• ಕೀರ್ತಿ ಬೈಂದೂರು
ಪಾಠ ಮಾಡುವುದೆಂದರೆ ಎಂ. ಜೆ.ಇಂದುಮತಿ ಅವರಿಗೆ ತಪಸ್ಸಿನಂತೆ ಅವರಿಗೆ ತಾನೊಬ್ಬಳು ಕಾನೂನು ವಿಷಯದ ಅಧ್ಯಾಪಕಿ ಆಗ ಬಹುದೆಂಬ ಕನಸಿರಲಿಲ್ಲ. ಆದರಿಂದು ವಿದ್ಯಾರ್ಥಿಗಳ ಮೆಚ್ಚಿನ ಶಿಕ್ಷಕಿಯಾಗಿ ವಿದ್ಯಾವರ್ಧಕ ಕಾನೂನು ಕಾಲೇಜಿ ನಲ್ಲಿ ವೃತ್ತಿ ಬದುಕನ್ನು ಸಾರ್ಥಕವಾಗಿ ನಿಭಾಯಿಸುತ್ತಿದ್ದಾರೆ. ಪರಿಚಯಕ್ಕೆ ಸಿಕ್ಕ ವಿದ್ಯಾರ್ಥಿಗಳೆಲ್ಲ ಇವರ ಪಾಠದ ವೈಖರಿಯನ್ನು ನೆನೆದು, ಹೆಮ್ಮೆಪಟ್ಟುಕೊಳ್ಳುತ್ತಾರೆ.
ಇವರ ಪದವಿ ಓದು ಇನ್ನೂ ಮುಗಿದಿರಲಿಲ್ಲ. ತಾತ ಆಗಲೇ, ಇವಳು ಲಾಯರ್ ಆಗ್ತಾಳೆ ಬಿಡಮ್ಮಾ’ ಎಂದು ತಾಯಿಯವರಲ್ಲಿ ಹೇಳಿದ್ದನ್ನು ಇಂದಿಗೂ ನೆನಪಿಸಿಕೊಳ್ಳು ತ್ತಾರೆ. ಬಹುಶಃ ಇವರ ಮಟ್ಟಿಗೆ ಕಾನೂನು ಪದವಿಯನ್ನು ಆಯ್ದುಕೊಳ್ಳುವುದಕ್ಕೆ ತಾತನ ಮಾತೇ ಪ್ರೇರಣೆ, ವಿದ್ಯಾ ವರ್ಧಕ ಕಾನೂನು ಕಾಲೇಜಿನಲ್ಲಿ ಓದುತ್ತಿರುವಾಗ ನಾಗ ರತ್ನಮ್ಮ ಎಂಬ ಅಧ್ಯಾಪಕರು ದೊರೆತದ್ದು, ಇಂದುಮತಿ ಅವರ ಬದುಕಿಗೊದಗಿದ ಭಾಗ್ಯ, ಬಹುಗಂಭೀರ ವ್ಯಕ್ತಿತ್ವದ ನಾಗರತ್ನಮ್ಮ ಅವರು ನ್ಯಾಯಶಾಸ್ತ್ರ ವಿಷಯ ವನ್ನು ಪಾಠ ಮಾಡುತ್ತಿದ್ದರೆ ತಾದಾತ್ಮ ಚಿತ್ತರಾಗಿ ಕೇಳುತ್ತಿದ್ದರು. ಕೇವಲ ವಕೀಲಿ ವೃತ್ತಿಗೆ ಸೀಮಿತಗೊಳ್ಳ ಬಾರದೆಂದು ಅಧ್ಯಯನದ ಅನಂತ ಅವಕಾಶಗಳನ್ನು ಇಂದುಮತಿ ಅವರಿಗೆ ಪರಿಚಯಿಸಿದ್ದೇ ಅವರು.
ಶಿಕ್ಷಕಿಯೊಬ್ಬರು ವಿದ್ಯಾರ್ಥಿನಿಯ ಮೇಲೆ ಎಷ್ಟು ಪ್ರಭಾವ ಬೀರಬಹುದೆಂಬುದಕ್ಕೆ ಇವರೇ ನಿದರ್ಶನ ಡ್ಯೂಟೀಸ್ ಮತ್ತು ಆಭಿಗೇಷನ್ಸ್ ನಡುವಿನ ವ್ಯತ್ಯಾಸ ತಿಳಿಯುವುದಕ್ಕೆ ನೂರಾರು ಪುಸ್ತಕಗಳನ್ನು ಹುಡುಕಾಡಿಸಿದರು. ಮಾತ್ರ ವಲ್ಲ, ಕನ್ನಡ ಮಾಧ್ಯಮದಲ್ಲಿ ಓದಿದ್ದ ಇವರು ಮುಕ್ಕಾಲು ಗಂಟೆಯವರೆಗೆ ಇಂಗ್ಲಿಷ್‌ನಲ್ಲಿ ಸೆಮಿನಾರ್ ಮಾಡ ಬೇಕಿತ್ತು. ಅಂದು ಅನಿವಾರ್ಯವಾಗಿ ಕಲಿತ ಇಂಗ್ಲಿಷ್ ಇಂದು ಅವರ ಪಾಠ ಬೋಧನೆಗೆ ನೆರವಾಗಿದೆ. ಕಾಕತಾಳಿಯ ವೆಂದರೆ, ತಾವು ಇಷ್ಟಪಟ್ಟು ಓದಿದ್ದನ್ಯಾಯಶಾಸ್ತ್ರ ವಿಷಯವನ್ನು ಇಂದು ತಮ್ಮ ವಿದ್ಯಾರ್ಥಿಗಳಿಗೆ ಬೋಧಿಸುತ್ತಿದ್ದಾರೆ.
ಸ್ನಾತಕೋತ್ತರ ಪದವಿಯನ್ನು ಗಳಿಸಿದ ನಂತರ ಅಧ್ಯಾ ಪನ ವೃತ್ತಿಯ ಹಾದಿ ಹಿಡಿದರು. ದಾರಿ ಸುಗಮವಾಗಿ ಯಂತೂ ಇರಲಿಲ್ಲ. ಅರೆಕಾಲಿಕ ಉಪನ್ಯಾಸಕರಾಗಿದ್ದ ಇಂದು ಮತಿ ಅವರು ದಿನವೊಂದಕ್ಕೆ ಮೂರು ಕಾಲೇಜಿನಲ್ಲಿ ಪಾಠ ಮಾಡಬೇಕಿತ್ತು. ಒಂದು ಕಾಲೇಜಿನಲ್ಲಿ ಪಾಠ ಮುಗಿ ಯುತ್ತಿದ್ದಂತೆಯೇ ಮತ್ತೊಂದು ಕಾಲೇಜಿಗೆ ಓಡ ಬೇಕಿತ್ತು. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ನಾಲ್ಕು ವರ್ಷ ಗಳ ಅಲೆ ದಾಟದ ನಂತರ ತಾನು ಓದಿದ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲೇ ಸಹಾಯಕ ಪ್ರಾಧ್ಯಾಪಕರಾದರು.
ಸಾಂವಿಧಾನಿಕ ಕಾನೂನು ಇವರ ಮುಖ್ಯ ಬೋಧನಾ ವಿಷಯ. ವಿಸ್ತ್ರತ ವಿಷಯ ಪರಿಧಿಯಿರುವ ಕಾನೂನಿನ ಮೂಲ ಬಿಂದುವೇ ಸಂವಿಧಾನ ವಿಶ್ವಸಂಸ್ಥೆಯ ಚಾರ್ಟರ್ ನಲ್ಲಿ ತಿಳಿಸಿದ ಪುರುಷ ಮತ್ತು ಮಹಿಳೆಯ ಸಮಾನ ಹಕ್ಕುಗಳು ಭಾರತ ಸಂವಿಧಾನವನ್ನೂ ಪ್ರಭಾವಿಸಿದೆ. ಸಂವಿ ಧಾನದಲ್ಲಿ ಮಹಿಳೆಗೆಂದೇ ಅನೇಕ ಅನುಚ್ಛೇದಗಳಿದ್ದರೂ ಅರಿವಿನ ಕೊರತೆ ಎದ್ದು ಕಾಣುತ್ತಿದೆ ಎನ್ನುತ್ತಾರೆ. ಸರ್ವೋಚ್ಚ ನ್ಯಾಯಾಲಯ ತನ್ನ ಅನೇಕ ತೀರ್ಪುಗಳಲ್ಲಿ ಮಹಿಳಾ ಹಕ್ಕುಗಳನ್ನು ಮತ್ತೆ ಮತ್ತೆ ತಿಳಿಸುವ ಮೂಲಕ ಹೆಚ್ಚು ಜನರಿಗೆ ಈ ಬಗೆಯ ಅರಿವನ್ನು ಮೂಡಿಸುತ್ತಿದೆ.
ಹೆಣ್ಣು ಕಾನೂನನ್ನು ಓದಿಕೊಂಡಿದ್ದಾಳೆಂದರೆ ಆಕೆಯನ್ನು ನೋಡುವ ಕ್ರಮವೇ ಬೇರೆ, ಮದು ವೆಯ ವಿಷಯಕಂತೂ ಹೆಣ್ಣು ಬೇಡವೆನ್ನು ವುದಕ್ಕೆ ಇದೇ ಮುಖ್ಯ ಕಾರಣ ವಾಗುತ್ತದೆ ಎನ್ನುತ್ತಾ ತಮ್ಮ ಕಾ ಲ ದಲ್ಲಿ ದ ನಿಜಸ್ಥಿತಿಯನ್ನು ತೆರೆದಿಡು ತ್ತಾರೆ. ಈಗಿನ ಯುವಜನತೆಯ ಮನಸ್ಥಿತಿ ಹೇಗಿದೆ ಎಂದರೆ, ಗುರುತಿಸಬಹುದಾದ ಬದಲಾವಣೆಗಳಾಗಿವೆ. ಇವರ ವೃತ್ತಿ ಬದುಕಿನಲ್ಲಿ ಕಂಡಂತೆ ಅನೇಕ ಹೆಣ್ಣು ಮಕ್ಕಳು ಮದುವೆಯಾಗಿ, ಮಗುವಾದ ಮೇಲೆ ಕಾನೂನು ಓದಬೇಕೆಂದು ಕನಸಿಟ್ಟು ಬರುತ್ತಾರೆ. ಕೋವಿಡ್ ಸಮಯದಲ್ಲೊಮ್ಮೆ ಇಂದುಮತಿ ಅವರು ಆನ್ ಲೈನ್‌ನಲ್ಲಿ ಪಾಠ ಮಾಡಿದ ಮೇಲೆ ಮುಖ ದರ್ಶನ ಮಾಡಿಸಪ್ಪಾ ಎಂದರೆ ವಿದ್ಯಾರ್ಥಿನಿಯೊಬ್ಬಳು ನೋಟ್ಸ್ ಬರೆದುಕೊಳ್ಳುತ್ತಾ, ಪಕ್ಕದಲ್ಲಿ ತನ್ನ ಮಗು ಮಲಗಿದ್ದ ತೊಟ್ಟಿಲನ್ನೂ ಆಡಿಸುತ್ತಿದ್ದಳು! ಕಾನೂನು ಪದವಿ ಪಡೆದ ನಂತರ ಏನಾಗುತ್ತೀರೆಂದರೆ ಬಹುತೇಕ ವಿದ್ಯಾರ್ಥಿ ನಿಯರು ನ್ಯಾಯಮೂರ್ತಿಗಳಾಗಬೇಕೆನ್ನುತ್ತಾರೆ. ಓದಿದ ಮೇಲೆ ಸಿಗುವ ಅನೇಕ ಆಯ್ಕೆಗಳ ಬಗ್ಗೆ ಅವರೆಲ್ಲ ತಿಳಿದುಕೊಂಡಿದ್ದಾರೆ.
ಇಂತಹ ವಿದ್ಯಾರ್ಥಿಗಳನ್ನು ಅಧ್ಯಾಪಕರಾದ ನಾವು ಪ್ರೋತ್ಸಾಹಿಸಬೇಕು ಎನ್ನುವಲ್ಲಿ ಇವರ ಅಪ್ಪಟ ಮನುಷ್ಯ ಪ್ರೀತಿಯಿದೆ. ಬದುಕಿಗೆ ಪ್ರತಿಕ್ಷಣದಲ್ಲಿ ಆಸರೆಯಾಗಿ ನಿಂತ ತನ್ನ ತಾಯಿ, ಕೆಎಎಸ್ ಅಧಿಕಾರಿಯಾದ ಅಕ್ಕ ರೂಪ, ಗಂಡ ವಿನಯ್ ಅದೆಲ್ಲಕ್ಕಿಂತ ಹೆಚ್ಚು ಜೀವದುಸಿರು ಮಗಳು ವಾಗ್ವಿಲಾಸಿನಿಯಿಂದ ಜೀವನ ತೃಪ್ತವೆನಿಸುತ್ತಿದೆ ಎನ್ನುತ್ತಾರೆ. ಸದ್ಯ ಅಧ್ಯಾಪನದ ಜೊತೆಗೆ ಪಿಎಚ್.ಡಿ ಪದವಿ ಪಡೆಯುವತ್ತ ನಿರತರಾಗಿದ್ದಾರೆ.
keerthisba2018@gmail.com
ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಕನ್ನಡ ಸಾಹಿತ್ಯ…
ಮಂಡ್ಯ: ಜಿಲ್ಲೆಯ ಕ್ಯಾತನಹಳ್ಳಿಯಲ್ಲಿ ಬರ್ಬರ ಹತ್ಯೆ ಪ್ರಕರಣದ ಪಾತಕಿ ಮೊಹಮ್ಮದ್ ಇಬ್ರಾಹಿಂ ಪೊಲೀಸರ ವಿಚಾರಣೆ ವೇಳೆ ಶಾಕಿಂಗ್ ವಿಚಾರ ಬಾಯ್ಬಿಟ್ಟಿದ್ದಾನೆ.…
ಕುಶಾಲನಗರ: ಸ್ನಾನಕ್ಕೆಂದು ನದಿಗೆ ಇಳಿದಿದ್ದ ವ್ಯಕ್ತಿಯೊಬ್ಬರು ಜಲ ಸಮಾಧಿಯಾಗಿರುವ ಘಟನೆ ಕುಶಾಲನಗರದಲ್ಲಿ ನಡೆದಿದೆ. ಕುಶಾಲನಗರ ಅಯ್ಯಪ್ಪ ಸ್ವಾಮಿ ದೇವಾಲಯ ಸಮೀಪದಲ್ಲಿ…
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರಸಿದ್ಧ ಪಾರ್ಕ್ ಆದ ಕಬ್ಬನ್ ಪಾರ್ಕ್‌ನಲ್ಲಿ ಇನ್ನು ಮುಂದೆ ಯಾವುದೇ ಸಂಘಟನೆಗಳು ತಮ್ಮ ಚಟುವಟಿಕೆ…
13 ವರ್ಷದ ವೈಭವ್ ಸೂರ್ಯವಂಶಿ ಐಪಿಎಲ್ ಹರಾಜಿನಲ್ಲಿ 1.10 ಕೋಟಿಗೆ ರಾಜಸ್ಥಾನ ತಂಡಕ್ಕೆ ಹರಾಜಾಗುವ ಮೂಲಕ ಕಿರಿಯ ವಯಸ್ಸಿಗೆ ಐಪಿಎಲ್‌ಗೆ…
ಕುವೈತ್: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಕುವೈತ್ ಪ್ರವಾಸ ಕೈಗೊಂಡಿದ್ದು, ಅಲ್ಲಿನ ರಾಜ ಶೇಕ್ ಮಿಶಾಲ್…