ಭೇರ್ಯ ಮಹೇಶ್
ಅವಳಿ ತಾಲ್ಲೂಕುಗಳ ಹಲವೆಡೆ ಟಿಸಿ ಸುತ್ತ ಬೇಲಿ ಇಲ್ಲದೆ ಅವಘಡ ಸಂಭವಿಸುವ ಭೀತಿ
ಕೆ.ಆರ್.ನಗರ: ಕೆ.ಆರ್.ನಗರ ಮತ್ತು ಸಾಲಿಗ್ರಾಮ ಅವಳಿ ತಾಲ್ಲೂಕುಗಳ ವಿವಿಧೆಡೆ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸಿರುವ ವಿದ್ಯುತ್ ಕಂಬಗಳ ಸುತ್ತ ತಂತಿ ಬೇಲಿ ನಿರ್ಮಿಸದೆ ಅಪಾಯವನ್ನು ಆಹ್ವಾನಿಸುತ್ತಿದ್ದರೂ ಸೆಸ್ಕ್ ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಗಂಧನಹಳ್ಳಿ ಗ್ರಾಮದಲ್ಲಿರುವ ಪರಿವರ್ತಕದ ಬಳಿ ಕಳೆದ ವರ್ಷ ಐದಾರು ಕುರಿಗಳು ವಿದ್ಯುತ್ ಸ್ಪರ್ಶಕ್ಕೀಡಾಗಿ ಸಾವಿಗೀಡಾಗಿದ್ದವು. ಕೆ.ಆರ್.ನಗರ ಪಟ್ಟಣದಲ್ಲಿ ಎರಡು ಹಸುಗಳು, ಸಾಲಿಗ್ರಾಮ ತಾಲ್ಲೂಕಿನ ಚೆನ್ನಂಗೆರೆಯಲ್ಲಿ ಒಂದು ಹಸು, ಕಳ್ಳಿಮುದ್ದನಹಳ್ಳಿಯಲ್ಲಿ ೧ ಹಸು, ಬೈಲಾಪುರ ಗ್ರಾಮದಲ್ಲಿ ೧ ಹಸು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿವೆ. ಇವು ಕೇವಲ ಉದಾಹರಣೆ ಮಾತ್ರ. ಒಂದು ವರ್ಷದಲ್ಲಿ ೧೦ಕ್ಕೂ ಹೆಚ್ಚು ಜಾನುವಾರುಗಳು, ಕುರಿ, ಮೇಕೆಗಳು ವಿದ್ಯುತ್ ತಗುಲಿ ಸಾವನ್ನಪ್ಪಿವೆ. ವಿದ್ಯುತ್ ಪರಿವರ್ತಕಗಳಿಗೆ ತಂತಿಬೇಲಿ ಇಲ್ಲದಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ. ಸಾಲಿಗ್ರಾಮ ತಾಲ್ಲೂಕಿನ ಭೇರ್ಯ ಗ್ರಾಮದಲ್ಲಿ ಒಂದೆಡೆ ಉಪ ಪೊಲೀಸ್ ಠಾಣೆ, ಪಕ್ಕದಲ್ಲಿಯೇ ಶಾಲೆ ಹಾಗೂ ಆಟೋ ನಿಲ್ದಾಣ ಇದೆ. ಆದರೂ ಟ್ರಾನ್ಸ್‌ಫಾರ್ಮರ್ ಸುತ್ತ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ.
ಸಂಬಂಧಪಟ್ಟ ಇಲಾಖೆ ಕನಿಷ್ಠ ಬೇಲಿಯನ್ನು ನಿರ್ಮಿಸುವ ಕೆಲಸವನ್ನೂ ಮಾಡಿಲ್ಲ. ನಿತ್ಯ ಶಾಲೆಗೆ ಬರುವ ಸಣ್ಣ ಸಣ್ಣ ಮಕ್ಕಳು ಇದರ ಆಸುಪಾಸಿನಲ್ಲಿ ಓಡಾಡುತ್ತಿರುತ್ತಾರೆ. ಪಕ್ಕದಲ್ಲೇ ವಾಹನಗಳನ್ನು ನಿಲ್ಲಿಸುತ್ತಾರೆ. ಸಾಕಷ್ಟು ಸಂಖ್ಯೆಯ ಜನ ಸೇರುತ್ತಾರೆ ಎನ್ನುವ ಅರಿವಿದ್ದರೂ ತಂತಿ ಬೇಲಿ ನಿರ್ಮಿಸದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
” ಜಾನುವಾರುಗಳ ಬೆಲೆ ಕನಿಷ್ಠ ೪೦ ಸಾವಿರ ರೂ.ನಿಂದ ೧ ಲಕ್ಷ ರೂ.ವರೆಗೂ ಇರುತ್ತದೆ. ಆದರೆ ವಿದ್ಯುತ್ ತಗುಲಿ ಅಕಾಲಿಕವಾಗಿ ಜಾನುವಾರುಗಳು ಮರಣ ಹೊಂದುತ್ತಿದ್ದರೂ ಸೆಸ್ಕ್ ಎಚ್ಚೆತ್ತಿಲ್ಲ. ಜಾನುವಾರುಗಳು ಸಾವಿಗೀಡಾದರೆ ಅತ್ಯಲ್ಪ ಪರಿಹಾರ ನೀಡಿ ಕೈತೊಳೆದು ಕೊಳ್ಳುತ್ತಿದೆ. ಹೀಗಾಗಿ ವಿದ್ಯುತ್ ಪರಿವರ್ತಕಗಳ ಸುತ್ತಲೂ ತಂತಿ ಬೇಲಿ ಹಾಕಿಸಿ ಸುರಕ್ಷತಾ ಕ್ರಮ ಕೈಗೊಳ್ಳಬೇಕು.”
-ಅರ್ಜುನಹಳ್ಳಿ ರಾಮ್‌ಪ್ರಸಾದ್, ಅಧ್ಯಕ್ಷರು, ತಾಲ್ಲೂಕು ಯುವ ರೈತ ವೇದಿಕೆ.
” ಸಾಲಿಗ್ರಾಮ ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ಹೊಸದಾಗಿ ಸ್ಥಾಪಿಸುತ್ತಿರುವ ವಿದ್ಯುತ್ ಪರಿವರ್ತಕಗಳಿಗೆ ತಂತಿಬೇಲಿ ಅಳವಡಿಸಿ ಸುರಕ್ಷತೆ ಒದಗಿಸಲಾಗಿದೆ. ಆದರೆ ಹಳೆಯ ಶೇ.೫೦ಕ್ಕೂ ಹೆಚ್ಚು ಪರಿವರ್ತಕಗಳಿಗೆ ತಂತಿಬೇಲಿಯೇ ಇಲ್ಲ. ಕೆಲವು ಕಡೆ ತಂತಿ ಬೇಲಿ ನಿರ್ಮಿಸಿದ್ದರೂ ಅವುಗಳು ಹತ್ತಾರು ವರ್ಷಗಳ ಹಿಂದೆ ನಿರ್ಮಿಸಿದ್ದರಿಂದ ಈಗ ಹಾಳಾಗಿವೆ. ಅನುದಾನ ಬಂದ ಕೂಡಲೇ ತಂತಿ ಬೇಲಿ ನಿರ್ಮಿಸಲಾಗುವುದು.”
-ಮಧುಸೂದನ್, ಎಇಇ, ಸೆಸ್ಕ್ ಉಪವಿಭಾಗ ಸಾಲಿಗ್ರಾಮ
1 ಕೆ.ಜಿ.ಬೆಳ್ಳಿಗೆ 3.30 ಲಕ್ಷ ರೂಪಾಯಿ ಹೈದರಾಬಾದ್ : ಚಿನ್ನ ಮತ್ತು ಬೆಳ್ಳಿ ಬೆಲೆಗಳ ಏರಿಕೆ ನಿಲ್ಲುತ್ತಿಲ್ಲ. ಬುಧವಾರ ಹಳದಿ…
ಮೈಸೂರು : ಸೋಮವಾರ ತಡರಾತ್ರಿ ಯುವಕನೋರ್ವನನ್ನು ಐವರ ಗುಂಪು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಉದಯಗಿರಿ…
ಹನೂರು : ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಪಾದಯಾತ್ರಿಕನ ಮೇಲೆ ಚಿರತೆ ದಾಳಿ ಮಾಡಿದ ಪರಿಣಾಮ ವ್ಯಕ್ತಿ ಮೃತಪಟ್ಟಿರುವುದರಿಂದ ಚಿರತೆ…
ಇಡಿ ಬಂಧನದಿಂದ ಬಿಡುಗಡೆ ಕೋರಿ ಮಾಜಿ ಆಯುಕ್ತ ಸಲ್ಲಿಸಿದ್ದ ಅರ್ಜಿ ತಿರಸ್ಕಾರ ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ…
ಬೆಂಗಳೂರು : ಜನವರಿ ಅಂತ್ಯ ಅಥವಾ ಫೆಬ್ರವರಿ 10ರೊಳಗೆ ಮಧುಸೂದನ್ ನಾಯಕ್ ಅವರ ನೇತೃತ್ವದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ…
ಹೆಚ್.ಡಿ.ಕೋಟೆ : ತಾಲ್ಲೂಕಿನ ಕಬಿನಿ ಹಿನ್ನೀರು ಪ್ರದೇಶ, ನಾಗರಹೊಳೆ-ಬಂಡೀಪುರ ಅರಣ್ಯ ವ್ಯಾಪ್ತಿ ಹಾಗೂ ಪರಿಸರ ಸಂವೇದಿ ವಲಯಗಳಲ್ಲಿ ನಿಯಮಗಳನ್ನು ಉಲ್ಲಂಘಿಸಿ…