ಆಂದೋಲನ’ ವಿಶೇಷ ಸಂದರ್ಶನದಲ್ಲಿ ಸೆಸ್ಕ್ ಎಂಡಿ ಮುನಿಗೋಪಾಲರಾಜು ಅಭಿಮತ
ವಿದ್ಯುತ್‌ನಿಂದ ಸಂಭವಿಸಬಹುದಾದ ಪ್ರಾಣಹಾನಿ ತಡೆಗೆ ಯುಜಿ ಕೇಬಲ್ ಅಳವಡಿಕೆ
ಕಟ್ಟಕಡೆಯ ಹಳ್ಳಿಗಳ ಪ್ರತಿ ಮನೆಗೂ ವಿದ್ಯುತ್ ಸಂಪರ್ಕದ ಗುರಿ
ಡಿಸೆಂಬರ್ ತಿಂಗಳ ಒಳಗೆ ಎಲ್ಲ ಹಾಡಿಗಳಿಗೂ ವಿದ್ಯುತ್ ಸಂಪರ್ಕ
ರೈತರ ಕೃಷಿ ಪಂಪ್ ಸೆಟ್‌ಗಳಿಗೆ ಸೋಲಾರ್ ಪಂಪ್ ಅಳವಡಿಕೆ
ಮೈಸೂರು: ಕಟ್ಟಕಡೆಯ ಕುಗ್ರಾಮ, ಹಾಡಿಗಳ ಪ್ರತಿ ಮನೆಗೂ ಸಮರ್ಪಕ ವಿದ್ಯುತ್ ಪೂರೈಕೆ ಮಾಡಲಾಗವುದು. ವಿದ್ಯುತ್ ಸೋರಿಕೆ, ನಷ್ಟ, ಕಳ್ಳತನ ತಪ್ಪಿಸಿ ಆದಾಯ ಹೆಚ್ಚಿಸಲು ಗಮನಹರಿಸುವುದಕ್ಕೆ ಆದ್ಯತೆ ನೀಡಲಾಗುವುದು. ಜೊತೆಗೆ ನಗರ ಪ್ರದೇಶಗಳಲ್ಲಿ ವಿದ್ಯುತ್ ಕೇಬಲ್‌ಗಳನ್ನು ಕಂಬಕ್ಕೆ ಯುಜಿ (ಭೂಮಿ ಒಳಗೆ) ಅಳವಡಿಕೆ ಕಾರ್ಯವನ್ನು ಶೀಘ್ರದಲ್ಲೇ ಶುರು ಮಾಡುವ ಪ್ರಮುಖ ಗುರಿ ಇದೆ ಎಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ನೂತನ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಮುನಿಗೋಪಾಲರಾಜು ಹೇಳಿದರು.
‘ಆಂದೋಲನ’ ದಿನಪತ್ರಿಕೆ ನಡೆಸಿದ ವಿಶೇಷ ಸಂದರ್ಶನದಲ್ಲಿ ಅವರು, ಸೆಸ್ಕ್ ವತಿಯಿಂದ ಕೈಗೊಳ್ಳಲಿರುವ ಮುಂದಿನ ಯೋಜನೆಗಳು, ಕಾರ್ಯ ಕ್ರಮಗಳನ್ನು ಕುರಿತು ಮಾಹಿತಿ ಹಂಚಿಕೊಂಡರು. ಪ್ರತಿಯೊಂದು ಹಳ್ಳಿ, ಕುಟುಂಬಗಳಿಗೆ ಬೆಳಕು ನೀಡಬೇಕು ಎಂಬುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆಶಯವಾಗಿದೆ. ಅದರಂತೆ ವಿವಿಧ ಯೋಜನೆಗಳ ಮೂಲಕ ಪ್ರತಿಯೊಂದು ಮನೆಗೂ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು. ಅದಕ್ಕಾಗಿ ಕಾಲಮಿತಿಯೊಂದಿಗೆ ರೂಪಿಸಿರುವ ಯೋಜನೆಗಳನ್ನು ಪೂರ್ಣ ಮಾಡುತ್ತೇವೆ.
ಆಂದೋಲನ: ನಿಮ್ಮ ಮುಂದಿನ ಯೋಜನೆಗಳು ಏನಿವೆ?
ಕೆ.ಎಂ.ಮುನಿಗೋಪಾಲರಾಜು: ವರ್ಷದಿಂದ ವರ್ಷಕ್ಕೆ ವಿದ್ಯುತ್ ಖರೀದಿ ದರ ಹೆಚ್ಚಳವಾಗುತ್ತಿರುವ ಕಾರಣ ನೈಸರ್ಗಿಕವಾಗಿ ದೊರೆಯುವಂತಹ ಒಂದು ಸಾವಿರ ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದನೆ ಮಾಡುವ ಗುರಿ ಹೊಂದಲಾಗಿದೆ. ರೈತರ ಕೃಷಿ ಪಂಪ್ ಸೆಟ್‌ಗಳು ಹೆಚ್ಚಾಗಿರುವ ಕಡೆಗಳಲ್ಲಿ ಸೋಲಾರ್ ಉತ್ಪಾದನೆ ಮಾಡಲಾಗುವುದು. ಗ್ರಾಹಕರಿಗೆ ಅಡಚಣೆ ರಹಿತ ವಿದ್ಯುತ್ ನೀಡಲು ಫೀಡರ್‌ಲೇನ್, ಪರಿ ವರ್ತಕಗಳ ನಿರ್ವಹಣೆ ಮಾಡುವುದಕ್ಕೆ ಯೋಜನೆಗಳು ಇವೆ. ಕೇಂದ್ರ ಸರ್ಕಾರದ ಯೋಜನೆಯನ್ನು ಬಳಸಿಕೊಂಡು ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಸೋಲಾರ್ ಪಂಪ್ ಅಳವಡಿಸಲಾಗುವುದು. ಶೇ.೮೦ರಷ್ಟು ಸಬ್ಸಿಡಿ ದೊರೆಯುವುದರಿಂದ ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಆಂದೋಲನ: ಯುಜಿ ಕೇಬಲ್ ಅಳವಡಿಕೆ ಯೋಜನೆ ಯಾವಾಗ ಆರಂಭಿಸುತ್ತೀರಿ?
ಕೆ.ಎಂ.ಮುನಿಗೋಪಾಲರಾಜು: ಮೈಸೂರಿನಲ್ಲಿ ೧೧ ಕೆವಿ ಸಾಮರ್ಥ್ಯದ ಟಿಸಿಗಳು ಇರುವ ಕಡೆಗಳಲ್ಲಿ ಯುಜಿ ಕೇಬಲ್ ಅಳವಡಿಸಿಕೊಂಡು ಬರಲಾಗುತ್ತಿದೆ. ಇದರಿಂದಾಗಿ ವಿದ್ಯುತ್ ಸ್ಪರ್ಶದಿಂದ ಅನಾಹುತವಾಗುವುದನ್ನು ತಡೆಯಲಾಗುವುದು. ನಗರದ ಶಿವರಾಂಪೇಟೆ ಸೇರಿದಂತೆ ಜನನಿಬಿಡ ಪ್ರದೇಶಗಳು ಹೆಚ್ಚಾಗಿರುವ ಕಡೆಗಳಲ್ಲಿ ಏರಿಯಲ್ ಬಂಚ್ಡ್ ಎಲ್‌ಟಿ ಕೇಬಲ್ ಅಳವಡಿಸಲಾಗುವುದು. ಮುಂದಿನ ಹತ್ತಾರು ವರ್ಷಗಳಲ್ಲಿ ವಿದ್ಯುತ್ ಕಂಬದ ಬದಲಿಗೆ ಯುಜಿ ಕೇಬಲ್ ಅಳವಡಿಕೆ ಮಾಡುವುದು ಅನಿವಾರ್ಯ ಆಗಿರುವ ಕಾರಣ ಜನಸಂದಣಿ ಪ್ರದೇಶಗಳಲ್ಲಿ ಅಳವಡಿಸಲಾಗುವುದು. ಯುಜಿ ಕೇಬಲ್ ಅಳ ವಡಿಕೆಯಿಂದ ನಗರದ ಸೌಂದರ್ಯವನ್ನು ಹೆಚ್ಚಿಸಬಹುದು. ಕೆಲವು ಕಡೆಗಳಲ್ಲಿ ಕೇಬಲ್ ವೈರ್‌ಗಳು ಗೊಂಚಲಿ ನಂತೆ ನುಲಿದುಕೊಂಡಿರುತ್ತವೆ. ಅಡಚಣೆರಹಿತ, ಜೋರು ಗಾಳಿ ಬೀಸಿದಾಗ ತಂತಿ ತುಂಡಾಗಿ ಪ್ರಾಣಹಾನಿ ಸಂಭವಿಸುವುದನ್ನು ತಡೆಯಲು ಯುಜಿ ಕೇಬಲ್ ಅಳವಡಿಕೆ ಮಾಡಲಾಗುತ್ತದೆ.
ಆಂದೋಲನ: ದಸರಾ ಮಹೋತ್ಸವದ ವೇಳೆಯಲ್ಲಿ ದೀಪಾಲಂಕಾರದಲ್ಲಿ ಹೊಸದಾಗಿ ಏನಾದರೂ ಪರಿಚಯಿಸುವ ಉದ್ದೇಶ ಇದೆಯೇ?
ಕೆ.ಎಂ.ಮುನಿಗೋಪಾಲರಾಜು: ಕಳೆದ ವರ್ಷ ಡ್ರೋನ್ ಹಾರಾಟ ಮಾಡಲಾಗಿತ್ತು. ಈ ಬಾರಿ ರಾಜಮಾರ್ಗಗಳಲ್ಲಿ ವಿಭಿನ್ನ ರೀತಿಯಲ್ಲಿ ದಸರಾ ದೀಪಾಲಂಕಾರ ಮಾಡಲು ಯೋಚಿಸಲಾಗಿದೆ. ಮೂರು ತಿಂಗಳು ಇರುವ ಮುನ್ನವೇ ರೂಪರೇಷೆ ಮಾಡಲಾಗುತ್ತದೆ. ಡ್ರೋನ್ ಹಾರಾಟದ ವೀಕ್ಷಣೆಯಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ಅದೇ ರೀತಿ ಪ್ರವಾಸಿಗರಿಗೆ ಮನರಂಜನೆ ಸಿಗುವಂತಹ ರೀತಿಯಲ್ಲಿ ರಾಜಮಾರ್ಗದಲ್ಲಿ ದೀಪಾಲಂಕಾರ ಮಾಡಲಾಗುವುದು. ಅನೇಕ ಕಡೆಗಳಿಂದ ಮಾದರಿಗಳನ್ನು ತರಿಸಿಕೊಂಡು ನೋಡುತ್ತಿದ್ದೇವೆ.
ಆಂದೋಲನ: ವಿದ್ಯುತ್ ಕ್ಷೇತ್ರದ ಬಗ್ಗೆ ನಿಮಗಿರುವ ಅನುಭವವನ್ನು ಯಾವ ರೀತಿ ಬಳಸಿಕೊಳ್ಳುವಿರಿ?
ಕೆ.ಎಂ.ಮುನಿಗೋಪಾಲರಾಜು: ಕೇಂದ್ರ, ರಾಜ್ಯ ಸರ್ಕಾರಗಳ ಅನುದಾನವನ್ನು ಬಳಸಿಕೊಂಡು ಆರ್ಥಿಕ ಪರಿಸ್ಥಿತಿ ಉತ್ತಮಪಡಿಸುವುದಕ್ಕೆ ಗಮನಹರಿಸಿದ್ದೇನೆ. ಕೆಲವು ತಾಲ್ಲೂಕು, ಹೋಬಳಿಗಳಲ್ಲಿ ಕಚೇರಿಗಳು ಇಲ್ಲದ ಕಾರಣ ಹೊಸ ಕಚೇರಿ ನಿರ್ಮಾಣ ಮಾಡುವುದು. ಇಲಾಖೆಯು ಗ್ರಾಹಕ ಸ್ನೇಹಿ, ರೈತರ ಸ್ನೇಹಿಯಾಗಿ ಕೆಲಸ ಮಾಡಬೇಕಾದರೆ ನಾವು ಅದಕ್ಕೆ ಹೊಂದಿಕೊಳ್ಳಬೇಕು. ಇಲಾಖೆಯಲ್ಲಿ ಹಲವಾರು ಹುದ್ದೆಗಳನ್ನು ನಿರ್ವಹಿಸಿರುವ ನನಗೆ ಸಿಕ್ಕಿರುವ ಜವಾಬ್ದಾರಿಯನ್ನು ಸಮರ್ಥವಾಗಿ ಬಳಸಿಕೊಂಡು ರಾಜ್ಯದಲ್ಲೇ ಅತ್ಯುತ್ತಮ ನಿಗಮವಾಗಿ ರೂಪಿಸುವ ಆಶಯ ಹೊಂದಿದ್ದೇನೆ.
ಆಂದೋಲನ: ಟಿಸಿ ಸುಟ್ಟು ಹೋದರೆ ದುರಸ್ತಿ ವಿಳಂಬವಾಗುತ್ತಿದೆ ಎಂಬ ದೂರು ರೈತರಿಂದ ಕೇಳಿಬರುತ್ತಿದೆಯಲ್ಲಾ?
ಕೆ.ಎಂ.ಮುನಿಗೋಪಾಲರಾಜು: ರೈತರು ಯಾವುದೇ ಸಮಸ್ಯೆ ಹೇಳಿದರೂ ತಕ್ಷಣವೇ ಪರಿಹರಿಸಲು ತಾಕೀತು ಮಾಡಲಾಗಿದೆ. ಪರಿವರ್ತಕ (ಟಿಸಿ) ಸುಟ್ಟು ಹೋದರೆ ೨೪ ಗಂಟೆಗಳೊಳಗೆ ಬದಲಿಸಲಾಗುವುದು. ಕೆಲವು ಕಡೆಗಳಲ್ಲಿ ಒತ್ತಡ ತಾಳದೆ ಟಿಸಿಗಳು ಸುಟ್ಟು ಹೋಗುತ್ತಿವೆ. ಅಂತಹ ಕಡೆಗಳಲ್ಲಿ ಕ್ರಮಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರ ದೂರು ಆಲಿಸಲು ಕೇಂದ್ರ ಕಚೇರಿಯಲ್ಲಿ ದಿನದ ೨೪೭ ಟೋಲ್ ಫ್ರೀ ಸಹಾಯವಾಣಿ ಮಾಡಲಾಗಿತ್ತು. ಈಗ ಅದನ್ನು ಚಾಮರಾಜನಗರ, ಕೊಡಗು, ಮಂಡ್ಯ, ಹಾಸನ ಜಿಲ್ಲೆಗಳಿಗೂ ವಿಸ್ತರಿಸಲಾಗಿದೆ. ಕೇಂದ್ರ ಕಚೇರಿಗೆ ಕರೆ ಮಾಡಿದರೂ ಸ್ವೀಕರಿಸುವುದಿಲ್ಲ; ಸಂಪರ್ಕ ಸಿಗುವುದಿಲ್ಲ ಎನ್ನುವ ಆರೋಪಗಳು ಕೇಳಿ ಬಂದಿದ್ದವು. ಹಾಗಾಗಿ ಜೂನ್ ೧ರಿಂದ ವಿಕೇಂದ್ರೀಕರಣ ಮಾಡಲಾಗಿದೆ.
ಆಂದೋಲನ: ಗಿರಿಜನ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಯೋಜನೆ ಯಾವಾಗ ಮುಗಿಯಲಿದೆ?
ಕೆ.ಎಂ.ಮುನಿಗೋಪಾಲರಾಜು: ಕಾಡಂಚಿನ ಗ್ರಾಮಗಳಿಗೆ ವಿದ್ಯುತ್ ಕೊಡಬೇಕು. ಪ್ರತಿ ಮನೆಗೂ ಸಂಪರ್ಕ ಕಲ್ಪಿಸಬೇಕೆಂಬುದು ಸರ್ಕಾರದ ಬಯಕೆಯಾಗಿದೆ. ಅರಣ್ಯ ಇಲಾಖೆಯ ಅನುಮತಿ ಪಡೆದು ಕೇಬಲ್ ವೈರ್ಗಳನ್ನು ಅಳವಡಿಸಿ ಸಂಪರ್ಕ ಕಲ್ಪಿಸಲಾಗುವುದು. ಈಗಾಗಲೇ ೨೦ ಹಾಡಿಗಳಿಗೆ ನೀಡಿದ್ದೇವೆ. ಮುಂದಿನ ಡಿಸೆಂಬರ್ ತಿಂಗಳೊಳಗೆ ಎಲ್ಲ ಹಾಡಿಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸುತ್ತೇವೆ. ಸೋಲಾರ್ ಅಳವಡಿಕೆ ವಿ-ಲವಾಗಿದ್ದರಿಂದ ಯುಜಿ ಕೇಬಲ್ ಮೂಲಕ ಟಿಸಿಗಳನ್ನು ಅಳವಡಿಸಲಾಗಿದೆ. ಇದರಿಂದಾಗಿ ಕಾಡಂಚಿನ ಜನರು ಎದುರಿಸುತ್ತಿದ್ದ ವಿದ್ಯುತ್ ಸಮಸ್ಯೆ ದೂರಾಗಲಿದೆ.
ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆದಿದೆ ಎನ್ನಲಾದ ಹಗರಣದ ಸಂಬಂಧ ಹೆಚ್ಚಿನ ವಿಚಾರಣೆಗಾಗಿ ಮಾಜಿ ಆಯುಕ್ತ ದಿನೇಶ್…
ಮಡಿಕೇರಿ : ದುಬಾರೆ ಶಿಬಿರದ ಸಾಕಾನೆ ತಕ್ಷ ಅನಾರೋಗ್ಯದಿಂದ ಸೋಮವಾರ ರಾತ್ರಿ ಮೃತಪಟ್ಟಿದೆ. ಡಿ.೮ರಂದು ರಾತ್ರಿ ೯.೩೦ರ ಸಮಯದಲ್ಲಿ ತಕ್ಷ…
ಮೈಸೂರು : ಕೇಳಿದ ತಕ್ಷಣ ಹಣ ಕೊಡಲಿಲ್ಲ ಎಂಬ ಕಾರಣಕ್ಕಾಗಿ ಸ್ನೇಹಿತನ ಮೇಲೆ ಯುವಕನೊಬ್ಬ ಚಾಕುವಿನಿಂದ ಇರಿದಿರುವ ಘಟನೆ ನಗರದಲ್ಲಿ…
ಮೈಸೂರು : ಲೈಂಗಿಕವಾಗಿ ಸಹಕರಿಸಿದಲ್ಲಿ ಚೆನ್ನಾಗಿ ನೋಡಿಕೊಳ್ಳುತ್ತೀನಿ ಎಂದು ಮಹಿಳಾ ಉದ್ಯೋಗಿಗೆ ಕಿರುಕುಳ ನೀಡಿದ ಖಾಸಗಿ ಕಾರ್ಖಾನೆ ಮಾಲೀಕನ ವಿರುದ್ದ…
ಮೈಸೂರು : ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ದೇವಿಯ ದರ್ಶನ ಹಾಗೂ ಸಮೂಹ ದೇವಾಲಯಗಳ ಸೇವೆಗಳ ಶುಲ್ಕಗಳನ್ನು ಏರಿಸಿರುವ ರಾಜ್ಯ…
ಬೆಳಗಾವಿ : ರಾಜ್ಯದಲ್ಲಿ 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಈಗಾಗಲೇ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಮೂರು ತಿಂಗಳ…