ಸುಂಟಿಕೊಪ್ಪದಲ್ಲಿ ೧೮ ಲಕ್ಷ ರೂ. ವೆಚ್ಚದ ಮಂಟಪ ನಿರ್ಮಾಣ ೩ ದಿನಗಳ ಧಾರ್ಮಿಕ ಕಾರ್ಯಕ್ರಮ
ಸುಂಟಿಕೊಪ್ಪ: ಇಲ್ಲಿನ ಶ್ರೀ ಪುರಂ ಅಯ್ಯಪ್ಪಸ್ವಾಮಿ ಕ್ಷೇತ್ರದ ಆವರಣದಲ್ಲಿ ಸುಮಾರು ೧೮ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸ ಲಾಗಿರುವ ಮುಖಮಂಟಪವು ಡಿ.೨೫ರ ಗುರುವಾರ ಲೋಕಾರ್ಪಣೆಗೊಳ್ಳಲಿದ್ದು, ದೇವಾಲಯದ ಆಡಳಿತ ಮಂಡಳಿ ಅಗತ್ಯ ಸಿದ್ಧತೆಯನ್ನು ಮಾಡಿಕೊಂಡಿದೆ.
ಶ್ರೀಪುರಂ ಅಯ್ಯಪ್ಪಸ್ವಾಮಿ ಕ್ಷೇತ್ರವು ೧೯೯೨ ಮೇ.೮ ರಂದು ಸ್ಥಾಪನೆಗೊಂಡಿತು. ನಂತರದ ದಿನಗಳಲ್ಲಿ ದೇವಾಲಯದ ಆವರಣದಲ್ಲಿ ಶ್ರೀ ಅಯ್ಯಪ್ಪಸ್ವಾಮಿ, ಶ್ರೀಕನ್ನಿಮೂಲ ಗಣಪತಿ,ನೈವೇದ್ಯ ಕೊಠಡಿ ಮತ್ತು ದೇವಸ್ಥಾನದ ಕಚೇರಿ ನಿರ್ಮಿಸಲಾಗಿತ್ತು. ಅದರಂತೆ ಕಳೆದ ವರ್ಷ ದುರ್ಗಾ ದೇವಿಯ ದೇವಸ್ಥಾನವನ್ನು ಬಿ.ಎಂ. ಸುರೇಶ್ ನೇತೃತ್ವದ ದೇವಸ್ಥಾನದ ಆಡಳಿತ ಮಂಡಳಿ ದೇವಾಲಯವನ್ನು ನಿರ್ಮಿಸಿ ಜೀರ್ಣೊದ್ಧಾರಗೊಳಿಸಿತು.
ಈ ಬಾರೀ ಶ್ರೀಪುರಂ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ತೀರ್ಥ ಮಂಟಪದ ನಿರ್ಮಾಣಕ್ಕೆ ಊರಿನ ದಾನಿಗಳು, ಭಕ್ತಾದಿಗಳು ಸೇರಿದಂತೆ ಸುತ್ತ ಮುತ್ತಲಿನ ದಾನಿಗಳ ಸಹಾಯದಿಂದ ೧೮ ಲಕ್ಷ ರೂ. ವೆಚ್ಚದಲ್ಲಿ ಮುಖಮಂಟಪ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.
ಮುಖ ಮಂಟಪ ನಿರ್ಮಾಣಕ್ಕೆ ೬ ತಿಂಗಳ ಹಿಂದೆ ಪುತ್ತೂರಿನ ಜಗನಿವಾಸ್ ರಾವ್ ಶಿಲಾ ನ್ಯಾಸ ನೆರವೇರಿಸಿದ್ದರು. ಪುತ್ತೂರಿನ ಶಿಲ್ಪಿಗಳಾದ ಕೃಷ್ಣಪ್ರಸಾದ್ ಮುಖ ಮಂಟಪವನ್ನು ಸುಂದರವಾಗಿ ರೂಪಿಸಿದ್ದು,ಲೋಕಾರ್ಪಣೆಗೆ ಸಿದ್ಧವಾಗಿದೆ.
ಡಿ.೨೪ ರಂದು ಸಂಜೆ ೬ ಗಂಟೆಗೆ ಕೇರಳದ ತಳಿಪರಂಬ ಕಾಳೇಘಾಟ್ ಇಲ್ಲಂ ಮಧುಸೂದನ್ ತಂತ್ರಿ ಅವರ ನೇತೃತ್ವದಲ್ಲಿ ಆಚಾರ್ಯ ತಂತ್ರಿ ಯವರನ್ನು ಸ್ವೀಕಾರ ಮಾಡುವುದರೊಂದಿಗೆ ೬.೩೦ಕ್ಕೆ ಪ್ರಾಶಬ್ಧ ಶುದ್ಧಿ ನಡೆಯಲಿದೆ. ರಾತ್ರಿ ೭ ಗಂಟೆಗೆ ರಾಕ್ಷೆಘ್ನ ಹೋಮ ಹಾಗೂ ಮುಖಮಂಟಪ ಸಮರ್ಪಣೆ, ರಾತ್ರಿ ೮ ಗಂಟೆಗೆ ವಾಸ್ತು ಹೋಮ, ವಾಸ್ತು ಕಲಶ ಪೂಜೆ, ವಾಸ್ತು ಬಲಿ, ವಾಸ್ತು ಕಲಶಾಭಿಷೇಕ, ಅತ್ತಾಯ ಪೂಜೆ, ಮಹಾಮಂಗಳಾರತಿ ಪ್ರಸಾದ ವಿನಿಯೋಗ ನಡೆಯಲಿದೆ.
ಡಿ.೨೫ ರಂದು ಬೆಳಿಗ್ಗೆ ೭ ಗಂಟೆಗೆ ಗಣಪತಿ ಹೋಮ, ೮ ಗಂಟೆಗೆ ಕಳಸಪೂಜೆ, ೧೦ ಗಂಟೆಗೆ ದುರ್ಗಾ ಲಕ್ಷಿ ಗೆ ಕಲಶಾಭಿಷೇಕ, ಮಧ್ಯಾಹ್ನ ೧೨ ಗಂಟೆಗೆ ಪೂಜೆ ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದೆ. ದುರ್ಗಾ ದೇವಿಯ ಪ್ರತಿಷ್ಠಾಪನಾ ವಾರ್ಷಿಕೋತ್ಸವದ ಅಂಗವಾಗಿ ವೈದಿಕ ಧಾರ್ಮಿಕ, ವಿಧಿವಿಧಾನ ಕಾರ್ಯಕ್ರಮಗಳು ನಡೆಯಲಿವೆ.
ಡಿ.೨೭ ರಂದು ಮಂಡಲಪೂಜೆ ಅಂಗವಾಗಿ ಮುಂಜಾನೆ ೬.೪೫ಕ್ಕೆ ಗಣಪತಿ ಹೋಮ, ೭.೧೦ಕ್ಕೆ ಕನ್ನಿಮೂಲ ಗಣಪತಿಗೆ ಎಳೆನೀರು ಅಭಿಷೇಕ, ೭.೩೦ಕ್ಕೆ ಚಂಡೆಮೇಳ, ೯ ಗಂಟೆಗೆ ಶ್ರೀ ಅಯ್ಯಪ್ಪ ಸ್ವಾಮಿಗೆ ಪಂಚಾಮೃತಾಭಿಷೇಕ, ೧೧.೩೦ಕ್ಕೆ ಶ್ರೀ ಅಯ್ಯಪ್ಪ ಸ್ವಾಮಿಗೆ ಲಕ್ಷಾರ್ಚನೆ, ೧೨.೩೦ಕ್ಕೆ ಶ್ರೀ ಅಯ್ಯಪ್ಪಸ್ವಾಮಿಗೆ ಪಲ್ಲಪೂಜೆ, ೧ ಗಂಟೆಗೆ ಮಹಾಪೂಜೆ ಮತ್ತು ಭಕ್ತಾದಿಗಳಿಗೆ ಮಧ್ಯಾಹ್ನ ೧ರಿಂದ ೪ ರವರೆಗೆ ಅನ್ನ ಸಂತರ್ಪಣೆ ನಡೆಯಲಿದೆ. ದಿನದ ವಿಶೇಷ ಪೂಜೆಯಾಗಿ ಬಿಲ್ವಪತ್ರೆ, ತುಳಸಿ ಅರ್ಚನೆ, ಪಂಚಾಮೃತ ಅಭಿಷೇಕ ಹಾಗೂ ದುರ್ವಾಚನೆ ನಡೆಸಲಾಗುವುದು.
ಶ್ರೀಪುರಂ ಅಯ್ಯಪ್ಪ ಕ್ಷೇತ್ರದಲ್ಲಿ ವಿಶೇಷವಾಗಿ ಸಂಜೆ ೬.೩೦ಕ್ಕೆ ದೀಪಾರಾಧನೆ ಮತ್ತು ಮೆರವಣಿಗೆ, ೭.೩೦ಕ್ಕೆ ದುರ್ಗಾಪೂಜೆ ನಂತರ ಮಹಾಮಂಗಳಾರತಿಯೊಂದಿಗೆ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ಆಡಳಿತ ಮಂಡಳಿ ಅಧ್ಯಕ್ಷರಾದ ಸುರೇಶ್ ಹಾಗೂ ಕಾರ್ಯದರ್ಶಿ ಎಂ.ಚಂದ್ರ ಅವರು ತಿಳಿಸಿದ್ದಾರೆ.
” ಆಡಳಿತ ಮಂಡಳಿ, ಹಿರಿಯರ ಮಾರ್ಗದರ್ಶನದೊಂದಿಗೆ ದಾನಿಗಳು, ಭಕ್ತಾದಿಗಳ ನೆರವಿನೊಂದಿಗೆ ದೇವಾಲಯದಲ್ಲಿ ಹಂತ ಹಂತವಾಗಿ ಎಲ್ಲ ಕೆಲಸಗಳು ನಡೆದಿವೆ. ಅದೇ ರೀತಿ ದುರ್ಗಾ ಲಕ್ಷಿ ದೇವಸ್ಥಾನ ಜೀರ್ಣೋದ್ಧಾರ ಮತ್ತು ಲೋಕಾರ್ಪಣೆಗೊಳಿಸಲು ಹಲವರು ನೇರವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ್ದರು. ಈ ಬಾರಿ ಮುಖ ಮಂಟಪ ನಿರ್ಮಾಣಕ್ಕೆ ಹಿರಿಯರು, ದಾನಿಗಳು ಹಾಗೂ ಭಕ್ತಾದಿಗಳು ಸಹಕಾರ ನೀಡಿದ್ದರಿಂದ ೬ ತಿಂಗಳಲ್ಲಿ ಕಾಮಗಾರಿ ಮುಗಿದು ಲೋಕಾರ್ಪಣೆಗೆ ಸಿದ್ಧಗೊಂಡಿದೆ.”
-ಬಿ.ಎಂ.ಸುರೇಶ್, ಅಧ್ಯಕ್ಷರ, ಶ್ರೀಪುರಂ ಅಯ್ಯಪ್ಪಸ್ವಾಮಿ ಕ್ಷೇತ್ರ ಆಡಳಿತ ಮಂಡಳಿ
” ಸುಂಟಿಕೊಪ್ಪದ ಶ್ರೀಪುರಂ ಅಯ್ಯಪ್ಪಸ್ವಾಮಿ ಕ್ಷೇತ್ರದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ, ಕನ್ನಿಮೂಲ ಗಣಪತಿ, ಶ್ರೀ ದುರ್ಗಾ ಲಕ್ಷಿ ಸನ್ನಿಧಿಗಳಿವೆ. ಮುಂದೆ ನಾಗಾಲಯ ಮಾಡುವ ಉದ್ದೇಶವಿದೆ.ಭಕ್ತಾದಿಗಳು ಹಾಗೂ ದಾನಿಗಳು ಕೈ ಜೋಡಿಸಬೇಕು.”
-ಎಂ.ಚಂದ್ರ, ಕಾರ್ಯದರ್ಶಿ, ಶ್ರೀ ಪುರಂ ಅಯ್ಯಪ್ಪ ಸ್ವಾಮಿ ಕ್ಷೇತ್ರ
ರಾಯಚೂರು: ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರಿಂದು ಕುಟುಂಬ ಸಮೇತರಾಗಿ ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದರು.…
ಬೆಂಗಳೂರು: ಬಿಪಿಎಲ್ ಕಾರ್ಡುದಾರರಿಗೆ ಜನವರಿ ಅಥವಾ ಫೆಬ್ರವರಿಯಲ್ಲಿ ಇಂದಿರಾ ಕಿಟ್ ವಿತರಣೆ ಮಾಡಲಾಗುತ್ತದೆ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.…
ಬೆಂಗಳೂರು: ನಟ ದರ್ಶನ್ ಹಾಗೂ ನಟ ಕಿಚ್ಚ ಸುದೀಪ್ ಫ್ಯಾನ್ಸ್ ವಾರ್ ತಾರಕಕ್ಕೇರಿರುವ ಮಧ್ಯೆ ಸೋಷಿಯಲ್ ಮೀಡಿಯಾದಲ್ಲಿ ಅಶ್ಲೀಲ ಮೆಸೇಜ್…
ಮೈಸೂರು: ಸಚಿವ ಜಮೀರ್ ಅಹ್ಮದ್ ಖಾನ್ ಅವರ ಆಪ್ತ ಸಹಾಯಕ ಸರ್ಫರಾಜ್ ಅವರ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿರುವ…
ಬೆಂಗಳೂರು: ತನ್ನ ಆಂತರಿಕ ಕಚ್ಚಾಟದಿಂದ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಹೊರ ಬರದಿದ್ದರೆ, ಮುಂದಿನ ವಿಧಾನಸಭೆ ಚುನಾಣೆಯಲ್ಲಿ ರಾಜ್ಯದ ಜನತೆ ಇವರನ್ನು…
ಬೆಂಗಳೂರು: ಬೆಂಗಳೂರಿನಲ್ಲಿ 1000 ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ನಿರ್ಮಿಸಬೇಕು ಎಂಬುದು ಡಾ. ಶಾಮನೂರು ಶಿವಶಂಕರಪ್ಪ ಆಶಯವಾಗಿತ್ತು, ಈ ಕನಸು ನನಸು ಮಾಡಲು…