ಮಹೇಂದ್ರ ಹಸಗೂಲಿ
ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸಾರ್ವಜನಿಕರ ಆಗ್ರಹ
ಗುಂಡ್ಲುಪೇಟೆ: ಮೈಸೂರು- ಗುಂಡ್ಲುಪೇಟೆ-ಊಟಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು, ಕಾಮಗಾರಿಯನ್ನು ಸ್ವಲ್ಪಸ್ವಲ್ಪವೇ ಮಾಡದೆ, ರಸ್ತೆಯನ್ನು ಕಿಲೋಮೀಟರ್‌ಗಟ್ಟಲೆ ಅಗೆದಿರುವುದರಿಂದ ವಿಪರೀತ ದೂಳು ಏಳುತ್ತಿದ್ದು, ವಾಹನ ಸವಾರರು ನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ.
ಎರಡೂ ಬದಿಯ ವಾಹನಗಳನ್ನುಒಂದೇ ರಸ್ತೆಯಲ್ಲಿ ಸಂಚಾರಕ್ಕೆ ಬಿಟ್ಟಿರುವುದರಿಂದ ಸಂಚಾರ ದಟ್ಟಣೆ ಜತೆಗೆ ದೂಳು ಕುಡಿದು ಸಂಚರಿಸುವಂತಾಗಿದೆ. ಗುತ್ತಿಗೆದಾರರು ಮಂದಗತಿಯಲ್ಲಿ ಕಾಮಗಾರಿ ನಡೆಸುತ್ತಿದ್ದರೂ ರಾಷ್ಟ್ರೀಯ ಅಭಿವೃದ್ಧಿ ಪ್ರಾಧಿಕಾರ ಗಮನ ಹರಿಸುತ್ತಿಲ್ಲ ಎಂದು ವಾಹನ ಸವಾರರು, ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು, ಟಿಪ್ಪರ್‌ಗಳು ಸಂಚರಿಸುತ್ತವೆ. ಇದರಿಂದ ಏಳುತ್ತಿರುವ ದೂಳಿನಿಂದ ಸವಾರರಿಗೆ ಕಣ್ಣಿನ ಸಮಸ್ಯೆ, ಆಸ್ತಮಾ ಮುಂತಾದ ರೋಗಗಳು ಬರುವ ಭೀತಿ ಎದುರಾಗಿದೆ. ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಮದುವೆ, ಕಚೇರಿ, ಮತ್ತಿತರ ಕಾರ್ಯಕ್ರಮಗಳಿಗೆ ತೆರಳುವ ವಾಹನ ಸವಾರರು ವೀರನಪುರ ಗೇಟ್‌ನಿಂದ ಪಟ್ಟಣದ ಸ್ವಾಗತ ಕಮಾನಿನವರೆಗೆ ಜೀವ ಕೈಯಲ್ಲಿಹಿಡಿದು ಸಂಚರಿಸುವ ಸ್ಥಿತಿ ನಿರ್ಮಾಣವಾಗಿರುವುದಲ್ಲದೆ, ಬಟ್ಟೆಗಳು ಮಲಿನಗೊಂಡು ವಾಪಸ್ ತೆರಳುವಂತಾಗಿದೆ.
ಈ ಬಗ್ಗೆ ಪ್ರಶ್ನೆ ಮಾಡಲು ಕೆಲಸಗಾರರು ಸ್ಥಳದಲ್ಲಿ ಇರುವುದಿಲ್ಲ. ಎಲ್ಲೋ ಅಪರೂಪಕ್ಕೆ ಸಿಕ್ಕರೂ ಹಿಂದಿಯಲ್ಲಿ ಮಾತನಾಡುತ್ತಾರೆ. ಅದು ಸ್ಥಳೀಯರಿಗೆ ಅರ್ಥವಾಗುವುದಿಲ್ಲ. ಒಟ್ಟಾರೆ ಸಾರ್ವಜನಿಕರು, ವಾಹನ ಸವಾರರ ಸಮಸ್ಯೆ ಕೇಳುವವರೇ ಇಲ್ಲ ಎಂಬಂತಾಗಿದೆ. ಗರಗನಹಳ್ಳಿ ಬಳಿ ಅಗೆದಿರುವ ರಸ್ತೆಗೆ ಡಾಂಬರು ಹಾಕದೆ ವಿಪರೀತ ಮಣ್ಣಿನ ದೂಳು ಇದ್ದು, ವಾಹನಗಳು ಸ್ಕಿಡ್ ಆಗಿ ಬೀಳುತ್ತಿವೆ ಎಂದು ಸಾರ್ವಜನಿಕರು ದೂರಿದ್ದಾರೆ.
” ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸಬೇಕಾದರೆ ಒಂದಷ್ಟು ಕಿ.ಮೀ. ಮಾತ್ರ ಮಾಡಿ ನಂತರ ಮುಂದೆ ಮಾಡಬೇಕು. ಆದರೆ ಎಲ್ಲವನ್ನೂ ಕಿತ್ತುಹಾಕಿ ಕಾಮಗಾರಿ ವಿಳಂಬ ಮಾಡಿದರೆ ಜನರು, ವಾಹನ ಸವಾರರು ಹೇಗೆ ಸಂಚರಿಸುವುದು? ಕೂಡಲೇ ತ್ವರಿತಗತಿಯಲ್ಲಿ ಕಾಮಗಾರಿ ಪುರ್ಣಗೊಳಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸಲಾಗುವುದು.”
ಈಶ್ವರ್, ಜಿಲ್ಲಾಧ್ಯಕ್ಷ, ಜಯ ಕರ್ನಾಟಕ ರಕ್ಷಣಾ ಸೇನೆ
ಲಕ್ಷ್ಮೀಕಾಂತ್ ಕೊಮಾರಪ್ಪ ವಾಡಿಕೆಯಂತೆ ಸುರಿಯದ ಮಳೆ; ಆತಂಕಗೊಂಡಿರುವ ರೈತರು ಸೋಮವಾರಪೇಟೆ: ಮಳೆ ಕೈಕೊಟ್ಟ ಪರಿಣಾಮ ಭತ್ತದ ಬೆಳೆಗೆ ನೀರಿನ ಕೊರತೆ…
ದಿನೇಶ್ ಕುಮಾರ್ ಎಚ್.ಎಸ್. ಅಶುಚಿತ್ವ ಮರೆಮಾಚಲು ಹಗಲು ಹೊತ್ತಿನಲ್ಲಿಯೇ ಪಾರ್ಕ್ ಬಂದ್; ಸಾರ್ವಜನಿಕರ ಆಕ್ರೋಶ ಮತ್ತೊಂದೆಡೆ ನಳನಳಿಸುತ್ತಿದೆ ಜಿಲ್ಲಾ ಪಂಚಾಯಿತಿ…
ಹನೂರು : ತಾಲೂಕಿನ ಬಿಆರ್‌ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯ ದೊಡ್ಡಸಂಪಿಗೆ ಅರಣ್ಯ ಪ್ರದೇಶದ ಕೂಳಿಹಟ್ಟಿ ಭಾಗದ ಬೆಳ್ಳಾಜಿ…
ಉತ್ತರ ಪ್ರದೇಶ: ಉತ್ತರ ಪ್ರದೇಶದಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ರಾಜ್ಯದ 63 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚಿನ…
ಬೆಂಗಳೂರು: ಕರ್ನಾಟಕದಲ್ಲಿ ಮುಂಗಾರು ಹಂಗಾಮಿನಲ್ಲಿ ಉಂಟಾಗಿರುವ ಬರ ಪರಿಸ್ಥಿತಿ ಹಾಗೂ ಬೆಳೆ ಹಾನಿ ಪರಿಶೀಲಿಸಲು ಕೇಂದ್ರ ಸರ್ಕಾರದ ತಂಡ ರಾಜ್ಯಕ್ಕೆ…
ಮೈಸೂರು: ವಿದ್ಯುತ್ ಕೊರತೆ ಹಾಗೂ ರಾಜ್ಯದ ವಿದ್ಯುತ್ ಪರಿಸ್ಥಿತಿ ಕುರಿತು ಮಾತನಾಡಿರುವ ಸಚಿವ ಕೆ.ಜೆ.ಜಾರ್ಜ್ ರಾಜ್ಯದಲ್ಲಿ ಸದ್ಯಕ್ಕೆ ಲೋಡ್ ಶೆಡ್ಡಿಂಗ್…