andolana original
ಹನೂರು: ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ವಿಜಯದಶಮಿ ಪ್ರಯುಕ್ತ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ವೇತ ವರ್ಣದ ಕುದುರೆ ವಾಹನ ಜಂಬೂಸವಾರಿ ವಿಜೃಂಭಣೆಯಿಂದ ನೆರವೇರಿತು.
ವಿಜಯ ದಶಮಿ ಅಂಗವಾಗಿ ಮಾದಪ್ಪನ ದೇಗುಲದ ಪಶ್ಚಿಮ ದಿಕ್ಕಿನ ಕಂಠಶಾಲೆಯ ಆವರಣದಲ್ಲಿ ತೂಗುಯ್ಯಾಲೆ ಯನ್ನು ನಿರ್ಮಿಸಿ, ರಾತ್ರಿ ಶಿವ, ಪಾರ್ವತಿ ಉತ್ಸವಮೂರ್ತಿಗಳನ್ನು ಕೂರಿಸಿ ಶರನ್ನವರಾತ್ರಿ ಉಯ್ಯಾಲೋತ್ಸವಕ್ಕೆ ಚಾಲನೆ ನೀಡಲಾಗಿತ್ತು.
ಬೇಡಗಂಪಣ ಸಂಪ್ರದಾಯದಂತೆ ೯ ದಿನಗಳ ಕಾಲ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿಬೇಡಗಂಪಣ ಅರ್ಚಕರಿಂದ ಪಡಿಸೇವೆ ಹಾಗೂ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.
ಕ್ಷೇತ್ರದಲ್ಲಿ ಸಂಪ್ರದಾಯದಂತೆ ರಾತ್ರಿ ಬಿಳಿ ಕುದುರೆ ಉತ್ಸವದ ಜೊತೆಗೆ ದೊಡ್ಡ ಸತ್ತಿಗೆ ಆವೇಶದಿಂದ ಕುದುರೆ ವಾಹನ ಹಿಮ್ಮೆಟ್ಟಿಸುವುದು, ಸಾಂಪ್ರದಾಯಿಕವಾಗಿ ಹಾಗೂ ನಾಡ ಕುಂಬಳಕಾಯಿ ಬಲಿ ಪೂಜೆ ಸೇರಿದಂತೆ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು.
ಮೈಸೂರು ಸಂಸ್ಥಾನದ ಜಯಚಾಮರಾಜ ಒಡೆಯರ್ ಅವರು ದಸರಾ ಅಂಗವಾಗಿ ಹಿಂದೆ ಮ.ಬೆಟ್ಟದ ದೇಗುಲಕ್ಕೆ ನೀಡಿದ್ದ ವಜ್ರ, ರತ್ನಖಚಿತ ಆಭರಣಗಳನ್ನು ಆಯುಧಪೂಜೆಯಂದು ಶಿವ-ಪಾರ್ವತಿಯ ಮೂರ್ತಿಗಳಿಗೆ ತೊಡಿಸಿ, ಸಿಂಗರಿಸಿ ಉಯ್ಯಾಲೆ ಉತ್ಸವವನ್ನು ನೆರವೇರಿಸಲಾಯಿತು. ಬಳಿಕ ತೂಗುಯ್ಯಾಲೆಯ ತೊಟ್ಟಿಲಲ್ಲಿ ಮೂರ್ತಿಯನ್ನು ಕೂರಿಸಿ ವಿಶೇಷ ಪೂಜೆ ಸಲ್ಲಿಸುವುದು ವಿಜಯದಶಮಿ ವಿಶೇಷ.
ಇದನ್ನೂ ಓದಿ :- ಮುಳ್ಳಯ್ಯನಗಿರಿಯ ಮೋಹಕತೆ
ಜಂಬೂಸವಾರಿ: ಮಾದಪ್ಪನ ದೇಗುಲದಲ್ಲಿ ವಿಜಯ ದಶಮಿಯಂದು ರಾತ್ರಿ ಪೂಜೆಯ ಬಳಿಕ ಬಿಳಿ ಕುದುರೆ ವಾಹನೋತ್ಸವ ನೆರವೇರಿಸುವುದರ ಮೂಲಕ ಜಂಬೂ ಸವಾರಿಯನ್ನು ನಡೆಸಲಾಯಿತು. ಶ್ವೇತ ವರ್ಣದ ೧ಕುದುರೆಯ ಮೇಲೆ ಮಹದೇಶ್ವರ ಸ್ವಾಮಿಯ ಪಟ್ಟದ ಕತ್ತಿಯನ್ನು ಬೇಡಗಂಪಣ ಅರ್ಚಕರು ಹಿಡಿಯುತ್ತಾರೆ. ಇದು ದುಷ್ಟ ಶಕ್ತಿಯನ್ನು ಸಂಹಾರ ಮಾಡುವ ಪ್ರತೀಕವಾಗಿದೆ ಎಂಬುದು ಧಾರ್ಮಿಕ ನಂಬಿಕೆ. ರಾತ್ರಿ ಬಿಳಿ ಕುದುರೆ ವಾಹನ ಉತ್ಸವದ ಮೂಲಕ ಶರನ್ನವರಾತ್ರಿಗೆ ತೆರೆ ಎಳೆಯಲಾಯಿತು.
ಅದ್ಧೂರಿ ತೆಪ್ಪೋತ್ಸವ: ೬ ವರ್ಷಗಳ ಹಿಂದೆ ಕಲ್ಯಾಣಿಯ ಪುನಶ್ಚೇತನ ಕಾರ್ಯ ಕೈಗೊಳ್ಳಲಾಗಿತ್ತು. ಈಗ ಕಾಮಗಾರಿ ಸಂಪೂರ್ಣ ಮುಗಿದಿರುವ ಹಿನ್ನೆಲೆಯಲ್ಲಿ ೬ ವರ್ಷಗಳ ನಂತರ ತೆಪ್ಪೋತ್ಸವ ನಡೆಸಲಾಯಿತು. ಸಾವಿರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.
ರಾಜ್ಯದ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ವಿವಿಧ ಸೇವೆಗಳನ್ನು ಸಲ್ಲಿಸಿದರು. ದೇವಾಲಯವನ್ನು ವಿವಿಧ ವಿದ್ಯುತ್ ದೀಪಗಳಿಂದ ಅಲಂಕರಿಸ ಲಾಗಿತ್ತು.೧ ದೇವಾಲಯದ ಮುಂಭಾಗದ ರಸ್ತೆಗಳು ಜಗಜಗಿಸುತ್ತಿದ್ದವು. ಪ್ರಾಧಿಕಾರದ ವತಿಯಿಂದ ದಾಸೋಹ ಭವನದಲ್ಲಿ ಭಕ್ತರಿಗೆ ಬೆಳಗಿನ ತಿಂಡಿ, ಊಟದ ವ್ಯವಸ್ಥೆ, ಕುಡಿಯುವ ನೀರು, ನೆರಳಿನ ವ್ಯವಸ್ಥೆ ಮಾಡಲಾಗಿತು
” ದೊಡ್ಡ ಕಲ್ಯಾಣಿ ಪುನಶ್ಚೇತನವಾದ ನಂತರ ನಡೆದ ವಿಜಯದಶಮಿ ಜಾತ್ರಾ ಮಹೋತ್ಸವದಲ್ಲಿ ಆರು ವರ್ಷಗಳ ನಂತರ ತೆಪ್ಪೋತ್ಸವ ಯಶಸ್ವಿಯಾಗಿ ನೆರವೇರಿದೆ. ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ವೆಂಕಟೇಶ್, ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾ ನಾಗ್, ಸಾಲೂರು ಬೃಹನ್ಮಠದ ಪೀಠಾಧಿಪತಿಗಳಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿ ಹಾಗೂ ಶಾಸಕ ಎಂ.ಆರ್.ಮಂಜುನಾಥ್‌ರವರ ನೇತೃತ್ವದಲ್ಲಿ ಜಾತ್ರೆ ಯಶಸ್ವಿಯಾಗಿ ನೆರವೇರಿದೆ.”
ಎ.ಇ.ರಘು, ಕಾರ್ಯದರ್ಶಿಗಳು, ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ
ಹನೂರು: ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ 9 ಜನರು ಗಾಯಗೊಂಡಿರುವ ಘಟನೆ ಹನೂರು ಪಟ್ಟಣದ ಹೊರವಲಯದ ಮಹದೇಶ್ವರ ಐಟಿಐ ಕಾಲೇಜು…
ಹನೂರು : ಕ್ಷೇತ್ರದ ಅಧಿದೇವತೆ ಮಲೆ ಮಾದೇಶ್ವರ ಸ್ವಾಮಿ ಕೃಪೆಯಿಂದಲೇ ಈ ಬಾರಿ ಉತ್ತಮ ಮಳೆಯಾಗಿ, ಬರಗಾಲದಿಂದ ಕಂಗೆಟ್ಟಿದ್ದ ರೈತರ…
‘ಜಗವೆ ಕೊಂಡಾಡುವ ಹಾಗೆ’ ಕರುನಾಡ ಕಂಬನಿ, ಜನಮನದ ನಾಡಿ ಅರ್ಜುನನಿಗೆ ಅಶ್ರುತರ್ಪಣೆ ಅಭಿಮಾನದ ಅಭಿಮನ್ಯುಗೆ ಹೃದಯದ ಅಭಿನಂದನೆ ಅಂಬಾರಿಯ ಹೊತ್ತು…
ಪರೀಕ್ಷಾ ಸಮಯದಲ್ಲಿ ಬಹುತೇಕ ಜೆರಾಕ್ಸ್ ಅಂಗಡಿಗಳ ಮುಂದೆ ವಿದ್ಯಾರ್ಥಿಗಳ ದಂಡೇ ನೆರೆದಿರುತ್ತದೆ. ಪರೀಕ್ಷಾ ಸಮಯದಲ್ಲಿ ನೋಟ್ಸ್‌ಗಳನ್ನು ಜೆರಾಕ್ಸ್ ಮಾಡಿಸಲು ಬರುವವರಿಗಿಂತ…
ಮೈಸೂರು ವಿಶ್ವವಿದ್ಯಾಲಯದ ಮಾನಸಗಂಗೋತ್ರಿ ಆವರಣದಲ್ಲಿ ಕಳೆದ ಕೆಲವು ದಿನಗಳಿಂದ ೨೦೨೬ರ ದಸರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿರುವ ಯುವ ಸಂಭ್ರಮ…
ಸಾಮಾಜಿಕ ಭದ್ರತೆಯ ಒಂದು ಭಾಗವಾದ ನೌಕರರ ಭವಿಷ್ಯ ನಿಧಿ ವ್ಯಾಪ್ತಿಗೆ ಒಳಪಡುವ ನೌಕರರ ವೇತನ ಮಿತಿಯನ್ನು ೧೫ ಸಾವಿರ ರೂಪಾಯಿಗಳಿಂದ…