ಆಕರ್ಷಿಸುತ್ತಿರುವ ಸರ್ಕಲ್‌ಗಳು; ಪ್ರವಾಸಿಗರ ಜೊತೆಗೆ ಸವಾರರಿಗೂ ಅನುಕೂಲ
ಸಾಲೋಮನ್
ಮೈಸೂರು: ವಿಶ್ವವಿಖ್ಯಾತ ದಸರಾ ಜಂಬೂ ಸವಾರಿ ಸಾಗುವ ಮಾರ್ಗ ದಲ್ಲಿನ ವೃತ್ತಗಳಲ್ಲಿ ಅತ್ಯಾಧುನಿಕ ತಂತ್ರಗಾರಿಕೆ ಆಧರಿಸಿದ ತ್ರೀ ಡೈಮೆನ್ಷನ್ (ತ್ರಿಡೀ) ರೇಡಿಯಂ ಚಿತ್ರಗಳನ್ನು ಬಿಡಿಸಿ ವೃತ್ತದ ಸೌಂದರ್ಯವನ್ನು ಇನ್ನಷ್ಟು ಆಕರ್ಷಕಗೊಳಿಸಲಾಗಿದೆ.
ಇದೇ ಮೊದಲ ಬಾರಿಗೆ ಮೈಸೂರು ಮಹಾನಗರ ಪಾಲಿಕೆ ಜಂಬೂ ಸವಾರಿ ಮಾರ್ಗದ ವೃತ್ತಗಳ ಸುತ್ತಲೂ ಕೋಲ್ಡ್ ಪ್ಲಾಸ್ಟಿಕ್ ಟೆಕ್ನಾಲಜಿ ಅಳವಡಿಸಿಕೊಂಡು ನಗರದ ಪಾರಂಪರಿಕ ಸೌಂದರ್ಯಕ್ಕೆ ಸ್ಪಂದಿಸುವ ಚಿತ್ರಗಳನ್ನು ಬಿಡಿಸಿ ವೃತ್ತಗಳಿಗೆ ಮೆರುಗು ನೀಡಿದೆ. ಈ ತ್ರೀಡಿ ಚಿತ್ರಗಳು ಪ್ರವಾಸಿಗರನ್ನು ಆಕರ್ಷಿಸುತ್ತಿರುವುದು ಮಾತ್ರವಲ್ಲದೆ, ವಾಹನ ಸವಾರರಿಗೂ ಉಪಯುಕ್ತವಾಗಿರುವುದು ವಿಶೇಷತೆಯಾಗಿದೆ.
ದಸರಾದ ವಿಜಯದಶಮಿಯಂದು ಜಂಬೂ ಸವಾರಿ ಸಾಗುವ ಮಾರ್ಗದ ಅರಮನೆ ಮುಂಭಾಗದ ಚಾಮರಾಜ ವೃತ್ತ, ಕೃಷ್ಣರಾಜ ವೃತ್ತ, ಆಯುರ್ವೇದ ಆಸ್ಪತ್ರೆ ವೃತ್ತ ಹಾಗೂ ಹೈವೇ ವೃತ್ತಗಳಲ್ಲಿ ಈ ಚಿತ್ತಾಕರ್ಷಕ ಕಲೆಯು ಕಲಾವಿದರ ಕೈಚಳಕದಲ್ಲಿ ಮೂಡಿಬಂದಿದೆ.
ವೃತ್ತದ ಸುತ್ತಲೂ ತ್ರೀಡಿ ರೇಡಿಯಂ ಪೈಂಟಿಂಗ್ ಮಾಡಿ ಅದರ ಒಳಗೆ ಆನೆ, ಎಲೆಗಳು, ಕಮಲ, ನವಿಲು ಮುಂತಾದ ಆಕರ್ಷಕ ವಿನ್ಯಾಸದ ಚಿತ್ರಗಳನ್ನು ಬಿಡಿಸಲಾಗಿದೆ.
ಇವು ಪೈಂಟ್ ವಾಷಬಲ್ ಕೂಡ ಆಗಿದ್ದು, ಈ ಭಾಗದಲ್ಲಿ ರಾತ್ರಿ ವೇಳೆ ಸಂಚರಿಸುವಾಗ ಪೈಂಟಿಂಗ್ ಪ್ರಜ್ವಲಿಸುವುದರಿಂದ ಆಕರ್ಷಣೆ ಜೊತೆಗೆ ವಾಹನ ಚಾಲಕರಿಗೆ ಸುರಕ್ಷತೆಯನ್ನೂ ನೀಡುತ್ತಿದೆ.
ಇತ್ತೀಚಿನ ವರ್ಷಗಳಲ್ಲಿ ವಿಶ್ವದಾದ್ಯಂತ ಮಹಾನಗರಗಳ ಸೌಂದರ್ಯ ಹೆಚ್ಚಿಸಲು ಈ ತಂತ್ರಜ್ಞಾನ ಬಳಸಲಾಗಿದ್ದು, ಭಾರತದ ವಿವಿಧ ನಗರಗಳಲ್ಲಿ ವಿಶಾಲವಾದ ರಸ್ತೆಗಳಲ್ಲಿ ವಾಹನಗಳ ಟ್ಯಾಕ್‌ಗಳು, ಫುಟ್‌ಪಾತ್‌ಗಳು ಹಾಗೂ ವೃತ್ತಗಳಿಗಳಿಗೆ ಕೋಲ್ ಪ್ಲಾಸ್ಟಿಕ್ ಟೆಕ್ನಾಲಜಿ ಆಧರಿಸಿ ‘ರೇಡಿಯಂ ಪೇಯಿಂಟ್’ಗಳನ್ನು ರಚಿಸಲಾಗಿದೆ. ದಿಚಕ್ರ ವಾಹನಗಳು ಈ ಚಿತ್ರಗಳ ಮೇಲೆ ಚಲಿಸಿದರೂ ಬಣ್ಣ ಮಾಸ ದಿರುವುದು ಇದರ ವಿಶೇಷತೆಯಾಗಿದೆ.
ಪುಣೆಯ ‘ಕೆಟಲೈನ್ ಇನ್ಪ್ರಾ ಪ್ರಾಡೆಕ್ಟ್ ಪೈ.ಲಿ, ಕಂಪನಿ’ಗೆ ಈ ಜವಾಬ್ದಾರಿಯನ್ನು ವಹಿಸಿ 45 ಲಕ್ಷ ರೂ.ಗೆ ಗುತ್ತಿಗೆಗೆ ನೀಡಲಾಗಿದೆ. ಈ ಚಿತ್ರಗಳು ಸುಮಾರು ಎರಡು ವರ್ಷಗಳವರೆಗೂ ಹಾಳಾಗುವುದಿಲ್ಲ ಹಾಗೂ ಅವುಗಳ ನಿರ್ವಹಣೆಯನ್ನೂ ಇದೇ ಕಂಪನಿಯು ನಿರ್ವಹಿಸಲಿದೆ.
ರೋಮಾಂಚಕ ವಿನ್ಯಾಸಗಳು ಮತ್ತು ಕ್ರಿಯಾತ್ಮಕ ಗುರುತುಗಳನ್ನು ಸಂಯೋಜಿಸುವ ಮೂಲಕ, ನಗರದ ಸಾರ್ವಜನಿಕ ಸ್ಥಳಗಳು ಸೌಂದರ್ಯ ಪರಿಕಲ್ಪನೆಯಡಿ ಪರಿವರ್ತನೆ ಕಂಡಿವೆ. ಸುರಕ್ಷತೆ, ಸೌಂದರ್ಯ ಮತ್ತು ಪರಿಸರ ಪ್ರಜ್ಞೆಯ ಸಮ್ಮಿಲನವನ್ನು ಇಲ್ಲಿ ಕಾಣಬಹುದಾಗಿದೆ.
ಕೋಲ್ಡ್ ಪ್ಲಾಸ್ಟಿಕ್:
ಕೋಲ್ ಪ್ಲಾಸ್ಟಿಕ್ ನಗರದ ಸೌಂದರ್ಯ ಹೆಚ್ಚಿಸುವಲ್ಲಿ ವಿಶ್ವದಾದ್ಯಂತ ಕ್ರಾಂತಿಯನ್ನುಂಟು ಮಾಡುತ್ತಿದೆ, ಇದು ಪರಿಸರ ಸ್ನೇಹಿ ಮತ್ತು ಸ್ಕಿಡ್‌ನಿರೋಧಕ ಆಗಿದೆ. ನಗರದ ಪ್ರದೇಶದಲ್ಲಿ ಸೈಕಲ್ ಟ್ರ್ಯಾಕ್‌ಗಳು, ಪಾದಚಾರಿ ಕ್ರಾಸಿಂಗ್ ಗಳು, ವಾಕ್ ವೇಗಳು, ಜಂಕ್ಷನ್‌ಗಳು ಮತ್ತು ರೋಟರಿಗಳಲ್ಲಿ ವ್ಯಾಪಕವಾಗಿ ಇದನ್ನೇ ಬಳಸಲಾಗುತ್ತಿದೆ. ಈ ಪೈಂಟಿಂಗ್ ನಗರ ಪ್ರದೇಶಗಳನ್ನು ಸುಂದರಗೊಳಿಸುವುದಲ್ಲದೆ ವಾಹನ ಸವಾರರ ಸುರಕ್ಷತೆಯನ್ನೂ ಹೆಚ್ಚಿಸುತ್ತದೆ. ಇದರ ಆಂಟಿ-ಸ್ಲಿಪ್ ಗುಣಲಕ್ಷಣಗಳು ಸುಗಮ ಮತ್ತು ಸುರಕ್ಷಿತ ಚಲನೆಗೆ ಸಹಕಾರಿಯಾಗಿದ್ದು, ಅಪಘಾತಗಳು, ಅಪಾಯವನ್ನು ಕಡಿಮೆ ಮಾಡುತ್ತದೆ. ಕೋಲ್ಡ್ ಪ್ಲಾಸ್ಟಿಕ್‌ನ ಬಾಳಿಕೆ ಮತ್ತು ಪರಿಸರ ಸಂರಕ್ಷಿತ ಪ್ರಯೋಜನಗಳು ಸುಸ್ಥಿರ ನಗರ ಯೋಜನೆಗೆ ಆದ್ಯತೆ ನೀಡಿದೆ.
ರಸ್ತೆ ಬದಿಯೇ ಕಸದ ವಾಹನ ನಿಲುಗಡೆಗೊಳಿಸಬೇಕಾದ ಪರಿಸ್ಥಿತಿ; ದುರ್ವಾಸನೆಯಿಂದ ಸಾರ್ವಜನಿಕರಿಕೆ ಕಿರಿಕಿರಿ ಕೃಷ್ಣ ಸಿದ್ದಾಪುರ ಸಿದ್ದಾಪುರ: ಪಟ್ಟಣದಲ್ಲಿ ಕಸ ವಿಲೇವಾರಿ…
ಭೇರ್ಯ: ಸಂಜೆ ನಂತರ ನಿಲ್ದಾಣದೊಳಗೆ ಬಾರದ ಬಸ್‌ಗಳು; ಕುಡಿಯುವ ನೀರು, ಪಾರ್ಕಿಂಗ್ ವ್ಯವಸ್ಥೆ ಇಲ್ಲ ಭೇರ್ಯ ಮಹೇಶ್ ಭೇರ್ಯ: ಗ್ರಾಮದ…
ಕೀರ್ತಿ ಇದನ್ನು ನೀವು ಊಹಿಸಲೂ ಸಾಧ್ಯವಿಲ್ಲ. ಚಹ ಮಾಡಿದ ನಂತರ ಉಳಿದ ಜೊಗಟು, ಈರುಳ್ಳಿ ಸಿಪ್ಪೆ, ಚಿಂದಿ ಬಟ್ಟೆ, ಹರಿದ…
ಅಮೆರಿಕದ ಸಿಯಾಟಲ್‌ನಲ್ಲಿ ಮಗನಿಗೆ ಹೊಸ ಕೆಲಸ ಸಿಕ್ಕಿತ್ತು. ಮನೆ ಮಾಡಿದ. ಅಲ್ಲಿ ಮನೆ ಶಿಫ್ಟ್ ಮಾಡುವುದೆಂದರೆ ನಾವೇ ಸಕಲವೂ ಆಗಿರುವುದರಿಂದ…
ಮುಂಚೆ ಕಾಲವೊಂದಿತ್ತು. ಸಮಯ ಕಳೆಯಲು ಎಲ್ಲರೂ ಪುಸ್ತಕದ ಮೊರೆ ಹೋಗು ತ್ತಿದ್ದರು. ಮನೆ ಹತ್ತಿರದ ಪುಸ್ತಕ ದಂಗಡಿ, ಗ್ರಂಥಾಲಯ, ಸ್ನೇಹಿತರ…
ತೃತೀಯ ಲಿಂಗಿಯೊಬ್ಬರು ವಿಜಯನಗರದ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾನಿಲಯಕ್ಕೆ ಕನ್ನಡ ಸಹಾಯಕ ಪ್ರಾಧ್ಯಾಪಕಿ ಯಾಗಿ ಆಯ್ಕೆಯಾಗಿರುವುದು ರಾಜ್ಯದ ಇತಿಹಾಸ ದಲ್ಲೇ ಮೊದಲಾಗಿದ್ದು,…