ಜಯಲಕ್ಷ್ಮೀ ಪುರಂ ೫ನೇ ಮೇನ್ ೩ನೇ ಬ್ಲಾಕ್ ರಸ್ತೆ ನಿವಾಸಿಗಳಿಗೆ ಅನಾರೋಗ್ಯ ಭೀತಿ; ವೃದ್ಧರು, ಮಕ್ಕಳಿಗೆ ಉಸಿರಾಟದ ಸಮಸ್ಯೆ
ಮೈಸೂರು: ಶ್ರೀಮಂತರು ಹಾಗೂ ಮಧ್ಯಮ ವರ್ಗದ ಜನರೇ ಹೆಚ್ಚಾಗಿ ವಾಸಿಸುವ ಜಯಲಕ್ಷ್ಮೀ ಪುರಂ ೫ನೇ ಮೇನ್‌ನ ೩ನೇ ಬ್ಲಾಕ್‌ನ ರಸ್ತೆಯು ಕಸದ ಪ್ರದೇಶವಾಗಿ ಮಾರ್ಪಟ್ಟಿದೆ.
ಕೆಲವು ನಿವಾಸಿಗಳು, ತರಕಾರಿ ಮಾರಾಟದ ವ್ಯಾಪಾರಿಗಳು ಮತ್ತು ಆಹಾರ ಟ್ರಕ್ ಚಾಲಕರು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುತ್ತಿರುವುದರಿಂದ ಈ ರಸ್ತೆಯು ಕಸದ ಕೊಂಪೆಯಾಗಿಬದ ಲಾಗಿದೆ. ಜೊತೆಗೆ ಕೆಲವೊಮ್ಮೆ ಇದಕ್ಕೆ ಬೆಂಕಿಯನ್ನೂ ಹಚ್ಚಲಾಗುತ್ತಿದ್ದು, ಇದರಿಂದ ಹೊರಬರುವ ದಟ್ಟ ಹೊಗೆಯು ರೋಗಗಳನ್ನು ಹರಡುತ್ತಿದೆ.
ಇತ್ತೀಚೆಗೆ ನಾಲ್ಕು ಪ್ರತ್ಯೇಕ ಸ್ಥಳಗಳಲ್ಲಿ ಕಸಕ್ಕೆ ಬೆಂಕಿ ಹಚ್ಚಿದ ಪರಿಣಾಮ ನಿವಾಸಿಗಳೇ ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿ ಬೆಂಕಿಯನ್ನು ನಂದಿಸಿದ್ದರು. ಆದರೆ, ಇಂದಿಗೂ ಕಸ ಹಾಕುವುದು, ಕಸಕ್ಕೆ ಬೆಂಕಿ ಹಚ್ಚಿ ಹೋಗುವುದು ಮಾತ್ರ ನಿಂತಿಲ್ಲ. ಇದರಿಂದ ಪರಿಸರಕ್ಕೂ ಹಾನಿಯಾಗುತ್ತಿದೆ. ಜನರ ಆರೋಗ್ಯವೂ ಹದಗೆಡುತ್ತಿದೆ. ಮಕ್ಕಳು, ಮಹಿಳೆಯರು ಮತ್ತು ವಯೋವೃದ್ಧರಿಗೆ ಉಸಿರಾಟದ ಸಮಸ್ಯೆ ಕಾಡತೊಡಗಿದೆ.
ಕಸ ಹಾಗೂ ಪ್ಲಾಸ್ಟಿಕ್ ಸುಡುತ್ತಿರುವುದರಿಂದ ಉತ್ಪತ್ತಿಯಾಗುವ ವಿಷಕಾರಿ ಹೊಗೆಯು ಮಕ್ಕಳು, ಮಹಿಳೆಯರು ಹಾಗೂ ವಯೋವೃದ್ಧರಿಗೆ ಶ್ವಾಸಕೋಶದ ಸಮಸ್ಯೆ, ಕಣ್ಣಿನ ರೋಗಗಳು, ಅಲರ್ಜಿ ಮತ್ತು ಇನ್ನಿತರೆ ಸಮಸ್ಯೆಗಳನ್ನು ತಂದೊಡ್ಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸ್ವಚ್ಛತೆಗೆ ಒತ್ತು ಕೊಡಬೇಕು. ಅಧಿಕಾರಿಗಳು ತ್ವರಿತವಾಗಿ ಕ್ರಮವಹಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಮೂತ್ರ ವಿಸರ್ಜನೆಯ ತಾಣ: ಜನರು ಈ ರಸ್ತೆಯನ್ನು ಸಾರ್ವಜನಿಕ ಶೌಚಾಲಯದಂತೆ ಬಳಸುತ್ತಿದ್ದಾರೆ. ಕೆಲವರು ವಾಹನಗಳಲ್ಲಿ ಬಂದು ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡುತ್ತಿದ್ದು, ಇದರಿಂದ ಈ ಪ್ರದೇಶದ ನಿವಾಸಿಗಳಿಗೆ ತುಂಬಾ ತೊಂದರೆ ಉಂಟಾಗುತ್ತಿದೆ. ಕೂಡಲೇ ಈ ಪ್ರದೇಶದಲ್ಲಿ ಪೊಲೀಸ್ ಗಸ್ತು ನಿಯೋಜಿಸಬೇಕು. ಕಸ ಎಸೆಯದಂತೆ ಸೂಚನಾ ಫಲಕಗಳನ್ನು ಅಳವಡಿಸಬೇಕು. ಕಸದ ಬುಟ್ಟಿಗಳನ್ನು ಇಡಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.
” ಸುಶಿಕ್ಷಿತರೇ ಕಸ ಎಸೆದು ಹೋಗುತ್ತಾರೆ. ಕೊನೆಗೆ ಅದಕ್ಕೆ ಬೆಂಕಿ ಹಚ್ಚುತ್ತಾರೆ. ಇದರಿಂದ ಉಂಟಾಗುತ್ತಿರುವ ಆರೋಗ್ಯ ಸಮಸ್ಯೆಗಳು ತುಂಬಾ ಗಂಭೀರವಾಗಿವೆ. ನಮ್ಮ ಮನೆಯಲ್ಲಿ ಹಿರಿಯರಿದ್ದಾರೆ. ಅವರಿಗೆ ಕೆಮ್ಮು ಬರುತ್ತಿದ್ದು, ಕಣ್ಣುಗಳು ಉರಿಯುತ್ತವೆ. ನಾವು ಈ ಕುರಿತು ನಗರಪಾಲಿಕೆಗೆ ದೂರು ನೀಡಿದ್ದರೂ ಯಾವುದೇ ಕ್ರಮ ವಹಿಸಿಲ್ಲ.”
-ಸುನೀತಾ ರಾವ್, ನಿವಾಸಿ, ಜಯಲಕ್ಷ್ಮೀಪುರಂ
” ನಾವು ಸ್ವಚ್ಛಗೊಳಿಸುತ್ತಲೇ ಇದ್ದೇವೆ. ಜನರು ತಂದು ಹಾಕುತ್ತಲೇ ಇದ್ದಾರೆ. ಕೊನೆಗೆ ಯಾರೋ ಅದಕ್ಕೆ ಬೆಂಕಿ ಹಚ್ಚಿ ಹೋಗುತ್ತಾರೆ. ಜನರು ಹೀಗೆ ಸಾರ್ವಜನಿಕ ಸ್ಥಳಗಳಲ್ಲಿ ಕಸವನ್ನು ಎಸೆಯುವ ಬದಲು ಅದನ್ನು ತಮ್ಮ ಮನೆಯಲ್ಲೇ ಬೇರ್ಪಡಿಸಿ ಕಸ ಸಂಗ್ರಹಿಸಲು ಬಂದವರಿಗೆ ಕೊಡಬೇಕು. ಇದರಿಂದ ಸಮಸ್ಯೆ ಬಗೆಹರಿಸಲು ಸಾಧ್ಯ.”
-ಪುಟ್ಟರಾಜು, ಮೇಸ್ತ್ರಿ, ನಗರಪಾಲಿಕೆ
ಪ್ರಶಾಂತ್ ಎನ್ ಮಲ್ಲಿಕ್ ಮೈಸೂರು: ಸುತ್ತೂರು ಜಾತ್ರೆ ವೇಳೆ ರಾತ್ರಿ ಗದ್ದೆಯಲ್ಲಿ ಮಲಗಿದ್ದ ವ್ಯಕ್ತಿಗಳ ಮೇಲೆ ಕಾರು ಹರಿದ ಪರಿಣಾಮ…
ಸಿದ್ದಾಪುರ: ವಿರಾಜಪೇಟೆ ರಸ್ತೆಯಲ್ಲಿರುವ ಎಸ್‌ವೈಎಸ್ ಕಾಫಿ ಅಂಗಡಿಯಲ್ಲಿ ನಡೆದ ನಗದು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದಾಪುರ ಪೊಲೀಸರು ಕೇರಳ ಮೂಲದ…
ಮಹಾದೇಶ್ ಎಂ ಗೌಡ ಹನೂರು: ತಾಲ್ಲೂಕಿನ ಕೆವಿಎನ್ ದೊಡ್ಡಿ ಗ್ರಾಮದ ಜಮೀನೊಂದರಲ್ಲಿ ಕಾಡಾನೆ ಲಗ್ಗೆ ಇಟ್ಟು ಅಪಾರ ಪ್ರಮಾಣದ ಬೆಳೆ…
ಬೆಂಗಳೂರು: ಕಾಲ್ತುಳಿತ ಪ್ರಕರಣದಿಂದಾಗಿ ಈ ಬಾರಿಯ ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಪಂದ್ಯಗಳು ನಡುವುದೇ ಡೋಲಾಯಮಾನ ಸ್ಥಿತಿಯಲ್ಲಿರುವಾಗಲೇ ಉದ್ಘಾಟನಾ…
ಬೆಂಗಳೂರು: ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾ ಅವರಿಗೆ ಜೀವ ಬೆದರಿಕೆ ಹಾಕಿದ್ದ ಪ್ರಕರಣ ಸಂಬಂಧ ಕಾಂಗ್ರೆಸ್ ಮುಖಂಡ ರಾಜೀವ್‌ಗೌಡಗೆ ಹೈಕೋರ್ಟ್ ತೀವ್ರ…
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ಪ್ರಮುಖ ಆರೋಪಿ ಪವಿತ್ರಾ ಗೌಡಗೆ ವಾರಕ್ಕೊಮ್ಮೆ ಮನೆ ಊಟ…