ಕೆ.ಬಿ.ರಮೇಶ ನಾಯಕ
೨೦೧೩-೧೪, ೨೦೧೪-೧೫ನೇ ಸಾಲಿನಲ್ಲಿ ಪ್ರವೇಶ ಪಡೆದು ಉತ್ತೀರ್ಣರಾದವರಿಗೆ ಪದವಿ ಪ್ರಮಾಣಪತ್ರ
ಮುಕ್ತ ವಿವಿಯ ಇನ್‌ಹೌಸ್‌ನಲ್ಲಿ ಪ್ರವೇಶ ಪಡೆದಿದ್ದವರಿಗೆ ಮಾತ್ರ ಅನ್ವಯ
ಮೈಸೂರು: ಯಾರೋ ಮಾಡಿದ ತಪ್ಪಿಗೆ ಉತ್ತೀರ್ಣರಾದರೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಪದವಿ ಪ್ರಮಾಣಪತ್ರ ಸಿಗದೆ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಚಾತಕಪಕ್ಷಿಯಂತೆ ಕಾದು ಕುಳಿತಿದ್ದ ಸಾವಿರಾರು ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳ ವನವಾಸಕ್ಕೆ ಕೊನೆಗೂ ಮುಕ್ತಿ ಸಿಕ್ಕಿದೆ.
ಸ್ನಾತಕ-ಸ್ನಾತಕೋತ್ತರ ಪದವಿ ಪಡೆದು ಸರ್ಕಾರಿ ಅಥವಾ ಕಾರ್ಪೋರೇಟ್ ಸಂಸ್ಥೆಗಳಲ್ಲಿ ಒಂದು ಕೆಲಸ ಪಡೆಯಲು ಮುಂದಾಗಿದ್ದ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರ ದೊರೆಯದೆ ವಯಸ್ಸಿನ ಮಿತಿ ಮೀರುವ ಹಂತಕ್ಕೆ ತಲುಪಿದ್ದಾಗಲೇ ಮುಕ್ತ ವಿವಿ ಕೈಗೊಂಡಿರುವ ಮಹತ್ವದ ತೀರ್ಮಾನ ವಿದ್ಯಾರ್ಥಿಗಳ ಮನದಲ್ಲಿ ಸಂತಸ ಮೂಡಿಸಿದೆ.
ರಾಜ್ಯದಲ್ಲೇ ಏಕೈಕ ದೂರ ಶಿಕ್ಷಣ ಕೊಡುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ(ಯುಜಿಸಿ) ನಿಯಮಾವಳಿಗಳನ್ನು ಉಲ್ಲಂಸಿ ವೈದ್ಯಕೀಯ, ತಾಂತ್ರಿಕ ಕೋರ್ಸ್ ಗಳನ್ನು ಆರಂಭಿಸಿ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳಲಾಗಿತ್ತು. ಇದಲ್ಲದೆ, ಹೊರ ರಾಜ್ಯ, ಹೊರ ದೇಶಗಳ ಖಾಸಗಿ ಶಿಕ್ಷಣ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದರಿಂದಾಗಿ ಸಾವಿರಾರು ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು.
ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಯುಜಿಸಿ ತಾಂತ್ರಿಕ ಕೋರ್ಸ್‌ಗಳನ್ನು ಸ್ಥಗಿತಗೊಳಿಸುವ ಜತೆಗೆ, ರಾಜ್ಯದ ಒಳಗೆ ಸೀಮಿತವಾಗಿ ನಡೆಸುವಂತೆ ಸೂಚನೆ ನೀಡಿತ್ತು. ಹೀಗಿದ್ದರೂ ನಿಯಮ ಉಲ್ಲಂಸಿ ಪ್ರವೇಶಾತಿ, ಒಡಂಬಡಿಕೆ ಮುಂದುವರಿಸಿದ್ದರಿಂದಾಗಿ ಯುಜಿಸಿಯು ಮಾನ್ಯತೆಯನ್ನು ರದ್ದುಪಡಿಸಿತ್ತು. ಇದರಿಂದ ಕರ್ನಾಟಕದ ಏಕೈಕ ದೂರ ಶಿಕ್ಷಣ ಸಂಸ್ಥೆ ಎಂದೇ ಹೆಸರಾಗಿದ್ದ ಮುಕ್ತ ವಿವಿಯು ಸಂಕಷ್ಟಕ್ಕೆ ಸಿಲುಕಿತ್ತಲ್ಲದೆ, ವಿದ್ಯಾರ್ಥಿಗಳ ಭವಿಷ್ಯ ಕೂಡ ಡೋಲಾಯಮಾನವಾಗಿತ್ತು.
ನಂತರದ ದಿನಗಳಲ್ಲಿ ಇನ್ನೇನು ಮುಕ್ತ ವಿವಿ ಕಥೆ ಮುಗಿದು ಹೋಯಿತು ಎನ್ನುವ ಹಂತಕ್ಕೆ ತಲುಪಿದ್ದಾಗ ಕುಲಪತಿಗಳಾಗಿದ್ದ ಪ್ರೊ.ಡಿ.ಶಿವಲಿಂಗಯ್ಯ ಅವರು ಕೇಂದ್ರಸರ್ಕಾರ, ಯುಜಿಸಿಯೊಂದಿಗೆ ನಿರಂತರವಾದ ಪತ್ರ ವ್ಯವಹಾರಗಳನ್ನು ಮಾಡುವ ಜತೆಗೆ, ರಾಜ್ಯಸರ್ಕಾರದ ಉನ್ನತ ಶಿಕ್ಷಣ ಸಚಿವರು, ಸಂಸದರ ಮೂಲಕ ಒತ್ತಡಹೇರಿದ್ದರಿಂದಾಗಿ ಮಾನ್ಯತೆಯನ್ನು ನೀಡಲಾಯಿತು. ಆದರೆ, ಹೊಸದಾಗಿ ಮಾನ್ಯತೆ ನೀಡಿದ ವಿವಿಯು ೨೦೧೩-೧೪ ಮತ್ತು ೨೦೧೪-೧೫ನೇ ಸಾಲಿನಲ್ಲಿ ನಿಯಮಾವಳಿ ಉಲ್ಲಂಸಿ ನೋಂದಣಿ ಮಾಡಿಕೊಂಡಿದ್ದರಿಂದಾಗಿ ನವೀಕರಿಸಿರಿಲ್ಲ. ಹೀಗಾಗಿ, ಈ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದರೂ ಪ್ರಮಾಣಪತ್ರ ವಿತರಿಸಲು ಸಾಧ್ಯವಾಗಲಿಲ್ಲ. ವಿದ್ಯಾರ್ಥಿಗಳು ನಿರಂತರವಾಗಿ ಒತ್ತಡ ಹೇರಿದರೂ ಮುಕ್ತ ವಿವಿಯು ಯಾವುದೇ ತೀರ್ಮಾನ ಮಾಡಲಾಗದೆ ಕೈಕಟ್ಟಿ ಕೂರುವಂತಾಗಿತ್ತು. ಆದರೆ, ಈಗಿನ ಕುಲಪತಿ ಪ್ರೊ. ಶರಣಪ್ಪ ವಿ.ಹಲಸೆ ಅವರು ಯುಜಿಸಿಯೊಂದಿಗೆ ನಿರಂತರ ಪತ್ರ ವ್ಯವಹಾರ ಮಾಡುವ ಜತೆಗೆ, ಅಂದು ಆಗಿದ್ದ ಎಲ್ಲಾ ಬೆಳವಣಿಗೆಗಳನ್ನು ಮನವರಿಕೆ ಮಾಡಿಕೊಟ್ಟಿದ್ದರು. ಯುಜಿಸಿಯ ನಿಯಮಾವಳಿ ಪಾಲಿಸುವ ಜತೆಗೆ, ಹೊಸ ಹೊಸ ಕೋರ್ಸ್‌ಗಳನ್ನು ಪ್ರಾರಂಭಿಸುವ ಮೂಲಕ ಇಗ್ನೋಕ್ಕಿಂತಲೂ ಮೇಲುಗೈ ಸಾಧಿಸುವ ಮಟ್ಟಕ್ಕೆ ತಂದು ನಿಲ್ಲಿಸಿದ್ದರು. ಇದೆಲ್ಲದರ ಬೆಳವಣಿಗೆಯ ನಡುವೆ ೨೦೧೩-೧೪ ಮತ್ತು ೨೦೧೪-೧೫ನೇ ಸಾಲಿನಲ್ಲಿ ನೋಂದಣಿ ಮಾಡಿಕೊಂಡಿದ್ದ ೯೬ ಸಾವಿರ ವಿದ್ಯಾರ್ಥಿಗಳಲ್ಲಿ ಇನ್‌ಹೌಸ್‌ನಲ್ಲಿ ನೋಂದಣಿಯಾಗಿದ್ದ ೫೬ ಸಾವಿರ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರವನ್ನು ವಿತರಿಸಲು ಸಭೆಯಲ್ಲಿ ತೀರ್ಮಾನಿಸಲಾಗಿತ್ತು.
ವಿವಿ ಸಿಂಡಿಕೇಟ್ ತೀರ್ಮಾನಕ್ಕೆ ರಾಜ್ಯಪಾಲರು ಒಪ್ಪಿಗೆ ಸೂಚಿಸಿರುವ ಜತೆಗೆ ಜನವರಿ ತಿಂಗಳಲ್ಲಿ ನಡೆಯುವ ಘಟಿಕೋತ್ಸವದಲ್ಲೇ ಪ್ರಮಾಣಪತ್ರ ವಿತರಣೆಗೂ ಮುಹೂರ್ತ ನಿಗದಿಪಡಿಸುವಂತೆ ಹೇಳಿರುವುದರಿಂದ ದಶಕಗಳಿಂದ ಕಾದು ಕುಳಿತಿದ್ದ ವಿದ್ಯಾರ್ಥಿಗಳಲ್ಲಿ ಸಂತಸ ಮನೆ ಮಾಡಿದೆ.
೫೨ ಸಾವಿರ ವಿದ್ಯಾರ್ಥಿಗಳಿಗೆ ವಿತರಣೆ: ೨೦೧೩-೧೪ ಮತ್ತು ೨೦೧೪-೧೫ನೇ ಸಾಲಿನಲ್ಲಿ ಬಿಎ, ಬಿಕಾಂ, ಬಿ.ಲಿಬ್, ಬಿಎಸ್‌ಸಿ, ಬಿ.ಇಡಿ ಮತ್ತು ಬಿ. ಇಡಿ ಸ್ಪೆಷಲ್ ಮತ್ತು ಸರ್ಟಿಫಿಕೇಟ್, ಸ್ನಾತಕ ಪದವಿ, ಎಂ.ಎ, ಎಂಕಾಂ,ಎಂಬಿಎ, ಎಂ.ಇಡಿ, ಎಲ್ಲಾ ಎಂಎಸ್ಸಿ, ಎಂ.ಲಿಬ್ ಐಎಸ್‌ಸಿ, ಪಿ.ಜಿ.ಡಿಪ್ಲೊಮಾ ಕಾರ್ಯಕ್ರಮಗಳ ಸ್ನಾತಕೋತ್ತರ ಪದವಿಯಲ್ಲಿ ೯೬ ಸಾವಿರ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಇದರಲ್ಲಿ ಈಗ ವೈದ್ಯಕೀಯ, ತಾಂತ್ರಿಕ ಕೋರ್ಸ್‌ಗಳನ್ನು ಹೊರತುಪಡಿಸಿ ಸ್ನಾತಕ-ಸ್ನಾತಕೋತ್ತರ ಪದವಿಯ ಇನ್‌ಹೌಸ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದ ೫೬ಸಾವಿರ ವಿದ್ಯಾರ್ಥಿ ಗಳಿಗೆ ಪ್ರಮಾಣಪತ್ರ ವಿತರಿಸಲಾಗುತ್ತಿದೆ. ಇದರಲ್ಲಿ ಪಿಜಿ ೪೩,೮೦೦, ಯುಜಿ ೭,೮೦೦ ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತದೆ. ಇನ್ನುಳಿದ ೪೪ ಸಾವಿರ ವಿದ್ಯಾರ್ಥಿಗಳ ಬಗ್ಗೆ ರಾಜ್ಯಪಾಲರು ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಮೂಲಗಳು ಹೇಳಿವೆ.
” ೨೦೧೩-೧೪ ಮತ್ತು ೨೦೧೪-೧೫ನೇ ಸಾಲಿನಲ್ಲಿ ಇನ್‌ಹೌಸ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದ ವಿದ್ಯಾರ್ಥಿಗಳು ತೇರ್ಗಡೆಯಾಗಿರುವುದರಿಂದ ಪ್ರಮಾಣ ಪತ್ರವನ್ನು ನೀಡಲು ರಾಜ್ಯಪಾಲರು ಸಮ್ಮತಿಸಿದ್ದಾರೆ. ಅಂದು ನೋಂದಣಿಯಾಗಿದ್ದ ೯೬ ಸಾವಿರ ವಿದ್ಯಾರ್ಥಿಗಳಲ್ಲಿ ೫೨ ಸಾವಿರ ವಿದ್ಯಾರ್ಥಿಗಳಿಗೆ ಮಾತ್ರ ಪ್ರಮಾಣಪತ್ರ ವಿತರಿಸಲಾಗುತ್ತದೆ.”
-ಪ್ರೊ.ಶರಣಪ್ಪ ವಿ.ಹಲಸೆ, ಕುಲಪತಿ, ಮುಕ್ತ ವಿವಿ
ಮಂಡ್ಯ: ಆಸ್ತಿಗಾಗಿ ತಂದೆಯನ್ನೇ ಪಾಪಿ ಮಗನೋರ್ವ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಳವಾಯಿಕೋಡಿಯಲ್ಲಿ ನಡೆದಿದೆ. ಗ್ರಾಮದ…
ಹಾಸನ: ನಿವೃತ್ತ ಯೋಧರೊಬ್ಬರು ಪಿಸ್ತೂಲ್‌ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನದಲ್ಲಿ ನಡೆದಿದೆ. ಹಾಸನ ಜಿಲ್ಲೆ ಬೇಲೂರು…
ಮೈಸೂರು: ಈ ದೇಶದಲ್ಲಿ ಬಂಡವಾಳಶಾಹಿಗಳಾಗಲೀ, ಸಕ್ಕರೆ ಕಾರ್ಖಾನೆ ಮಾಲೀಕರಾಗಲೀ ಅಥವಾ ಉದ್ಯಮಿಗಳು ಸೇರಿ ಯಾರೂ ಸಹ ಆತ್ಮಹತ್ಯೆ ಮಾಡಿಕೊಂಡಿಲ್ಲ. ಆದರೇ,…
ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಭೈರತಿ ಬಸವರಾಜ್ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ಈ…
ನವದೆಹಲಿ: ರಾಜಧಾನಿ ಬೆಂಗಳೂರು ಹಾಗೂ ರಾಜ್ಯದ ಕರಾವಳಿ ಪ್ರದೇಶಗಳ ನಡುವೆ ಪ್ರಯಾಣವನ್ನು ಮತ್ತಷ್ಟು ಸುಲಭಗೊಳಿಸುವ ನಿಟ್ಟಿನಲ್ಲಿ ವಂದೇ ಭಾರತ್ ಎಕ್ಸ್…
ಹಾಸನ: ಅಪ್ರಾಪ್ತ ಬಾಲಕಿಯೊಬ್ಬಳಿಗೆ ಚಾಕೋಲೇಟ್ ನೀಡಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಹಿನ್ನೆಲೆಯಲ್ಲಿ ಆಕೆ ಮಗುವಿಗೆ ಜನ್ಮ ನೀಡಿದ ಘಟನೆ…