ಮಲ್ಕುಂಡಿ ಮಹದೇವಸ್ವಾಮಿ
ನೀವು ಒಂದು ದೇವಾಲಯ ನಿರ್ಮಿಸಿದರೆ ನೂರಾರು ಜನ ಭಿಕ್ಷುಕರು ಹುಟ್ಟಿಕೊಳ್ಳುತ್ತಾರೆ. ಆದರೆ ಒಂದು ಗ್ರಂಥಾಲಯ ನಿರ್ಮಿಸಿದರೆ ನೂರಾರು ಜನ ಜ್ಞಾನಿಗಳು ಉದಯಿಸುತ್ತಾರೆ’ ಎಂಬುದಾಗಿ ಗ್ರಂಥಾಲಯದ ಮಹತ್ವವನ್ನು ಕುರಿತ ಡಾ.ಅಂಬೇಡ್ಕರ್ ಅವರ ಮಾತುಗಳನ್ನು ನಾವು ಆಗಾಗ ಓದುತ್ತಿರುತ್ತೇವೆ.
ಡಾ.ಅಂಬೇಡ್ಕರ್ ಅವರನ್ನು ಸದಾ ಜೀವಂತೀಕರಿಸುವುದು ಆಚರಣೆಗಳಿಂದಲ್ಲ. ಅಂಬೇಡ್ಕರ್‌ರ ಸದಾ ಶಯ, ಮಾನವತೆ ಪ್ರೇರಿತ ನಡವಳಿಕೆಯಿಂದ. ಈ ನಿಟ್ಟಿನಲ್ಲಿ ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆಯ, ಡಿ.ಶಬ್ರೀನಾ ಮತ್ತು ಮೊಹಮ್ಮದ್ ಅಲಿ ದಂಪತಿ ಡಾ.ಅಂಬೇಡ್ಕರ್ ಮತ್ತು ದಾರ್ಶನಿಕರ ಚಿಂತನೆಗಳ ಜೀವಂತ ಸಾಕ್ಷಿಯಾಗಿ ಕಾಣಿಸುತ್ತಾರೆ.
ಮುಸ್ಲಿಂ ಸಮುದಾಯದ ಈ ದಂಪತಿ ವೃತ್ತಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದು, ತಾವು ಹೊಸದಾಗಿ ನಿರ್ಮಿಸಿದ ಮನೆಗೆ ‘ಕನ್ನಡ ಕೌಸ್ತುಭ’ ನಿಲಯ ಎಂದು ಹೆಸರಿಟ್ಟು, ಆ ಮನೆಯಂಗಳದಲ್ಲಿಯೇ ಸಾರ್ವಜನಿಕರಿಗಾಗಿ ‘ಪುಸ್ತಕ ಪ್ರೇಮಿ ಡಾ.ಅಂಬೇಡ್ಕರ್ ಗ್ರಂಥಾಲಯ ಎಂಬ ಅರ್ಥಪೂರ್ಣ ಗ್ರಂಥಾಲಯವೊಂದನ್ನು ತೆರೆದಿದ್ದಾರೆ. ಅಲ್ಲಿ ನೂರಾರು ಪುಸ್ತಕಗಳನ್ನು ಸಂಗ್ರಹಿಸಿದ್ದಾರೆ. ಫುಲೆ ದಂಪತಿ, ಶಾಹು ಮಹಾರಾಜ್, ನಾಲ್ವಡಿ ಕೃಷ್ಣರಾಜ ಒಡೆಯರ್, ಸಂತ ಶಿಶುನಾಳ ಶರೀಫ, ಬಸವಣ್ಣ, ಫಾತಿಮಾ, ಕುವೆಂಪು, ವಿವೇಕಾನಂದ, ಗಾಂಧಿ ಮುಂತಾದವರ ಭಾವಚಿತ್ರಗಳನ್ನು ಅಳವಡಿಸಿದ್ದಾರೆ. ಜಗತ್ತಿನ ಮಹಾಜ್ಞಾನಿಗಳ ಸುಪ್ರಸಿದ್ಧ ಹೇಳಿಕೆಗಳನ್ನು ಸಂಗ್ರಹಿಸಿದ್ದಾರೆ.
ಅಂಬೇಡ್ಕರ್ ಅವರ ಬದುಕು, ಬರಹ, ವಿಧಾನವನ್ನು ವಿಸ್ತರಿಸಿದ್ದಾರೆ. ಇಂತಹ ಅದ್ಭುತವಾದ ಗ್ರಂಥಾಲಯವನ್ನು ಸ್ಥಳೀಯ ಬುದ್ದಿಜೀವಿಗಳು, ಕವಿಗಳು, ಚಿಂತಕರಿಂದ ಉದ್ಘಾಟಿಸುವುದರ ಮೂಲಕ, ತಮ್ಮ ಮನೆಯ ಗೃಹಪ್ರವೇಶವನ್ನು ಅರ್ಥಪೂರ್ಣವಾಗಿ ನೆರವೇರಿಸಿ ದ್ದಾರೆ. ಯಾವುದೇ ವಿಧಿವಿಧಾನ, ಮೌಡ್ಯ, ಕಂದಾಚಾರ, ಐಷಾರಾಮಿ ಚಟುವಟಿಕೆಗಳನ್ನು ಅನುಸರಿಸದೆ, ಜ್ಞಾನ ಭಂಡಾರವನ್ನು ನಿರ್ಮಾಣ ಮಾಡಿದ್ದಾರೆ.
ಈ ಗ್ರಂಥಾಲಯಕ್ಕೆ ಗ್ರಾಮದ ಎಲ್ಲರಿಗೂ ಮುಕ್ತ ಪ್ರವೇಶ ಇದೆ. ವಿಶೇಷವಾಗಿ ಆ ಗ್ರಾಮದಲ್ಲಿ ವಾಸಿಸುವ ಎಲ್ಲಾ ಮಕ್ಕಳೂ ಜಾತಿ, ಧರ್ಮ, ಕುಲ, ಗೋತ್ರಗಳನ್ನು ಕಳಚಿ ಬಂದು ಅಲ್ಲಿ ಸಮಭಾವದಿಂದ ಆಸೀನ ರಾಗಬೇಕು. ಪುಸ್ತಕಗಳನ್ನು ಮನೆಗಳಿಗೆ ಎರವಲು ಪಡೆಯಬಹುದು. ವಿಶೇಷವಾಗಿ ಹೆಣ್ಣುಮಕ್ಕಳ ಓದಿಗಾಗಿ ಅವಕಾಶ ಕಲ್ಪಿಸಲಾಗಿದೆ. ಆ ಗ್ರಂಥಾಲಯದ ಉಸ್ತುವಾರಿ ಮತ್ತು ಗ್ರಂಥಪಾಲಕರು ಶಬ್ರೀನಾರವರೇ ಆಗಿದ್ದಾರೆ.
ನಾನು ಈ ಕುರಿತು, ಶಬೀನಾರನ್ನು ಮಾತಿಗೆ ಎಳೆದೆ. ಅವರು ಮೊದಲ ವಾಕ್ಯದಲ್ಲಿಯೇ, ‘ಅಂಬೇಡ್ಕರ್ ಅವರ ಹುಟ್ಟು ನಮಗೆ ವರ’ ಎಂದರು. ಮುಂದುವರಿದು, ಅವರು ಹುಟ್ಟಿರಲಿಲ್ಲ ಅಂದರೆ ನಾವೆಲ್ಲ ಅಡುಗೆ ಮನೆಗೆ ಸೀಮಿತರಾಗಬೇಕಿತ್ತು. ಶಿಕ್ಷಣ ಮತ್ತು ಜ್ಞಾನ ಎರಡೂ ಬಹುದೊಡ್ಡ ಅಸ್ತ್ರಗಳೆಂದು ನಮಗೆ ಅವರು ತಿಳಿಸಿ ಹೋಗಿದ್ದಾರೆ. ಈ ನೆಲದಲ್ಲಿ ಒಂದು ಬಡಜೀವ ತನ್ನ ಇಷ್ಟದಂತೆ ತಾನು ಬದುಕು ಕಟ್ಟಿಕೊಂಡು, ತನ್ನ ಪಾಡಿಗೆ ತಾನು ಸ್ವತಂತ್ರವಾಗಿ ಬದುಕಲು, ಡಾ. ಅಂಬೇಡ ರವರು ನೇರ ಕಾರಣ. ನಾವು ಭಾರತೀಯ ಹೆಣ್ಣುಮಕ್ಕಳು ಅವರಿಗೆ ಚಿರಋಣಿಯಾಗಿರಬೇಕು ಎಂದರು.
ಶಬ್ರೀನಾ ಮುಂದುವರಿದು, ಶಂಕರ್ ದೇವನೂರು ಅವರ ಪ್ರವಚನಗಳು ನಮ್ಮ ಬದುಕಿನ ಬೆಳಕಾಗಿವೆ. ಅವರ ಭಾಷೆ, ಸರಳತೆ, ವಾಗರಿ, ಮೌಲ್ಯಗಳು ನಮ್ಮ ಬದುಕನ್ನು ಮತ್ತಷ್ಟು ಸರಳಗೊಳಿಸಿವೆ. ‘ಬುದ್ಧ ಬೀಜ, ಬಸವಣ್ಣ ಮರ, ಅಂಬೇಡ್ಕರ್ ಫಲ, ನಾವೆಲ್ಲ ಅವರ ಫಲಾನುಭವಿಗಳು ಎಂಬ ಅವರ ಚೈತನ್ಯದಾಯಕ ಸ್ಫೂರ್ತಿಯ ನುಡಿಗಳು ಈ ನಾಡನ್ನು ಎಚ್ಚರಿಸುತ್ತಿವೆ. ಪ್ರಸ್ತುತ ಸಮಾಜದ ಸೌಹಾರ್ದ ಸಂಕೇತದಂತಿವೆ ಎಂದರು.
ಈ ಪ್ರೇರಣಾ ನುಡಿಗಳ ನಂತರ, ಮೈಸೂರು ಸೀಮೆಯ ಜ್ಞಾನವೊಂದು ಸ್ಫೋಟಿಸಿ, ಸಮಾಜದ ಅಂತರಂಗದಲ್ಲಿ ಬದಲಾವಣೆ ತಂದಂತೆ, ಶಂಕರ್ ದೇವನೂರು ಅವರು ನನಗೆ ಕಾಣಿಸುತ್ತಾರೆ ಎಂಬುದು ಶಬ್ರೀನಾ ಅವರ ಭಾವುಕ ನುಡಿ,
ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…
ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್‌ಸಿ ಸಿ.ಟಿ…
ಮೈಸೂರು: ನಗರದ ಅಲ್ ಅನ್ಸಾರ್ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…