Andolana originals

ಸಂಜೀವಿನಿ ಒಕ್ಕೂಟದಿಂದ ಜೇನು ಉತ್ಪಾದನೆ

ಕೃಷ್ಣ ಸಿದ್ದಾಪುರ

ಸ್ವಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ: ಮಹಿಳೆಯರಿಂದ ಉತ್ಕೃಷ್ಟ ದರ್ಜೆಯ ಜೇನು ಸಂಗ್ರಹ

ಸಿದ್ದಾಪುರ: ಪ್ರಧಾನ ಮಂತ್ರಿ ವನಧನ -ವನಸಿರಿ ಯೋಜನೆಯ ಸೌಲಭ್ಯವನ್ನು ಸಮರ್ಪಕವಾಗಿ ಬಳಸಿಕೊಂಡ ಸಿದ್ದಾಪುರದ ಸಂಜೀವಿನಿ ಒಕ್ಕೂಟವು ಇಲ್ಲಿನ ಅರಣ್ಯದ ಹಾಡಿಗಳಲ್ಲಿ ಜೇನು ಕೃಷಿ ಪ್ರಾರಂಭಿಸಿದ್ದು, ಮೊದಲ ಪ್ರಯತ್ನದಲ್ಲಿಯೇ ಸುಮಾರು ೨೫ ಲೀ. ಜೇನು ಸಂಗ್ರಹಿಸಿ ಯಶಸ್ವಿಯಾಗಿದೆ.

ಸಂಜೀವಿನಿ ಒಕ್ಕೂಟದಿಂದ ಮಹಿಳೆಯರ ಸಬಲೀಕರಣಕ್ಕಾಗಿ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಇದೀಗ ಪ್ರಧಾನ ಮಂತ್ರಿ ವನಧನ-ವನಸಿರಿ ಯೋಜನೆಯಲ್ಲಿ ಸ್ವ-ಉದ್ಯೋಗ ಕಲ್ಪಿಸುವ ಜೇನು ಕೃಷಿ ಪ್ರಯತ್ನ ಯಶಸ್ವಿಯಾಗಿದೆ. ಮಹಿಳೆಯರಿಗೆ ಸ್ವ-ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ತರಬೇತಿಯೊಂದಿಗೆ ಮಾರುಕಟ್ಟೆ ವ್ಯವಸ್ಥೆಯನ್ನೂ ಒದಗಿಸುವ ಯೋಜನೆ ಇದಾಗಿದೆ. ಮಹಿಳೆಯರನ್ನು ಆರ್ಥಿಕವಾಗಿ ಸದೃಢಗೊಳಿಸಿ ಸ್ವಾವಲಂಬಿ ಜೀವನ ನಡೆಸಲು ಈ ಯೋಜನೆ ಸಹಕಾರಿಯಾಗಲಿದೆ.

ಪ್ರಧಾನ ಮಂತ್ರಿ ವನಧನ-ವನಸಿರಿ ಯೋಜನೆಯಲ್ಲಿ ಸಂಘದ ಪ್ರತಿನಿಧಿಗಳಾದ ಅವರೆಗುಂದ ಬಸವನಳ್ಳಿ ಹಾಡಿಯ ಸರೋಜಾ, ಮೀರಾ, ವಾರಿಜ, ಸುಶೀಲ, ಮಮತ, ಮೀನಾಕ್ಷಿ, ರೇಖಾ ಸೇರಿದಂತೆ ೧೫ ಮಂದಿ ಸದಸ್ಯರಿಗೆ ಕಳೆದ ನವೆಂಬರ್ ತಿಂಗಳಲ್ಲಿ ಜೇನು ಪೆಟ್ಟಿಗೆ ವಿತರಿಸಲಾಗಿತ್ತು. ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಪ್ರಾಧ್ಯಾಪಕರು ಹಾಗೂ ಮಡಿಕೇರಿ ವಿಸ್ತರಣಾ ಶಿಕ್ಷಣ ಘಟಕದ ಪ್ರೊ.ಆರ್.ಎನ್. ಕೆಂಚರೆಡ್ಡಿಯವರು ಜೇನು ಕೃಷಿ ಬಗ್ಗೆ ಮಹಿಳೆಯರಿಗೆ ತರಬೇತಿ ನೀಡಿದ್ದರು. ಇದೀಗ ಮೊದಲ ಪ್ರಯತ್ನದಲ್ಲೇ ಸಂಘದ ಸದಸ್ಯರು ೨೫ ಲೀ. ಜೇನು ಸಂಗ್ರಹಿಸುವ ಮೂಲಕ ಯಶಸ್ಸು ಕಂಡಿದ್ದಾರೆ. ಆ ಮೂಲಕ ಸಂಜೀವಿನಿ ಒಕ್ಕೂಟದ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಜೇನನ್ನು ಸೂಕ್ತ ರೀತಿಯಲ್ಲಿ ಸಂಸ್ಕರಿಸಿ ಪ್ಯಾಕಿಂಗ್ ಮಾಡಲಾಗಿದ್ದು, ಸಂಜೀವಿನಿ ಒಕ್ಕೂಟದ ಬ್ರಾಂಡ್‌ನಲ್ಲಿ ಶೀಘ್ರದಲ್ಲೇ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾರು ಕಟ್ಟೆಗೆ ಬಿಡುಗಡೆ ಮಾಡಲಿದ್ದಾರೆ ಎಂದು ತಾಲ್ಲೂಕು ಕಾರ್ಯನಿರ್ವಾಹಣಾಧಿಕಾರಿ ಅಪ್ಪಣ್ಣ ಮಾಹಿತಿ ನೀಡಿದ್ದಾರೆ.

ವಾರ್ಷಿಕವಾಗಿ ೫ರಿಂದ ೭ ಲೀ. ಜೇನು ಹನಿ ಸಂಗ್ರಹ…: 

ಸುಮಾರು ೫ ಸಾವಿರ ರೂ. ವೆಚ್ಚದಲ್ಲಿ ಮನೆಗಳಲ್ಲಿ, ಕೃಷಿ ತೋಟಗಳಲ್ಲಿ ಜೇನು ಕೃಷಿ ಪ್ರಾರಂಭಿಸಬಹುದಾಗಿದೆ. ಇದು ಪರಿಸರ ಸ್ನೇಹಿಯಾಗಿದ್ದು, ಜೇನು ಹುಳುಗಳು ಹೂವಿನ ನಡುವೆ ಹರಿದಾಡಿ ಪರಾಗ ಸ್ಪರ್ಶ ಮಾಡುವ ಮೂಲಕ ಪ್ರಾಕೃತ್ತಿಕ ಸಮತೋಲನ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ಕೃಷಿಯು ಜೇನಿಗಾಗಿ ಮಾತ್ರವಲ್ಲದೆ ಜೇನಿನ ಮೇಣ ಕೂಡ ದೊರೆಯುವುದರಿಂದ ಆರ್ಥಿಕವಾಗಿ ಲಾಭಗಳಿಸಬಹುದು. ಒಂದು ಜೇನು ಪೆಟ್ಟಿಗೆ ಮತ್ತು ಜೇನು ಕುಟುಂಬವನ್ನು ಹೂದೋಟದಲ್ಲಿ ಇಟ್ಟಾಗ ವಾರ್ಷಿಕವಾಗಿ ೫ರಿಂದ ೭ ಲೀ. ಜೇನು ಸಂಗ್ರಹಿಸಬಹುದು. ಹೆಚ್ಚುವರಿ ಜೇನು ಪೆಟ್ಟಿಗೆ ಇಟ್ಟಲ್ಲಿ ಗೃಹಬಳಕೆಯೊಂದಿಗೆ ವಾಣಿಜ್ಯ ಉದ್ದೇಶದಿಂದಲೂ ಈ ಕೃಷಿ ಲಾಭ ಕೊಡುತ್ತದೆ.

” ಸಂಜೀವಿನಿ ಒಕ್ಕೂಟದ ಮಹಿಳೆಯರಿಗೆ ಕೌಶಲ ಅಭಿವೃದ್ಧಿ ವೃದ್ಧಿಸುವ ಸಲುವಾಗಿ ಪ್ರಾಯೋಗಿಕವಾಗಿ ಜೇನು ಕೃಷಿ ಬಗ್ಗೆ ತರಬೇತಿ ನೀಡಲಾಗಿದ್ದು, ಯಶಸ್ಸು ಕಂಡಿದ್ದಾರೆ. ಕೊಡಗಿನ ಜೇನು ಹನಿ ಹಾಗೂ ಮೇಣಕ್ಕೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದ್ದು, ಉತ್ತಮ ಗುಣಮಟ್ಟದ ಜೇನು ಹನಿಗೆ ಮಾರುಕಟ್ಟೆಯಲ್ಲಿ ೧ ಕೆ.ಜಿ.ಗೆ ೧,೨೦೦ರಿಂದ ೧,೪೦೦ ರೂ.ಗೆ ಮಾರಾಟವಾಗುತ್ತಿದೆ. ವಾಣಿಜ್ಯ ಉದ್ದೇಶದೊಂದಿಗೆ ಸಂಜೀವಿನಿ ಒಕ್ಕೂಟದ ಬ್ರಾಂಡ್‌ನಲ್ಲಿ ಹೆಚ್ಚಿನ ಜೇನು ಪೆಟ್ಟಿಗೆ ಅಳವಡಿಸಿ ಮಾರುಕಟ್ಟೆಗೆ ಹರಿಬಿಟ್ಟರೆ ಹೆಚ್ಚಿನ ಲಾಭಗಳಿಸಬಹುದು. ಇದರೊಂದಿಗೆ ಜೇನಿಗೆ ಸಾಕಷ್ಟು ಬೇಡಿಕೆ ಇದ್ದು, ಒಂದು ಜೇನು ಕುಟುಂಬಕ್ಕೆ ೩ರಿಂದ ೪ ಸಾವಿರ ರೂ. ಲಾಭ ಸಿಗುತ್ತದೆ.”

-ಡಾ.ಆರ್.ಎನ್.ಕೆಂಚರಡ್ಡಿ, ಪ್ರಾಧ್ಯಾಪಕರು, ಅರಣ್ಯ ಮಹಾವಿದ್ಯಾಲಯ, ಪೊನ್ನಂಪೇಣೆ 

” ಮಹಿಳೆಯರಿಗೆ ಸಂಜೀವಿನಿ ಒಕ್ಕೂಟದ ಮೂಲಕ ಅಗತ್ಯ ಸಲಕರಣೆಗಳನ್ನು ಹಾಗೂ ನುರಿತ ತಜ್ಞರಿಂದ ತರಬೇತಿ ನೀಡುವ ಮೂಲಕ ಆರ್ಥಿಕವಾಗಿ ಸದೃಢಗೊಳಿಸಲಾಗುತ್ತಿದೆ. ವನಧನ ಯೋಜನೆ ಮೂಲಕ ಜೇನು ಪೆಟ್ಟಿಗೆ ವಿತರಿಸಿ ತರಬೇತಿ ನೀಡಲಾಗಿತ್ತು. ಇದೀಗ ಸಿದ್ದಾಪುರ ಸಂಜೀವಿನಿ ಓಕ್ಕೂಟವು ಜೇನು ಸಂಗ್ರಹಿಸುವ ಮೂಲಕ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿದೆ.”

-ಅಪ್ಪಣ್ಣ, ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ, ವಿರಾಜಪೇಟೆ 

” ಸಂಜೀವಿನಿ ಒಕ್ಕೂಟದಡಿ ಗೃಹ ಉತ್ಪನ್ನ ತಿಂಡಿಗಳು, ಮಸಾಲೆ ಪದಾರ್ಥಗಳು ಹಾಗೂ ಬಟ್ಟೆಗಳ ಮಾರಾಟದ ಮಹಿಳಾ ಸಂತೆಯನ್ನು ಅಗಿಂದಾಗ್ಗೆ ಏರ್ಪಡಿಸಲಾಗುತ್ತಿದೆ. ಇದೀಗ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳನ್ನು ಬಳಸಿಕೊಂಡು ಜೇನು ಕೃಷಿ ಹಾಗೂ ಮೀನು ಸಾಕಾಣೆ ಮಾಡಲಾಗುತ್ತಿದೆ. ಇದರೊಂದಿಗೆ ಸರ್ಕಾರದಿಂದ ಪ್ರಾರಂಭಿಸಲ್ಪಡುವ ಅಕ್ಕ ಕೆಫೆಯ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಶೀಘ್ರದಲ್ಲೇ ವ್ಯಾಪಾರ ವಹಿವಾಟಿಗೆ ವೇದಿಕೆ ಲಭಿಸಲಿದೆ.”

-ರೀನಾ ತುಳಸಿ, ಸಂಜೀವಿನಿ ಒಕ್ಕೂಟ ಅಧ್ಯಕ್ಷರು, ಸಿದ್ದಾಪುರ 

 

 

ಆಂದೋಲನ ಡೆಸ್ಕ್

Recent Posts

ಕೊಡಗು: ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ

ಕೊಡಗು: ಜಿಲ್ಲೆಯ ನೆಲ್ಯಹುದಿಕೇರಿ ಸಮೀಪದ ಅತ್ತಿಮಂಗಲದಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ ನಡೆಸಿದೆ. ಸ್ಕೂಟರ್‌ನಲ್ಲಿ ತೆರಳುತ್ತಿದ್ದ 60…

13 mins ago

ಓದುಗರ ಪತ್ರ: ಗ್ರಹಣ..!

ಗ್ರಹಣ..! ಸೂರ್ಯ-ಚಂದ್ರರ ನಡುವೆ ಭೂಮಿ ಬಂದರೆ ಚಂದ್ರ ಗ್ರಹಣ ! ಭಾರತ-ರಷ್ಯಾ ನಡುವೆ ಅಮೆರಿಕ ಬಂದರೆ ‘ಸುಂಕ ’ ಗ್ರಹಣ…

4 hours ago

ಓದುಗರ ಪತ್ರ: ಪೆಟ್ರೋಲ್ ಬಂಕ್‌ಗಳಲ್ಲಿ ಮೋಸ: ಗರಿಷ್ಟ ಕ್ರಮ ಕೈಗೊಳ್ಳಲಿ

ರಾಜ್ಯದ ೮೦೫ ಪೆಟ್ರೋಲ್ ಬಂಕ್‌ಗಳ ತಪಾಸಣೆಯಲ್ಲಿ ಬರೋಬ್ಬರಿ ೭೬೮ ಬಂಕ್‌ಗಳಲ್ಲಿ (ಶೇ. ೮೫ ರಷ್ಟು) ಅಳತೆಯಲ್ಲಿ ಮೋಸ ಕಂಡುಬಂದಿರುವುದು ಸಾರ್ವಜನಿಕರಿಗೆ…

4 hours ago

ಓದುಗರ ಪತ್ರ: ಉದ್ಯೋಗ ಸೃಷ್ಟಿ : ಫ್ಲಿಪ್‌ಕಾರ್ಟ್ ನಡೆ ಸ್ವಾಗತಾರ್ಹ

ಒಂದು ಕಡೆ ಒರಾಕಲನಂತಹ ಕಂಪೆನಿಗಳು ತಮ್ಮ ನೌಕರರನ್ನು ಯಾವುದೇ ಮುನ್ಸೂಚನೆ ನೀಡದೇ ಕೇವಲ ಒಂದೇ ಒಂದು ಇ ಮೇಲ್ ಸಂದೇಶದ…

4 hours ago

ಸುಗಮ ಸಂಗೀತದ ಅದ್ಬುತ ಗಾಯಕ ಮಡಿಕೇರಿ ನಾಗೇಂದ್ರ

ಡಾ.ಕೆ.ವಿ.ಲಕ್ಷ್ಮೀದೇವಿ, ಗುರುಕೃಪಾ ಸಂಗೀತ ಕೇಂದ್ರ, ಮೈಸೂರು ಇಂದು ಗುರು ನಮನ ಮಡಿಕೇರಿ ನಾಗೇಂದ್ರರೆಂದೇ ಪ್ರಖ್ಯಾತರಾದ ‘ಗುರು ಕೃಪಾ ಸಂಗೀತ ಕೇಂದ್ರ’ದ…

7 hours ago

ಸುಮ್ಮನಿದ್ದರೂ ಪರಿಣಮಿಸುವ ರಂಗಭೂಮಿಯ ಝೆನ್ ಗುರು – ಜಂಬೆ ಮೇಷ್ಟ್ರು

ಸತೀಶ್ ತಿಪಟೂರು ಕರ್ನಾಟಕದ ಯಾವುದೇ ಭಾಗದಲ್ಲಿ ಜಂಬೆ ಮೇಷ್ಟ್ರ ಹಿರಿ - ಕಿರಿಯ ವಿದ್ಯಾರ್ಥಿಗಳು ಮೂರ್ನಾಲ್ಕು ಜನ ಒಂದೆಡೆ ಸೇರಿದರೆಂದರೆ…

7 hours ago