Andolana originals

ಇಂದು ಸಾಮೂಹಿಕ ಗೌರಿ-ಗಣೇಶೋತ್ಸವ ಸಂಭ್ರಮ

೩೦ಕ್ಕೂ ಹೆಚ್ಚಿನ ಸಮಿತಿಗಳಿಂದ ಆಚರಣೆಗೆ ಸಕಲ ಸಿದ್ಧತೆ; ಸಂಭ್ರಮದಲ್ಲಿ ವಿರಾಜಪೇಟೆ ಜನತೆ 

ವಿರಾಜಪೇಟೆ: ಕೊಡಗು ಜಿಲ್ಲೆಯ ಮಟ್ಟಿಗೆ ದಸರೆಗೆ ಮಡಿಕೇರಿ ಹೇಗೊ ಹಾಗೆಯೇ ಗೌರಿ-ಗಣೇಶೋತ್ಸವ ಆಚರಣೆಗೆ ವಿರಾಜಪೇಟೆ ಪ್ರಸಿದ್ಧವಾಗಿದೆ. ಈ ಬಾರಿಯೂ ಕೂಡ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಸಕಲ ಸಿದ್ಧತೆಗಳು ನಡೆದಿದೆ.

ಪಟ್ಟಣದಲ್ಲಿ ಗೌರಿ-ಗಣೇಶೋತ್ಸವವು ಕೇವಲ ಒಂದು ವರ್ಗ ಇಲ್ಲವೇ ಒಂದು ಪಂಗಡದ ಹಬ್ಬವಾಗಿ ಉಳಿದುಕೊಂಡಿಲ್ಲ. ಬದಲಾಗಿ ಊರ ಹಬ್ಬವೆಂದೆನಿಸಿದೆ. ಈ ಬಾರಿ ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದರೂ ಉತ್ಸವದ ಅದ್ಧೂರಿತನ, ಸಂಪ್ರದಾಯ ಹಾಗೂ ಜನತೆಯ ಶ್ರದ್ಧಾ-ಭಕ್ತಿಗೆ ಧಕ್ಕೆಯುಂಟು ಮಾಡಿಲ್ಲ.

ಪಟ್ಟಣ ವ್ಯಾಪ್ತಿಯಲ್ಲಿನ ಸುಮಾರು ೩೦ಕ್ಕೂ ಹೆಚ್ಚಿನ ಸಮಿತಿಗಳು ಸಾಮೂಹಿಕವಾಗಿ ಗೌರಿ-ಗಣೇಶೋತ್ಸವವನ್ನು ಆಚರಿಸಲಿವೆ. ಪಟ್ಟಣದ ಗಡಿಯಾರ ಕಂಬದ ಬಳಿಯ ಮಹಾಗಣಪತಿ ದೇವಾಲಯದಲ್ಲಿ ಆ.೨೭ರಂದು ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಗಿದೆ.

ಬಳಿಕ ಉಳಿದ ಎಲ್ಲ ಸಮಿತಿಗಳೂ ತಮ್ಮತಮ್ಮ ವೇದಿಕೆಯಲ್ಲಿ ವಿಶೇಷ ಪೂಜಾ ಕಾರ್ಯಗಳೊಂದಿಗೆ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿವೆ. ಪ್ರತಿನಿತ್ಯ ಸಮಿತಿಗಳಿಂದ ಉತ್ಸವಮೂರ್ತಿಗಳಿಗೆ ತ್ರಿಕಾಲ ಪೂಜೆ ನಡೆಸಲಾಗುತ್ತಿದೆ. ಆಯಾ ಸಮಿತಿಗಳು ತಮ್ಮ ವ್ಯಾಪ್ತಿಯಲ್ಲಿ ವಿದ್ಯುತ್ ದೀಪಗಳು, ಇತರ ಪರಿಕರಗಳಿಂದ ಅಲಂಕಾರವನ್ನು ಕೈಗೊಂಡಿವೆ. ಇದರಿಂದ ವಿರಾಜಪೇಟೆ ಪಟ್ಟಣವು ನವವಧುವಿನಂತೆ ಶೃಂಗಾರಗೊಂಡು ಕಂಗೊಳಿಸುತ್ತಿದೆ.

ಸಂಪ್ರದಾಯದಂತೆ ಗೌರಿ ಹಬ್ಬದ ದಿನವಾದ ಆ.೨೬ರಂದು ಪಟ್ಟಣದ ಜೈನರ ಬೀದಿಯಲ್ಲಿನ ಬಸವೇಶ್ವರ ದೇವಾಲಯದ ವತಿಯಿಂದ ಗೌರಮ್ಮನ ಉತ್ಸವಮೂರ್ತಿಯನ್ನು ಪಲ್ಲಕ್ಕಿ ಮೆರವಣಿಗೆ ನಡೆಸಲಾಯಿತು. ಕೆಲ ಸಮಿತಿಗಳ ವೇದಿಕೆಗಳಲ್ಲಿಉತ್ಸವದ ಬಹುತೇಕ ಎಲ್ಲಾ ದಿನಗಳಂದು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ವಿಶೇಷವೆಂದರೆಈ ಉತ್ಸವವು ಸ್ಥಳೀಯ ಪ್ರತಿಭೆಗಳಿಗೆ ಪ್ರತಿಭೆ ಪ್ರದರ್ಶನಕ್ಕೆ ಉತ್ತಮ ವೇದಿಕೆಯೂ ಆಗಿದೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಿರುವ ಬಹುತೇಕ ಸಮಿತಿಗಳು ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ನೀಡಿವೆ.

ವಿವಿಧ ಸಮಿತಿಗಳು ಉತ್ಸವದ ದಿನಗಳಂದು ಅನ್ನಸಂತರ್ಪಣೆ ಕಾರ್ಯವನ್ನು ಆಯೋಜಿಸಿವೆ. ವಿಶೇಷವಾಗಿ ಪಟ್ಟಣದ ಅಪ್ಪಯ್ಯಸ್ವಾಮಿ ರಸ್ತೆಯಲ್ಲಿನ ಶ್ರೀ ಬಾಲಾಂಜನೇಯ ಗಣಪತಿ ಸೇವಾ ಸಮಿತಿ ವತಿಯಿಂದ ಉತ್ಸವದ ೧೧ ದಿನಗಳ ಕಾಲವೂ ರಾತ್ರಿ ಅನ್ನಸಂತರ್ಪಣೆಯನ್ನು ಕೈಗೊಳ್ಳಲಾಗಿತ್ತು.

ಉತ್ಸವ ಮೂರ್ತಿಗಳ ವಿಸರ್ಜನೋತ್ಸವದಂದು ನಡೆಯುವ ಶೋಭಯಾತ್ರೆ ಆಕಷಣೀಯವಾಗಿರಲಿದೆ. ಶೋಭಯಾತ್ರೆಯು ಸೆ.೬ರಂದು ಸಂಜೆ ಆರಂಭಗೊಂಡು ಮರುದಿನ ಮುಂಜಾನೆ ಮುಕ್ತಾಯಗೊಳ್ಳಲಿದೆ. ಈ ಬಾರಿ ಶೋಭಯಾತ್ರೆಯಲ್ಲಿ ೨೨ ಪ್ರಮುಖ ಗಣೇಶೋತ್ಸವ ಸಮಿತಿಗಳು ಭಾಗವಹಿಸಲಿವೆ. ಶೋಭಯಾತ್ರೆಯ ಬಳಿಕ ಉತ್ಸವ ಮೂರ್ತಿಗಳ ವಿಸರ್ಜನೆ ನಡೆಯಲಿರುವ ಗೌರಿ ಕೆರೆಯನ್ನು ಶಾಸಕ ಎ.ಎಸ್.ಪೊನ್ನಣ್ಣ ಅವರ ಮುತುವರ್ಜಿಯಿಂದ ಸಮಗ್ರವಾಗಿ ಅಭಿವೃದ್ಧಿಗೊಳಿಸಲಾಗಿದೆ. ಉತ್ಸವದ ಅಂಗವಾಗಿ ಪೊಲೀಸ್ ಇಲಾಖೆಯು ಸೂಕ್ತಬಂದೋಬಸ್ತ್ ಕೈಗೊಂಡಿದೆ. ಗೌರಿ-ಗಣೇಶೋತ್ಸವವು ಇಲ್ಲಿನ ನಿವಾಸಿಗಳಿಗೆ ಲವಲವಿಕೆಯನ್ನು ತಂದುಕೊಡುವುದರ ಜತೆಗೆ ಉತ್ಸವದ ಅಥವಾ ಶೋಭಯಾತ್ರೆಯ ಮರುದಿನ ಪಟ್ಟಣದಲ್ಲಿ ಸಂಭ್ರಮ ಮನೆ ಮಾಡಿರುತ್ತದೆ.

” ವಿರಾಜಪೇಟೆಯ ಗೌರಿ-ಗಣೇಶೋತ್ಸವ ಭಾವೈಕ್ಯತೆಯ ಸಾಮರಸ್ಯದ ಉತ್ಸವ. ಉತ್ಸವದ ಸಮಿತಿಗಳೊಂದಿಗೆ ಸಮನ್ವಯತೆ ಸಾಧಿಸಲಾಗಿ, ಎಲ್ಲಾ ಸಹಕಾರನೀಡುತ್ತಿರುವ ಶಾಸಕರ ಕಾರ್ಯ ಶ್ಲಾಘನೀಯ. ಎಲ್ಲರೂ ಒಟ್ಟಾಗಿ ನಾಡಿನ ಪಾರಂಪರಿಕ ಉತ್ಸವದ ಯಶಸ್ವಿಗೆ ಸಹಕರಿಸೋಣ.”

-ಶಬರೀಶ್ ಶೆಟ್ಟಿ, ಕಾರ್ಯಾಧ್ಯಕ್ಷರು, ವಿರಾಜಪೇಟೆ ನಗರ ಐತಿಹಾಸಿಕ ಜನೋತ್ಸವ ಸಮಿತಿ

ಆಂದೋಲನ ಡೆಸ್ಕ್

Recent Posts

2026ರ ದಸರಾ ಗಜಪಡೆ ಪಟ್ಟಿ ಬಿಡುಗಡೆ: ಅಂಬಾರಿ ಸಾರಥಿ ಅಭಿಮನ್ಯುವಿಗೆ ಕೊಕ್‌

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026ಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಈ ಬಾರಿ ದಸರಾ ಗಜಪಡೆಯ ಪಟ್ಟಿಯಲ್ಲಿ ಮಹತ್ವದ…

2 hours ago

ಹನೂರು ಶೂಟೌಟ್‌ ಪ್ರಕರಣ: ತಮಿಳುನಾಡು ಸರ್ಕಾರದಿಂದಲೂ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ

ಚೆನ್ನೈ: ಹನೂರು ಶೂಟೌಟ್ ಪ್ರಕರಣದಲ್ಲಿ ಮೃತರ ಕುಟುಂಬಗಳಿಗೆ ತಮಿಳುನಾಡು ಸರ್ಕಾರದಿಂದಲೂ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ.…

3 hours ago

ಗ್ಯಾರೇಜ್‌ಗೆ ಬೆಂಕಿ ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ

ಗುಂಡ್ಲುಪೇಟೆ: ಪಟ್ಟಣದ ಕೇರಳ ರಸ್ತೆಯಲ್ಲಿರುವ ಗ್ಯಾರೇಜ್‌ಗೆ ಬೆಂಕಿ ತಗುಲಿ ಸಂಪೂರ್ಣ ಗ್ಯಾರೇಜ್ ಸುಟ್ಟುಹೋಗಿರುವ ಘಟನೆ ನಡೆದಿದೆ. ಪಟ್ಟಣದ ವಾಹಿದ್ ಎಂಬುವವರಿಗೆ…

3 hours ago

ಕೆಆರ್‌ಎಸ್‌ನಿಂದ ತಮಿಳುನಾಡಿಗೆ 4917 ಕ್ಯೂಸೆಕ್‌ ನೀರು ಬಿಡುಗಡೆ

ಮಂಡ್ಯ: ರಾಜ್ಯದಲ್ಲಿ ಕೆಆರ್‌ಎಸ್‌ ಜಲಾಶಯದ ನೀರಿನ ವಿಚಾರವೂ ಚರ್ಚೆಗೆ ಬಂದಿದ್ದು, ಕೇವಲ 1951 ಕ್ಯೂಸೆಕ್ಸ್‌ ನೀರು ಹರಿದು ಬರುತ್ತಿರುವ ಡ್ಯಾಂನಿಂದ…

4 hours ago

ಕಾಡಾನೆಗಳ ಸೆರೆಗೆ ಕಾರ್ಯಾಚರಣೆ: ಮುಂಜಾಗ್ರತಾ ಕ್ರಮವಾಗಿ ಸೆಕ್ಷನ್ 144 ಜಾರಿ

ಕೊಡಗು: ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಮೂರು ಗಂಡಾನೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಆದೇಶ ನೀಡಿದೆ. ಇಂದು ಬೆಳಿಗ್ಗೆ 10…

9 hours ago

ಹನೂರು ಎನ್‌ಕೌಂಟರ್: ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದೆವು: ACF ಮರಿಸ್ವಾಮಿ

ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ನಡೆದ ಹನೂರು ಎನ್‌ಕೌಂಟರ್ ಬಗ್ಗೆ ಮೊದಲ ಬಾರಿಗೆ ಕಾವೇರಿ ವನ್ಯಧಾಮದ ACF ಮರಿಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯೆ…

9 hours ago