Andolana originals

ಮಹದೇಶ್ವರ ಬೆಟ್ಟದಲ್ಲಿ ಕುದುರೆ ವಾಹನ ಜಂಬೂಸವಾರಿ

ಹನೂರು: ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ವಿಜಯದಶಮಿ ಪ್ರಯುಕ್ತ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ವೇತ ವರ್ಣದ ಕುದುರೆ ವಾಹನ ಜಂಬೂಸವಾರಿ ವಿಜೃಂಭಣೆಯಿಂದ ನೆರವೇರಿತು.

ವಿಜಯ ದಶಮಿ ಅಂಗವಾಗಿ ಮಾದಪ್ಪನ ದೇಗುಲದ ಪಶ್ಚಿಮ ದಿಕ್ಕಿನ ಕಂಠಶಾಲೆಯ ಆವರಣದಲ್ಲಿ ತೂಗುಯ್ಯಾಲೆ ಯನ್ನು ನಿರ್ಮಿಸಿ, ರಾತ್ರಿ ಶಿವ, ಪಾರ್ವತಿ ಉತ್ಸವಮೂರ್ತಿಗಳನ್ನು ಕೂರಿಸಿ ಶರನ್ನವರಾತ್ರಿ ಉಯ್ಯಾಲೋತ್ಸವಕ್ಕೆ ಚಾಲನೆ ನೀಡಲಾಗಿತ್ತು.

ಬೇಡಗಂಪಣ ಸಂಪ್ರದಾಯದಂತೆ ೯ ದಿನಗಳ ಕಾಲ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿಬೇಡಗಂಪಣ ಅರ್ಚಕರಿಂದ ಪಡಿಸೇವೆ ಹಾಗೂ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.

ಕ್ಷೇತ್ರದಲ್ಲಿ ಸಂಪ್ರದಾಯದಂತೆ ರಾತ್ರಿ ಬಿಳಿ ಕುದುರೆ ಉತ್ಸವದ ಜೊತೆಗೆ ದೊಡ್ಡ ಸತ್ತಿಗೆ ಆವೇಶದಿಂದ ಕುದುರೆ ವಾಹನ ಹಿಮ್ಮೆಟ್ಟಿಸುವುದು, ಸಾಂಪ್ರದಾಯಿಕವಾಗಿ ಹಾಗೂ ನಾಡ ಕುಂಬಳಕಾಯಿ ಬಲಿ ಪೂಜೆ ಸೇರಿದಂತೆ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು.

ಮೈಸೂರು ಸಂಸ್ಥಾನದ ಜಯಚಾಮರಾಜ ಒಡೆಯರ್ ಅವರು ದಸರಾ ಅಂಗವಾಗಿ ಹಿಂದೆ ಮ.ಬೆಟ್ಟದ ದೇಗುಲಕ್ಕೆ ನೀಡಿದ್ದ ವಜ್ರ, ರತ್ನಖಚಿತ ಆಭರಣಗಳನ್ನು ಆಯುಧಪೂಜೆಯಂದು ಶಿವ-ಪಾರ್ವತಿಯ ಮೂರ್ತಿಗಳಿಗೆ ತೊಡಿಸಿ, ಸಿಂಗರಿಸಿ ಉಯ್ಯಾಲೆ ಉತ್ಸವವನ್ನು ನೆರವೇರಿಸಲಾಯಿತು. ಬಳಿಕ ತೂಗುಯ್ಯಾಲೆಯ ತೊಟ್ಟಿಲಲ್ಲಿ ಮೂರ್ತಿಯನ್ನು ಕೂರಿಸಿ ವಿಶೇಷ ಪೂಜೆ ಸಲ್ಲಿಸುವುದು ವಿಜಯದಶಮಿ ವಿಶೇಷ.

ಇದನ್ನೂ ಓದಿ :- ಮುಳ್ಳಯ್ಯನಗಿರಿಯ ಮೋಹಕತೆ 

ಜಂಬೂಸವಾರಿ: ಮಾದಪ್ಪನ ದೇಗುಲದಲ್ಲಿ ವಿಜಯ ದಶಮಿಯಂದು ರಾತ್ರಿ ಪೂಜೆಯ ಬಳಿಕ ಬಿಳಿ ಕುದುರೆ ವಾಹನೋತ್ಸವ ನೆರವೇರಿಸುವುದರ ಮೂಲಕ ಜಂಬೂ ಸವಾರಿಯನ್ನು ನಡೆಸಲಾಯಿತು. ಶ್ವೇತ ವರ್ಣದ ೧ಕುದುರೆಯ ಮೇಲೆ ಮಹದೇಶ್ವರ ಸ್ವಾಮಿಯ ಪಟ್ಟದ ಕತ್ತಿಯನ್ನು ಬೇಡಗಂಪಣ ಅರ್ಚಕರು ಹಿಡಿಯುತ್ತಾರೆ. ಇದು ದುಷ್ಟ ಶಕ್ತಿಯನ್ನು ಸಂಹಾರ ಮಾಡುವ ಪ್ರತೀಕವಾಗಿದೆ ಎಂಬುದು ಧಾರ್ಮಿಕ ನಂಬಿಕೆ.  ರಾತ್ರಿ ಬಿಳಿ ಕುದುರೆ ವಾಹನ ಉತ್ಸವದ ಮೂಲಕ ಶರನ್ನವರಾತ್ರಿಗೆ ತೆರೆ ಎಳೆಯಲಾಯಿತು.

ಅದ್ಧೂರಿ ತೆಪ್ಪೋತ್ಸವ: ೬ ವರ್ಷಗಳ ಹಿಂದೆ ಕಲ್ಯಾಣಿಯ ಪುನಶ್ಚೇತನ ಕಾರ್ಯ ಕೈಗೊಳ್ಳಲಾಗಿತ್ತು. ಈಗ ಕಾಮಗಾರಿ ಸಂಪೂರ್ಣ ಮುಗಿದಿರುವ ಹಿನ್ನೆಲೆಯಲ್ಲಿ ೬ ವರ್ಷಗಳ ನಂತರ ತೆಪ್ಪೋತ್ಸವ ನಡೆಸಲಾಯಿತು. ಸಾವಿರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.

ರಾಜ್ಯದ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ವಿವಿಧ ಸೇವೆಗಳನ್ನು ಸಲ್ಲಿಸಿದರು. ದೇವಾಲಯವನ್ನು ವಿವಿಧ ವಿದ್ಯುತ್ ದೀಪಗಳಿಂದ ಅಲಂಕರಿಸ ಲಾಗಿತ್ತು.೧ ದೇವಾಲಯದ ಮುಂಭಾಗದ ರಸ್ತೆಗಳು ಜಗಜಗಿಸುತ್ತಿದ್ದವು. ಪ್ರಾಧಿಕಾರದ ವತಿಯಿಂದ ದಾಸೋಹ ಭವನದಲ್ಲಿ ಭಕ್ತರಿಗೆ ಬೆಳಗಿನ ತಿಂಡಿ, ಊಟದ ವ್ಯವಸ್ಥೆ, ಕುಡಿಯುವ ನೀರು, ನೆರಳಿನ ವ್ಯವಸ್ಥೆ ಮಾಡಲಾಗಿತು

” ದೊಡ್ಡ ಕಲ್ಯಾಣಿ ಪುನಶ್ಚೇತನವಾದ ನಂತರ ನಡೆದ ವಿಜಯದಶಮಿ ಜಾತ್ರಾ ಮಹೋತ್ಸವದಲ್ಲಿ ಆರು ವರ್ಷಗಳ ನಂತರ ತೆಪ್ಪೋತ್ಸವ ಯಶಸ್ವಿಯಾಗಿ ನೆರವೇರಿದೆ. ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ವೆಂಕಟೇಶ್, ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾ ನಾಗ್, ಸಾಲೂರು ಬೃಹನ್ಮಠದ ಪೀಠಾಧಿಪತಿಗಳಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿ ಹಾಗೂ ಶಾಸಕ ಎಂ.ಆರ್.ಮಂಜುನಾಥ್‌ರವರ ನೇತೃತ್ವದಲ್ಲಿ ಜಾತ್ರೆ ಯಶಸ್ವಿಯಾಗಿ ನೆರವೇರಿದೆ.”

ಎ.ಇ.ರಘು, ಕಾರ್ಯದರ್ಶಿಗಳು, ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ

ಆಂದೋಲನ ಡೆಸ್ಕ್

Recent Posts

ʼದಳಪತಿʼ ವಿಜಯ್‌ ಸೆಳೆಯಲು ಬಿಜೆಪಿ ತಂತ್ರ : ಡಿಸಿಎಂ ಸ್ಥಾನದ ಜತೆಗೆ 80 ಸ್ಥಾನದ ಆಫರ್‌!

ಚೆನ್ನೈ : ತಮಿಳುನಾಡು ರಾಜಕಾರಣದಲ್ಲಿ ತಮ್ಮದೇ ಆದ ಕ್ರೇಜ್‌ ಸೃಷ್ಟಿಸಿಕೊಂಡಿರುವ ಟಿವಿಕೆ ಪಕ್ಷದ ಅಧ್ಯಕ್ಷ, ನಟ ʼದಳಪತಿʼ ವಿಜಯ್ ಅವರನ್ನು…

18 mins ago

ತಂಪೆರೆದ ಮಳೆ ; ಕೊಡಗು ಸೇರಿದಂತೆ ರಾಜ್ಯದ ಹಲವೆಡೆ ಮಳೆ

ಮೈಸೂರು : ಜನರು ವಿಪರೀತ ಸೆಕೆಯಿಂದಾಗಿ ತತ್ತರಿಸಿ ಹೋಗಿರುವ ನಡುವೆ ಕೆಲ ಜಿಲ್ಲೆಗಳಲ್ಲಿ ಇಂದು(ಮಾರ್ಚ್.‌15) ಸಂಜೆ ಅಕಾಲಿಕವಾಗಿ ಮಳೆ ಸುರಿದು…

43 mins ago

ಮಂಡ್ಯ | ನಾಲೆ ಅಭಿವೃದ್ಧಿಗೆ 100 ಕೋಟಿ ಅನುದಾನ ; ಶಾಸಕ ರವಿಕುಮಾರ್‌

ಮಂಡ್ಯ : ಮಂಡ್ಯ ವಿಧಾನಸಭಾ ಕ್ಷೇತ್ರ ಅಭಿವೃದ್ಧಿಗೆ ಸಮಗ್ರ ಯೋಜನೆ ರೂಪಿಸಲಾಗಿದ್ದು, ಬಸರಾಳು ಭಾಗದ ಹೇಮಾವತಿ ನಾಲೆ ಅಭಿವೃದ್ಧಿಗೆ 350…

57 mins ago

ಆದಿಚುಂಚನಗಿರಿ ಶ್ರೀಗಳ ನಡೆ ದಾರಿ ತಪ್ಪುತ್ತಿದೆ ಹೇಳಿಕೆ : ಕ್ಷೆಮೆಯಾಚಿಸಿದ ಶಾಸಕ ರಮೇಶ್‌ ಬಂಡಿಸಿದ್ದೇಗೌಡ

ಮಂಡ್ಯ : ನಾನು ಯಾವಾಗ ಮಾತನಾಡಿದರೂ ವಿವಾದ ಆಗುತ್ತೆ. ನನ್ನ ಮಾತಿನಿಂದ ನೋವಾಗಿದ್ದರೆ, ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರ ಕ್ಷಮೆ ಯಾಚಿಸುತ್ತೇನೆ…

2 hours ago

ಎಚ್‌.ಡಿ.ಕೋಟೆ | ಬೈಕುಗಳ ನಡುವೆ ಡಿಕ್ಕಿ : ಓರ್ವ ಸಾವು

ಎಚ್.ಡಿ.ಕೋಟೆ : ಎರಡು ಬೈಕುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸಾವಿಗೀಡಾಗಿರುವ ಘಟನೆ ತಾಲ್ಲೂಕಿನಲ್ಲಿ ನಡೆದಿದೆ. ತಾಲ್ಲೂಕಿನ ಹೆರಿಗೆ…

2 hours ago

ಭೀಕರ ಅಪಘಾತ : ಮೂವರು ಪೊಲೀಸ್ ಅಧಿಕಾರಿಗಳು ಸಾವು ; ಸ್ಥಳಕ್ಕೆ ಗೃಹ ಸಚಿವರ ಭೇಟಿ

ಚಿತ್ರದುರ್ಗ : ಚಳ್ಳಕೆರೆ ಸಮೀಪದ ಹೆಗ್ಗೆರೆ ಗೇಟ್ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಪೊಲೀಸ್ ಅಧಿಕಾರಿಗಳು ಮೃತಪಟ್ಟಿದ್ದಾರೆ. ಇಬ್ಬರು…

2 hours ago