Andolana originals

ನಾನೇ ನನ್ನ ಪುಸ್ತಕದ ಪ್ರಕಾಶಕ ಎಂಬ ಪ್ರಸವ ಸುಖ

• ಗುರುಪ್ರಸಾದ್ ಕಂಟಲಗೆರೆ

ಈಗಲೂ ನಾನು ಯಾರಾದರು ಹೊಸ ಪುಸ್ತಕ ಮಾಡುತ್ತೇನೆಂದರೆ ‘ಲೇಖಕರಾದ ನೀವೇ ಮಾಡಿ’ ಎಂದೇ ಹೇಳುತ್ತೇನೆ. ನಾನು ಇದುವರೆಗೆ ತಂದಿರುವ ಏಳೆಂಟು ಪುಸ್ತಕಗಳಲ್ಲಿ ನಾನೇ ಪ್ರಕಾಶನ ಮಾಡಿಕೊಂಡಿರುವವೇ ಹೆಚ್ಚು. ಬರಹಗಾರನಾದವನು ಒಂದಿಷ್ಟು ಸ್ವಾಭಿಮಾನಿಯಾಗಿದ್ದರೆ ಸಾಕು ಒಲ್ಲದ ಪ್ರಕಾಶಕರ ಹಿಂದೆ ಬೀಳುವುದಿಲ್ಲ. ಪಾಪ ಬರಹಗಾರ ಸ್ವಾಭಿಮಾನಿಯಾಗಿದ್ದರೆ ಸಾಲದು ಆರ್ಥಿಕವಾಗಿಯೂ ಒಂದಿಷ್ಟು ಸದೃಢನಾಗಿ ದ್ದರೆ ಈ ತಾಪತ್ರಯವೇ ಬರಲ್ಲ. ಬರಹ ಗಾರ ಸ್ವಾಭಿಮಾನಿಯಾಗಿದ್ದರೂ ಹಣವಂತ ನಾಗಿದ್ದರೂ ಪುಸ್ತಕ ಹೊರ ತರುವಲ್ಲಿನ ತಾಂತ್ರಿಕ ತಿಳಿವಳಿಕ ತಿಳಿದಿಲ್ಲದಿದ್ದಾಗ ಈ ಮಾಯಾಜಾಲದಲ್ಲಿ ತಾನೂ ಸಿಲುಕಿ ನರಳುವುದುಂಟು. ಇಂಥವರ ಇರಾದೆ ಒಂದೇ, ನಾವೇ ಬಂಡವಾಳ ಹೂಡಿ ಪುಸ್ತಕ ತಂದರೆ ಅದರ ಮಾರ್ಕೆಟಿಂಗ್ ನಮಗೆ ಗೊತ್ತಿರುವುದಿಲ್ಲ, ಇಂಥ ಪ್ರಕಾಶಕರಾದರೆ ಪ್ರತಿಷ್ಠಿತ ಮಳಿಗೆಗಳಲ್ಲಿ ನಮ್ಮ ಪುಸ್ತಕ ಮಾರಾಟವಾಗುವಂತೆ ನೋಡಿಕೊಳ್ಳುತ್ತಾರೆ ಎಂಬ ನಂಬಿಕೆ. ಈ ಕುರುಡು ನಂಬಿಕೆಯಿಂದ ಅವರು ಕೇಳಿದಷ್ಟು ಹಣ ಕೊಟ್ಟು ಅವರ ಪ್ರಕಾಶನದಲ್ಲಿ ಇವರ ಪುಸ್ತಕ ಪ್ರಕಟಿಸಿಕೊಳ್ಳುತ್ತಾರೆ. ಅವರು ಕೊಡುವ ಮೂವತ್ತೊ ಐವತ್ತೊ ಪುಸ್ತಕ ಪಡೆದುಕೊಂಡು ಶೀಘ್ರವಾಗಿ ಕೈ ಖಾಲಿ ಮಾಡಿಕೊಂಡು ದುಬಾರಿ ಹಣ ತೆತ್ತು ತಮ್ಮ ಪುಸ್ತಕವನ್ನು ತಾವೇ ಮತ್ತೊಮ್ಮೆ ಕೊಂಡುಕೊಳ್ಳುತ್ತಾರೆ. ಬಹುತೇಕ ಹೊಸ ಬರಹಗಾರರು ತಮ್ಮ ಚೊಚ್ಚಲ ಕೃತಿ ಹೊರತರುವಲ್ಲಿ ಇಂಥದ್ದೇ ಅನುಭವಕ್ಕೆ ತುತ್ತಾಗಿರುತ್ತಾರೆ. ಇದಕ್ಕೆ ಅಪವಾದವೆಂಬಂತೆ ಬೆರಳೆಣಿಕೆಯ ಸಹೃದಯಿ ಪ್ರಕಾಶಕರೂ ಇದ್ದಿರಬಹುದು!

ಈಗಂತೂ ಸಾಮಾಜಿಕ ಜಾಲತಾಣಗಳ ಕಾಲ, ಮೊದಲಿನಂತೆ ಶಖದಿಂದಲೇ ತೀರ್ಥ ಬರಬೇಕೆಂದು ಕಾಯುವ ಸ್ಥಿತಿಯಂತೂ ಇಲ್ಲ. ಓದುಗರನ್ನು ಫೇಸ್ಟುಕ್ಕು ವಾಟ್ಸಾಪ್ಗಳ ಮೂಲಕವೇ ಗುರುತಿಸಿಕೊಂಡು ತಲುಪಬಹುದು. ಒಂದು ಪುಸ್ತಕದ ವ್ಯಾವಹಾರಿಕ ಆಯುಷ್ಯ ಒಂದು ತಿಂಗಳವರೆಗಷ್ಟೆ. ಬರಹಗಾರ ಕಮ್ ಪ್ರಕಾಶಕ ಆ ಮೊದಲ ಒಂದು ತಿಂಗಳು ತನ್ನ ಪುಸ್ತಕವನ್ನು ಮೈ ಚಳಿ ಬಿಟ್ಟು ಹೊತ್ತು ಮೆರೆಸಿದರೆ ಹಾಕಿದ ಬಂಡವಾಳಕ್ಕೆ ಮೋಸವಿಲ್ಲದಂತೆ ಮಾಡಿಕೊಳ್ಳಬಹುದು. ಈ ಹಂತದಲ್ಲಿ ಪ್ರಜ್ಞೆ ತಪ್ಪಿದರೆ ಕೈಸುಟ್ಟುಕೊಂಡಾನು. ಎಂತೆಂತದೋ ಪುಸ್ತಕ ತಂದು ಜನ ಕೊಳ್ಳಲಿಲ್ಲ ಅಂದರೆ ಯಾರೂ ಹೊಣೆಗಾರರಲ್ಲ. ಇಂಥ ಚೀಪ್ ಗಿಮಿಕ್ ಗಳನ್ನು ಓದುಗ ಮೊದಲ ಕೃತಿಯಲ್ಲೇ ಗೊತ್ತುಮಾಡಿಕೊಂಡಿರುತ್ತಾನೆ. ಓದುಗ ಯಾವಾಗಲೂ ಚೂಸಿಯಾಗಿರುತ್ತಾನೆ. ಬಲವಂತವಾಗಿ ಕೊಂಡೊಯ್ದ ಪುಸ್ತಕಕ್ಕೆ ರಾಕಿನಲ್ಲೂ ಜಾಗ ಸಿಗದಂತೆ ನೋಡಿಕೊಳ್ಳುತ್ತಾನೆ. ಉತ್ತಮ ಕಂಟೆಂಟ್, ನಿರೂಪಣೆ, ಭಾಷೆ, ಸಂವೇದನೆ ಇರುವ ಪುಸ್ತಕಕ್ಕೆ ಓದುಗರು ಸ್ಪಂದಿಸಿಯೇ ಸ್ಪಂದಿಸುತ್ತಾರೆ.

ನಾನು ಪ್ರಕಾಶಕರ ಹಿಂದೆ ಬೀಳುವುದನ್ನು ನನ್ನ ಮೊದಲ ಪುಸ್ತಕಕ್ಕೇ ಕೊನೆಯಾಗಿಸಿಕೊಂಡೆ. ಆಸಲಿಗೆ ಆ ಪುಸ್ತಕದ ಮುಕ್ಕಾಲು ಹಣವನ್ನು ನಾನೇ ತೊಡಗಿಸಿದ್ದೆ. ಆದರೆ ಪುಸ್ತಕ ಮಾಡುವುದರ ತಳ ಬುಡ ತಿಳಿಯದೆ, ಯಾರಾದರೂ ದಡ ಮುಟ್ಟಿಸುತ್ತಾರಾ ಎಂದು ಆಸೆ ಹೊತ್ತಿದ್ದೆ. ಆ ಆಸೆಗೆ ಒತ್ತಾಸೆಯಾಗೇನೊ ಬಂದರು ಅಥವಾ ಕಂಡರು. ಆದರೆ ನಾನೇ ಹಣ ತೊಡಗಿಸಿದ್ದರೂ ನನ್ನ ಪುಸ್ತಕದ ಕನಿಷ್ಠ ಐವತ್ತು ಕಾಪಿಗಳನ್ನು ಅವರಿಂದ ಪಡೆಯಲು ಹರಸಾಹಸ ಪಟ್ಟಿದ್ದೆ. ಕೊನೆಗೆ ಅದರ ಬಿಡುಗಡೆಯನ್ನೂ ನನ್ನ ಸ್ವಂತ ಖರ್ಚಿನಿಂದಲೇ ಮಾಡಿಕೊಂಡೆ. ಬಹುಶಃ ಯಾವುದೇ ಬರಹಗಾರ ತನ್ನ ಪುಸ್ತಕ ಆಚೆ ಬರುವಷ್ಟರಲ್ಲಿ ಪ್ರಕಾಶಕನೊಂದಿಗೆ ಮುನಿಸಿಕೊಳ್ಳದೆ ಇರಲು ಸಾಧ್ಯವೇ ಇಲ್ಲವೇನೋ. ಇದರಲ್ಲಿ ಹಿರಿ ಕಿರಿಯರೆಂಬ ಭೇದವಿರಲಾರದು. ಮೊದಲೇ ಹೇಳಿದಂತೆ ಇದಕ್ಕೆ ಅಪವಾದದಂತೆಯೂ ಅಲ್ಲಲ್ಲೆ ಇರಬಹುದು.

ಬರಹಗಾರನಾದವನಿಗೆ ಪ್ರಸವ ವೇದನೆ. ಆತ ತನ್ನ ಕೂಸನ್ನು ಎಷ್ಟೊತ್ತಿಗೆ ಎತ್ತಿ ಮುದ್ದಾಡುತ್ತೇನೆಂದು ತವಕಿಸಿರುತ್ತಾನೆ. ನಿಮ್ಮ ಪುಸ್ತಕ ಮಾಡುತ್ತೇನೆಂದು ಆಸೆ ಹುಟ್ಟಿಸಿರುವ ಪ್ರಕಾಶಕನಿಗೆ ಆ ವರ್ಷದ ಕೊನೆ ಬರಲೇಬೇಕು. ಡಿಸೆಂಬರ್‌ಗೂ • ಮುನ್ನ ಪುಸ್ತಕಕ್ಕೆ ಬಂಡವಾಳ ಹಾಕಿ ಸುಮ್ಮನೆ ಕೂರಲಾರ. ಅದರಲ್ಲೂ ಕಾವ್ಯವಾದರೆ ಯಾರೂ ಮೂಸಲ್ಲ, ಸಣ್ಣ ಗಾತ್ರದ ಕತೆ ಕಾದಂಬರಿಯಾದರೆ ಒಂಚೂರು ನೋಡಬಹುದು ಇತ್ಯಾದಿ ವ್ಯವಹಾರಿ, ಆತನ ದೃಷ್ಟಿಯೇನಿದ್ದರೂ ಗ್ರಂಥಾಲಯ ಇಲಾಖೆಯ ಸಗಟು ಖರೀದಿಯೆಡೆಗೆ ಇರುತ್ತದೆ. ಈ ನಡುವೆ ಲೇಖಕ ತುಂಬಿದ ಬಸುರನ್ನು ಎಷ್ಟುದಿನ ಹೊತ್ತು ತಿರುಗಾಡುತ್ತಾನೆ. ಆತನಿಗೆ ಆಯಾಸ, ಏದುಸಿರು, ನಿಟ್ಟುಸಿರು.

ಈ ತಾಪತ್ರಯಗಳಿಂದ ದೂರವಾಗಲೆಂದೇ ನನ್ನ ಪುಸ್ತಕಗಳನ್ನು ನಾನೇ ಪ್ರಕಾಶನ ಮಾಡಿಕೊಳ್ಳುತ್ತಿದ್ದೇನೆ. ‘ಅಟ್ರಾಸಿಟಿ’ ನನ್ನ ಏಳನೇ ಕೃತಿ. ಓದುಗರಿಂದ ಉತ್ತಮ ಸ್ಪಂದನೆ ಇದೆ. ಪುಸ್ತಕ ತಲುಪಿದ ತಕ್ಷಣ ಅವರೇ ಗೂಗಲ್ ಪೇ ಮಾಡುತ್ತಾರೆ. ರಾತ್ರಿಯೆಲ್ಲ ಪ್ಯಾಕ್ ಮಾಡಿ ಬೆಳಿಗ್ಗೆ ಕೆಲಸಕ್ಕೋಗುವ ಮುನ್ನ, ಪೋಸ್ಟ್ ಮಾಡಿ ಹೋಗುವುದನ್ನು ಮರೆಯಬಾರದಷ್ಟೆ

gurupushpa83@gmail.com

ಆಂದೋಲನ ಡೆಸ್ಕ್

Recent Posts

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

6 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

8 hours ago

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

8 hours ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

9 hours ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

10 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

10 hours ago