ಗಬ್ಬು ನಾರುತ್ತಿರುವ ರಾಮಾನುಜ ರಸ್ತೆಯ ಅಕ್ಕಮ್ಮಣ್ಣಿ ಆಸ್ಪತ್ರೆ ಪರಿಸರ
ಮೈಸೂರು: ಇದು ಅಕ್ಷರಶಃ ಆರೋಗ್ಯ ಕೇಂದ್ರದ ಅನಾರೋಗ್ಯ ಪರಿಸ್ಥಿತಿ. ಇಲ್ಲಿ ಆಸ್ಪತ್ರೆ ಇದೆ ಎಂಬ ಜ್ಞಾನವೂ ಇಲ್ಲದಂತೆ ಜನರು ಕಸವನ್ನು ತಂದು ಬಿಸಾಡುತ್ತಿದ್ದಾರೆ. ಕಸವನ್ನು ವಿಲೇವಾರಿ ಮಾಡಬೇಕಾದ ನಗರಪಾಲಿಕೆ ಕೂಡ ಮೌನಕ್ಕೆ ಶರಣಾಗಿದೆ.
ನಗರದ ರಾಮಾನುಜ ರಸ್ತೆಯಲ್ಲಿರುವ ಅಕ್ಕಮ್ಮಣ್ಣಿ ಆಸ್ಪತ್ರೆ ಪಕ್ಕದ ದೃಶ್ಯವಿದು. ಪ್ರತೀ ದಿನ ಬೆಳಗಾದಂತೆ ಇಲ್ಲಿ ಕಸದ ರಾಶಿ ರಸ್ತೆಯನ್ನೆಲ್ಲಾ ಆವರಿಸುತ್ತದೆ. ಇದು ಇಂದು ನಿನ್ನೆಯದಲ್ಲಿ, ಪ್ರತಿನಿತ್ಯ ಇಲ್ಲಿ ಇದೇ ಪರಿಸ್ಥಿತಿ. ಈ ರಸ್ತೆಯಲ್ಲಿ ಮೂಗು ಮುಚ್ಚಿಕೊಂಡೇ ಓಡಾಡಬೇಕು.
ಸ್ವಚ್ಛತೆಯಲ್ಲಿ ಮೈಸೂರು ದೇಶದ ಟಾಪ್ ನಗರಗಳ ಪೈಕಿ ಗುರುತಿಸಿಕೊಂಡಿದೆ. ಆದರೆ ಈ ಕಸದ ರಾಶಿ ಸ್ವಚ್ಛತಾ ವ್ಯವಸ್ಥೆಯನ್ನು ವ್ಯಂಗ್ಯ ಮಾಡುವಂತಿದೆ. ಇದಕ್ಕೆ ಸುತ್ತಮುತ್ತಲಿನ ಸಭ್ಯರೆನಿಸಿಕೊಂಡವರ ಅನಾಗರಿಕತನವೂ ಕಾರಣವಾಗಿದೆ. ಮನೆ ಮುಂದೆ ಕಸ ಸಂಗ್ರಹಿಸುವ ವಾಹನ ಬಂದರೂ ಬಳಸಿಕೊಳ್ಳದ ಜನರು ತಮ್ಮ ಮನೆಗಳಲ್ಲಿ ಸಂಗ್ರಹವಾಗುವ ಕಸವನ್ನು ರಸ್ತೆಗೆ ತಂದು ಸುರಿಯುತ್ತಿದ್ದಾರೆ. ಕಸ ಹಾಕಿದವರ ಫೋಟೋ ಸೆರೆಹಿಡಿದು ಪೊಲೀಸ್ ಇಲಾಖೆಗಾಗಲಿ ಅಥವಾ ನಗರ ಪಾಲಿಕೆಗಾಗಲಿ ಮಾಹಿತಿ ನೀಡಿದಲ್ಲಿ ದಂಡ ಹಾಕುವುದಾಗಿ ಎಚ್ಚರಿಕೆ ಫಲಕವನ್ನೂ ಅಳವಡಿಸಲಾಗಿದೆ. ಇದಕ್ಕೂ ಕ್ಯಾರೆ ಎನ್ನದ ಅಕ್ಕಪಕ್ಕದ ಮಂದಿ ಕಸ ಸುರಿಯುವುದನ್ನು ಮಾತ್ರ ನಿಲ್ಲಿಸಿಲ್ಲ.
ಪಕ್ಕದಲ್ಲೇ ೧೫೦ ವರ್ಷಗಳ ಇತಿಹಾಸವಿರುವ ಅಕ್ಕಮ್ಮಣ್ಣಿ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. ಆಸ್ಪತ್ರೆ ಸಿಬ್ಬಂದಿಯೂ ಇದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಈ ಜಾಗದಲ್ಲಿ ಸಿಸಿ ಕ್ಯಾಮೆರಾ ವನ್ನೂ ಅಳವಡಿಸಲಾಗಿದೆ. ಹೀಗಿದ್ದೂ ಇದುವರೆವಿಗೂ ಯಾರಿಗೂ ದಂಡ ವಿಧಿಸಿದ ಉದಾಹರಣೆ ಮಾತ್ರ ಇಲ್ಲ.
ರಸ್ತೆಗೆ ಹೊಂದಿಕೊಂಡಂತೆ ಉದ್ಯಾನವನವೂ ಇದೆ. ಪ್ರತಿದಿನ ಇಲ್ಲಿಗೆ ಬೆಳಿಗ್ಗೆ ಮತ್ತು ಸಾಯಂಕಾಲ ನೂರಾರು ಮಂದಿ ವಾಯುವಿಹಾರಕ್ಕೆ ಬರುತ್ತಾರೆ. ಉದ್ಯಾನವನದಲ್ಲಿ ಹೂವಿನ ಗಿಡಗಳನ್ನು ಬೆಳೆಸಿ ಅಂದ ಹೆಚ್ಚಿಸುವತ್ತಲೂ ಗಮನ ಕೊಡಲಾಗಿದೆ. ಆದರೆ, ಈ ರಸ್ತೆಗೆ ಮಾತ್ರ ಕಸದ ಹಾವಳಿ, ದುರ್ವಾಸನೆಯಿಂದ ಮುಕ್ತಿ ಸಿಕ್ಕಿಲ್ಲ. ಪ್ರತಿನಿತ್ಯ ಸ್ಥಳೀಯರಿಗೆ ಕಸದ ರಾಶಿಯಿಂದ ಮುಜುಗರವಾಗುತ್ತಿದೆ. ಜನರಿಗೆ ಆರೋಗ್ಯ ಸಮಸ್ಯೆಯೂ ಕಾಡುತ್ತಿದೆ.
ಈ ಸ್ಥಳ ಬಿಡಾಡಿ ದನಗಳು ಮತ್ತು ಬೀದಿ ನಾಯಿಗಳ ತಾಣ ಮಾರ್ಪಟ್ಟಿದೆ. ಕಸದ ರಾಶಿಯ ನಡುವೆ ಸಿಗುವ ತ್ಯಾಜ್ಯವನ್ನು ತಿಂದು ಅವು ಅಲ್ಲಿಯೇ ಜಾಂಡಾ ಹೂಡಿರುತ್ತವೆ. ಇನ್ನಾದರೂ ಈ ಸ್ಥಳವನ್ನು ಕಸಮುಕ್ತವಾಗಿಸಲು ಪಾಲಿಕೆ ಅಧಿಕಾರಿಗಳಾಗಲಿ, ಜನ ಪ್ರತಿನಿಧಿಗಳಾಗಲಿ ಒತ್ತು ನೀಡಬೇಕು ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.
ಜನರನ್ನು ಯಾಮಾರಿಸುತ್ತಿರುವ ನಗರಪಾಲಿಕೆ ! ರಾಮಾನುಜ ರಸ್ತೆಯಲ್ಲಿರುವ ಅಕ್ಕಮ್ಮಣ್ಣಿ ಆಸ್ಪತ್ರೆ ಪಕ್ಕದ ಕಾಂಪೌಂಡ್‌ನಲ್ಲಿ ನಗರಪಾಲಿಕೆ ಪೋಸ್ಟರ್ ಒಂದನ್ನು ಅಳವಡಿಸಿದೆ. ನೀವು ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ಇದ್ದೀರಿ. ಇಲ್ಲಿ ಕಸ ಸುರಿದರೆ ದಂಡ ವಿಧಿಸಲಾಗುವುದು ಎಂದು ಅಲ್ಲಿ ಬರೆಯಲಾಗಿದೆ. ಅಲ್ಲಿನ ವಿದ್ಯುತ್ ಕಂಬದಲ್ಲಿ ಸಿಸಿ ಕ್ಯಾಮೆರಾವನ್ನೂ ಅಳವಡಿಸಲಾಗಿದೆ. ಆದರೆ, ಅಳವಡಿಸಿದಂದಿನಿಂದ ಇಲ್ಲಿಯವರೆಗೂ ಕ್ಯಾಮೆರಾ ಮಾತ್ರ ಚಾಲೂ ಆಗಿಲ್ಲ. ಹೇಗಿದೆ ನಮ್ಮ ನಗರಪಾಲಿಕೆ ಕಾರ್ಯವೈಖರಿ….!
” ಅಕ್ಕಮಣ್ಣಿ ಆಸ್ಪತ್ರೆ ಸುತ್ತ ಕಸ ಸುರಿದಿರುವುದು ನನ್ನ ಗಮನಕ್ಕೆ ಬಂದಿದೆ. ಶನಿವಾರ ಬೆಳಿಗ್ಗೆ ಕಸವನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಇದೇ ವೇಳೆ ಕಸ ಸುರಿಯುವವರನ್ನೂ ಗಮನಿಸಿ ದಂಡ ವಿಧಿಸಲು ಮುಂದಾಗುತ್ತೇವೆ.”
-ಡಾ.ವೆಂಕಟೇಶ್, ನಗರಪಾಲಿಕೆ ಆರೋಗ್ಯಾಧಿಕಾರಿ
ಬೆಂಗಳೂರು: ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಅಶ್ಲೀಲ ಕಮೆಂಟ್ ಪ್ರಕರಣದ ತನಿಖೆ ಕೊನೆಯ ಹಂತಕ್ಕೆ ಬಂದು…
ಬೆಂಗಳೂರು: ಕೇರಳ ರಾಜ್ಯದಲ್ಲಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮೊದಲ ಭಾಷೆಯಾಗಿ ಮಲೆಯಾಳಂ ಕಡ್ಡಾಯ ಕಲಿಕೆ ಮಸೂದೆ ಜಾರಿಗೆ ಮುಂದಾಗಿರುವ ವಿಚಾರಕ್ಕೆ…
ಬೆಂಗಳೂರು: ರಾಜ್ಯಾದ್ಯಂತ ಚಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹಲವು ಜಿಲ್ಲೆಗಳಲ್ಲಿ ಶೀತಗಾಳಿ, ಶೀತದ ಅಬ್ಬರಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಶೀತದಲೆ…
ಯಳಂದೂರು: ನುಡಿನಮನ ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀ ಬಣ್ಣನೆ ಯಳಂದೂರು: ಜನರ ಪ್ರೀತಿ ಗಳಿಕೆಯೇ ಸಾರ್ಥಕಜೀವನವಾಗಿದ್ದು, ಮನುಕುಲವನ್ನು ಕೃತಾರ್ಥ ಮಾಡುವ ಕೆಲಸವನ್ನು…
ಹುಬ್ಬಳ್ಳಿಯಲ್ಲಿ ನಡೆದ ಮಹಿಳೆಯ ವಿವಸ ಪ್ರಕರಣ ಅತ್ಯಂತ ಅಮಾನವೀಯವಾದುದು. ಸಂತ್ರಸ್ತ ಮಹಿಳೆ ಬಿಜೆಪಿಯೋ, ಕಾಂಗ್ರೆಸ್ಸೋ ಎನ್ನುವುದು ನಂತರದ ವಿಚಾರ. ಮೊದಲಿಗೆ…
ನಂಜನಗೂಡು ಬಜಾರ್ ರಸ್ತೆಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ ಇದೆ. ಇದನ್ನು ದಳವಾಯಿ ಶಾಲೆ…