ಶೋಚನೀಯ ಸ್ಥಿ ತಿಯಲ್ಲಿ ಐತಿಹಾಸಿಕ ಮಹತ್ವವುಳ್ಳ ಮೈಸೂರಿನ ಮಹಾರಾಜ, ಯುವರಾಜ, ಕಾವಾ ಹಾಗೂ ಸಂಸ್ಕೃತ ಪಾಠಶಾಲೆ ಕಟ್ಟಡಗಳು.
ಎಲ್. ಸುಜೀಂದ್ರನ್, ಚಿತ್ರಗಳು: ಗವಿಮಠ ರವಿ
ಮೈಸೂರು ನಗರ ತನ್ನ ಐತಿಹಾಸಿಕ ಶೈಕ್ಷಣಿಕ ಸಂಸ್ಥೆಗಳಿಗಾಗಿ ಹೆಸರಾಗಿದ್ದು, ಅನೇಕ ಶತಮಾನಗಳಿಂದ eನ ಮತ್ತು ಸಂಸ್ಕೃತಿಯ ಕೇಂದ್ರವಾಗಿ ಬೆಳೆಯುತ್ತಿದೆ. ಆದರೆ, ಇಂದು ಈ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿರುವ ಪಾರಂಪರಿಕ ಕಟ್ಟಡಗಳು ಶಿಥಿಲಾವಸ್ಥೆಗೆ ತಲುಪುತ್ತಿರುವುದು ವಿಷಾದನೀಯ.
ಈಗಾಗಲೇ ಮಹಾರಾಣಿ ಕಾಲೇಜಿನಲ್ಲಿ ಇತ್ತೀಚೆಗೆ ಕಟ್ಟಡ ಕುಸಿತದಿಂದ ಕಾರ್ಮಿಕನೊಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ. ಇಂತಹ ದುರಂತಗಳು ಪುನರಾವರ್ತನೆಯಾಗದಂತೆ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಮತ್ತು ಈ ಐತಿಹಾಸಿಕ ಕಟ್ಟಡಗಳ ಭವ್ಯ ಇತಿಹಾಸ ಹಾಗೂ ಶ್ರೇಷ್ಠ ಪರಂಪರೆಯನ್ನು ಉಳಿಸುವ ಉದ್ದೇಶದಿಂದ ತಕ್ಷಣ ಸೂಕ್ತ ಸಂರಕ್ಷಣೆಯ ಕ್ರಮ ತೆಗೆದುಕೊಳ್ಳುವುದು ಅವಶ್ಯ.
ಮಹಾರಾಜ ಕಾಲೇಜು ಕಟ್ಟಡ
ಮೈಸೂರಿನ ಮಹಾರಾಜ ಕಾಲೇಜು ರಾಜ್ಯದ ಪ್ರಾಚೀನ ಹಾಗೂ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿ ಗುರುತಿಸಲ್ಪಟ್ಟಿದೆ. ೧೮೫೩ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತದಲ್ಲಿ ಈ ಕಟ್ಟಡವನ್ನು ನಿರ್ಮಿಸಲಾಯಿತು. ಇದರ ಜೂನಿಯರ್ ಬಿಎ ಹಾಲ್ ಹಾಗೂ ಸೀನಿಯರ್ ಬಿಎ ಹಾಲ್‌ಗಳನ್ನು ಗೋಥಿಕ್ ಶೈಲಿಯಲ್ಲಿ ಕಟ್ಟಲಾಗಿದೆ. ಭಾರತದ ಸ್ವಾತಂತ್ರ್ಯ ಪೂರ್ವದಲ್ಲೇ ಉನ್ನತ ಶಿಕ್ಷಣ ಕೇಂದ್ರವಾಗಿ ಬೆಳೆಯಿತು.
ಈ ಶಿಕ್ಷಣ ಸಂಸ್ಥೆಯು ಅನೇಕ eನಿಗಳು, ತಜ್ಞರು ಮತ್ತು ರಾಷ್ಟ್ರದ ಪ್ರಖ್ಯಾತ ವ್ಯಕ್ತಿಗಳನ್ನು ರೂಪಿಸಿದೆ. ವಿವೇಕಾನಂದರು ೧೮೯೨ರಲ್ಲಿ ಇಲ್ಲಿಯೇ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದ್ದರು. ಅಲ್ಲದೇ, ಜಯಚಾಮರಾಜ ಒಡೆಯರ್, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ದಿವಾನರಾಗಿದ್ದ ಕಾಂತರಾಜೇ ಅರಸ್, ಡಾ. ಸರ್ವಪಲ್ಲಿ ರಾಧಾಕೃಷ್ಣನ್, ಕುವೆಂಪು, ಡಾ. ಶಾಮ ಪ್ರಸಾದ್ ಮುಖರ್ಜಿ ಇತ್ಯಾದಿ ಗಣ್ಯರು ಈ ಮಹಾನ್ ಶಿಕ್ಷಣ ಸಂಸ್ಥೆ ಯಲ್ಲಿ ಓದಿ, ದೇಶದ ವಿವಿಧ ಕ್ಷೇತ್ರಗಳಲ್ಲಿ ಪ್ರಮುಖ ಸಾಧನೆ ಮಾಡಿದ್ದಾರೆ.
ಈ ಐತಿಹಾಸಿಕ ಕಟ್ಟಡವು ವರ್ಷದಿಂದ ವರ್ಷಕ್ಕೆ ನಿರ್ಲ ಕ್ಷ್ಯಕ್ಕೆ ಗುರಿಯಾಗುತ್ತಿದ್ದು, ಸರಿಯಾದ ರಕ್ಷಣೆ ಇಲ್ಲದೆ ಅವ್ಯ ವಸ್ಥೆಯ ಲ್ಲಿದೆ. ಕಟ್ಟಡದ ಗೋಡೆಗಳು ಬಿರುಕು ಬಿಟ್ಟಿದ್ದು, ಮೇಲ್ಚಾವಣಿ ಉರುಳುವ ಭೀತಿ ವಿದ್ಯಾರ್ಥಿಗಳನ್ನು ಕಾಡುತ್ತಿದೆ. ೨೦೨೧ರ -ಬ್ರವರಿಯಲ್ಲಿ ನಡೆದ ಅಘಾತಕಾರಿ ಘಟನೆ, ಈ ನಿರ್ಲಕ್ಷ್ಯದ ಪರಾಕಾಷ್ಠೆ ಎಂದು ಪರಿಗಣಿಸಬಹುದು. ಪರೀಕ್ಷೆ ಬರೆಯುತ್ತಿದ್ದ ಮೂರು ವಿದ್ಯಾರ್ಥಿಗಳ ಮೇಲೆ ತರಗತಿ ಕೊಠಡಿಯ ಮೇಲ್ಚಾವಣಿ ಕುಸಿದು ಬಿದ್ದು ಗಂಭೀರ ಗಾಯಗಳಾಗಿದ್ದವು. ಈ ಘಟನೆಯ ನಂತರ ಕೂಡ ಅಗತ್ಯ ದುರಸ್ತಿಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದೇ ರೀತಿ ನಿರ್ಲಕ್ಷ್ಯ ಮುಂದುವರಿದರೆ, ರಾಜ್ಯದ ಶೈಕ್ಷಣಿಕ, ಸಾಂಸ್ಕೃತಿಕ ಪರಂಪರೆಯ ಪ್ರಮುಖ ಅಧ್ಯಾಯವೊಂದು ಮಾಯವಾಗುವ ಭೀತಿ ಇದೆ.
ಯುವರಾಜ ಕಾಲೇಜು ಕಟ್ಟಡ
ಮೈಸೂರು ವಿಶ್ವವಿದ್ಯಾನಿಲಯದ ಅಂಗಸಂಸ್ಥೆಯಾದ ಯುವರಾಜ ಕಾಲೇಜು, ರಾಜ್ಯದ ಪ್ರಮುಖ ವಿಜ್ಞಾನ ಮಹಾವಿದ್ಯಾಲಯಗಳಲ್ಲಿ ಒಂದಾಗಿದೆ. ಈ ಕಾಲೇಜು ೧೯೨೭ರಲ್ಲಿ ಸ್ಥಾಪಿತವಾಗಿದ್ದು, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತದಲ್ಲಿ ವಿಜ್ಞಾನ ಶಿಕ್ಷಣವನ್ನು ಉತ್ತೇಜಿಸುವ ಉದ್ದೇಶದಿಂದ ನಿರ್ಮಿಸಲಾಯಿತು. ಜಯಚಾಮರಾಜೇಂದ್ರ ಒಡೆಯರ್ ಅವರು ಯುವರಾಜರಾಗಿzಗ ತಮ್ಮ ಇಂಟರ್ ಮೀಡಿಯೆಟ್ ಶಿಕ್ಷಣವನ್ನು ಈ ಕಾಲೇಜಿನಲ್ಲಿ ಮುಗಿಸಿದರು. ಅವರು ಇಲ್ಲಿ ಓದಿದ ಸ್ಮರಣಾರ್ಥ ಯುವರಾಜ ಕಾಲೇಜು ಎಂದು ಹೆಸರಿಡಲಾಯಿತು.
ಯುವರಾಜ ಕಾಲೇಜು ೨೦೦೫-೦೬ನೇ ಸಾಲಿನಲ್ಲಿ ಸ್ವಾಯತ್ತತೆ ಗಳಿಸಿದ ಮೈಸೂರು ವಿಶ್ವವಿದ್ಯಾನಿಲಯದ ಏಕೈಕ ಕಾಲೇಜು ಎಂಬ ಅಭಿದಾನಕ್ಕೆ ಪಾತ್ರವಾಗಿದೆ. ಹನ್ನೊಂದನೆಯ ಪಂಚವಾರ್ಷಿಕ ಯೋಜನೆಯ ಅಂಗವಾಗಿ ಯುವರಾಜ ಕಾಲೇಜಿಗೆ ‘ಉತ್ಕೃಷ್ಟತಾ ಸಾಮರ್ಥ್ಯವಿರುವ ವಿದ್ಯಾಲಯ’ ಎಂಬ ಉನ್ನತ ಸ್ಥಾನ-ಮಾನ ದೊರಕಿದೆ. ಈ ಹೆಗ್ಗಳಿಕೆ ಪಡೆದ ಅಖಂಡ ಭಾರತದ ೧೪೯ ಕಾಲೇಜುಗಳಲ್ಲಿ ಯುವರಾಜ ಕಾಲೇಜು ಪ್ರಮುಖವಾದುದಾಗಿದೆ.
ಈ ಕಾಲೇಜು ಪ್ರಾರಂಭದ ದಿನಗಳಿಂದಲೇ ಅನೇಕ ಗಣ್ಯರನ್ನು ರೂಪಿಸಿದೆ. ಇಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ವಿಜ್ಞಾನ, ತಂತ್ರಜ್ಞಾನ, ಸಾಹಿತ್ಯ, ಕಲೆ ಮತ್ತು ಇತರ ಕ್ಷೇತ್ರಗಳಲ್ಲಿ ಮಹತ್ವದ ಸಾಧನೆಗಳನ್ನು ಮಾಡಿzರೆ. ಆದರೆ, ಇತ್ತೀಚಿನ ವರ್ಷಗಳಲ್ಲಿ, ಕಾಲೇಜಿನ ಐತಿಹಾಸಿಕ ಕಟ್ಟಡ ನಿರ್ಲಕ್ಷ್ಯದಿಂದ ಶಿಥಿಲಗೊಳ್ಳಲಾರಂಭಿಸಿದೆ. ನಿರ್ಲಕ್ಷ್ಯದಿಂದಾಗಿ ಕಟ್ಟಡದ ಗೋಡೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ ಮತ್ತು ಮೇಲ್ಚಾವಣಿಯಲ್ಲಿ ಸಸ್ಯಗಳು ಬೆಳೆಯುತ್ತಿವೆ. ಈ ಸಸ್ಯಗಳ ಬೇರುಗಳು ಕಟ್ಟಡದ ಒಳಭಾಗಕ್ಕೆ ನುಗ್ಗಿ, ಅದರ ಸ್ಥಿರತೆಯನ್ನು ಕದಡುತ್ತಿವೆ, ಇದರಿಂದ ಕಟ್ಟಡದ ಬಲ ಕುಂದುತ್ತಿದೆ. ಈ ಐತಿಹಾಸಿಕ ಕಟ್ಟಡವನ್ನು ಸಂರಕ್ಷಿಸಲು ಮತ್ತು ಮುಂದಿನ ಪೀಳಿಗೆಗಳಿಗೆ ಉಳಿಸಲು ತಕ್ಷಣ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.
ಕಾವಾ ಕಟ್ಟಡ
ಮೈಸೂರು ನಗರದ ಶೈಕ್ಷಣಿಕ ಪರಂಪರೆಯಲ್ಲಿ ಪ್ರಮುಖ ಸ್ಥಾನ ಹೊಂದಿರುವ ಚಾಮರಾಜೇಂದ್ರ ಅಕಾಡೆಮಿ ಆ- ವಿಶ್ಯುಯಲ್ ಆಟ್ಸ ಕಾಲೇಜು, ಕಲಾ ಕ್ಷೇತ್ರದಲ್ಲಿ ಅನೇಕ ಪ್ರತಿಭಾವಂತರನ್ನು ರೂಪಿಸಿದೆ. ಈ ಕಾಲೇಜು ೧೯೦೬ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತದಲ್ಲಿ ಸ್ಥಾಪಿತವಾಗಿ, ೨. ೫ ಲಕ್ಷ ರೂ. ವೆಚ್ಚದಲ್ಲಿ ಪೂರ್ಣಗೊಂಡಿತು. ಕಲೆ ಮತ್ತು ಹಸ್ತಶಿಲ್ಪಗಳನ್ನು ಉತ್ತೇಜಿಸುವ ಉದ್ದೇಶದಿಂದ ಈ ಸಂಸ್ಥೆ ಆರಂಭಗೊಂಡಿತು.
ಈ ಕಟ್ಟಡವು ವೈಶಿಷ್ಟ್ಯಪೂರ್ಣ ವಿನ್ಯಾಸ ಹೊಂದಿದೆ. ಆದರೆ, ನಿರ್ಲಕ್ಷ್ಯದಿಂದಾಗಿ ಕಟ್ಟಡದ ಗೋಡೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು, ಮೇಲ್ಚಾವಣಿಯಲ್ಲಿ ಸಸ್ಯಗಳು ಬೆಳೆಯುತ್ತಿವೆ. ಈ ಸಸ್ಯಗಳ ಬೇರುಗಳು ಕಟ್ಟಡದ ಒಳಭಾಗಕ್ಕೆ ನುಗ್ಗಿ, ಕಟ್ಟಡವನ್ನು ದುರ್ಬಲಗೊಳಿಸುತ್ತಿವೆ. ಈ ಪಾರಂಪರಿಕ ಕಟ್ಟಡವನ್ನು ಸೂಕ್ತ ರೀತಿಯಲ್ಲಿ ಸಂರಕ್ಷಿಸದೇ ಹೋದರೆ, ಮುಂಬ ರುವ ಪೀಳಿಗೆಗಳು ಇದರ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಮಹತ್ವವನ್ನು ಕಳೆದುಕೊಳ್ಳುವ ಭೀತಿ ಇದೆ.
ಸಂಸ್ಕೃತ ಪಾಠಶಾಲೆ
ಮೈಸೂರು ನಗರದ ಸಯ್ಯಾಜಿರಾವ್ ರಸ್ತೆಯಲ್ಲಿರುವ ಸಂಸ್ಕೃತ ಪಾಠಶಾಲೆಯು ಪಾರಂಪರಿಕ ಕಟ್ಟಡ ಅಷ್ಟೇ ಅಲ್ಲ, ಇಂದಿಗೂ ಸಾಂಸ್ಕೃತಿಕ ನಗರಿಯಲ್ಲಿರುವ ನಾಡಿನ ಅಪರೂಪದ ಸಂಸ್ಕೃತ ಪಾಠಶಾಲೆ. ಇದು ಹತ್ತನೇ ಚಾಮರಾಜ ಒಡೆಯರ್ ಅವರ ಅಪೇಕ್ಷೆಯ ಮೇರೆಗೆ ೧೮೮೦ರಲ್ಲಿ ನಿರ್ಮಾಣ ಪ್ರಾರಂಭವಾಗಿ ೧೮೯೦ರಲ್ಲಿ ಪೂರ್ಣಗೊಂಡಿತು. ಸಂಸ್ಕೃತ ಭಾಷೆ ಮತ್ತು ಸಾಹಿತ್ಯದ ಅಧ್ಯಯನವನ್ನು ಉತ್ತೇಜಿಸುವ ಉದ್ದೇಶದಿಂದ ಈ ಪಾಠಶಾಲೆ ಸ್ಥಾಪಿತವಾಯಿತು. ಇದು ನಾಡಿನ ಹೆಸರಾಂತ ವಿದ್ವಾಂಸರನ್ನು ಕೊಟ್ಟಿದ್ದು, ದೇಶದ ಪ್ರಮುಖ ಸಂಸ್ಕೃತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿ ಪ್ರಸಿದ್ಧಿ ಪಡೆದಿದೆ. ಮಹಾರಾಜ ಜಯಚಾಮರಾಜ ಒಡೆಯರ್, ಮೈಸೂರು ಎಂ. ವಾಸುದೇವಾಚಾರ್ಯ, ಡಾ. ಎಸ್. ರಾಧಾಕೃಷ್ಣನ್, ನವೀನಂ ವೆಂಕಟೇಶ ಶಾಸಿ ಸೇರಿದಂತೆ ಹಲವಾರು ಗಣ್ಯರನ್ನು ಈ ಕಾಲೇಜು ರೂಪಿಸಿದೆ. ಆದರೆ ಇಂದು ಈ ಐತಿಹಾಸಿಕ ಕಟ್ಟಡದ ಗೋಡೆಗಳಲ್ಲಿ ಬಿರುಕು ಗಳು ಕಾಣಿಸಿಕೊಂಡಿದ್ದು, ಮೇಲ್ಚಾವಣಿಯಲ್ಲಿ ಸಸ್ಯಗಳು ಬೆಳೆಯುತ್ತಿದ್ದು ಕಟ್ಟಡವು ನಿರ್ವಹಣೆ ಕೊರತೆಯಿಂದಾಗಿ ಶಿಥಿಲಾವಸ್ಥೆಯನ್ನು ತಲುಪಿದೆ.
ಮಹಾರಾಜ ಕಾಲೇಜು ವಿದ್ಯಾರ್ಥಿ ನಿಲಯ
ನಿರ್ವಹಣೆ ಕೊರತೆಯಿಂದಾಗಿ ಮಹಾರಾಜ ಕಾಲೇಜು ವಿದ್ಯಾರ್ಥಿನಿಲಯದ ಕಟ್ಟಡದ ಗೋಡೆಗಳಲ್ಲಿ ಪಾಚಿ ಹಾಗೂ ಬಿರುಕುಗಳು ಕಾಣಿಸಿಕೊಂಡಿದ್ದು, ಮೇಲ್ಚಾವಣಿಯಲ್ಲಿ ಬೆಳೆದಿರುವ ಸಸ್ಯಗಳ ಬೇರುಗಳು ಕಟ್ಟಡದ ಒಳಭಾಗಕ್ಕೆ ಇಳಿದು ಕಟ್ಟಡವನ್ನು ಶಿಥಿಲವಾಗಿಸುತ್ತದೆ.
ಬೆಳಗಾವಿ : ರಾಜ್ಯದಲ್ಲಿ ಹಣ ವಸೂಲಿಗಾಗಿ ಅನಗತ್ಯವಾಗಿ ಸಿಜೇರಿಯನ್ ಹೆರಿಗೆ ಮಾಡುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕೆ.ಪಿ.ಎಂ.ಇ. ನಿಯಮದಂತೆ ಕ್ರಮ…
ಚಿಕ್ಕಮಗಳೂರು : ಅತ್ಯಂತ ಪರಿಸರ ಸೂಕ್ಷ ಸ್ಥಳಗಳನ್ನು ಹೊಂದಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪರಿಸರದ ಮೇಲೆ ಆಗುವ ದುಷ್ಪರಿಣಾಮಗಳನ್ನು ಗಣನೆಗೆ ತೆಗೆದುಕೊಳ್ಳದೆ…
ಹೊಸದಿಲ್ಲಿ : ಲೋಕಸಭೆಯಲ್ಲಿ ವಂದೇ ಮಾತರಂ ಗೀತೆ ಕುರಿತ ಚರ್ಚೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣವು ಇತಿಹಾಸವನ್ನು…
ಬೆಳಗಾವಿ : ರಾಜ್ಯದಲ್ಲಿ ಸರ್ಕಾರಿ ಶಾಲೆಗಳಲ್ಲಿ ಒಂದೇ ಒಂದು ಮಗುವಿದ್ದರೂ ಕೂಡ ಯಾವುದೇ ಕಾರಣಕ್ಕೂ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚುವುದಿಲ್ಲ…
ಬೆಳಗಾವಿ : ಡಿನ್ನರ್ ಬ್ರೇಕ್‌ಫಾಸ್ಟ್ ಬಳಿಕವೂ ತಂದೆಯ ಪರ ಪುತ್ರ ಯತೀಂದ್ರ ಬ್ಯಾಟಿಂಗ್ ಮಾಡುವುದನ್ನು ಮುಂದುವರಿಸಿದ್ದಾರೆ. ಸಿದ್ದರಾಮಯ್ಯ ಪೂರ್ಣ ಅವಧಿಯವರೆಗೆ…
ಹೊಸದಿಲ್ಲಿ : ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕರ್ನಾಟಕ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಪ್ತ, ಕಾಂಗ್ರೆಸ್ ಮುಖಂಡ ಇನಾಯತ್ ಅಲಿಗೆ ದೆಹಲಿ…