ಪುನೀತ್ ಮಡಿಕೇರಿ
೨೦೨೭ರ ಏಪ್ರಿಲ್-ಮೇನಲ್ಲಿ ನಡೆಯಲಿರುವ ಹಾಕಿ ಉತ್ಸವಕ್ಕೆ ಸಿದ್ಧತೆ; ಟರ್ಫ್, ಹೊನಲು ಬೆಳಕಿನ ಪಂದ್ಯಾವಳಿಗೆ ಚಿಂತನೆ
ಮಡಿಕೇರಿ: ೨೬ನೇ ಕೊಡವ ಕೌಟುಂಬಿಕ ಹಾಕಿ ಉತ್ಸವ ಚೇನಂಡ ಹಾಕಿ ನಮ್ಮೆ ಯಶಸ್ವಿಯಾಗಿ ನಡೆದ ಬೆನ್ನಲ್ಲೇ ೨೭ನೇ ಕೊಡವ ಕೌಟುಂಬಿಕ ಹಾಕಿ ಉತ್ಸವದ ಆಯೋಜನೆಗೆ ಅಜ್ಜಿಕುಟ್ಟಿರ ಕುಟುಂಬ ಸಿದ್ಧತೆ ನಡೆಸಿಕೊಂಡಿದೆ.
ಚೇನಂಡ ಕುಟುಂಬದ ಬಳಿಕ ೨೭ನೇ ಹಾಕಿ ಉತ್ಸವವನ್ನು ಆಯೋಜಿಸುವ ಜವಾಬ್ದಾರಿಯನ್ನು ಕೊಡವ ಕುಟುಂಬಗಳಲ್ಲೊಂದಾದ ಅಜ್ಜಿಕುಟ್ಟಿರ ಕುಟುಂಬ ಹೊತ್ತುಕೊಂಡಿದೆ. ೨೦೨೭ರ ಏಪ್ರಿಲ್- ಮೇ ತಿಂಗಳಲ್ಲಿ ನಡೆಯಲಿರುವ ಅಜ್ಜಿಕುಟ್ಟಿರ ಹಾಕಿ ಉತ್ಸವಕ್ಕೆ ಈಗಾಗಲೇ ಸಿದ್ಧತೆ ಆರಂಭಿಸಿರುವ ಕುಟುಂಬಸ್ಥರು, ದಕ್ಷಿಣ ಕೊಡಗಿನಲ್ಲಿ ಅದ್ಧೂರಿಯಾಗಿ ಹಾಕಿ ನಮ್ಮೆ ನಡೆಸಲು ಅಣಿಯಾಗುತ್ತಿದ್ದಾರೆ.
ಅಜ್ಜಿಕುಟ್ಟಿರ ಹಾಕಿ ಉತ್ಸವ ಪೊನ್ನಂಪೇಟೆಯಲ್ಲಿ ಆಯೋಜನೆಗೊಳ್ಳಲಿದೆ. ಅಜ್ಜಿಕುಟ್ಟಿರ ಕುಟುಂಬಸ್ಥರು ಸಮಿತಿ ರಚಿಸಿಕೊಂಡಿದ್ದು, ಒಟ್ಟು ಮೂರು ಮೈದಾನಗಳಲ್ಲಿ ಪಂದ್ಯಾವಳಿ ಆಯೋಜಿಸುವ ಚಿಂತನೆ ಮಾಡಲಾಗಿದೆ. ಪೊನ್ನಂಪೇಟೆ ಟರ್ಫ್ ಮೈದಾನವನ್ನು ಮುಖ್ಯ ಮೈದಾನವಾಗಿಸಿ ಕೊಳ್ಳುವ ಉದ್ದೇಶವಿದೆ ಎಂದು ಅಜ್ಜಿಕುಟ್ಟಿರ ಕುಟುಂಬಸ್ಥರು ತಿಳಿಸಿದ್ದಾರೆ.
ಎಲ್ಲವೂ ಅಂದುಕೊಂಡಂತೆ ಆದರೆ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಹಾಕಿ ನಮ್ಮೆಯ ಪ್ರಮುಖ ಪಂದ್ಯಗಳು ಜರುಗಲಿವೆ. ಅಲ್ಲದೆ, ತಡವಾದರೆ ಫ್ಲಡ್ ಲೈಟ್(ಹೊನಲು ಬೆಳಕು)ನಲ್ಲಿ ಪಂದ್ಯಾವಳಿಯನ್ನಾಡಿಸುವ ಯೋಜನೆ ಕೂಡ ಇದೆ. ಇದೆಲ್ಲಾ ನಡೆದಲ್ಲಿ ಕೊಡವ ಹಾಕಿ ಉತ್ಸವದ ಇತಿಹಾಸದಲ್ಲಿಯೇ ಟರ್ಫ್ ಮೈದಾನದಲ್ಲಿ ಮತ್ತು ಫ್ಲಡ್‌ಲೈಟ್‌ನಲ್ಲಿ ನಡೆದ ಮೊದಲ ಪಂದ್ಯಾವಳಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಕೊಡವ ಹಾಕಿ ಉತ್ಸವವನ್ನು ಅಜ್ಜಿಕುಟ್ಟಿರ ಕುಟುಂಬದಿಂದ ಆಯೋಜಿಸಬೇಕೆಂಬುದು ಶಾಸಕ ಎ.ಎಸ್.ಪೊನ್ನಣ್ಣ ಅವರ ಇಚ್ಛೆಯಾಗಿತ್ತು. ಈ ಹಿಂದೆ ಮಡಿಕೇರಿಯಲ್ಲಿ ನಡೆದ ಮುದ್ದಂಡ ಹಾಕಿ ಉತ್ಸವದ ಸಮಾರಂಭದಲ್ಲಿ ಪೊನ್ನಣ್ಣ ವೇದಿಕೆಯಲ್ಲಿಯೇ ಹಾಕಿ ಅಕಾಡೆಮಿಗೆ ಈ ಸಂಬಂಧ ಬೇಡಿಕೆಯಿಟ್ಟಿದ್ದರು. ಕೊಡವ ಹಾಕಿ ಅಕಾಡೆಮಿಯು ಚೇನಂಡ ಹಾಕಿ ಉತ್ಸವದ ಬಳಿಕ ಅಜ್ಜಿಕುಟ್ಟಿರ ಕುಟುಂಬಕ್ಕೆ ಜವಾಬ್ದಾರಿಯನ್ನು ನೀಡಿದ್ದು, ಪೊನ್ನಣ್ಣ ಅವರ ಸಹೋದರ ಎ.ಎಸ್.ನರೇನ್ ಕಾರ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ಹಾಕಿ ಉತ್ಸವ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಸಮಿತಿಯ ಪೋಷಕ ಅಧ್ಯಕ್ಷರಾಗಿ ಎ.ಎಸ್.ಪೊನ್ನಣ್ಣ ಅವರೂ ಉತ್ಸವದ ಯಶಸ್ವಿಗೆ ಕೈಜೋಡಿಸಲಿದ್ದಾರೆ.
ಹೀಗಾಗಿ ಅಜ್ಜಿಕುಟ್ಟಿರ ಹಾಕಿ ಉತ್ಸವ ಅತಿ ವಿಜೃಂಭಣೆಯಿಂದ, ನಾನಾ ವಿಶೇಷತೆಗಳೊಂದಿಗೆ ನಡೆಯಲಿದ್ದು, ಈಗಾಗಲೇ ಹಾಕಿ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದೆ.
” ಅಜ್ಜಿಕುಟ್ಟಿರ ಹಾಕಿ ಉತ್ಸವಕ್ಕೆ ಈಗಾಗಲೇ ಸಿದ್ಧತೆ ಆರಂಭಿಸಿzವೆ. ಪೊನ್ನಂಪೇಟೆಯಲ್ಲಿ ನಡೆಯಲಿರುವ ಹಾಕಿ ಉತ್ಸವದ ಪ್ರಮುಖ ಪಂದ್ಯಗಳನ್ನು ಟರ್ಫ್ ಮೈದಾನದಲ್ಲಿ ನಡೆಸುವ ಚಿಂತನೆಯಿದೆ. ಅಲ್ಲದೆ ಮೊದಲ ಬಾರಿಗೆ ಫ್ಲಡ್‌ಲೈಟ್‌ನಲ್ಲಿ ಕೆಲ ಪಂದ್ಯಗಳು ನಡೆಯುವ ಸಾಧ್ಯತೆ ಇದೆ. ಈ ಸಂಬಂಧ ಇನ್ನೂ ಅಂತಿಮ ತೀರ್ಮಾನವಾಗಬೇಕಿದೆ.”
-ಎ.ಎಸ್.ನರೇನ್ ಕಾರ್ಯಪ್ಪ, ಅಧ್ಯಕ್ಷರು, ಅಜ್ಜಿಕುಟ್ಟಿರ ಹಾಕಿ ನಮ್ಮೆ
ಐತಿಹಾಸಿಕ ಸಂಗತಿ! ಸರ್ಕಾರದ ನಿರ್ದೇಶನದ ಮೇರೆಗೆ ಬೆಳಗಾವಿ ನಗರಪಾಲಿಕೆ ‘ಗಡಿ ವಿಷಯದಲ್ಲಿ ಮಹಾಜನ್ ವರದಿಯೇ ಅಂತಿಮ’ಎಂಬ ನಿರ್ಣಯ ಅಂಗೀಕರಿಸಿರುವುದು ಐತಿಹಾಸಿಕ…
ಟ್ರಾಫಿಕ್ ನಿಯಮ ಉಲ್ಲಂಘಿಸಿ ದಂಡ ಪಾವತಿಸದೆ ಬಾಕಿ ಉಳಿಸಿಕೊಂಡಿರುವವರಿಂದ ಹಣ ವಸೂಲಿ ಮಾಡಲು, ಆ ದಂಡದ ಮೊತ್ತವನ್ನು ಅವರ ಮನೆ…
ತನ್ನ ಪ್ರಾಣವನ್ನೇ ಒತ್ತೆಯಿಟ್ಟು ದುಬೈನಿಂದ ಇಸ್ರೇಲ್‌ನ ಅವೀವ್‌ಗೆ ತೆರಳುತ್ತಿದ್ದ -ದುಬೈ ವಿಮಾನ ಹೈಜಾಕ್ ತಪ್ಪಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್…
ಡಾ . ಚೇತನ ಗುರುರಾಜು, ಮುಖ್ಯ ಶಿಕ್ಷಕಿ, ಅರಿವು ವಿದ್ಯಾಸಂಸ್ಥೆ, ಮೈಸೂರು ಸಾಮಾಜಿಕ ಮಾಧ್ಯಮಗಳ ಬಲೆಗೆ ಸಿಲುಕಿವೆ ಹಲವು ದೇಶಗಳು…
ಸ್ವಾವಲಂಬನೆಯ ಸಂಕೇತ ಮಹಾತ್ಮ ಗಾಂಧೀಜಿ ಮಹಾತ್ಮ ಗಾಂಧೀಜಿ ಅವರು ಭಾರತದ ಸ್ವಾತಂತ್ರ್ಯ ಹೋರಾಟದ ಮಹಾನ್ ನಾಯಕ ಹಾಗೂ ರಾಷ್ಟ್ರಪಿತ ಎಂದು…
ಪರಶುರಾಮ್, ನಿರ್ದೇಶಕರು, ಒಡನಾಡಿ ಸೇವಾ ಸಂಸ್ಥೆ ಗಾಂಧಿ ವಿಚಾರಗಳನ್ನು ಸಂವಾದದ ಮೂಲಕ ಮುನ್ನಡೆಸಲು ಸಾಧ್ಯವೇ? ಅಥವಾ ಅನುಸರಿಸಲು ಸಾಧ್ಯವಾಗದಿರುವ ನಡೆಯನ್ನು…