ಮಾವುತ ವಸಂತ ಅಂತರಾಳದ ಮಾತು
• ಜಿ.ತಂಗಂ ಗೋಪಿನಾಥಂ
ಮೈಸೂರು: ಈ ಸಲದ ದಸರೆಯನ್ನು ಮರೆಯಲಾರೆ. ಇಷ್ಟೊಂದು ಜನ, ಜೈಕಾರವನ್ನು ನೋಡಿಯೂ ಇರಲಿಲ್ಲ, ಕೇಳಿಯೂ ಇರಲಿಲ್ಲ ಎಂದೂ ನೋಡದಷ್ಟು ಜನರನ್ನು ಈ ಬಾರಿ ಕಂಡೆ… ಯಾವುದೇ ಭಯ, ಸಂಕೋಚ, ಕೋಪಕ್ಕೆ ಒಳಗಾಗದೆ ಶಾಂತ ಸ್ವರೂಪಿಯಾಗಿ ಜಂಬೂಸವಾರಿ ಮೆರವಣಿಗೆಯಲ್ಲಿ ನಮ್ಮ ಮೆರವಣಿಗೆಯಲ್ಲಿ ನಮ್ಮ ಅಭಿಮನ್ಯು ಗಾಂಭೀರ್ಯದಿಂದ ಹೆಜ್ಜೆ ಹಾಕಿ ಎಲ್ಲರ ನಂಬಿಕೆಯನ್ನು ಉಳಿಸಿಕೊಂಡ. ನಾಡ ಅಧಿದೇವತೆ ಶ್ರೀ ಚಾಮುಂಡೇಶ್ವರಿ ತಾಯಿ ದಯೆಯಿಂದ ಎಲ್ಲವೂ ಚೆನ್ನಾಗಿ ಜಂಬೂಸವಾರಿ ನಡೆಯಿತು.
ದಸರಾ ಜಂಬೂಸವಾರಿಯಲ್ಲಿ ಅಭಿ ಮನ್ನು ಅಂಬಾರಿ ಹೊತ್ತಿದ್ದು ಮತ್ತು ನಾನು ಅಭಿಮನ್ಯುವಿನ ಸಾರಥಿಯಾ ಗಿದ್ದು ಕೂಡ ದೇವರ ಕೆಲಸ. ಇಂತಹ ಕೆಲಸ ಯಾರಿಗೆ ಸಿಗುತ್ತದೆ ಹೇಳಿ? ಇದು ಅಂಬಾರಿ ಆನೆ ಅಭಿಮನ್ಯು ವಿನ ಮಾವುತ, ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕೃತ ವಸಂತ ಅವರ ಹೆಮ್ಮೆಯ ಮಾತು.
‘ಆಂದೋಲನ’ದೊಂದಿಗೆ ಜಂಬೂಸವಾರಿಯ ಯಶಸ್ವಿನ ಖುಷಿಯನ್ನು ಹಂಚಿಕೊಂಡ ವಸಂತ, ಅಭಿಮನ್ಯು ಐದು ಬಾರಿ ಅಂಬಾರಿ ಹೊತ್ತಿದ್ದಾನೆ. ಕೊರೊನಾ ಕಾರಣದಿಂದ ಎರಡು ವರ್ಷಗಳು ಅರಮನೆ ಒಳಗೇ ನಡೆದ ಜಂಬೂಸವಾರಿಯಲ್ಲಿ ಅಭಿಮನ್ಯು ಅಂಬಾರಿ ಹೊತ್ತಿದ್ದ ಕಳೆದ ಮೂರು ವರ್ಷಗಳಿಂದ ಅರಮನೆ ಅಂಗಳದಿಂದ ಬನ್ನಿಮಂಟಪದವರೆಗೆ ಅಂಬಾರಿ ಹೊತ್ತು ಯಶಸ್ವಿಯಾಗಿದ್ದಾನೆ ಎಂದು ಸಂಭ್ರಮದಿಂದ ಹೇಳಿದರು.
ಕಳೆದ ಎರಡು ವರ್ಷಗಳು ಅರಮನೆ ಅಂಗಳದಿಂದ ಬನ್ನಿಮಂಟಪದವರೆಗೆ ನಡೆದ ಜಂಬೂಸವಾರಿಯಲ್ಲಿ ಅಂಬಾರಿ ಹೊತ್ತು ಅಭಿಮನ್ಯು ಉತ್ತಮವಾಗಿ ಸ್ಪಂದಿಸಿದ್ದ ಈ ಬಾರಿಯ ಜಂಬೂಸವಾರಿ ಮೆರವಣಿಗೆಯಲ್ಲಿ ನನಗೆ ಯಾವುದೇ ಆತಂಕವಾಗಲಿಲ್ಲ. ನಾನು ಇಟ್ಟಿದ್ದ ನಂಬಿಕೆಯನ್ನು ಅಭಿಮನ್ಯು ಮತ್ತೆ ಉಳಿಸಿಕೊಂಡ. ಚಾಮುಂಡೇಶ್ವರಿ ದಯೆ ಎಲ್ಲವೂ ಚೆನ್ನಾಗಿ ನಡೆದಿದೆ ಎಂದು ವಸಂತ ವಿನಮ್ರತೆಯಿಂದ ಹೇಳಿದರು.
ದೀಪದ ಬೆಳಕಿನಲ್ಲಿ ಅಭಿಮನ್ಯು ಮುನ್ನಡೆಸಿದ ಖುಷಿ: 25 ವರ್ಷಗಳಿಂದ ದಸರೆಯಲ್ಲಿ ಭಾಗವಹಿಸುತ್ತಿದ್ದೇನೆ. ಆದರೆ ಈ ಬಾರಿ ಜಂಬೂಸವಾರಿ ವೀಕ್ಷಣೆಗೆ ಸೇರಿದಷ್ಟು ಜನಸಂಖ್ಯೆಯನ್ನು ನಾನು ಎಂದೂ ಕಂಡಿರಲಿಲ್ಲ. ರಾಜ್ಯ, ದೇಶ, ವಿದೇಶಗಳಿಂದ ಆಗಮಿಸಿದ್ದ ಜನರನ್ನು ಕಂಡು ತುಂಬ ಖುಷಿಯಾಯಿತು. ಮೊದಲು ಅಭಿಮನ್ಯುವಿನ ಮೇಲೆ ಕುಳಿತು ರಾಜ ಪರಂಪರೆಯ ಛತ್ರಿ ಹಿಡಿದು ಸಾಗುತ್ತಿದ್ದೆವು. ಬಳಿಕ8 ವರ್ಷ ಅಭಿಮನ್ಯು ಆನೆಗಾಡಿ ಎಳೆದ 5 ವರ್ಷಗಳಿಂದ ಅಂಬಾರಿ ಹೊರುವ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾನೆ. ಮೆರವಣಿಗೆ ಉದ್ದಕ್ಕೂ ತಾಯಿ ಚಾಮುಂಡೇಶ್ು ಹಾಗೂ ಅಂಬಾರಿ ಹೊತ್ತ ನಮ ಅಭಿಮನ್ಯುವಿಗೆ ಜೈಕಾರ ಕೂಗುತ್ತಾ ತಮ್ಮ ಮೊಬೈಲ್‌ಗಳನ್ನು ಫೋಟೊ, ವಿಡಿಯೋ ಹಿಡಿಯುತ್ತಿದ್ದುದನ್ನು ಕಂಡು ಬಹಳ ಸಂತೋಷವಾಯಿತು. ಜಂಬೂಸವಾರಿಯ ಮಾರ್ಗದಲ್ಲಿ ದೀಪಾಲಂಕಾರ ಬೆಳಗುತ್ತಿತ್ತು. ದೀಪದ ಬೆಳಕಿನಲ್ಲಿ ಅಂಬಾರಿಯಲ್ಲಿ ಕುಳಿತಿದ್ದ ತಾಯಿ ಚಾಮುಂಡೇಶ್ವರಿ ಕಂಗೊಳಿಸುತ್ತಿದ್ದಳು ಎಂದರು.
300 ಮೀ. ಹೆಚ್ಚುವರಿಯಾಗಿ ಹೆಜ್ಜೆ ಹಾಕಿದ ಅಭಿಮನ್ಯು…
ಈ ಬಾರಿಯ ಜಂಬೂಸವಾರಿ ನೋಡಲು ಅರಮನೆ ಅಂಗಳದಲ್ಲಿ 30 ಸಾವಿರಕ್ಕಿಂತ ಅಧಿಕ ಜನರಿಗೆ ಆಸನಗಳ ವ್ಯವಸ್ಥೆ ಮಾಡಲಾಗಿತ್ತು. ಅವರೆಲ್ಲರಿಗೂ ಅಂಬಾರಿಯ ದರ್ಶನ ಸಿಗಬೇಕು ಎನ್ನುವ ಉದ್ದೇಶದಿಂದ ಈ ಸಲ ಅರಮನೆ ಆವರಣದಲ್ಲಿ 300 ಮೀಟರ್‌ಗಳಷ್ಟು ಹೆಚ್ಚುವರಿಯಾಗಿ ಅಂಬಾರಿ ಆನೆಯನ್ನು ನಡೆಸಬೇಕಿತ್ತು. ಇದೂ ಕೂಡ ನಮಗೆ ಸವಾಲಾಗಿತ್ತು. ಅದನ್ನೂ ಕೂಡ ಅಭಿಮನ್ಯು ಯಾವುದೇ ಅಳುಕು ಇಲ್ಲದೆ ಬಹಳ ಅಚ್ಚುಕಟ್ಟಾಗಿ ನಿಭಾಯಿಸಿದ್ದಾನೆ.
-ಡಾ.ಐ.ಬಿ.ಪ್ರಭುಗೌಡ, ಡಿಸಿಎಫ್.
ಭಯ ಅರಿಯದ ಅಭಿಮನ್ಯು: ನಮ್ಮ ಅಭಿಮನ್ಯುಗೆ ಭಯ ಇಲ್ಲ. ಯಾವುದೇ ಕೆಲಸ ಬೇಕಾದರೂ ಮಾಡುತ್ತಾನೆ. ಈ ಬಾರಿ ಯಾವುದೇ ಭಯ ಇಲ್ಲದೆ ಯಶಸ್ವಿಯಾಗಿ ಜಂಬೂಸವಾರಿ ಮೆರವಣಿಗೆಯನ್ನು ಪೂರ್ಣಗೊಳಿಸಿದ್ದಾನೆ. ಅಲ್ಲದೇ, ಈ ಬಾರಿ ಅಭಿಮನ್ಯು ಅಂಬಾರಿ ಹೊತ್ತು ಅರಮನೆ ಅಂಗಳದಲ್ಲಿ ಸುಮಾರು 1 ಕಿ. ಮೀ. ಹೆಜ್ಜೆ ಹಾಕಿದ್ದು ಸಂತಸ ಉಂಟುಮಾಡಿದೆ.
-ವಸಂತ, ಅಭಿಮನ್ಯು ಆನೆಯ ಮಾವುತ.
ಮುಗಿದುಹೋಯಿತಲ್ಲ ಅಂತ ಬೇಜಾರು: ಪ್ರಭುಗೌಡ…
ಮೈಸೂರು: ಇದು ನನಗೆ ಮೊದಲ ದಸರಾ ಆಗಿದ್ದರಿಂದ ಸವಾಲಿನಿಂದ ಕೂಡಿತ್ತು. ಎಲ್ಲರ ಸಹಕಾರದಿಂದ ಜಂಬೂಸವಾರಿ ಯಶಸ್ವಿಯಾಗಿದೆ. ಎರಡು ತಿಂಗಳು ಆನೆಗಳು, ಅವುಗಳ ಮಾವುತರು, ಕಾವಾಡಿಗಳ ಜೀವನ ಶೈಲಿ ಜತೆಗೆ ನಾನೂ ಬೆರೆತು ಹೋಗಿಬಿಟ್ಟಿದ್ದೆ. ಈಗ ಉತ್ಸವ ಮುಗಿದು ಹೋಯಿತಲ್ಲ ಎಂಬುದಾಗಿ ಬೇಜಾರು ಆಗುತ್ತಿದೆ ಎಂದು ಮೈಸೂರು ವನ್ಯಜೀವಿ ವಿಭಾಗದ ಡಿಸಿಎಫ್ ಡಾ.ಐ.ಬಿ.ಪ್ರಭುಗೌಡ ಹೇಳಿದರು. ಅಭಿಮನ್ಯು ಆನೆ ನೇತೃತ್ವದ ಗಜಪಡೆ ಯಶಸ್ವಿಯಾಗಿ ಕಾರ್ಯನಿರ್ವಹಿಸಿವೆ. ಜಂಬೂಸವಾರಿಯ ದಿನದಂದು ಪ್ರತಿಯೊಂದು ಕ್ಷಣವೂ ಸವಾಲಿನಿಂದ ಕೂಡಿತ್ತು. ಅದಕ್ಕೆ ತಕ್ಕಂತೆ ಇಡೀ ತಂಡದ ಸದಸ್ಯರು ತಮ್ಮ ಕೆಲಸಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು. 25 ನಿಮಿಷಗಳಲ್ಲಿ ಅಚ್ಚುಕಟ್ಟಾಗಿ ಅಂಬಾರಿ ಕಟ್ಟಲಾಯಿತು. ಒಂದು ಇಂಚು ಕೂಡ ಅಂಬಾರಿ ವಾಲಲಿಲ್ಲ ಎಂದರು.
ಅಂಬಾರಿ ಆನೆಯ ಎಡ-ಬಲ ಮುಂಚೆ ಬಳಸಲಾಗಿದ್ದ ಕುಮ್ಮಿ ಆನೆಗಳಿಗೆ ವಯಸ್ಸಾದ ಕಾರಣ ಅವುಗಳನ್ನು ಈ ಬಾರಿ ಕರೆತರಲಿಲ್ಲ. ಹಾಗಾಗಿ ಈ ಬಾರಿ ಕುಮ್ಮಿ ಆನೆಗಳಾಗಿ ಹಿರಣ್ಯ ಮತ್ತು ಲಕ್ಷ್ಮಿ ಯನ್ನು ಬಳಸಲಾಗಿತ್ತು. ಇದು ಕೂಡ ಸವಾಲಿನಿಂದ ಕೂಡಿತ್ತು. ಈ ಉಭಯ ಆನೆಗಳ ಮಾವುತರು ಮತ್ತು ಕಾವಾಡಿಗಳು ಕೂಡ ತಮ್ಮ ಪಾತ್ರವನ್ನು ಪ್ರಾಮಾಣಿಕವಾಗಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಒಟ್ಟಾರೆ ಜಂಬೂ ಸವಾರಿ ಯಶಸ್ವಿಯಾಗಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.
ಧನಂಜಯ, ಪ್ರಶಾಂತ ಆನೆಗಳಿಂದ ಉತ್ತಮ ಸ್ಪಂದನೆ: ಒಂದೊಂದು ಕೆಲಸಗಳಿಗೆ ಒಂದೊಂದು ಆನೆಯನ್ನು ಹೆಚ್ಚುವರಿಯಾಗಿ ತಯಾರು ಮಾಡಿ ಇಟ್ಟಿಕೊಂಡಿರುತ್ತೇವೆ. ಈ ಬಾರಿ ಅಭಿಮನ್ಯುವಿಗೆ ಹೆಚ್ಚುವರಿಯಾಗಿ ಧನಂಜಯ ಮತ್ತು ಪ್ರಶಾಂತ ಆನೆಯನ್ನು ಇಟ್ಟಿಕೊಂಡಿದ್ದೆವು. ಮರದ ಅಂಬಾರಿ ಹೊರಿಸಿದ್ದಾಗ ಈ ಎರಡೂ ಆನೆಗಳೂ
ಯಶಸ್ವಿಯಾಗಿ ತಾಲೀಮನ್ನು ಪೂರ್ಣಗೊಳಿಸಿದ್ದವು. ಅವು ಉತ್ತಮವಾಗಿ ಸ್ಪಂದಿಸಿದ್ದವು. ಇದೇ ರೀತಿ ಪ್ರತಿ ವರ್ಷ ಕೂಡ ಹೆಚ್ಚುವರಿ ಆನೆಗಳಿಗೆ ತರಬೇತಿ ನೀಡಿ ಸಿದ್ಧಪಡಿಸಿರುತ್ತೇವೆ
ಜಾಗತಿಕ ನೆಲೆಯಲ್ಲಿ ಕನ್ನಡ ಕಟ್ಟುವ ಬಗೆ ಕುರಿತ ಗೋಷ್ಠಿಯಲ್ಲಿ ಅಮೆರಿಕ ಕನ್ನಡ ಕೂಟ (ಅಕ್ಕ)ದ ಅಧ್ಯಕ್ಷ ಅಮರ್‌ನಾಥ್‌ಗೌಡ ಹೇಮಂತ್ ಕುಮಾರ್…
`ಹೊಸ ತಲೆಮಾರಿನ ಸಾಹಿತ್ಯ' ಕುರಿತ ವಿಚಾರಗೋಷ್ಠಿಯಲ್ಲಿ ವಿಮರ್ಶಕ ವಿಕ್ರಂ ವಿಸಾಜಿ ಅಭಿಮತ • ಜಿ.ತಂಗಂ ಗೋಪಿನಾಥಂ ಮಂಡ್ಯ: ಹೊಸ ತಲೆಮಾರಿನ…
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…