ಕೆ.ಬಿ.ರಮೇಶನಾಯಕ
ಪುಷ್ಪಗಳಲ್ಲಿ ಅರಳಲಿದೆ ಸಬರಮತಿ ಆಶ್ರಮದ ಮಾದರಿ
ಕುಪ್ಪಣ್ಣಪಾರ್ಕ್‌ನಲ್ಲಿ ೧೧ ದಿನಗಳ ದಸರಾ ಫಲಪುಷ್ಪ ಪ್ರದರ್ಶನ
ಮೈಸೂರು: ಲಕ್ಷಾಂತರ ಪುಷ್ಪಪ್ರಿಯರನ್ನು ಕೈಬೀಸಿ ಕರೆಯುವ ದಸರಾ ಫಲಪುಷ್ಪ ಪ್ರದರ್ಶನದಲ್ಲಿ ಈ ಬಾರಿ ರಾಷ್ಟ್ರಪಿತ ಮಹಾತ್ಮ ಗಾಂಧಿಜಿ ತತ್ವಗಳು, ವಿಚಾರಧಾರೆಗಳು ಅನಾವರಣಗೊಳ್ಳಲಿವೆ.
ನಗರದ ಕುಪ್ಪಣ್ಣ ಪಾರ್ಕ್‌ನ ಗಾಜಿನ ಮನೆಯೊಳಗೆ ಗಾಂಧೀಜಿ ಮತ್ತು ಅವರ ತತ್ವಗಳ ಅಶಯಗಳಡಿ ಸಬರಮತಿ ಆಶ್ರಮದ ಮಾದರಿ ನಿರ್ಮಾಣ ವಾಗಲಿದೆ. ಈಗಾಗಲೇ ಜಿಪಂ ಸಿಇಒ ಎಸ್.ಯುಕೇಶ್ ಕುಮಾರ್ ಅವರ ಸಮ್ಮುಖದಲ್ಲಿ ಸಭೆ ನಡೆದಿದ್ದು, ಪರಿಕಲ್ಪನೆಗಳನ್ನು ೨ ದಿನಗಳೊಳಗೆ ಸಲ್ಲಿಸುವಂತೆ ಹೇಳಲಾಗಿದೆ.
ಜಿಲ್ಲಾ ತೋಟಗಾರಿಕೆ ಸಂಘ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ನಗರದ ಕುಪ್ಪಣ್ಣ ಪಾರ್ಕ್‌ನಲ್ಲಿ ಸೆ.೨೨ರಿಂದ ಅ.೨ ರವರೆಗೆ ನಡೆಯ ಲಿರುವ ಫಲಪುಷ್ಪ ಪ್ರದರ್ಶನಕ್ಕೆ ಅಲಂಕಾರಿಕ ಹೂವಿನ ಗಿಡಗಳನ್ನು ಬೆಳೆಸುವ ಕೆಲಸ ನಡೆಯುತ್ತಿದೆ.
ಸರ್ಕಾರಿ ಅತಿಥಿಗೃಹ, ಕುಕ್ಕರಹಳ್ಳಿ ಕೆರೆ, ನಜರ್ ಬಾದ್, ಯಲಚಹಳ್ಳಿ ಸೇರಿದಂತೆ ೧೨ ತೋಟಗಾರಿಕೆ ಇಲಾಖೆಗೆ ಸೇರಿದ ಸಸ್ಯವನಗಳಲ್ಲಿ ವಿವಿಧ ಜಾತಿಯ ಹೂವುಗಳನ್ನು ಬೆಳೆಸಲಾಗುತ್ತಿದೆ.
ಈ ಬಾರಿ ಅಕ್ಟೋಬರ್ ೨, ಗಾಂಧಿ ಜಯಂತಿ ದಿನದಂದು ವಿಜಯದಶಮಿ ಮೆರವಣಿಗೆ ಬಂದಿರುವ ಕಾರಣ ಗಾಂಽಜಿ ಮತ್ತು ತತ್ವಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಹಾಗಾಗಿ, ಕುಪ್ಪಣ್ಣ ಪಾರ್ಕ್‌ನಲ್ಲಿ ಅತಿ ಹೆಚ್ಚು ವೀಕ್ಷಕರನ್ನು ಆಕರ್ಷಿಸುವಂತೆ ಮಾಡಲು ಗಾಜಿನ ಮನೆಯೊಳಗೆ ಮಹಾತ್ಮ ಗಾಂಧಿ ಮತ್ತು ಅವರ ತತ್ವಗಳನ್ನು ಕುರಿತು ವಿನ್ಯಾಸವನ್ನು ಅಂತಿಮಗೊಳಿಸುವ ಕೆಲಸ ನಡೆಯುತ್ತಿದೆ. ಜಿಪಂ ಸಿಇಒ ಸಮ್ಮುಖದಲ್ಲಿ ವಿವಿಧ ಸಂಸ್ಥೆಯವರು ಹೂವಿನ ಪರಿಕಲ್ಪನೆಗಳ ಸಂಕ್ಷಿಪ್ತ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ. ಮತ್ತೊಂದು ಸಭೆ ನಡೆಸಿದ ಬಳಿಕ ವಿನ್ಯಾಸ ಅಂತಿಮಪಡಿಸಲಾಗುತ್ತದೆ ಎಂದು ಹೇಳಲಾಗಿದೆ.
ಅಂತಿಮಗೊಂಡ ಬಳಿಕ ಟೆಂಡರ್: ಗಾಂಧೀಜಿ ಮತ್ತು ಅವರ ತತ್ವಗಳ ಪರಿಕಲ್ಪನೆ, ಇದರ ಜತೆಗೆ, ಕುಪ್ಪಣ್ಣ ಉದ್ಯಾನವನದ ಆವರಣದಲ್ಲಿ ವಿವಿಧ ಪರಿಕಲ್ಪನೆಗಳ ವಿನ್ಯಾಸ ಅಂತಿಮವಾದ ಬಳಿಕ ಟೆಂಡರ್ ಕರೆಯಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
” ಗಾಂಧೀಜಿ ಮತ್ತು ಅವರ ತತ್ವಗಳ ಪರಿಕಲ್ಪನೆ ಮೇಲೆ ಗಾಜಿನ ಮನೆಯೊಳಗೆ ಸಬರಮತಿ ಆಶ್ರಮದ ವಿನ್ಯಾಸ ನಿರ್ಮಾಣ ಮಾಡಲಾಗುತ್ತದೆ. ಈಗಾಗಲೇ ಸಿಇಒ ಅವರ ಸಮ್ಮುಖದಲ್ಲಿ ಸಭೆ ನಡೆಸಲಾಗಿದೆ. ವಿನ್ಯಾಸ ಅಂತಿಮವಾದ ಮೇಲೆ ಟೆಂಡರ್ ಪ್ರಕ್ರಿಯೆ ಶುರು ಮಾಡುತ್ತೇವೆ.”
-ಮಂಜುನಾಥ್ ಅಂಗಡಿ, ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ
ಒಂದು ಲಕ್ಷ ಹೂವಿನ ಕುಂಡಗಳು: ಫಲ ಪುಷ್ಪ ಪ್ರದರ್ಶನವು ಒಂದು ಲಕ್ಷಕ್ಕೂ ಹೆಚ್ಚು ಹೂವಿನ ಕುಂಡಗಳನ್ನು ಒಳಗೊಂಡಿರು ತ್ತದೆ, ಇದರಲ್ಲಿ ವೈವಿಧ್ಯಮಯ ಸಸ್ಯಗಳನ್ನು ಪ್ರದರ್ಶಿಸಲಾಗುತ್ತದೆ. ಈ ವರ್ಷ ಸೇರ್ಪಡೆಯಾದ ಕೆಲವು ವಿಲಕ್ಷಣ ಪ್ರಭೇದ ಗಳೆಂದರೆ ಪೊಯಿನ್‌ಸೆಟ್ಟಿಯಾ, ಕಲಾಂಚೊ, ಕರ್ಕುಮಾ, ಆಕ್ಸಾಲಿಸ್, ಹೈಡ್ರೇಂಜ, ರೋಸ್, ಅಜೆಲಿಯಾ, ಡ್ಯಾನ್ಸಿಂಗ್ ಡಾಲ್, ಆಫ್ರಿಕನ್ ವೈಲೆಟ್, ಡಿಸ್ ಬಡ್ಸ್, ಅಸಹನೆ, ಲಿಸಿಯಾಂಥಸ್, ಹೈಬಿಸ್ಕಸ್, ಪೆಂಟಾಸ್ ಕಾರ್ನಿಯಾ, ಗ್ಲೋಕ್ಸಿಯಮ್, ಬೆರ್ಗೊ ಯಾಕ್ಸ್, ಡಿಮೆಲ್‌ರೊಬಿಯಮ್ಸ್, ಲಿಲ್ಲಿ, ಆರ್ಕಿಡ್ ಮತ್ತು ಕ್ಲೆರೊಡೆಂಡ್ರಮ್.
ಮೈಸೂರು: ಮೈಸೂರಿಗೆ ಆಗಮಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸ್ವಾಗತಿಸಿದರು.…
ಮೈಸೂರು: ಬೆಂಗಳೂರು ಡಿಜಿಸ್ಟ್ರೇಷನ್ ಹಳೆಯ ಬಸ್‌ಗಳು ಮೈಸೂರು ನಗರದಲ್ಲಿ ಸಂಚಾರ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಾರಿಗೆ ಇಲಾಖೆಯ ಪ್ರಾದೇಶಿಕ ಅಧಿಕಾರಿ ವಸಂತ್…
ಮೈಸೂರು: ಇಬ್ಬರು ಬೈಕ್ ಕಳ್ಳರನ್ನು ಬಂಧಿಸಿರುವ ಲಷ್ಕರ್ ಠಾಣೆ ಪೊಲೀಸರು, ಬಂಧಿತರಿಂದ 2.5 ಲಕ್ಷ ರೂ. ವೌಲ್ಯದ 3 ದ್ವಿಚಕ್ರ…
ಮೈಸೂರು: ಅಂತರಾಜ್ಯ ಮನೆಗಳ್ಳನನ್ನು ಕುವೆಂಪು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 2.6 ಲಕ್ಷ ರೂ. ವೌಲ್ಯದ 20 ಗ್ರಾಂ…
ಹನೂರು: ವಿದ್ಯುತ್ 66/11 ಕೆವಿ ಟವರ್ ದುರಸ್ತಿ, ವಿವಿಧ ಭಾಗದಲ್ಲಿ ವಿದ್ಯುತ್ ನಿಲುಗಡೆ ದುರಸ್ತಿಕಾರ್ಯ ಪ್ರಗತಿಯಲ್ಲಿರುವುದರಿಂದ ಹಲವು ಗ್ರಾಮಗಳಲ್ಲಿ ವಿದ್ಯುತ್…
ವಿರಾಜಪೇಟೆ: ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿರಾಜಪೇಟೆಯಲ್ಲಿ ನಡೆದಿದೆ. ವಿರಾಜಪೇಟೆ ಹೊರವಲಯದ ಅರಮೇರಿ ಬಳಿಯ ನಾಲ್ಕನೇ ರಸ್ತೆಯಲ್ಲಿ…