Andolana originals

ನಾಳೆ ಅದ್ಧೂರಿ ಜಂಬೂಸವಾರಿ

ಮೈಸೂರು : ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿ ಮೆರವಣಿಗೆಗೆ ಅರಮನೆ ನಗರಿ ಮೈಸೂರು ಸಂಪೂರ್ಣವಾಗಿ ಸಜ್ಜಾಗಿದ್ದು, ಕ್ಷಣಗಣನೆ ಆರಂಭವಾಗಿದೆ.

ನವರಾತ್ರಿ ಶುರುವಾದ ಮೊದಲ ದಿನದಿಂದ ಸಡಗರ, ಸಂಭ್ರಮದಿಂದ ಕಳೆಗಟ್ಟಿರುವ ಮೈಸೂರಿನ ರಾಜಬೀದಿಗಳಲ್ಲಿ ವಿಜಯದಶಮಿ ದಿನವಾದ ಗುರುವಾರ ನಡೆಯುವ ಐತಿಹಾಸಿಕ ವಿಜಯದಶಮಿ ಮೆರವಣಿಗೆಯನ್ನು ನೋಡಲು ಲಕ್ಷಾಂತರ ಮಂದಿ ಕಾತರದಿಂದ ಕಾಯುತ್ತಿದ್ದಾರೆ.

ಅ.2ರ ಗುರುವಾರ ಮಧ್ಯಾಹ್ನ 1 ರಿಂದ 1.18 ರೊಳಗೆ ಅರಮನೆಯ ಬಲರಾಮ ದ್ವಾರ ದಲ್ಲಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಂಬೂಸವಾರಿಗೆ ನಾಂದಿ ಹಾಡುವರು. ಸಂಜೆ 4.42 ರಿಂದ 5.06 ರೊಳಗೆ 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ದಸರಾ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ಹೊತ್ತು ತರುವ ಶ್ರೀ ಚಾಮುಂಡೇಶ್ವರಿ ದೇವಿ ಉತ್ಸವಮೂರ್ತಿಗೆ ಗಣ್ಯರು ಪುಷ್ಪಾರ್ಚನೆ ನೆರವೇರಿಸಲಿದ್ದಾರೆ.

ಈ ಬಾರಿಯೂ ಸುಮಾರು ಎರಡು ಗಂಟೆಗಳ ಕಾಲ ತಡವಾಗಿ ಚಿನ್ನದ ಅಂಬಾರಿ ಹೊತ್ತು ಅಭಿಮನ್ಯು ಹೊರಡಲಿದ್ದಾನೆ. ನಾಡಿನಲ್ಲಿ ಉತ್ತಮ ಮಳೆ-ಬೆಳೆಯಾಗಿ ಜನರು ಸಮೃದ್ಧಿಯಾಗಿರುವ ಕಾರಣ ಅದ್ದೂರಿ ದಸರಾ ಮಹೋತ್ಸವ ಆಚರಿಸಲು ಸರ್ಕಾರ ತೀರ್ಮಾನಿಸಿ ಅದರಂತೆ ಕಾರ್ಯಕ್ರಮ ರೂಪಿಸಿತ್ತು.

ನಾಡಹಬ್ಬ ಉದ್ಘಾಟಕರ ಆಯ್ಕೆಯ ವಿಚಾರದಲ್ಲಿ ಪರ-ವಿರುದ್ಧ ಚರ್ಚೆ ನಡುವೆಯೂ ಚಾಮುಂಡಿಬೆಟ್ಟದಲ್ಲಿ ಚಾಲನೆ ನೀಡಿದ ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಸ್ತಾಕ್ ಅವರು ನಡೆದುಕೊಂಡ ರೀತಿ ಇಡೀ ನಾಡಿನ ಗಮನ ಸೆಳೆಯುವ ಜತೆಗೆ ಟೀಕಾಕಾರರ ಬಾಯಿ ಮುಚ್ಚಿಸಿತ್ತು.

ವಿಜಯದಶಮಿಗೆ ಲಕ್ಷಾಂತರ ಜನರ ಆಗಮನ ನಿರೀಕ್ಷೆ
ನವರಾತ್ರಿ ಆರಂಭವಾದ ದಿನದಿಂದ ಪ್ರವಾಸಿಗರು ಬರುತ್ತಿದ್ದರೂ, ಕಳೆದ ನಾಲೈದು ದಿನಗಳಿಂದ ಮೈಸೂರಿಗೆ ಸಾವಿರಾರು ಪ್ರವಾಸಿಗರು ಆಗಮಿಸಿ ವಾಸ್ತವ್ಯ ಹೂಡಿದ್ದಾರೆ. ವಿಜಯದಶಮಿ ದಿನದಂದು ಲಕ್ಷಾಂತರ ಮಂದಿ ಆಗಮಿಸಲಿದ್ದಾರೆ. ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಪ್ರವಾಸಿಗರ ದಂಡೇ ಹರಿದು ಬರತೊಡಗಿದ್ದು, ಅಂದು ಸ್ಥಳೀಯರು, ಸುತ್ತಮುತ್ತಲ ಪ್ರದೇಶಗಳಿಂದ ಬಂದು ಸೇರುವುದರಿಂದ ಅಂದಾಜು ಐದಾರು ಲಕ್ಷ ಜನರು ಸೇರುವ ಸಾಧ್ಯತೆ ಇದೆ.

ಇದನ್ನೂ ಓದಿ:-ಮೈಸೂರು | ಆಯುಧಪೂಜೆ, ವಿಜಯದಶಮಿಗೆ ಖರೀದಿ ಭರಾಟೆ ಜೋರು

ವಿಜಯದಶಮಿ ಮೆರವಣಿಗೆಯಲ್ಲಿ 31 ಜಿಲ್ಲಾ ಪಂಚಾಯಿತಿಗಳು, ರಾಜ್ಯದ ವಿವಿಧ ಸರ್ಕಾರಿ ಇಲಾಖೆಗಳು, ನಿಗಮ-ಮಂಡಳಿಗಳು ಸೇರಿ 58 ಸ್ತಬ್ಧಚಿತ್ರಗಳು, 125ಕ್ಕೂ ಹೆಚ್ಚು ಜಾನಪದ ಕಲಾ ತಂಡಗಳು ಭಾಗವಹಿಸಲಿವೆ. ಇದರೊಂದಿಗೆ ಚಿನ್ನದ ಅಂಬಾರಿ ಹೊತ್ತ ಅಭಿಮನ್ಯು ಸೇರಿ ಇತರ ಗಜಪಡೆ, ಅಶ್ವಾರೋಹಿ ಪಡೆಗಳು, ಆನೆಗಾಡಿಗಳು ಪಾಲ್ಗೊಳ್ಳಲಿವೆ.

ಏಳು ಮಂದಿಗೆ ಅವಕಾಶ:
ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ ಮಾಡುವ ವೇಳೆ ಶಿಷ್ಟಾಚಾರದ ಪ್ರಕಾರ ಏಳು ಮಂದಿ ಗಣ್ಯರಿಗೆ ಮಾತ್ರ ಅವಕಾಶವಿದೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ನಗರ ಪೊಲೀಸ್ ಆಯುಕ್ತರು, ರಾಜವಂಶಸ್ಥ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಹೈಕೋರ್ಟ್‌ ಮುಖ್ಯನ್ಯಾಯಮೂರ್ತಿ ಅವರಿಗೆ ವೇದಿಕೆ ಏರಲು ಮಾತ್ರ ಅವಕಾಶವಿದೆ. ಉಳಿದಂತೆ ಇತರೆ ಜನಪ್ರತಿನಿಧಿಗಳಿಗೆ ಅವಕಾಶ ಇರುವುದಿಲ್ಲ. ಹೀಗಾಗಿ, ಬೇರೆಯವರು ವೇದಿಕೆ ಏರದಂತೆ ನೋಡಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ಕೊಡಲಾಗಿದೆ.

ರಾತ್ರಿ 7ಕ್ಕೆ ಪಂಜಿನ ಕವಾಯತು:
ಜಂಬೂಸವಾರಿ ನಂತರ ನಗರದ ಬನ್ನಿಮಂಟಪದ ಮೈದಾನದಲ್ಲಿ ಸಂಜೆ 7ಕ್ಕೆ ಪಂಜಿನ ಕವಾಯತು(ಟಾರ್ಚ್ ಲೈಟ್ ಪೆರೇಡ್) ಆರಂಭವಾಗಲಿದೆ. ರಾಜ್ಯಪಾಲ ಥಾವರ್ ಚಂದ್ ಗೆಲ್ಲೋಟ್ ಕವಾಯತು ವೀಕ್ಷಿಸಿ ಗೌರವ ವಂದನೆ ಸ್ವೀಕರಿಸುವರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸಚಿಮಾದ ಕೆ.ವೆಂಕಟೇಶ್, ಡಾ.ಜಿ. ಪರಮೇಶ್ವರ್, ರಾಜ ವಂಶಸ್ಥ ಹಾಗೂ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸೇರಿದಂತೆ ಅನೇಕರು ಉಪಸ್ಥಿತರಿರುತ್ತಾರೆ.

ನಾಡಗೀತೆ ಬಳಿಕ ಎರಡು ಗಂಟೆಗಳ ಕಾಲ ನಡೆಯುವ ಸಾಹಸಮಯ, ರೋಮಾಂಚನಕಾರಿ ಸಾಹಸ ಪ್ರದರ್ಶನ, ಮೈನವಿರೇಳಿಸುವ ಬೈಕ್, ಅಶ್ವಾರೋಹಿ ಪಡೆಗಳ ಸಾಹಸ ಚಮತ್ಕಾರ, ಡೋನ್ ಶೋ ನಡೆಯುವ ಮೂಲಕ ಹನ್ನೊಂದು ದಿನಗಳ ಕಾಲದ ನಾಡಹಬ್ಬಕ್ಕೆ ತೆರೆ ಬೀಳಲಿದೆ.

ಸಕಲ ಸಿದ್ಧತೆ
ಅಂಬಾರಿ ಹೊರಲಿರುವ ಅಭಿಮನ್ಯು ನೇತೃತ್ವದ ಗಜಪಡೆ ತಾಲೀಮು ನಡೆಸಿದ್ದು, ಮೆರವಣಿಗೆಗೆ ಸಜ್ಜಾಗಿವೆ.

ಆಂದೋಲನ ಡೆಸ್ಕ್

Recent Posts

ದಿಲ್ಲಿ ಗಣರಾಜ್ಯೋತ್ಸವಕ್ಕೆ ಬೆದರಿಕೆ : ಗುರುಪತ್ವಂತ್‌ ಸಿಂಗ್‌ ವಿರುದ್ಧ ಎಫ್‌ಐಆರ್‌

ಹೊಸದಿಲ್ಲಿ : ಗಣರಾಜ್ಯೋತ್ಸವಕ್ಕೂ ಮುನ್ನ ರಾಷ್ಟ್ರ ರಾಜಧಾನಿಯಲ್ಲಿ ಅಶಾಂತಿ ಸೃಷ್ಟಿಸುವುದಾಗಿ ಬೆದರಿಕೆ ಹಾಕಿದ್ದಕ್ಕಾಗಿ ಸಿಖ್ ಫಾರ್ ಜಸ್ಟೀಸ್ ನಿಯೋಜಿತ ಭಯೋತ್ಪಾದಕ…

8 hours ago

ಕಾಡಾನೆಗಳ ಲಗ್ಗೆ : ಕಬ್ಬಿನ ಫಸಲು ನಾಶ, ಪರಿಹಾರಕ್ಕಾಗಿ ಒತ್ತಾಯ

ಭಾರತೀನಗರ : ಇಲ್ಲಿಗೆ ಸಮೀಪದ ಕೆ.ಪಿ.ದೊಡ್ಡಿ ಗ್ರಾಮದಲ್ಲಿ 5 ಕಾಡಾನೆಗಳ ಹಿಂಡು ಬೀಡುಬಿಟ್ಟು ಕಬ್ಬಿನ ಬೆಳೆ ಫಸಲನ್ನು ನಾಶಗೊಳಿಸಿರುವ ಘಟನೆ…

9 hours ago

ಕೊಡಗಿನ ತಿತಿಮತಿಯಲ್ಲಿ ಹುಲಿ ಪ್ರತ್ಯಕ್ಷ ; ಸ್ಥಳೀಯರಲ್ಲಿ ಆತಂಕ

ಮಡಿಕೇರಿ : ಮೈಸೂರು-ಗೋಣಿಕೊಪ್ಪ ಹೆದ್ದಾರಿಯ ದಕ್ಷಿಣ ಕೊಡಗಿನ ತಿತಿಮತಿ ವ್ಯಾಪ್ತಿಯಲ್ಲಿ ಹುಲಿಯೊಂದು ಕಾಣಿಸಿಕೊಂಡು ಆತಂಕ ಸೃಷ್ಟಿಸಿದ್ದು, ಹುಲಿ ಸೆರೆಗೆ ಶಾಸಕ…

9 hours ago

ಖಾಸಗಿ ಶಾಲೆಗಳನ್ನು ನಾಚಿಸುವ ಹೈಟೆಕ್ ಸರ್ಕಾರಿ ಶಾಲೆ : ಆದರೆ ಮಕ್ಕಳ ದಾಖಲಾತಿ ಕೇವಲ 40!

ನಂಜನಗೂಡು : ತಾಲ್ಲೂಕಿನ ಕಲ್ಲಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಖಾಸಗಿ ಶಾಲೆಗಳನ್ನು ಸಹ ನಾಚಿಸುವಂತಹ ಆಧುನಿಕ ಸೌಲಭ್ಯಗಳನ್ನು…

9 hours ago

ಮಂಡ್ಯದಲ್ಲಿ ಕೈಗಾರಿಕೆ ಸ್ಥಾಪನೆಗೆ ಜಾಗ ನೀಡುವಂತೆ ಸಿಎಂಗೆ ಪತ್ರ ಬರೆದಿದ್ದೇನೆ : ಎಚ್‌ಡಿಕೆ

ಬೃಹತ್ ಕೈಗಾರಿಕೆ ಸಚಿವಾಲಯ ಅಧೀನದ ಎಆರ್‌ಎಐ ಘಟಕ ಸ್ಥಾಪನೆಗೆ ಪರಿಶೀಲನೆ ನಡೆಯುತ್ತಿದೆ : ಕುಮಾರಸ್ವಾಮಿ ಮಂಡ್ಯ : ಜಿಲ್ಲೆಯಲ್ಲಿ ಕೈಗಾರಿಕೆ…

10 hours ago

ರಾಜ್ಯವೇ ನನ್ನ ಪರಿಮಿತಿ, ಜನ ಬಯಸಿದ ಕಡೆ ಸ್ಪರ್ಧೆ : ಎಚ್‌.ಡಿ.ಕುಮಾರಸ್ವಾಮಿ

ಮಂಡ್ಯ : ಕರ್ನಾಟಕ ರಾಜ್ಯವೇ ನನ್ನ ಪರಿಮಿತಿ. ಜನರು ಎಲ್ಲಿ ಅಪೇಕ್ಷೆ ಮಾಡುತ್ತಾರೆ ಅಲ್ಲಿಂದ ನನ್ನ ಸ್ಪರ್ಧೆ ಮಾಡುತ್ತೇನೆ ಎನ್ನುವ…

10 hours ago