Andolana originals

ಯಂಗ್ ಆಗಿ ಕಾಣೋದು ಹೆಂಗೆ?

• ಎಚ್.ವಿ.ನಂದಿನಿ, ಚನ್ನಪಟ್ಟಣ

ಯಾವಾಗಲೂ ಯಂಗ್ ಆಗಿ ಕಾಣಿಸ ಬೇಕು, ವಯಸ್ಸಾಗಿದ್ದರೂ ಆಗಿರದಂತೆ ಕಾಣಬೇಕು ಎಂದರೆ ಹಣ್ಣುಗಳನ್ನು ತಿನ್ನಬೇಕು.

ಮುಪ್ಪು ಎಲ್ಲರಿಗೂ ಬರಲೇಬೇಕು. ಅದು ಪ್ರಕೃತಿಯ ನಿಯಮ. ಅದನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ವಯಸ್ಸಾಗುವಿಕೆಯ ಪರಿಣಾಮ ಗಳನ್ನು ಸ್ವಲ್ಪ ನಿಧಾನಿಸಬಹುದು ಅಷ್ಟೇ. ಅದಕ್ಕಾಗಿ ಸರಿಯಾದ ಆಹಾರ ಕ್ರಮ, ದೈಹಿಕವಾಗಿ ಮತ್ತು ಮಾನಸಿ ಕವಾಗಿ ಯಾವುದೇ ದುಶ್ಚಟಗಳಿಲ್ಲದೆ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿದರೆ ಮಾತ್ರ ಸಾಧ್ಯ. ಹೀಗಾದಾಗ ವೃದ್ಧಾಪ್ಯದಲ್ಲೂ ಯಂಗ್ ಆಗಿಕಾಣಿಸಿಕೊಳ್ಳಬಹುದು.

ವಯಸ್ಸಾಗಿದೆ ಎಂಬುದು ಮೊದಲಿಗೆ ತಿಳಿಯುವುದೇ ಮುಖ ನೋಡಿದಾಗ, ನಮ್ಮ ಮುಖದ ಚರ್ಮ ಹೊಳೆಯುವಂತೆ ಚರ್ಮದ ಆರೋಗ್ಯ ಕಾಪಾಡಿಕೊಂಡರೆ ನಾವು ಸುಂದರವಾಗಿ ಕಾಣಲು ಸಾಧ್ಯ. ಇದಕ್ಕಾಗಿ ನಾವು ಲೋಷನ್ ಮತ್ತು ಸೀರಮ್ ಅನ್ನು ಬಳಸುತ್ತೇವೆ. ಆದರೆ ಇದು ಚರ್ಮಕ್ಕೆ ಹಾನಿಯನ್ನುಂಟು ಮಾಡಬಹುದು. ಆದ್ದರಿಂದ ಯಾವುದೇ ರಾಸಾಯನಿಕ ಕ್ರೀಮ್ ಬಳಸದೆಯೇ ನಾವು ಹಣ್ಣುಗಳನ್ನು ತಿನ್ನುವ ಮೂಲಕ ಯಂಗ್ ಆಗಿ ಕಾಣಿಸಿಕೊಳ್ಳಬಹುದು. ಇದಕ್ಕಾಗಿ ನೈಸರ್ಗಿಕವಾಗಿ ಲಭ್ಯವಿರುವ ಈ 5 ಹಣ್ಣುಗಳನ್ನು ತಿಂದರೆ ನಮ್ಮ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು.

ಬೆರಿ ಹಣ್ಣುಗಳು: ಬೆರಿ ಹಣ್ಣುಗಳನ್ನು ಸೂಪರ್ ಫುಡ್‌ಗಳ ಪಟ್ಟಿ ಯಲ್ಲಿ ಸೇರಿಸಲು ಹಲವು ಕಾರಣಗಳಿವೆ. ಈ ಸಣ್ಣ ಹಣ್ಣು ಕಡು ನೀಲಿ ಬಣ್ಣದಿಂದ ಕೂಡಿದ್ದು, ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಇದರಲ್ಲಿರುವ ಆಂಥೋಸಯಾನಿನ್ ನಿಮ್ಮತ್ವಚೆ ವಯಸ್ಸಾಗುವುದನ್ನು ತಡೆಯುತ್ತದೆ. ಅಲ್ಲದೇ, ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ಇದು ನಮ್ಮ ಚರ್ಮವು ಮೃದುವಾಗಿರಲು ಸಹಾಯ ಮಾಡುತ್ತದೆ.

ಆವಕಾಡೊ: ಕೆನೆಯ ರುಚಿಯನ್ನು ಹೊಂದಿರುವ ಆವಕಾಡೊ ನಮ್ಮ ಚರ್ಮಕ್ಕೆ ಅಗತ್ಯವಿರುವ ಅನೇಕ ಪೋಷಕಾಂಶಗಳನ್ನು ಒದಗಿಸುತ್ತದೆ. ಆವಕಾಡೊಗಳು ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತವೆ, ಇದು ನಿಮ್ಮ ಚರ್ಮವನ್ನು ಹೈಡ್ರೆಟ್ ಆಗಿಸಿ ಹೊಳೆಯುವಂತೆ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಸಿ ಕಾಲಜನ್ ಪ್ರಚೋದನೆಯನ್ನು ಉಂಟುಮಾಡುತ್ತದೆ.

ದಾಳಿಂಬೆ ಹಣ್ಣು: ದಾಳಿಂಬೆಯಲ್ಲಿ ಪಾಲಿಫಿನಾಲ್ ಎಂಬ ಆಂಟಿ ಆಕ್ಸಿಡೆಂಟ್ ಅಂಶ ಇದ್ದು, ಅದು ನಮ್ಮ ತ್ವಚೆಗೆ ಅತ್ಯುತ್ತಮ ರಕ್ಷಣೆ ನೀಡುತ್ತದೆ. ಇದು ಯುವಿ ಕಿರಣಗಳಿಂದ ನಮ್ಮ ಚರ್ಮ ವನ್ನು ರಕ್ಷಿಸುತ್ತದೆ. ಜೊತೆಗೆ ಸುಕ್ಕುಗಳನ್ನು ಕಡಿಮೆ ಮಾಡಲು ಸಹಾಯ ಮಾಡಿ, ಸದಾ ಯಂಗ್ ಆಗಿ ಕಾಣುವಂತೆ ಮಾಡುತ್ತದೆ.

ಪಪ್ಪಾಯ ಹಣ್ಣು: ಪಪ್ಪಾಯಿಯಲ್ಲಿ ವಿಟಮಿನ್‌ಗಳು, ಖನಿಜ ಗಳು ಮತ್ತು ಕಿಣ್ವಗಳಿವೆ ಪಪ್ಪಾಯಿಯಲ್ಲಿ ವಿಟಮಿನ್ ಎ, ಸಿ ಮತ್ತು ಇ ಸಮೃದ್ಧ ವಾಗಿದೆ, ಇದು ಚರ್ಮದ ಹಾನಿಯನ್ನು ಸು ಪಡಿಸಲು ಸಹಾಯ ಮಾಡುತ್ತದೆ ಪಪ್ಪಾಯಿ ಯಲ್ಲಿರುವ ಪಾಪೈನ್ ಎಂಬ ಕಿಣ್ವವು ಸತ್ತ ಜೀವಕೋಶಗಳನ್ನು ತೆಗೆದು ಹಾಕಲು ಮತ್ತು ಚರ್ಮದ ರಂಧ್ರಗಳನ್ನು ಮುಚ್ಚಲು ಸಹಾಯ ಮಾಡುತ್ತದೆ. ಪಪ್ಪಾಯಿ ಹಣ್ಣನ್ನು ನಿಯಮಿತ ವಾಗಿ ಸೇವಿಸುವುದರಿಂದ ಚರ್ಮವು ನಯವಾಗಿ ಹೊಳೆಯುತ್ತದೆ.

ಕಿವಿಫ್ರೂಟ್: ಕಿವಿ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಇದು ನಮ್ಮ ದೇಹದಲ್ಲಿ ಕಾಲಜನ್ ಉತ್ಪಾದನೆ ಯನ್ನು ಉತ್ತೇಜಿಸುತ್ತದೆ ಮತ್ತು ಚರ್ಮವನ್ನು ಮೃದುಗೊಳಿಸುತ್ತದೆ. ಅಲ್ಲದೇ, ಈ ಹಣ್ಣಿನಲ್ಲಿ ರುವ ವಿಟಮಿನ್ ಇ ಮತ್ತು ಆ್ಯಂಟಿ ಆಕ್ಸಿಡೆಂಟ್‌ಗಳಿಂದಾಗಿ ಇದು ಚರ್ಮದ ಮೇಲಿನ ನೆರಿಗೆ ಮತ್ತು ಸುಕ್ಕುಗಳನ್ನು ಕಡಿಮೆ ಮಾಡುತ್ತದೆ.

ಕೆಲವು ಇತರ ಸಲಹೆಗಳು: ಈ ಹಣ್ಣುಗಳು ನಿಮ್ಮ ತ್ವಚೆಯನ್ನು ಯೌವನವಾಗಿ ಕಾಣುವಂತೆ ಸಹಾಯ ಮಾಡುತ್ತವೆಯಾದರೂ, ಸಮ ತೋಲಿತ ಆಹಾರ, ಸರಿಯಾದ ಜಲಸಂಚಯನ ಹಿತ ಮಿತ ವಾಗಿದ್ದರೆ ಆರೋಗ್ಯಕರ ಜೀವನಶೈಲಿಯು ನಿಮ್ಮದಾಗುತ್ತದೆ. ಇದರಿಂದ ಆರೋಗ್ಯ ದಲ್ಲಿ ಪ್ರಮುಖವಾದ ಮುಖ್ಯ ಪಾತ್ರವನ್ನು ವಹಿಸುತ್ತದೆ. ನೀವು ಶಾಶ್ವತವಾಗಿ ಯಂಗ್ ಆಗಿ ಉಳಿಯಲು ಬಯಸಿದರೆ ನಿಮ್ಮ ತ್ವಚೆಯ ರಕ್ಷಣೆ ನಿಮ್ಮ ಕೈಯಲ್ಲೆ ಇದೆ.

ಆಂದೋಲನ ಡೆಸ್ಕ್

Recent Posts

ಮಾನವ ಹಕ್ಕುಗಳನ್ನು ಪೋಷಿಸುವ ಸಾಮಾಜಿಕ ನ್ಯಾಯದ ಪರಿಕಲ್ಪನೆ

ಯಾವುದೋ ಒಂದು ಹಕ್ಕು ಹೆಚ್ಚಿನ ಆದ್ಯತೆ ಹೊಂದಲು ಸಾಧ್ಯವೇ? ಕೆಲವು ಹಕ್ಕುಗಳು ಹೆಚ್ಚು ಮುಖ್ಯವಾಗುವವೇ? ಒಂದು ರೀತಿಯ ಹಕ್ಕಿನಿಂದ ಇನ್ನೊಂದು…

6 mins ago

ಅವೈಜ್ಞಾನಿಕ ಚರಂಡಿ ಕಾಮಗಾರಿಯಿಂದ ಕಿರಿಕಿರಿ

ಮನೆ ಮುಂಭಾಗ ತ್ಯಾಜ್ಯ ನೀರು ನಿಂತು ಗಬ್ಬುನಾರುತ್ತಿರುವ ಚರಂಡಿ ; ಸಾಂಕ್ರಾಮಿಕ ರೋಗ ಹರಡುವ ಭೀತಿ, ಚುನಾವಣೆ ಬಹಿಷ್ಕಾರಕ್ಕೆ ಸ್ಥಳೀಯರ…

33 mins ago

ಅಂಗನವಾಡಿಗಳಿಗೆ ೬ ತಿಂಗಳಿಂದ ಬಾರದ ಮೊಟ್ಟೆ ಹಣ!

ಚಾಮರಾಜನಗರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ತಾಲ್ಲೂಕಿನ ಅಂಗನವಾಡಿ ಕೇಂದ್ರಗಳಿಗೆ ಕೋಳಿಮೊಟ್ಟೆ ವಿತರಣೆಗಾಗಿ ನೀಡಲಾಗುವ ಅನುದಾನ ಕಳೆದ ೬ತಿಂಗಳಿಂದ…

3 hours ago

‘ತ್ಯಾಜ್ಯ ಸಂಸ್ಕರಣೆ, ವಿಲೇವಾರಿಗೆ ಕ್ರಮಕೈಗೊಳ್ಳಬೇಕು’

ಗುತ್ತಲು ಕೆರೆ, ಕಾಳೇನಹಳ್ಳಿ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ ಭೇಟಿ ಮಂಡ್ಯ: ನಗರದ ಗುತ್ತಲು ಕೆರೆಗೆ ತ್ಯಾಜ್ಯ…

3 hours ago

ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿಗೆ ಪರದಾಟ

ಪ್ರಶಾಂತ್ ಎಸ್. ಆರು ತಿಂಗಳಿನಿಂದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತ ನೀರಿನ ಘಟಕ ನಿರ್ವಹಣೆ ಮಾಡುವಲ್ಲಿ ಕೆಎಸ್‌ಆರ್‌ಟಿಸಿ ವಿಫಲ…

3 hours ago

ವರ್ಷಾಂತ್ಯ: ಗರಿಗೆದರದ ಮೈಸೂರು ಪ್ರವಾಸೋದ್ಯಮ

ಗಿರೀಶ್ ಹುಣಸೂರು ಹೊಸ ವರ್ಷಾಚರಣೆ, ಕ್ರಿಸ್‌ಮಸ್ ರಜೆ ನಿರೀಕ್ಷೆಯಲ್ಲಿ ವ್ಯಾಪಾರಸ್ಥರು, ಉದ್ಯಮಿಗಳು ಮೈಸೂರು: ೨೦೨೫ನೇ ವರ್ಷಕ್ಕೆ ವಿದಾಯ ಹೇಳಿ, ೨೦೨೬ರ…

3 hours ago