Andolana originals

‘ಶುಚಿ’ ಕಾರ್ಯಕ್ರಮ ಮರು ಜಾರಿಗೆ ಹಣ ಬಲ

-ಗಿರೀಶ್ ಹುಣಸೂರು

೫ ವರ್ಷಗಳ ಬಳಿಕ ಉಚಿತ ಸ್ಯಾನಿಟರಿ ನ್ಯಾಪ್‌ಕಿನ್ ವಿತರಣೆಗೆ ಮುಂದಾದ ಸರ್ಕಾರ

ಮೈಸೂರು: ಹದಿಹರೆಯದ ಹೆಣ್ಣು ಮಕ್ಕಳಲ್ಲಿ ಋತುಸ್ರಾವದ ಶುಚಿತ್ವದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ೨೦೧೩-೧೪ನೇ ಸಾಲಿನಲ್ಲಿ ಜಾರಿಗೆ ತಂದು ಕೊರೋನಾ ಸಾಂಕ್ರಾಮಿಕ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ‘ಶುಚಿ’ ಕಾರ್ಯಕ್ರಮ ಐದು ವರ್ಷಗಳ ಬಳಿಕ ಪುನಾರಂಭವಾಗಲಿದೆ. ಉಚಿತವಾಗಿ ಸ್ಯಾನಿಟರಿ ನ್ಯಾಪ್‌ಕಿನ್ ಪ್ಯಾಡ್ ವಿತರಣೆ ಮಾಡುವ ಶುಚಿ ಯೋಜನೆಯು ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಹಣಕಾಸಿನ ಕೊರತೆ ಮತ್ತು ಟೆಂಡರ್ ಸಮಸ್ಯೆಗಳಿಂದ ಸ್ಥಗಿತಗೊಂಡಿತ್ತು.

ಕೊರೋನಾ ಸಾಂಕ್ರಾಮಿಕದ ಬಳಿಕ ರಾಜ್ಯ ಸರ್ಕಾರ ಬಡ ವಿದ್ಯಾರ್ಥಿನಿಯರಿಗೆ ಶುಚಿಯಾದ ಸ್ಯಾನಿಟರಿ ನ್ಯಾಪ್‌ಕಿನ್ ವಿತರಿಸುವುದನ್ನೇ ಮರೆತು ಬಿಟ್ಟಿತ್ತು. ಹೀಗಾಗಿ ಯೋಜನೆಯನ್ನು ಸಮರ್ಪಕವಾಗಿ ಜಾರಿ ಮಾಡುವಂತೆ ೨೦೨೦ರ ವರ್ಷಾಂತ್ಯದಲ್ಲಿ ಹೈಕೋರ್ಟ್ ಕೂಡ ಸರ್ಕಾರಕ್ಕೆ ಚಾಟಿ ಬೀಸಿತ್ತು. ಹೀಗಾಗಿ ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳಲ್ಲಿ ಹಾಗೂ ಪಿಯು ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರಿಗೆ ತಲಾ ಹತ್ತು ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ತಲಾ ೨೧.೫೦ ರೂ.ಗಳಂತೆ ಖರೀದಿಸಿ ವಿತರಿಸುವ ಆಲೋಚನೆ ಮಾಡಿತ್ತು. ಇದಕ್ಕಾಗಿ ೪೭ ಕೋಟಿ ರೂ. ಭರಿಸಲು ರಾಜ್ಯ ಸಚಿವ ಸಂಪುಟ ೨೦೨೧ರಲ್ಲಿ ಅನುಮೋದನೆ ನೀಡಿತ್ತು. ೨೦೨೩ರ ಆಗಸ್ಟ್‌ನಲ್ಲಿ ಯೋಜನೆಯನ್ನು ಪುನಾರಂಭಿಸಲಾಗಿದ್ದರೂ ಬಜೆಟ್‌ನಲ್ಲಿ ಅನುದಾನದ ಕೊರತೆಯಿಂದ ೨೦೨೦- ೨೧ನೇ ಸಾಲಿನಲ್ಲಿ ಶುಚಿ ಯೋಜನೆಗೆ ಹಣ ಮಂಜೂರಾಗದ ಕಾರಣ ಟೆಂಡರ್ ಅಂತಿಮ ವಾಗದೆ ಸಮಸ್ಯೆ ಎದುರಾದ ಪರಿಣಾಮ ಸಮರ್ಪಕವಾಗಿ ಸ್ಯಾನಿಟರಿ ನ್ಯಾಪ್‌ಕಿನ್‌ಗಳ ವಿತರಣೆ ಆಗುತ್ತಿರಲಿಲ್ಲ.ಇದೀಗ ೨೦೨೫-೨೬ನೇ ಸಾಲಿನಲ್ಲಿ ರಾಜ್ಯದ ೧೯.೬೪ ಲಕ್ಷ ವಿದ್ಯಾರ್ಥಿನಿ ಯರಿಗೆ ಸ್ಯಾನಿಟರಿ ನ್ಯಾಪ್ ಕಿನ್‌ಗಳ ವಿತರಣೆಗಾಗಿ ೭೧.೮೩ ಕೋಟಿ ರೂ. ಅನುದಾನಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಸ್ತಾವನೆ ಸಲ್ಲಿಸಿತ್ತು.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ೨೦೨೫-೨೬ನೇ ಸಾಲಿಗೆ ಶುಚಿ ಕಾರ್ಯಕ್ರಮದಡಿ ೬ರಿಂದ ಹತ್ತನೇ ತರಗತಿ ಹಾಗೂ ಪದವಿಪೂರ್ವ ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು ೧೯,೬೪,೫೦೭ ಲಕ್ಷ ಹದಿಹರೆಯದ ಹೆಣ್ಣುಮಕ್ಕಳಿಗೆ ೩ ತಿಂಗಳ ಅವಧಿಗೆ ಅಗತ್ಯವಿರುವ ಸ್ಯಾನಿಟರಿ ಪ್ಯಾಡ್ಗಳನ್ನು ಹತ್ತು ಕೋಟಿ ರೂ.ಗಳಲ್ಲಿ ಆಯಾ ಜಿಲ್ಲೆಗಳ ಹಂತದಲ್ಲಿ ಸ್ಥಳೀಯ ಸಂಗ್ರಹಣೆಯನ್ನು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳ ಪಾರದರ್ಶಕತೆ ಅಽನಿಯಮ ಹಾಗೂ ನಿಯಮಾವಳಿಗಳ ಅನ್ವಯ ಖರೀದಿಸಿ ವಿತರಿಸಲು ಆಡಳಿತಾತ್ಮಕ ಅನುಮೋದನೆ ನೀಡಿದೆ.

೨೦೨೫-೨೬ನೇ ಸಾಲಿನಲ್ಲಿ ‘ಶುಚಿ’ ಕಾರ್ಯಕ್ರಮದಡಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಸರ್ಕಾರಿ, ಸರ್ಕಾರಿ ಅನುದಾನಿತ ಶಾಲೆಗಳು, ಕಾಲೇಜುಗಳು ಮತ್ತು ಸರ್ಕಾರಿ ಹಾಸ್ಟೆಲ್‌ಗಳಲ್ಲಿ ನೋಂದಾ ಯಿಸಲಾದ ಎಲ್ಲಾ ಹದಿಹರೆಯದ ಹೆಣ್ಣು ಮಕ್ಕಳಿಗೆ ವಿತರಿಸಲು ೨,೩೫,೭೪,೦೬೪ ಯೂನಿಟ್ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು (ಪ್ರತಿ ಯೂನಿಟ್‌ನಲ್ಲಿ ಹತ್ತು ಪ್ಯಾಡ್‌ಗಳು)  ಪ್ರತಿ ಯೂನಿಟ್‌ಗೆ ಅಂದಾಜು ೩೦.೪೭ ರೂ.ಗಳಂತೆ ಒಟ್ಟು ೭೧.೮೩ ಕೋಟಿ ರೂ. ಮೊತ್ತದಲ್ಲಿ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ (ಕೆಎಸ್ ಎಂಎಸ್‌ಸಿಎಲ್) ಮೂಲಕ ಖರೀದಿಸಲು ಸರ್ಕಾರ ಅನುಮೋದನೆ ನೀಡಿದ್ದು, ಈ ಸಾಲಿನ ೧,೨ ಮತ್ತು ೩ನೇ ತ್ರೈಮಾಸಿಕ ಕಂತಿನ ಅನುದಾನವಾಗಿ ಒಟ್ಟು ೧೫ ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ.

ಶಾಲಾ ಮಕ್ಕಳಿಗೆ ಸ್ಯಾನಿಟರಿ ನ್ಯಾಪ್‌ಕಿನ್ ಗಳನ್ನು ವಿತರಿಸಲು ೨೦೨೫ರ ಆಗಸ್ಟ್‌ನಿಂದ ದಾಸ್ತಾನು ಕೊರತೆ ಜತೆಗೆ ಕೆಎಸ್‌ಎಂಎಸ್ ಸಿಎಲ್‌ನಿಂದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಸರಬರಾಜು ಪ್ರಾರಂಭವಾಗು ವರೆಗೂ ಮಧ್ಯಂತರ ಅವಧಿಗೆ ೬ ರಿಂದ ಹತ್ತನೇ ತರಗತಿ ಹಾಗೂ ಪದವಿಪೂರ್ವ ಹೆಣ್ಣು ಮಕ್ಕಳಿಗೆ ೩ ತಿಂಗಳ ಅವಧಿಗೆ ಸ್ಯಾನಿಟರಿ ನ್ಯಾಪ್‌ಕಿನ್ ಪ್ಯಾಡ್‌ಗಳನ್ನು ಅಂದಾಜು ೧೦೧೧.೪೭ ಲಕ್ಷ ರೂ. ವೆಚ್ಚದಲ್ಲಿ ಜಿಲ್ಲಾ ಹಂತದಲ್ಲಿ ಖರೀದಿಸಿ ವಿತರಣೆ ಮಾಡುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರು ಹೇಳಿದ್ದಾರೆ.

ಶುಚಿ ಯೋಜನೆ ಪುನಾರಂಭಕ್ಕೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿ ಹಣ ಬಿಡುಗಡೆ ಮಾಡಿದ್ದರೂ ೨೦೨೫-೨೬ನೇ ಶೈಕ್ಷಣಿಕ ವರ್ಷದ ಅಂತಿಮ ಘಟ್ಟದಲ್ಲಿರುವುದರಿಂದ ಜಿಲ್ಲಾ ಹಂತದಲ್ಲಿ ತ್ವರಿತಗತಿಯಲ್ಲಿ ಖರೀದಿ ಪ್ರಕ್ರಿಯೆ ನಡೆದು ಸುಗಮವಾಗಿ ಸ್ಯಾನಿಟರಿ ನ್ಯಾಪ್‌ಕಿನ್‌ಗಳ ವಿತರಣೆ ನಡೆಯಬೇಕಿದೆ.

ರಾಜ್ಯದ ಮಹಿಳಾ ಸರ್ಕಾರಿ ನೌಕರರ ಮನೋಸ್ಥೈರ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಪ್ರತಿ ತಿಂಗಳು ಒಂದು ದಿನದ ಋತುಚಕ್ರ ರಜೆಯ ಸೌಲಭ್ಯವನ್ನು ರಾಜ್ಯದಲ್ಲಿ ವಿವಿಧ ಕಾರ್ಮಿಕ ಕಾಯ್ದೆಗಳಡಿ ನೋಂದಣಿ ಯಾಗಿರುವ ಎಲ್ಲಾ ಕೈಗಾರಿಕೆಗಳು ಹಾಗೂ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ೧೮ ರಿಂದ ೫೨ ವರ್ಷ ವಯೋಮಿತಯ ಎಲ್ಲಾ ಕಾಯಂ, ಗುತ್ತಿಗೆ, ಹೊರ ಗುತ್ತಿಗೆ ಮಹಿಳಾ ನೌಕರರಿಗೆ ಋತುಚಕ್ರದ ಸಮಯದಲ್ಲಿ ಪ್ರತಿ ತಿಂಗಳುಮ ಒಂದು ದಿನದಂತೆ ವಾರ್ಷಿಕ ೧೨ ದಿನಗಳ ವೇತನ ಸಹಿತ ರಜೆಯ ಸೌಲಭ್ಯವನ್ನು ಇತ್ತೀಚೆಗೆ ಮಂಜೂರು ಮಾಡಿರುವ ರಾಜ್ಯಸರ್ಕಾರ ಇದೀಗ ‘ಶುಚಿ’ ಕಾರ್ಯಕ್ರಮ ಮರು ಜಾರಿಗೆ ಹಣ ಬಲ ಒದಗಿಸಿದೆ.

” ‘ಶುಚಿ’ ಕಾರ್ಯಕ್ರಮದಡಿ ೨೦೨೫-೨೬ನೇ ಸಾಲಿಗೆ ೬ರಿಂದ ೧೦ನೇ ತರಗತಿ ಹಾಗೂ ಪದವಿಪೂರ್ವ ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು ೧೯,೬೪,೫೦೭ ಲಕ್ಷ ಹದಿಹರೆಯದ ಹೆಣ್ಣು ಮಕ್ಕಳಿಗೆ ೩ ತಿಂಗಳ ಅವಽಗೆಮ ಅಗತ್ಯವಿರುವ ಸ್ಯಾನಿಟರಿ ಪ್ಯಾಡ್‌ಗಳನ್ನು ೧೦ ಕೋಟಿ ರೂ.ಗಳಲ್ಲಿ ಆಯಾ ಜಿಲ್ಲೆಗಳ ಹಂತದಲ್ಲಿ ಖರೀದಿಸಿ ವಿತರಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.”

ಪವಿತ್ರ, ಅಧೀನ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಆಂದೋಲನ ಡೆಸ್ಕ್

Recent Posts

ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿ ಬೇಗಂ ಖಲೀದಾ ಜಿಯಾ ನಿಧನ

ಡಾಕಾ: ಮಾಜಿ ಪ್ರಧಾನಿ ಮತ್ತು ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ ಅಧ್ಯಕ್ಷೆ ಬೇಗಂ ಖಲೀದಾ ಜಿಯಾ ಇಂದು ಬೆಳಿಗ್ಗೆ ಡಾಕಾದ ಎವರ್‌ಕೇರ್‌…

17 mins ago

ಮೈಸೂರಿನಲ್ಲಿ ವೈಕುಂಠ ಏಕಾದಶಿ ಸಂಭ್ರಮ: ದೇಗುಲಗಳಲ್ಲಿ ಭಕ್ತಸಾಗರ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವೈಕುಂಠ ಏಕಾದಶಿಯನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು. ಮೈಸೂರಿನ ಒಂಟಿಕೊಪ್ಪಲಿನಲ್ಲಿರುವ ಶ್ರೀ ಲಕ್ಷ್ಮೀವೆಂಟಕರಮಣಸ್ವಾಮಿ ದೇವಾಲಯವು ಇಂದು…

43 mins ago

ಹೊಸ ವರ್ಷಾಚರಣೆ: ರಾಜ್ಯದೆಲ್ಲೆಡೆ ತುರ್ತು ಚಿಕಿತ್ಸಾ ಸೇವೆಗೆ ಸಿದ್ಧತೆ

ಬೆಂಗಳೂರು: ಹೊಸ ವರ್ಷಾಚರಣೆಯ ವೇಳೆ ರಾಜ್ಯದ ವಿವಿಧೆಡೆ ಸಾರ್ವಜನಿಕರು ಅಸ್ವಸ್ಥರಾಗುವ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಇತರೆ ಸಮಸ್ಯೆಗಳಿಗೆ ಸಿಲುಕುವ ಸಾಧ್ಯತೆ…

1 hour ago

ಸಿಎಂ ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ಯತ್ನ: ವಿಜಯೇಂದ್ರ ವಾಗ್ದಾಳಿ

ಬೆಳಗಾವಿ: ನಿಯಮಗಳನ್ನು ಗಾಳಿಗೆ ತೂರಿ ಕೇರಳದ ಅಕ್ರಮ ವಲಸಿಗರಿಗೆ ಮನೆ ಕಲ್ಪಿಸಿಕೊಡುವ ಮೂಲಕ ಸಿಎಂ ಸಿದ್ದರಾಮಯ್ಯ ಸಿಎಂ ಕುರ್ಚಿ ಉಳಿಸಿಕೊಳ್ಳಲು…

1 hour ago

ಬಂಡೀಪುರದಲ್ಲಿ ಹೊಸ ವರ್ಷಾಚರಣೆಗೆ ಕಡಿವಾಣ

ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಅರಣ್ಯದಲ್ಲಿ ನೂತನ ವರ್ಷಾಚರಣೆಗೆ ಕಡಿವಾಣ ಹಾಕಲಾಗಿದೆ. ಈ ಬಾರಿ ವಾಸ್ತವ್ಯದ…

2 hours ago

ಎಲ್ಲೆಡೆ ವೈಕುಂಠ ಏಕಾದಶಿ ಸಂಭ್ರಮ: ಮುಗಿಲುಮುಟ್ಟಿದ ಗೋವಿಂದ ನಾಮಸ್ಮರಣೆ

ಬೆಂಗಳೂರು: ದೇಶದೆಲ್ಲೆಡೆ ವೈಕುಂಠ ಏಕಾದಶಿ ಸಂಭ್ರಮ ಮನೆ ಮಾಡಿದ್ದು, ವೈಕುಂಠ ಏಕಾದಶಿಯಂದು ಸ್ವರ್ಗದ ಬಾಗಿಲು ತೆರೆಯುತ್ತದೆ ಎಂಬ ನಂಬಿಕೆ ಇದೆ.…

3 hours ago