Andolana originals

ಗಾಣಿಗ ಮಂಗಲ ಆಶ್ರಮ ಶಾಲೆ ಕಟ್ಟಡ ಕಾಮಗಾರಿ ಪೂರ್ಣ

ಮಹಾದೇಶ್ ಎಂ.ಗೌಡ

ಜ.೧೭ರಂದು ಶಾಸಕ ಮಂಜುನಾಥ್ ಅವರಿಂದ ಉದ್ಘಾಟನೆ; ಪೋಷಕರು, ವಿದ್ಯಾರ್ಥಿಗಳಲ್ಲಿ ಮನೆ ಮಾಡಿದ ಸಂತ

ಹನೂರು: ತಾಲ್ಲೂಕಿನ ಕಾವೇರಿ ವನ್ಯಜೀವಿ ಅರಣ್ಯ ವ್ಯಾಪ್ತಿಯಲ್ಲಿರುವ ಗಾಣಿಗ ಮಂಗಲ ಗ್ರಾಮದಲ್ಲಿ ೭.೫ ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿದ್ದ ಬುಡಕಟ್ಟು ಆಶ್ರಮ ಶಾಲೆಯ ಕಟ್ಟಡದ ಕಾಮಗಾರಿ ಪೂರ್ಣಗೊಂಡಿದ್ದು ಶಾಸಕ ಎಂ.ಆರ್. ಮಂಜುನಾಥ್‌ರವರು ಜ.೧೭ರಂದು ಉದ್ಘಾಟಿಸಲಿದ್ದಾರೆ.

ತಾಲ್ಲೂಕಿನ ಗಡಿಯಂಚಿನ ಗಾಣಿಗ ಮಂಗಲ ಗ್ರಾಮದಲ್ಲಿನ ಆದಿವಾಸಿ ಸಮುದಾಯದ ಮಕ್ಕಳ ಶಿಕ್ಷಣಕ್ಕಾಗಿ ೧೯೬೯ರಲ್ಲಿ ಆಶ್ರಮ ಶಾಲೆ ಪ್ರಾರಂಭ ಮಾಡಲಾಗಿತ್ತು. ಪ್ರಾರಂಭದಲ್ಲಿ ಒಂದರಿಂದ ನಾಲ್ಕನೇ ತರಗತಿಯವರೆಗೆ ವಸತಿ ಶಾಲೆ ನಡೆಯುತ್ತಿತ್ತು. ಪ್ರಸ್ತುತ ೭ನೇ ತರಗತಿಯವರೆಗೆ ವಸತಿ ಶಾಲೆಯನ್ನು ವಿಸ್ತರಿಸಲಾಗಿದ್ದು ಗಾಣಿಗಮಂಗಲ, ಕಳ್ಳಿದೊಡ್ಡಿ, ಬಂಡಳ್ಳಿ, ಶಾಗ್ಯ ಗ್ರಾಮಗಳ ಎಸ್‌ಟಿ ಸಮುದಾಯದ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಈ ಶಾಲೆಯಲ್ಲಿ ಆದಿವಾಸಿ ಮಕ್ಕಳ ಜೊತೆಗೆ ಗಾಣಿಗ ಮಂಗಲ ಗ್ರಾಮದಲ್ಲಿ ವಾಸವಾಗಿರುವ ಒಕ್ಕಲಿಗ, ವೀರಶೈವ, ಆದಿ ಜಾಂಬವ (ಮಾದಿಗ) ಸಮುದಾಯದ ವಿದ್ಯಾರ್ಥಿಗಳೂ ಶಿಕ್ಷಣ ಪಡೆದುಕೊಂಡಿರುವುದು ಈ ಗ್ರಾಮದ ವಿಶೇಷವಾಗಿದೆ. ಗಾಣಿಗಮಂಗಲದ ಆಶ್ರಮ ವಸತಿ ಶಾಲೆಯಲ್ಲಿ ೧೨ ಕೊಠಡಿಗಳಿದ್ದು ಬಾಲಕ, ಬಾಲಕಿಯರಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಇದೇ ಕಟ್ಟಡದಲ್ಲಿ ಭೋಜನಾಲಯ, ಕಂಪ್ಯೂಟರ್ ಕೊಠಡಿ, ಆಹಾರ ಸಾಮಗ್ರಿ ದಾಸ್ತಾನು ಕೊಠಡಿ, ಶೌಚಗೃಹ, ಸ್ನಾನಗೃಹವನ್ನು ಒಳಗೊಂಡಿದೆ.

ಶಾಲಾ ಕೊಠಡಿ ಶಿಥಿಲವಾಗಿದ್ದರಿಂದ ಶಾಲೆಯ ಹೊರ ಆವರಣದಲ್ಲಿಯೂ ಪಾಠ ಮಾಡಲಾಗುತ್ತಿತ್ತು. ಈ ಬಗ್ಗೆ ಹಲವಾರು ಬಾರಿ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿತ್ತು.] ಪೋಷಕರು ಸಹ ಹೊಸ ಕಟ್ಟಡ ನಿರ್ಮಾಣ ಮಾಡಿ ಕಾಡಂಚಿನ ಗ್ರಾಮದ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವಂತೆ ಮನವಿ ಮಾಡಿದ್ದರು.

ಶಾಸಕ ಮಂಜುನಾಥ್‌ರವರ ಪ್ರಯತ್ನದ ಫಲವಾಗಿ ೭.೫೦ ಕೋಟಿ ರೂ. ವೆಚ್ಚದಲ್ಲಿ ಆಶ್ರಮ ಶಾಲೆ ಕಾಮಗಾರಿ ಪೂರ್ಣಗೊಂಡಿದ್ದು ಉದ್ಘಾಟನೆಗೆ ಸಿದ್ಧವಾಗಿರುವುದರಿಂದ  ಪೋಷಕರು ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದಾರೆ

” ಗ್ರಾಮದಲ್ಲಿದ್ದ ಆಶ್ರಮ ಶಾಲೆ ಶಿಥಿಲ ಗೊಂಡಿದ್ದರಿಂದ ವಿದ್ಯಾರ್ಥಿಗಳಿಗೆ ವಾಸ್ತವ್ಯ ಇರಲು ತೊಂದರೆಯಾಗುತ್ತಿತ್ತು. ಈ ಬಗ್ಗೆ ಶಾಸಕರ ಗಮನಕ್ಕೆ ತರಲಾಗಿತ್ತು. ಈಗ ಗ್ರಾಮದಲ್ಲಿ ಉತ್ತಮ ಸುಸಜ್ಜಿತ  ಕಟ್ಟಡ ನಿರ್ಮಾಣವಾಗಿರುವುದು ಸಂತಸ ತಂದಿದೆ. ಈ ಶಾಲೆಗೆ ಬೇರೆ ಗ್ರಾಮಗಳಿಂದಲೂ ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯುವ ನಿರೀಕ್ಷೆ ಇದೆ. ಶಾಗ್ಯ ಗ್ರಾಮದಿಂದ ಗಾಣಿಗ ಮಂಗಲ ಗ್ರಾಮದವರೆಗೆ ರಸ್ತೆ ಅಭಿವೃದ್ಧಿ ಮಾಡಿದರೆ ಇನ್ನೂ ಹೆಚ್ಚಿನ ಅನುಕೂಲವಾಗಲಿದೆ .”

-ನಾಗೇಂದ್ರ, ಅಧ್ಯಕ್ಷರು, ಆದಿವಾಸಿ ಹಿತರಕ್ಷಣಾ ಸಮಿತಿ

” ಕ್ಷೇತ್ರ ವ್ಯಾಪ್ತಿಯಲ್ಲಿರುವ ಆದಿವಾಸಿ ಬುಡಕಟ್ಟು ಸಮುದಾಯದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಅವಿರತವಾಗಿ ಶ್ರಮವಹಿಸಿದ್ದೇನೆ. ಗಾಣಿಗ ಮಂಗಲ ಗ್ರಾಮದಲ್ಲಿರುವ ವಸತಿ ಶಾಲೆ ಶಿಥಿಲಗೊಂಡಿದ್ದರಿಂದ ೭.೫ ಕೋಟಿ ರೂ. ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡಲಾಗಿದೆ. ಈ ಬಾರಿಯ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಜಿಲ್ಲೆಯಲ್ಲಿಯೇ ಮೊದಲ ಸ್ಥಾನ ಪಡೆಯುವ ನಿಟ್ಟಿನಲ್ಲಿ ಶೈಕ್ಷಣಿಕ ವಲಯದ ಹಲವು ಕೇಂದ್ರ ಸ್ಥಾನದಲ್ಲಿ ಭರವಸೆಯ ಬೆಳಕು ಕಾರ್ಯಕ್ರಮದಡಿ ಪ್ರೋತ್ಸಾಹ ನೀಡಲಾಗಿದೆ. ಒಟ್ಟಾರೆ ನಮ್ಮ ಕ್ಷೇತ್ರದ ವಿದ್ಯಾರ್ಥಿಗಳನ್ನು ಶಿಕ್ಷಿತರನ್ನಾಗಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ.”

-ಎಂ.ಆರ್.ಮಂಜುನಾಥ್, ಶಾಸಕರು

ಆಂದೋಲನ ಡೆಸ್ಕ್

Recent Posts

ಕೊಡಗು ; ವ್ಯಕ್ತಿ ಬಲಿ ಪಡೆದಿದ್ದ ರೌಡಿ ಆನೆ ಕೊನೆಗೂ ಸೆರೆ

ಕೊಡಗು : ಕಳೆದ ಕೆಲ ದಿನಗಳಿಂದ ಉಪಟಳ ನೀಡುವ ಜತೆಗೆ ವ್ಯಕ್ತಿಯ ಮೇಲೆ ದಾಳಿ ಮಾಡಿ ಬಲಿ ಪಡೆದಿದ್ದ ಕಾಡಾನೆಯನ್ನು…

2 hours ago

ಸೋಮವಾರದಿಂದಲೇ ತಂಬಾಕು ಖರೀದಿ : ಗೋಯಲ್‌ ಭರವಸೆ

ಬೆಂಗಳೂರು : ಕರ್ನಾಟಕವೂ ಸೇರಿದಂತೆ ದೇಶಾದ್ಯಂತ ತಂಬಾಕು ಬೆಳೆಗಾರರ ಸಮಸ್ಯೆಗಳ ಬಗ್ಗೆ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ…

3 hours ago

ಸೃಜನಶೀಲತೆಗೆ  ʻಎಐʼ ಕುತ್ತು : ಲೇಖಕ ನಾಗಭೂಷಣ ಸ್ವಾಮಿ

ಬೆಂಗಳೂರು : ಸಾಹಿತ್ಯದಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆಯಿಂದ ಸಾಕಷ್ಟು ಅಪಾಯಗಳು ಎದುರಾಗುತ್ತವೆ, ಮನುಷ್ಯನ ಸೃಜನಶೀಲ ಚಿಂತನೆಗೆ ಎಐ ತಂತ್ರಜ್ಞಾನ ಮಾರಕವಾಗಲಿದೆ…

3 hours ago

ಊಹಾ ಪತ್ರಿಕೋದ್ಯಮ ಬಿಟ್ಟು, ಸತ್ಯವನ್ನೇ ಬರೆಯಿರಿ : ಪತ್ರಕರ್ತರಿಗೆ ಮುಖ್ಯಮಂತ್ರಿ ಸಲಹೆ

ಬೆಂಗಳೂರು : ನಾವು ಯಾರ ಪರವಾಗಿ ಇದ್ದೇವೆ ಎನ್ನುವ ಸ್ಪಷ್ಟ ಅರಿವು ಮಾಧ್ಯಮದವರಿಗೆ ಇರಬೇಕು. ಸರ್ಕಾರ ಕಟ್ಟ ಕಡೆಯ ಮನುಷ್ಯರ…

4 hours ago

ಕೈ ಸಾಲವಾಗಿ 25 ಕೋಟಿ ನೀಡುವ ಆಮಿಷ : ಹುಬ್ಬಳ್ಳಿಯ ವ್ಯಕ್ತಿಗೆ ಮೈಸೂರಿನ ಐವರಿಂದ ಲಕ್ಷಾಂತರ ರೂ. ವಂಚನೆ

ಮೈಸೂರು : ಹುಬ್ಬಳ್ಳಿಯ ಹರ್ಷ ಎಂಬುವವರಿಗೆ ಕೈ ಸಾಲವಾಗಿ 25 ಕೋಟಿ ರೂ. ನೀಡುತ್ತೇವೆ ಎಂದು ಆಮಿಷವೊಡ್ಡಿ ಮೈಸೂರು ಮೂಲದ…

4 hours ago

ಮಹಿಳೆಯರಿಗೆ ಋತುಚಕ್ರದ ರಜೆ ಕಡ್ಡಾಯ : ನಾಗಲಕ್ಷ್ಮೀ ಚೌಧರಿ

ಮೈಸೂರು : ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರದಲ್ಲಿ ದುಡಿಯುತ್ತಿರುವ ಮಹಿಳೆಯರಿಗೆ ಋತುಚಕ್ರದ ರಜೆ ಕಡ್ಡಾಯವಾಗಿ ಕೊಡಬೇಕು. ಇಲ್ಲದಿದ್ದರೆ ಶಿಸ್ತು ಕ್ರಮ…

5 hours ago