Andolana originals

‘ಎಚ್.ಎನ್.ವಿಜಯ್ ಭವಿಷ್ಯದ ಜನನಾಯಕ’

ಭೇರ್ಯ ಮಹೇಶ್‌ 

ವಿಜಯ್ ಹುಟ್ಟುಹಬ್ಬ ಸಮಾರಂಭದಲ್ಲಿ ಶಾಸಕ ಜಿ.ಟಿ.ದೇವೇಗೌಡ ಬಣ್ಣನೆ 

ಕೆ.ಆರ್.ನಗರ: ಸಂಕಷ್ಟದಲ್ಲಿರುವವರ ಸಮಸ್ಯೆಗಳಿಗೆ ಸ್ಪಂದಿಸುವ ಗುಣ ಹೊಂದಿರುವ ಜೊತೆಗೆ ಜೀವನ್ಮುಖಿಯಾಗಿ ಬದುಕುತ್ತಿರುವ ಮುಡಾ ಮಾಜಿ ಅಧ್ಯಕ್ಷ ಹೆಚ್.ಎನ್. ವಿಜಯ್ ಅವರು ಭವಿಷ್ಯದ ಜನ ನಾಯಕ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

ಸಾಲಿಗ್ರಾಮ ತಾಲ್ಲೂಕಿನ ಹರದನಹಳ್ಳಿ ಗ್ರಾಮದಲ್ಲಿ ನಡೆದ ಮುಡಾ ಮಾಜಿ ಅಧ್ಯಕ್ಷ ಹೆಚ್.ಎನ್.ವಿಜಯ್ ಅವರ ೫೧ನೇ ಜನ್ಮದಿನೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ ೨ ದಶಕಗಳಿಂದ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುತ್ತಿ ರುವ ಜನ ಸೇವೆ ಇತರರಿಗೆ ಮಾದರಿ ಎಂದರು.

‘ಬಂಗಾರದ ಮನುಷ್ಯ’ ಚಲನಚಿತ್ರದಲ್ಲಿ ವರನಟ ಡಾ. ರಾಜಕುಮಾರ್ ರಾಜೀವಪ್ಪನಾಗಿ, ಬಾಲಕೃಷ್ಣ ಅವರು ರಾಜೋಟಪ್ಪನಾಗಿದ್ದರು. ಆದರೆ ನಿಜ ಜೀವನದಲ್ಲಿ ನನ್ನ ಮತ್ತು ಹೆಚ್.ಎನ್.ವಿಜಯ್ ಅವರ ಕುಟುಂಬ ಬಾಂಧವ್ಯ ಆ ಎರಡು ಪಾತ್ರಗಳಿಗೆ ಹೋಲುತ್ತವೆ ಎಂದು ಭಾವುಕರಾಗಿ ನುಡಿದರು.

ವಿಧಾನ ಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್ ಮಾತನಾಡಿ, ಭೂಮಿ ಮೇಲೆ ಜನ್ಮ ತಾಳಿದ ಮನುಷ್ಯ ಭವಿಷ್ಯದಲ್ಲಿ ಏನಾಗುತ್ತಾನೆ ಎಂದು ಆತನಿಗೆ ತಿಳಿದಿರುವುದಿಲ್ಲ. ಅದರಂತೆ ಹೆಚ್.ಎನ್.ವಿಜಯ್ ಅವರು ದೇವರು ಮತ್ತು ತಂದೆತಾಯಿಗಳ ಹಾಗೂ ಜನರ ಆಶೀರ್ವಾದದಿಂದ ಉತ್ತಮ ಸ್ಥಿತಿಯಲ್ಲಿದ್ದು, ಅವರ ಸೇವಾ ಕಾರ್ಯಗಳು ನಿರಂತರವಾಗಿ ಮುಂದು ವರಿದು ಅವರು ರಾಜಕೀಯವಾಗಿ ಪರಮೋಚ್ಛ ಸ್ಥಾನಕ್ಕೆ ಏರಲಿ ಎಂದು ಆಶಿಸಿದರು.

ಮಾಜಿ ಸಚಿವ ಸಾ.ರಾ.ಮಹೇಶ್, ಶಾಸಕ ಡಿ.ರವಿಶಂಕರ್, ವಿಧಾನ ಪರಿಷತ್ ಸದಸ್ಯ ಕೆ.ವಿವೇಕಾನಂದ, ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಜಿ.ಟಿ.ದೇವೇಗೌಡರ ಪತ್ನಿ ಲಲಿತಾ ದೇವೇಗೌಡ, ಮಕ್ಕಳಾದ ಪೂರ್ಣಿಮಾ, ಯಶೋಧ ಆನಂದ್, ಹೆಚ್.ಎನ್.ವಿಜಯ್ ಅವರ ತಾಯಿ ಸೌಭಾಗ್ಯಮ್ಮ , ಪತ್ನಿ ಸವಿತ ಪುತ್ರ ಸಂದೇಶ್, ಪುತ್ರಿಹಾಗೂ ಸಹೋದರ ಹೆಚ್.ಎನ್.ರವಿ, ನಮಿತ ಹುಟ್ಟು ಹಬ್ಬ ಸಂಭ್ರಮದಲ್ಲಿ ಭಾಗವಹಿಸಿ ಹೂಗುಚ್ಛ ನೀಡಿ ಶುಭ ಕೋರಿದರು.

ಇದೇ ಸಂದರ್ಭದಲ್ಲಿ ಹೆಚ್.ಎನ್.ವಿಜಯ್ ದಂಪತಿಗೆ ಅಭಿಮಾನಿಗಳು ಬೆಳ್ಳಿ ಕಿರೀಟ ತೊಡಿಸಿ ತಮ್ಮ ಅಭಿಮಾನ ಮೆರೆದರು. ಬೃಹತ್ ವೇದಿಕೆಯಲ್ಲಿ ಶಾಸಕ ಜಿ.ಟಿ.ದೇವೇ ಗೌಡ ನೇತೃತ್ವದಲ್ಲಿ ಸಂಗೀತ ಮಾಂತ್ರಿಕ ಅರ್ಜುನ್ ಜನ್ಯ ಹಾಗೂ ಅನುಶ್ರೀ ಅವರು ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ ಜನ್ಮದಿನೋತ್ಸವದ ಆಚರಣೆ ಮಾಡಲಾಯಿತು.

ನವನಗರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ಮೈಮುಲ್ ಅಧ್ಯಕ್ಷ ಚೆಲುವ ರಾಜ್, ನಿರ್ದೇಶಕರಾದ ಎ.ಟಿ.ಸೋಮಶೇಖರ್, ಕೆ.ಜೆ.ಮಹೇಶ್, ಮಂಡ್ಯ ಮನ್ ಮುಲ್ ಮಾಜಿ ಅಧ್ಯಕ್ಷ ರಾಮಚಂದ್ರ, ನಿವೃತ್ತ ವಾಣಿಜ್ಯ ತೆರಿಗೆ ಆಯುಕ್ತ ಜಗನ್ನಾಥ ಸಾಗರ್, ಎಂಸಿಡಿಸಿಸಿ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ಮಂಜುಗೌಡ, ಹೆಚ್.ಎನ್.ವಿಜಯ್ ಅಭಿಮಾನಿ ಬಳಗದ ಜಿಲ್ಲಾ ಪತ್ರ ಬರಹಗಾರ ಮಿರ್ಲೆ ರಾಜೀವ್, ನಗರಪಾಲಿಕೆ ಮಾಜಿ ಸದಸ್ಯ ಅವ್ವ ಮಾದೇಶ್, ತಾಲ್ಲೂಕು ಒಕ್ಕಲಿಗರ ಸಂಘದ ಗೌರವಾಧ್ಯಕ್ಣ ಮಿರ್ಲೆ ಅಣ್ಣೇಗೌಡ, ಸುಯೋಗ ಆಸ್ಪತ್ರೆಯ ಅಧ್ಯಕ್ಷ ಡಾ.ಎಸ್.ಪಿ.ಯೋಗಣ್ಣ, ಕೆಪಿಸಿಸಿ ಮಾಜಿ ಸದಸ್ಯ ಎಸ್.ಪಿ.ತಮ್ಮಯ್ಯ, ಜಿ.ಪಂ. ಮಾಜಿ ಉಪಾಧ್ಯಕ್ಷ ಅಡಗೂರು ಚನ್ನಬಸಪ್ಪ, ಮಾಜಿ ಸದಸ್ಯ ಎಂ.ಟಿ.ಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಕುಪ್ಪಳ್ಳಿ ಸೋಮು, ಕೇರಳದ ಅಡಕೆ ಉದ್ಯಮಿಗಳಾದ ಫೈಸಲ್, ಕುಳ್ಳ ಇಬ್ರಾಹಿಂ, ಕಿಶೋರಿ, ಮಾಣಿಕ್ ಚಂದ್, ಶಿವಮೊಗ್ಗದ ಪ್ರಕಾಶ್, ಕರುಣೇಶ್, ಹರದನಹಳ್ಳಿ ಗ್ರಾ.ಪಂ. ಅಧ್ಯಕ್ಷ ಗೋಪಾಲ್, ಮಾಜಿ ಅಧ್ಯಕ್ಷೆ ಮಂಜುಳ ರಮೇಶ್, ಸದಸ್ಯ ದೀಪು, ಸಾವಿರಾರು ಅಭಿಮಾನಿಗಳು ಹಾಜರಿದ್ದರು.

ಕೆ.ಆರ್.ನಗರ: ಸಾಲಿಗ್ರಾಮ ತಾಲ್ಲೂಕಿನ ಹರದನಹಳ್ಳಿ ಗ್ರಾಮದಲ್ಲಿ ಭಗೀರಥ ಪೀಠದ ಶ್ರೀ ಪುರುಷೋತ್ತಮ ನಂದಪುರಿ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ನಡೆದ ಮುಡಾ ಮಾಜಿ ಅಧ್ಯಕ್ಷರಾದ ಹೆಚ್.ಎನ್.ವಿಜಯ್ ಅವರ ೫೧ನೇ ಜನ್ಮದಿನೋತ್ಸವದ ಕಾರ್ಯಕ್ರಮ ಹತ್ತು ಹಲವು ವೈಶಿಷ್ಟ್ಯಗಳಿಗೆ ಸಾಕ್ಷಿಯಾಯಿತು. ನಾಡಿನ ವಿವಿಧ ಮೂಲೆಗಳಿಂದ ಆಗಮಿಸಿದ್ದ ೫೧ ಮಠಗಳ ಸ್ವಾಮೀಜಿಗಳ ಪಾದಪೂಜೆಯೊಂದಿಗೆ ಕಾರ್ಯ ಕ್ರಮ ಆರಂಭಿಸಿ, ಆನಂತರ ೫೧ ಗರ್ಭಿಣಿಯರಿಗೆ ಮಡಿಲು ತುಂಬಿ ಸೀಮಂತ ಶಾಸ್ತ್ರ ಮಾಡಿ ಹಾಗೂ ೫೧ ಮುತ್ತೈದೆಯರಿಗೆ ಬಾಗಿನ ನೀಡಿ ಗೌರವಿಸಿದ ಬಳಿಕ ೫೧ ಮಂದಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ಇದರ ಜೊತೆಗೆ ಆರೋಗ್ಯ ಮತ್ತು ಕಣ್ಣಿನ ತಪಾಸಣಾ ಶಿಬಿರ, ರಕ್ತದಾನ ಶಿಬಿರಗಳು ನಡೆದವು. ಸಾಮಾನ್ಯವಾಗಿ ಜನ್ಮದಿನಾಚರಣೆ ಮತ್ತು ಹುಟ್ಟು ಹಬ್ಬದ ಸಂಭ್ರಮಗಳು ರಾಜಕೀಯ ಮುಖಂಡರು, ಸಂಬಂಧಿಗಳ ಸಮುಖದಲ್ಲಿ ನಡೆಯುತ್ತವೆ. ಆದರೆ ಮುಡಾ ಮಾಜಿ ಅಧ್ಯಕ್ಷ ಹೆಚ್.ಎನ್.ವಿಜಯ್ ಅವರ ಜನ್ಮದಿನೋತ್ಸವ ಪಕ್ಷಾತೀತವಾಗಿ ಮತ್ತು ಜಾತ್ಯತೀತವಾಗಿ ಹಾಗೂ ಹೃದಯಸ್ಪರ್ಶಿಯಾಗಿ ನಡೆದಿದ್ದು ವಿಶೇಷವಾಗಿತ್ತು. ಹೆಚ್.ಎನ್.ವಿಜಯ್ ಅವರನ್ನು ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಮಠಾಧಿಶರು, ಜನ ಪ್ರತಿನಿಧಿಗಳು, ರೈತರು, ಸರ್ಕಾರಿ ನೌಕರರು ಹಾಗೂ ಜನ ಸಾಮಾನ್ಯರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಮಾಜದ ಪ್ರಮುಖರು ಕೇರಳ ಮತ್ತು ತಮಿಳುನಾಡು ರಾಜ್ಯಗಳ ಉದ್ಯಮಿಗಳೊಂದಿಗೆ ೨೦ ಸಾವಿರಕ್ಕೂ ಅಧಿಕ ಮಂದಿ ಹರಸಿ ಹಾರೈಸಿದರು.

ಆಂದೋಲನ ಡೆಸ್ಕ್

Recent Posts

ಮುಡಾ ಅಕ್ರಮ : ತೆರೆಗೆ ಸರಿದ ದೇಸಾಯಿ ಆಯೋಗದ ವರದಿ

ಕೆ.ಬಿ.ರಮೇಶನಾಯಕ ಮುಡಾ ಅಕ್ರಮಗಳ ಕುರಿತು ೬ ಸಂಪುಟಗಳಲ್ಲಿ ಸಲ್ಲಿಸಿದ್ದ ವರದಿ ೩೦೦ ನಿವೇಶನಗಳು ಬದಲಿ ನಿವೇಶನಗಳಾಗಿ ಹಂಚಿಕೆ ೫೦:೫೦ ಅನುಪಾತದಡಿ…

36 seconds ago

ಗುಂಡ್ಲುಪೇಟೆ | ಉಪಟಳ ನೀಡುತಿದ್ದ ಹುಲಿ ಸೆರೆ ; ಮತ್ತೊಂದು ದರ್ಶನ

ಗುಂಡ್ಲುಪೇಟೆ : ತಾಲ್ಲೂಕಿನ ಬೊಮ್ಮಲಾಪುರ ಬಳಿ ಅನೇಕ ದಿನಗಳಿಂದ ರೈತರಿಗೆ ಉಪಟಳ ನೀಡಿ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದ ಹುಲಿಯನ್ನು…

12 hours ago

ಬೆಳ್ತಂಗಡಿ | ಮಹೇಶ್‌ ಶೆಟ್ಟಿ ತಿಮರೋಡಿ ಮತ್ತೆ ಗಡಿಪಾರು

ಬೆಳ್ತಂಗಡಿ : ಧರ್ಮಸ್ಥಳ ವಿರುದ್ಧ ಹೋರಾಟ ನಡೆಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿಗೆ ಎರಡನೇ ಬಾರಿಗೆ ಗಡಿಪಾರು ಮಾಡಿ ಪುತ್ತೂರು ಎ.ಸಿ.ಆದೇಶ…

12 hours ago

ಲೋಕಸಭೆ | ವಿಭಾ ಜಿರಾಮ್‌ ಮಸೂದೆ ಅಂಗೀಕಾಋ : ಪ್ರತಿಪಕ್ಷಗಳಿಂದ ಪ್ರತಿ ಹರಿದು ಆಕ್ರೋಶ

ಹೊಸದಿಲ್ಲಿ : ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಅಸ್ತಿತ್ವದಲ್ಲಿರುವ ‘ಮನ್ರೇಗಾ ಯೋಜನೆ’(ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ)ಯಿಂದ…

12 hours ago

ಸಿಎಂ ಕುಟುಂಬ ನಿವೇಶನ ಪಡೆದ ಪ್ರಕರಣ : ಡಿ.23ಕ್ಕೆ ವಿಚಾರಣೆ ಮುಂದೂಡಿಕೆ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬದ ಸದಸ್ಯರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಈಗ ಎಂಡಿಎ)ದಿಂದ ಕಾನೂನು ಬಾಹಿರವಾಗಿ…

12 hours ago