tiger
ಮಹೇಂದ್ರ ಹಸಗೂಲಿ
ಹುಲಿ, ಚಿರತೆ, ಕಾಡಾನೆ ಉಪಟಳಕ್ಕೆ ನಲುಗಿದ ರೈತರು ಅಽಕಾರಿಗಳ ವರ್ತನೆಯಿಂದ ಬೇಸತ್ತು ದಿಗ್ಬಂಧನಕ್ಕೆ ಮುಂದಾದರೆ?
ಗುಂಡ್ಲುಪೇಟೆ: ಹುಲಿ ಸೆರೆಗೆ ತಕ್ಷಣ ಕ್ರಮ ವಹಿಸಲಿಲ್ಲ ಎಂದು ಸಿಟ್ಟಿಗೆದ್ದ ರೈತರು ತಾಲ್ಲೂಕಿನ ಬೊಮ್ಮಲಾಪುರದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ಬೋನಿನೊಳಗೆ ಕೂಡಿಹಾಕಿ ದಿಗ್ಬಂಧನ ವಿಧಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ಅರಣ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯವೇ ಇಂತಹ ಘಟನೆಗಳಿಗೆ ಕಾರಣ ಎಂಬ ಅಸಮಾಧಾನ ವ್ಯಕ್ತವಾಗಿದೆ. ಬೊಮ್ಮಲಾಪುರದ ಗಂಗಪ್ಪ ಎಂಬವರ ಜಮೀನಿನಲ್ಲಿ ಒಂದು ತಿಂಗಳ ಹಿಂದೆ ಹುಲಿ ಸೆರೆಗೆ ಬೋನು ಇರಿಸಲಾಗಿತ್ತು.
ಆದರೆ, ಹುಲಿ ಬೋನಿಗೆ ಬೀಳದೆ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಲೇ ಇತ್ತು. ಗ್ರಾಮದ ಕಡೆಗೆ ಸರಿಯಾಗಿ ಅರಣ್ಯ ಸಿಬ್ಬಂದಿ ಬಾರದಿರುವುದು ಹಾಗೂ ಹುಲಿ ಸೆರೆಗೆ ಕ್ರಮ ವಹಿಸದ ಕಾರಣ ರೈತರು ಆಕ್ರೋಶಗೊಂಡು ಅರಣ್ಯ ಇಲಾಖೆಯ ಸಿಬ್ಬಂದಿಯನ್ನೇ ಬೋನಿನಲ್ಲಿ ಕೂಡಿ ದಿಗ್ಬಂಧನ ವಿಧಿಸಿರುವ ಘಟನೆ ನಡೆದಿದೆ.
ತಾಲ್ಲೂಕಿನ ಹತ್ತಾರು ಗ್ರಾಮಗಳು ಬಂಡೀಪುರ ಹುಲಿ ಸಂರಕ್ಷಿತಾರಣ್ಯದ ಅಂಚಿನಲ್ಲಿವೆ. ಬಫರ್ ವಲಯದೊಳಗೆ ಚಿರತೆ, ಹುಲಿ, ಆನೆಗಳು ಓಡಾಡಿಕೊಂಡು ಜನ-ಜಾನುವಾರುಗಳ ಮೇಲೆ ದಾಳಿ ನಡೆಸಿರುವ ಸಾಕಷ್ಟು ಉದಾಹರಣೆಗಳಿವೆ. ತಾಲ್ಲೂಕು ವ್ಯಾಪ್ತಿಯಲ್ಲಿ ಆಗಾಗ್ಗೆ ಮಾನವ ಮತ್ತು ವನ್ಯಜೀವಿ ಸಂಘರ್ಷ ನಡೆಯುತ್ತಲೇ ಇವೆ .
ಪ್ರಾಣಿಗಳು ಜಾನುವಾರು ಗಳ ಮೇಲೆ ದಾಳಿ ನಡೆಸಿದಾಗ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ತಕ್ಷಣ ಕ್ರಮ ವಹಿಸಿದರೆ ದಿಗ್ಬಂಧನದಂತಹ ಘಟನೆಗಳು ನಡೆಯುವುದಿಲ್ಲ. ಆದರೆ, ಅರಣ್ಯ ಇಲಾಖೆ ಸಿಬ್ಬಂದಿ ಸ್ಪಂದಿಸುವುದಿಲ್ಲ ಎಂಬ ಅಪವಾದ ರೈತ ಮುಖಂಡರು ಹಾಗೂ ರೈತರಿಂದ ಕೇಳಿಬರುತ್ತಲೇ ಇದೆ.
ತಾಲ್ಲೂಕಿನ ಬೊಮ್ಮಲಾಪುರ, ಸೋಮಹಳ್ಳಿ, ಯಡವನಹಳ್ಳಿ, ಹೊಸಪುರ, ಕುರುಬರಹುಂಡಿ, ಹಾಲಹಳ್ಳಿ, ಮಾಡ್ರಹಳ್ಳಿ, ಹಸಗೂಲಿ, ವಡಯ್ಯನಪುರ, ಹುಂಡೀಪುರ, ಶಿವಪುರ, ಕಲ್ಲಿಗೌಡನಹಳ್ಳಿ, ಮಂಚಹಳ್ಳಿ, ಹೊಂಗಹಳ್ಳಿ, ಕಲ್ಲಹಳ್ಳಿ, ಆಲತ್ತೂರು, ಪಡಗೂರು, ಗೋಪಾಲಪುರ, ಕಗ್ಗಳಹುಂಡಿ, ಸೇರಿದಂತೆ ಅನೇಕ ಗ್ರಾಮಗಳಲ್ಲಿ ಹುಲಿ, ಚಿರತೆ ಆನೆ ದಾಳಿ ಸತತವಾಗಿ ನಡೆಯುತ್ತಿದೆ. ಇದಲ್ಲದೆ ಹಂದಿಗಳು, ನವಿಲುಗಳ ಕಾಟವೂ ಇದೆ.
ಈ ಹಿಂದೆ ಹುಲಿ ದಾಳಿಗೆ ಚೌಡಹಳ್ಳಿಯ ಇಬ್ಬರು ರೈತರು, ದೇಸಿಪುರ ಕಾಲೋನಿಯ ಒಬ್ಬ ಮಹಿಳೆ ಮೃತಪಟ್ಟಿದ್ದಾರೆ. ಕುಂದಕೆರೆ ಗ್ರಾಮದ ಬಳಿಯ ರೈತರ ಜಮೀನಿನಲ್ಲಿ ಹುಲಿಗಳ ನಡುವೆ ಕಾದಾಟ ನಡೆದು ಹುಲಿಯೊಂದು ಗಾಯ ಗೊಂಡಿತ್ತು. ಮತ್ತೊಂದು ಹುಲಿಯನ್ನು ಸೆರೆ ಹಿಡಿಯಲು ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ದರೂ ಹುಲಿ ಸೆರೆ ಸಿಕ್ಕಿಲ್ಲ.
ಪಟಾಕಿಗಳನ್ನು ನೀಡುತ್ತಿಲ್ಲ : ಕಾಡಾನೆಗಳ ದಾಳಿಯಿಂದಾಗಿ ಪ್ರತಿನಿತ್ಯ ಹೊಸಪುರ, ಆಲತ್ತೂರು, ಸಾವಕನಹಳ್ಳಿ ಪಾಳ್ಯ, ಮಂಚಹಳ್ಳಿ, ಕುರುಬರಹುಂಡಿ ಭಾಗದಲ್ಲಿ ಬೆಳೆ ನಾಶವಾಗುತ್ತಿದೆ. ಕಾಡು ಪ್ರಾಣಿಗಳ ನಿಯಂತ್ರಣಕ್ಕೆ ಪಟಾಕಿಗಳನ್ನು ನೀಡುತ್ತಿಲ್ಲ. ಇತ್ತ ರೈತರ ಫಸಲು ನಾಶವಾದರೆ ಸರಿಯಾಗಿ ಪರಿಹಾರ ನೀಡುತ್ತಿಲ್ಲ.
ಸರಿಯಾಗಿ ಕಾಡಂಚಿನ ಜನರು, ರೈತರು, ಸಾರ್ವಜನಿಕರ ಜೊತೆ ಅರಣ್ಯ ಇಲಾಖೆ ಅಧಿಕಾರಿಗಳ ಹೊಂದಾಣಿಕೆ ಇಲ್ಲದೆ ತಿಕ್ಕಾಟ ಏರ್ಪಟ್ಟಿದೆ ಎಂದು ಆರೋಪವೂ ಕೇಳಿಬಂದಿದೆ. ಅರಣ್ಯ ಇಲಾಖೆ ಅಧಿಕಾರಿಗಳು ನಾಮಕಾವಸ್ತೆಗೆ ಬೋನು ಇರಿಸಿ ವಾಚರ್‌ಗಳನ್ನು ನೇಮಿಸಿ ಹೋಗುತ್ತಾರೆ. ಆದರೆ, ಅವರು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಕಾಡಂಚಿನ ಭಾಗದಲ್ಲಿ ಟ್ರಂಚ್, ರೈಲ್ವೆ ಕಂಬಿಗಳ ಅಳವಡಿಕೆ ನಡೆಯದ ಕಾರಣ ಕಾಡಾನೆಗಳು ನಾಡಿನತ್ತ ಮುಖ ಮಾಡುತ್ತಿವೆ ಎಂದು ಆಕ್ರೋಶ ಹೊರಹಾಕಿದರು.
” ಅರಣ್ಯ ಇಲಾಖೆ ಸಿಬ್ಬಂದಿ ಹುಲಿ, ಚಿರತೆಗಳ ಚಲನವಲನ ಕಂಡು ಹಿಡಿಯದೆ ತಿಂಗಳುಗಟ್ಟಲೇ ಕಾಲಹರಣ ಮಾಡಿದ್ದಾರೆ. ಅಲ್ಲದೇ ತಾಲ್ಲೂಕಿನಾದ್ಯಂತ ಕಾಡುಪ್ರಾಣಿಗಳ ಹಾವಳಿ ಹೆಚ್ಚಿದೆ. ಇವುಗಳನ್ನು ಅರಣ್ಯ ಇಲಾಖೆ ನಿಯಂತ್ರಿಸಿ ರೈತರಿಗೆ, ಸಾರ್ವಜನಿಕರಿಗೆ ರಕ್ಷಣೆ ನೀಡುವಲ್ಲಿ ವಿಫಲವಾಗಿದೆ.”
-ಶಿವಪ್ರಸಾದ್( ಗುಂಡಣ್ಣ) ಪ್ರಗತಿಪರ ರೈತ, ಕೊಡಸೋಗೆ
” ಕಾಡು ಪ್ರಾಣಿಗಳ ಹಾವಳಿ ಸಂದರ್ಭ ನಮಗೆ ಮಾಹಿತಿ ಬಂದಾಗ ಸ್ಥಳಕ್ಕೆ ತೆರಳಲು ಸಮಯ ಬೇಕಾಗುತ್ತದೆ. ಆ ಸಂದರ್ಭದಲ್ಲಿಯೇ ಬೇರೆ ಕಡೆ ಕಾರ್ಯಾಚರಣೆ ನಡೆದರೆ ಮತ್ತಷ್ಟು ವಿಳಂಬವಾಗಿರಬಹುದು. ಅದನ್ನು ಬಿಟ್ಟು ಬೇಕಂತಲೇ ಯಾವ ಅರಣ್ಯ ಅಧಿಕಾರಿ, ಸಿಬ್ಬಂದಿಯೂ ವಿಳಂಬ ಮಾಡುವುದಿಲ್ಲ. ಎಲ್ಲಾ ಸಿಬ್ಬಂದಿ ಆಯಾಯ ವಲಯ ವ್ಯಾಪ್ತಿಯಲ್ಲಿಯೇ ಇರುತ್ತಾರೆ. ಹುಲಿ ಸೆರೆಗೆ ಬೋನಿನಲ್ಲಿ ಕಟ್ಟಿದ್ದ ಕರು ಆಕಸ್ಮಿಕವಾಗಿ ಸಾವನ್ನಪ್ಪಿದೆ.”
-ಸುರೇಶ್ ಕುಮಾರ್ ಎಸಿಎಫ್, ಬಫರ್ ವಲಯ ಗುಂಡ್ಲುಪೇಟೆ
” ಹುಲಿ ಕಾಟದಿಂದ ಜಮೀನುಗಳಿಗೆ ಕೂಲಿ ಕಾರ್ಮಿಕರು ಬರುತ್ತಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿ ಸರಿಯಾಗಿ ಕೂಂಬಿಂಗ್ ಮಾಡಲ್ಲ. ಬೋನಿನಲ್ಲಿ ಕಟ್ಟಿಹಾಕಿದ್ದ ಕರುವಿಗೆ ಹುಲ್ಲು ಹಾಕದೆ ಸಾಯಿಸಿದ್ದಾರೆ. ಕಳೆದು ಒಂದು ತಿಂಗಳಿಂದ ಹುಲಿ ಉಪಟಳಕ್ಕೆ ಬೊಮ್ಮಲಾಪುರ, ಕೊಡಸೋಗೆ ವಡಯ್ಯನಪುರ ಭಾಗದ ಜನರು ಭಯಭೀತರಾಗಿದ್ದಾರೆ.”
-ವಿಶ್ವಣ್ಣ, ಮುಖಂಡ, ವಡಯ್ಯನಪುರ
ಮೈಸೂರು : ದೇಶ-ವಿದೇಶದ ಪ್ರವಾಸಿಗರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಸ್ಥಳವಾದ ಅರಮನೆಯ ಜಯಮಾರ್ತಾಂಡ ಬಳಿ ಸಂಭವಿಸಿದ ಹೀಲಿಯಂ…
ಓದುಗರ ಪತ್ರ: ಜಾತಿ ಅಳಿಯಲಿ ಜೀವ ಉಳಿಯಲಿ ಈ ಅಮಾನವೀಯ ಕ್ರೂರ ಕೃತ್ಯಕ್ಕೆ ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುತ್ತಿದೆ…
ಚಾಮರಾಜನಗರದ ಗುಂಡ್ಲುಪೇಟೆ ಪಟ್ಟಣದ ವಾರ್ಡ್ ೨೩ ರ ಹೊಸೂರು ಜನನಿಬಿಡ ಪ್ರದೇಶವಾಗಿದ್ದು, ಅಕ್ಕ ಪಕ್ಕದಲ್ಲಿ ಶಾಲೆ ಇದ್ದು, ಪೋಷಕರು ತಮ್ಮ…
ಮೈಸೂರಿನ ಬೋಗಾದಿ ರಸ್ತೆಯಲ್ಲಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯದ (ಬಿಸಿಡಬ್ಲ್ಯೂಡಿ ೨೨೫೦)ಲ್ಲಿ ಶೌಚಾಲಯವು ಅಶುಚಿತ್ವದಿಂದ ಕೂಡಿದೆ. ಶೌಚಾಲಯ ಸ್ವಚ್ಛಗೊಳಿಸುವಂತೆ ವಾರ್ಡನ್…
ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಿನ್ನೆ(ಡಿ.25) ಸಂಜೆ ಅರಮನೆ ಮುಂಭಾಗ ಬಲೂನ್ಗೆ ಗ್ಯಾಸ್ ತುಂಬುವಾಗ ಹೀಲಿಯಂ ಸಿಲಿಂಡರ್ ಸ್ಫೋಟಗೊಂಡು…
ಮೈಸೂರಿನ ಜಯನಗರದ ಇಸ್ಕಾನ್ ಕೃಷ್ಣ ದೇವಾಲಯ ರಸ್ತೆಯ ಪಕ್ಕದಲ್ಲಿ ತ್ಯಾಜ್ಯ ವಸ್ತುಗಳ ರಾಶಿ ಬಿದ್ದಿದೆ. ಕೆಲವರು ರಸ್ತೆಯಲ್ಲೇ ಮೂತ್ರ ವಿಸರ್ಜನೆ…