ಬೇಸಿಗೆಯಲ್ಲೂ ೨.೮೦ ಲಕ್ಷ ಲೀ. ಹಾಲು ಸಂಗ್ರಹ; ಚಾಮುಲ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲು.
ಚಾಮರಾಜನಗರ: ಚಾಮರಾಜನಗರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಚಾಮುಲ್) ಬಿರು ಬೇಸಿಗೆಯ ನಡುವೆಯೂ ಹಾಲು ಸಂಗ್ರಹದಲ್ಲಿ ಈ ಬಾರಿ ಹಿಂದೆ ಬಿದ್ದಿಲ್ಲ. ಇದೇ ಮೊದಲ ಬಾರಿಗೆ ಎಂದಿನಂತೆ ಯಥಾಸ್ಥಿತಿ ಕಾಪಾಡಿಕೊಂಡು ಹೋಗುತ್ತಿದ್ದು ದಿನಾಲೂ ೨.೮೦ ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ.
ಬೇಸಿಗೆಗೂ ಮೊದಲು ಡಿಸೆಂಬರ್‌ನಲ್ಲಿ ಪ್ರತಿನಿತ್ಯ ಸರಾಸರಿ ೨.೮೦ರಿಂದ ೨.೯೦ ಲಕ್ಷ ಲೀಟರ್ ಹಾಲು ಚಾಮುಲ್‌ಗೆ ರೈತರಿಂದ ಪೂರೈಕೆ ಆಗುತಿತ್ತು. ಪ್ರಸ್ತುತ ಬೇಸಿಗೆಯ ತಾಪಮಾನ ಇದ್ದಾಗಲೂ ೨.೮೦ ಲಕ್ಷ ಲೀಟರ್ ಸಂಗ್ರಹ ಆಗುತ್ತಿರುವುದು ಚಾಮುಲ್ ಇತಿಹಾಸದಲ್ಲೇ ಹೊಸ ಮೈಲಿಗಲ್ಲಾಗಿದೆ.ಸಾಮಾನ್ಯವಾಗಿ ಬೇಸಿಗೆ ದಿನಗಳಲ್ಲಿ ಮೇವು -ನೀರಿನ ಕೊರತೆಯಿಂದ ಹಾಲು ಸಂಗ್ರಹ ಕಡಿಮೆಯಾಗುತ್ತದೆ. ಎಲ್ಲೆಡೆ ಈ ವಾತಾವರಣ ಸಾಮಾನ್ಯ.
ಸದ್ಯ ಮಾರ್ಚ್‌ಗೆ ಕಾಲಿಟ್ಟು ಬಿಸಿಲು ದಿನೇ ದಿನೇ ಏರುಗತಿಯಲ್ಲಿ ಸಾಗುತ್ತಿದ್ದಾಗ್ಯೂ ಹೆಚ್ಚು ಹಾಲು ಸಂಗ್ರಹ ವಾಗುತ್ತಿರುವುದು ಗಮನಾರ್ಹ ಸಂಗತಿಯೇ ಸರಿ. ರೈತರು ಸರಬರಾಜು ಮಾಡುವ ಪ್ರತಿ ಲೀಟರ್ ಹಾಲಿಗೆ ಸದ್ಯ ೩೫.೨೦ ರೂ. ನೀಡಲಾಗುತ್ತಿದೆ. ಇದರೊಟ್ಟಿಗೆ ರಾಜ್ಯ ಸರ್ಕಾರ ಲೀಟರ್ ಹಾಲಿಗೆ ೫ ರೂ. ಪ್ರೊತ್ಸಾಹಧನ ನೀಡುತ್ತಿದೆ. ಹಾಲಿಗೆ ದರ ನೀಡುವಾಗ ಅದರ ಗುಣಮಟ್ಟ ಪರಿಶೀಲಿಸಲಾಗುತ್ತದೆ. ಇದುವರೆಗಿನ ಹಳೆ ಪದ್ಧತಿ ಕೈ ಬಿಟ್ಟು ಆಟೋ ಮ್ಯಾಟಿಕ್ ಮಿಲ್ಕ್ ಕಲೆಕ್ಷನ್ ಸಾಫ್ಟ್ ವೇರ್ (ತಂತ್ರಾಂಶ) ಮುಖೇನ ಹಾಲಿನ ಗುಣಮಟ್ಟವನ್ನು ಈಗ ಪರೀಕ್ಷೆ ಮಾಡಲಾಗುತ್ತಿದೆ. ಕೆಲವೇ ಸೆಕೆಂಡ್‌ಗಳಲ್ಲಿ ಹಾಲಿನ ಪ್ಯಾಟ್, ಜಿಡ್ಡಿನ ಅಂಶ ಇತ್ಯಾದಿ ತಿಳಿಯುವ ಈ ಆಧುನಿಕ ವ್ಯವಸ್ಥೆ ಜಿಲ್ಲೆಯ ೪೬೫ ಹಾಲು ಉತ್ಪಾದಕರ ಸಹಕಾರ ಸಂಘ (ಡೇರಿ)ಗಳ ಪೈಕಿ ೪೧೦ರಲ್ಲಿ ಈಗಾಗಲೇ ಜಾರಿಯಲ್ಲಿದ್ದು, ಉಳಿದೆಡೆ ಇಷ್ಟರಲ್ಲೇ ಅಳವಡಿಸಲಾಗುವುದು ಎಂದು ಚಾಮುಲ್ ಅಧ್ಯಕ್ಷರಾದ ಎಂ.ನಂಜುಂಡಸ್ವಾಮಿ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ೩೩ ಸಾವಿರ ಹಾಲು ಉತ್ಪಾದಕರು ಇದ್ದಾರೆ. ಚಾಮುಲ್ ಹಾಲು ಉತ್ಪಾದನೆಗೆ ಉತ್ತೇಜನ ನೀಡುವ ಕೆಲಸವನ್ನು ಮಾಡುತ್ತಾ ಬಂದಿದೆ. ಮೇವು ತುಂಡರಿಸುವ ಯಂತ್ರ, ಹಾಲು ಕರೆಯುವ ಯಂತ್ರ ಹೀಗೆ ಉತ್ಪಾದನೆಗೆ ಪೂರಕವಾದ ಪರಿಕರ, ಯಂತ್ರ ಇತ್ಯಾದಿ ಖರೀದಿಸುವ ರೈತರಿಗೆ ಖರೀದಿ ವಸ್ತುವಿನ ಒಟ್ಟು ಬೆಲೆಯಲ್ಲಿ ಶೇ.೫೦ರಷ್ಟು ಹಣವನ್ನು ಚಾಮುಲ್ ಭರಿಸುತ್ತಿದೆ. ಕಳೆದ ವರ್ಷ ಇದಕ್ಕಾಗಿ ಸುಮಾರು ೧೫ ಲಕ್ಷ ರೂ. ಅನುದಾನ ವಿನಿಯೋಗ ಮಾಡಲಾಗಿತ್ತು. ಈ ವರ್ಷ ೧.೫೦ ಕೋಟಿ ರೂ. ಅನುದಾನ ಬಳಕೆ ಮಾಡಲಾಗುತ್ತಿದ್ದು, ೭೦೦ ರೈತರು ಶೇ.೫೦ರ ಅನುದಾನದ ಪ್ರಯೋಜನವನ್ನು ಈ ಬಾರಿ ಪಡೆಯುತ್ತಿರುವುದು ಹೆಗ್ಗಳಿಕೆ ವಿಚಾರ ಎಂದು ಚಾಮುಲ್ ವ್ಯವಸ್ಥಾಪಕ ನಿರ್ದೇಶಕ ಕೆ. ರಾಜಕುಮಾರ್ ತಿಳಿಸಿದರು. ಚಾಮುಲ್ ವಾರ್ಷಿಕ ವಹಿವಾಟು ಹಿಂದಿನ ವರ್ಷಕ್ಕಿಂತ ಈ ಬಾರಿ ಇನ್ನೂ ಉತ್ತಮವಾಗಿದೆ. ಕಳೆದ ವರ್ಷ ೪೯೮.೬೪ ಕೋಟಿ ರೂ. ವಹಿವಾಟು ನಡೆಸಿತ್ತು. ಈ ಬಾರಿ ೫೮೦ ಕೋಟಿ ರೂ. ವಹಿವಾಟು ನಿರೀಕ್ಷಿಸಿದ್ದು ಗುರಿ ತಲುಪುತ್ತೇವೆ ಎಂಬ ವಿಶ್ವಾಸವನ್ನು ರಾಜಕುಮಾರ್ ವ್ಯಕ್ತಪಡಿಸಿದ್ದಾರೆ.
ಮಜ್ಜಿಗೆ, ಲಸ್ಸಿ ಮಾರಾಟ ಹೆಚ್ಚಳ…:
ಬೇಸಿಗೆ ಹಿನ್ನೆಲೆಯಲ್ಲಿ ಬಾಯಾರಿಕೆ ತಣಿಸಲು ಜನತೆ ಮಜ್ಜಿಗೆ, ಲಸ್ಸಿಯತ್ತ ಹಿಂದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಜಾರಿದ್ದಾರೆ. ಮಜ್ಜಿಗೆ ಎರಡೂವರೆಯಿಂದ ಮೂರು ಸಾವಿರ ಲೀಟರ್, ಲಸ್ಸಿ ೬೦೦ ಲೀಟರ್ ಮಾರಾಟ ಆಗುತ್ತಿದೆ ಎಂದು ಚಾಮುಲ್ ಮೂಲಗಳು ತಿಳಿಸಿವೆ.
” ಕಳೆದ ಏಪ್ರಿಲ್ ೧ರಿಂದ ಪ್ರತಿ ಲೀಟರ್ ಹಾಲಿಗೆ ೪ ರೂ. ಹೆಚ್ಙಳ ಮಾಡಿದ್ದು ಅದೇ ದರವನ್ನು ಹಾಲು ಉತ್ಪಾದಕರಿಗೆ ನೀಡಲಾಗುತ್ತಿದೆ. ವಿಮೆ ಸೇರಿದಂತೆ ನಾನಾ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಇದೆಲ್ಲದರ ಪರಿಣಾಮವಾಗಿ ಬಯಲು ಮೇವು ಇಲ್ಲದಿದ್ದರೂ ಅದಕ್ಕೆ ಪರ್ಯಾಯವಾದ ಮೇವು, ತಿಂಡಿ ನೀಡಿ ರಾಸುಗಳನ್ನು ರೈತರು ಸಾಕಾಣಿಕೆ ಮಾಡುತ್ತಿರುವುದರಿಂದ ಹಾಲು ಸಂಗ್ರಹದಲ್ಲಿ ಯಾವುದೇ ಇಳಿಕೆ ಯಾಗಿ ಲ್ಲ. ಬೇಸಿಗೆಯಲ್ಲೂ ಹಿಂದಿನಷ್ಟೇ ಹಾಲು ಸಂಗ್ರಹ ಆಗುತ್ತಿರುವುದು ಒಳ್ಳೆಯ ಬೆಳವಣಿಗೆ.”
-ಎಂ.ನಂಜುಂಡಸ್ವಾಮಿ, ಚಾಮುಲ್ ಅಧ್ಯಕ್ಷರು
” ಹೈನುಗಾರಿಕೆ ಲಾಭದಾಯಕ ಉದ್ಯಮ ಎಂದು ರೈತರು ಇತ್ತ ಹೆಚ್ಚಿನ ಸಂಖ್ಯೆಯಲ್ಲಿ ಮುಖ ಮಾಡತೊಡಗಿದ್ದಾರೆ. ಚಾಮುಲ್ ಕಳೆದ ಬಾರಿ ೩.೩೪ ಕೋಟಿ ರೂ. ಲಾಭದಲ್ಲಿತ್ತು. ಈ ವರ್ಷ ಅದಕ್ಕಿಂತಲೂ ಹೆಚ್ಚಿನ ಲಾಭ ಗಳಿಸುವ ಭರವಸೆಯಲ್ಲಿ ಇದ್ದೇವೆ.”
– ಕೆ.ರಾಜಕುಮಾರ್, ಚಾಮುಲ್ ವ್ಯವಸ್ಥಾಪಕ ನಿರ್ದೇಶಕ
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರಿಂದು ದಾಖಲೆಯ 17ನೇ ಬಜೆಟ್ ಅನ್ನು ಮಂಡಿಸುತ್ತಿದ್ದಾರೆ. ವಿಧಾನಸೌಧದಲ್ಲಿ ರಾಜ್ಯ ಬಜೆಟ್ ಮಂಡಿಸುತ್ತಿರುವ ಸಿಎಂ ಸಿದ್ದರಾಮಯ್ಯ…
ಬೆಂಗಳೂರು: ರಾಜ್ಯ ಬಜೆಟ್ ಮಂಡನೆಗೆ ಕ್ಷಣಗಣನೆ ಶುರುವಾಗಿದ್ದು, ಸಿಎಂ ಸಿದ್ದರಾಮಯ್ಯ ಅವರು ದಾಖಲೆಯ 17ನೇ ಬಜೆಟ್ ಮಂಡಿಸಲು ಸಿದ್ಧರಾಗಿದ್ದಾರೆ. ಸಾಂಪ್ರದಾಯಿಕವಾಗಿ…
ಏಕಸ್ವಾಮ್ಯ ಸಾಧಿಸಲು ತಯಾರು ಪರಮಾಣು ಅಣ್ವಸ್ತ್ರ ಅದಕ್ಕಾಗಿಯೇ ನಿಲ್ಲದೆ ನಡೆಯುತ್ತಿದೆ ವಾಯು, ಡ್ರೋನ್, ಕ್ಷಿಪಣಿ ದಾಳಿ ನೆತ್ತರು ಹರಿಯುತ್ತಿದೆ ಹಿಂಸೆ…
ಸಂಬಂಧ..! ಒಂದೊಂದು ರೀತಿ ಒಬ್ಬೊಬ್ಬರ ಸಂಬಂಧ.. ಇವರದು ಹಾಲು-ಜೇನು ಅವರದು ಎಣ್ಣೆ-ಸೀಗೆಕಾಯಿ ಬೇಕಿದ್ದರೆ ಗಮನಿಸಿ.. ಇರಾನ್ -ಇಸ್ರೇಲ್ ಹಾವು-ಮುಂಗುಸಿ !…
ಮೈಸೂರು ವಿಶ್ವವಿದ್ಯಾನಿಲಯದ ಕ್ರಾಫರ್ಡ್ ಹಾಲ್ ನಿರ್ಗಮನ ದ್ವಾರದ ಬಳಿ ಮರವೊಂದು ಒಣಗಿ ನಿಂತಿದ್ದು, ಯಾವಾಗಲಾದರೂ ಬೀಳುವ ಸಾಧ್ಯತೆಯಿದೆ. ಕ್ರಾ-ರ್ಡ್ ಹಾಲ್…
ಮೈಸೂರಿನ ಮುಖ್ಯ ರೈಲ್ವೆ ನಿಲ್ದಾಣದಲ್ಲಿರುವ ಎಸ್ಕಲೇಟರ್ ಕೇವಲ ತೋರಿಕೆಗೆ ಮಾತ್ರ ಇದೆ ಎನಿಸುತ್ತದೆ. ಒಂದನೇ ಪ್ಲಾಟ್ ಫಾರ್ಮ್ ಬಿಟ್ಟರೆ ಉಳಿದ…