ಶಕ್ತಿ ದೇವತೆ ದರ್ಶನಕ್ಕೆ ಸಾವಿರಾರು ಜನರು ಸೇರುವ ನಿರೀಕ್ಷೆ; ಜಾನುವಾರು ಜಾತ್ರೆ ಎಂದೇ ಖ್ಯಾತಿ
ಗುಂಡ್ಲುಪೇಟೆ: ತಾಲ್ಲೂಕಿನಲ್ಲಿ ದೊಡ್ಡ ಜಾತ್ರೆ ಎಂದು ಪ್ರಸಿದ್ಧಿ ಪಡೆದಿರುವ ಹಸಗೂಲಿ ಜಾತ್ರೆ ನ.೧೦ರ ಸೋಮವಾರದಿಂದ ನ.೧೨ರ ಬುಧವಾರದವರೆಗೆ ೩ ದಿನಗಳ ಕಾಲ ವೈಭವದಿಂದ ನಡೆಯಲಿದೆ.
ನ.೧೦ರ ಸೋಮವಾರ ಹಸಗೂಲಿ ಗ್ರಾಮದಿಂದ ಪಾರ್ವತಾಂಬೆಯ ವಿಗ್ರಹ ಹೊತ್ತು ಮೂಲ ಸ್ಥಳ ಕಸಗಲಪುರಕ್ಕೆ ತೆರಳುವರು. ಈ ಸಂದರ್ಭದಲ್ಲಿ ಗ್ರಾಮದ ಸಾವಿರಾರು ಮಂದಿ ದೇವಿಯನ್ನು ಕಾಡಿನ ಮೂಲಸ್ಥಳಕ್ಕೆ ಕಳಿಸಿಕೊಡುವರು. ಮೂಲಸ್ಥಳದಲ್ಲಿ ರಾತ್ರಿಯಿಡೀ ಪೂಜೆ ಸಲ್ಲಿಸಿ, ನಂತರ ಮಂಗಳವಾರ ಬರಗಿ, ದೇಶಿಪುರ, ಆಲತ್ತೂರು ಶೆಟ್ಟಹಳ್ಳಿ ಮಾರ್ಗದಲ್ಲಿ ಗ್ರಾಮಕ್ಕೆ ದೇವಿಯ ವಿಗ್ರಹ ಹೊತ್ತು ತರಲಾಗುವುದು.
ಬರುವ ಮಾರ್ಗದುದ್ದಕ್ಕೂ ವಿವಿಧ ಗ್ರಾಮಗಳ ಜನರು ಪೂಜೆ ಸಲ್ಲಿಸುತ್ತಾರೆ. ನಂತರ ನ.೧೧ರ ಮಂಗಳವಾರ ಹಸಗೂಲಿ ಗ್ರಾಮದಲ್ಲಿ ಸೇವಂತಿಗೆ ಹೂವಿನಿಂದ ರಥವನ್ನು ಸಿಂಗರಿಸಿ ಬಾಯಿ ಬೀಗ ಹರಕೆ, ದೇವಿಯ ದರ್ಶನ, ಪೂಜೆ ನಡೆಸಲಾಗು ವುದು. ನಂತರ ದೇವಿಯನ್ನು ರಥದಲ್ಲಿ ಕೂರಿಸಿ ಗ್ರಾಮದಲ್ಲಿ ಮಧ್ಯಾಹ್ನ ೩ ಗಂಟೆಯ ನಂತರ ಮೆರವಣಿಗೆ ನಡೆಸಲಾಗು ವುದು. ಕಜ್ಜಾಯ, ಬಾಳೆಹಣ್ಣು ಎಸೆಯುವ ಮೂಲಕ ಭಕ್ತರು ತಮ್ಮ ಹರಕೆ ತೀರಿಸುವರು.ಸಾವಿರಾರು ಸಂಖ್ಯೆಯಲ್ಲಿ ಜನರು ಹಸಗೂಲಿ ಅಲ್ಲಹಳ್ಳಿ ಪಾರ್ವತಾಂಬೆ ದೇವಿಯನ್ನು ನೋಡಲು ಆಗಮಿಸುತ್ತಾರೆ. ಮಂಗಳವಾರ ಮಧ್ಯಾಹ್ನ ಮತ್ತು ರಾತ್ರಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವಿಯ ರಥ ಮೆರವಣಿಗೆ ಹೊರಡಲಿದ್ದು, ಬುಧವಾರ ಬೆಳಿಗ್ಗೆಯೂ ಗ್ರಾಮದಲ್ಲಿ ರಥ ಸಂಚರಿಸಲಿದ್ದು, ಗ್ರಾಮಸ್ಥರು ಪೂಜೆ ಸಲ್ಲಿಸುವರು.
ಮೂರು ದಿನಗಳ ಕಾಲ ನಡೆಯಲಿರುವ ಹಸಗೂಲಿ ಪಾರ್ವತಾಂಬೆ ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವಂತೆ ಜಾತ್ರಾ ಸಮಿತಿಯವರು ಹಾಗೂ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಜಾನುವಾರು ಜಾತ್ರೆ ಎಂದೇ ಪ್ರಸಿದ್ಧಿ:
ಹಸಗೂಲಿ ಜಾತ್ರೆ ಎಂದರೆ ತಾಲ್ಲೂಕಿನ ಎಲ್ಲ ಗ್ರಾಮಗಳಿಂದಲೂ ಜನರು ಬರುತ್ತಾರೆ. ಜಾನುವಾರುಗಳನ್ನು ಕರೆತಂದು ಪಂಜು ಹಚ್ಚಿ ಪೂಜೆ ಸಲ್ಲಿಸುತ್ತಾರೆ. ಜಾನುವಾರುಗಳಿಗೆ ಯಾವುದೇ ಕಾಯಿಲೆ ಬಂದರೂ ದೇವಿ ಗುಣ ಮಾಡುತ್ತಾಳೆ ಎಂಬ ನಂಬಿಕೆ ಈ ಭಾಗದ ಜನರಲ್ಲಿದೆ. ಹೀಗಾಗಿ ಜನರು ಜಾನುವಾರುಗಳನ್ನು ಕರೆತಂದು ಪೂಜೆ ಸಲ್ಲಿಸುವುದು ವಾಡಿಕೆ.
-ಮಹೇಂದ್ರ ಹಸಗೂಲಿ
ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆದಿದೆ ಎನ್ನಲಾದ ಹಗರಣದ ಸಂಬಂಧ ಹೆಚ್ಚಿನ ವಿಚಾರಣೆಗಾಗಿ ಮಾಜಿ ಆಯುಕ್ತ ದಿನೇಶ್…
ಮಡಿಕೇರಿ : ದುಬಾರೆ ಶಿಬಿರದ ಸಾಕಾನೆ ತಕ್ಷ ಅನಾರೋಗ್ಯದಿಂದ ಸೋಮವಾರ ರಾತ್ರಿ ಮೃತಪಟ್ಟಿದೆ. ಡಿ.೮ರಂದು ರಾತ್ರಿ ೯.೩೦ರ ಸಮಯದಲ್ಲಿ ತಕ್ಷ…
ಮೈಸೂರು : ಕೇಳಿದ ತಕ್ಷಣ ಹಣ ಕೊಡಲಿಲ್ಲ ಎಂಬ ಕಾರಣಕ್ಕಾಗಿ ಸ್ನೇಹಿತನ ಮೇಲೆ ಯುವಕನೊಬ್ಬ ಚಾಕುವಿನಿಂದ ಇರಿದಿರುವ ಘಟನೆ ನಗರದಲ್ಲಿ…
ಮೈಸೂರು : ಲೈಂಗಿಕವಾಗಿ ಸಹಕರಿಸಿದಲ್ಲಿ ಚೆನ್ನಾಗಿ ನೋಡಿಕೊಳ್ಳುತ್ತೀನಿ ಎಂದು ಮಹಿಳಾ ಉದ್ಯೋಗಿಗೆ ಕಿರುಕುಳ ನೀಡಿದ ಖಾಸಗಿ ಕಾರ್ಖಾನೆ ಮಾಲೀಕನ ವಿರುದ್ದ…
ಮೈಸೂರು : ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ದೇವಿಯ ದರ್ಶನ ಹಾಗೂ ಸಮೂಹ ದೇವಾಲಯಗಳ ಸೇವೆಗಳ ಶುಲ್ಕಗಳನ್ನು ಏರಿಸಿರುವ ರಾಜ್ಯ…
ಬೆಳಗಾವಿ : ರಾಜ್ಯದಲ್ಲಿ 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಈಗಾಗಲೇ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಮೂರು ತಿಂಗಳ…